ಬೆಂಗಳೂರು | ಸಂಸ್ಕೃತಿ ಕಮಾಡಿಟಿ ಆಗ್ತಿದೆ. ಡಾ. ಸಿದ್ದನಗೌಡ ಪಾಟೀಲ

ಬೆಂಗಳೂರು : ಸಮುದಾಯ 50 ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ನಾಟಕೋತ್ಸವದ ನಾಲ್ಕನೇಯ ದಿನ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದ ಸಿದ್ದನಗೌಡ ಪಾಟೀಲರು ಸಂಸ್ಕೃತಿ ವಾಣಿಜ್ಯಕರಣಗೊಂಡಿದೆ.  ಶತ್ರುಗಳು ಇಂದು ಕೋಮುವಾದ, ಜಾತಿವಾದದ ರೂಪದಲ್ಲಿ ನಮ್ಮೊಳಗೇ ಇದೆ, ಇವತ್ತಿನ ಸಂದರ್ಭದಲ್ಲಿ ಸಂಕಟಗಳನ್ನು ಅರ್ಥೈಸಿಕೊಂಡು ಎಲ್ಲಾ ಜನಚಳುವಳಿಯ ಸಂಘಟನೆಗಳು ಒಂದೆಡೆ ಸೇರಿ ಕುಳಿತು ಜೊತೆಜೊತೆಯಲಿ ಕೆಲಸ ಮಾಡಬೇಕಾಗಿದೆ. ವರ್ಗ ಶತ್ರುವನ್ನು, ಸಮಾಜದ ಶತ್ರುವನ್ನು ಗುರ್ತಿಸಿ ಅವರ ವಿರುದ್ಧ ನಮ್ಮ ಹಾಡು ನಾಟಕ ತಮಟೆ ಎಲ್ಲಾ ಸಿಡಿದೇಳಬೇಕಾಗುತ್ತದೆ. ಎಂದು ಸಿದ್ದನಗೌಡ ಪಾಟೀಲರು ಎಚ್ಚರಿಸಿದರು.

ಇದನ್ನೂ ಓದಿ: ನವದೆಹಲಿ|ಅಂಗವಿಕಲರಿಗೆ ಅವಮಾನ ಮಾಡಿದಕ್ಕೆ ಬೇಷರತ್‌ ಕ್ಷಮೆ ಯಾಚಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ

ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂವಿಧಾನ ವಿರೋಧಿಗಳಿಂದ ಸಂವಿಧಾನ ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ ಇಂದು ಚಳುವಳಿಗಳನ್ನ ವಿಭಜಿಸುವ, ವಿಘಟಿಸುವ ಕುತಂತ್ರ ನೆಡೆಯುತ್ತಿದೆ, ಇದನ್ನು ಅರ್ಥಮಾಡಿಕೊಂಡು ಹೋರಾಡಬೇಕಾಗಿದೆ, ನಾನೂ ಸಮುದಾಯದ ಭಾಗವಾಗಿದ್ದವನು ಸಮುದಾಯದ ಜಾಥಾಗಳಲ್ಲಿ ಭಾಗವಹಿಸಿ ಜನಚಳುವಳಿಗೆ ಬಂದವನು, ಇಂದು ಎಲ್ಲಾ ಜನಚಳುವಳಿಗಳು ಸಮುದಾಯದ ಜೊತೆ ಇವೆ, ಸಮುದಾಯ ಜನಚಳುವಳಿಗಳ ಜೊತೆ ಇದೆ ಎಂದರು.

ಈ ಸಂಧರ್ಭದಲ್ಲಿ  ಗೌರವ ಸನ್ಮಾನಿಸಲಾಯಿತು   ಕವಯತ್ರಿ ಕೆ ಶರೀಫಾ, ಶಿವಮೊಗ್ಗ ಸಮುದಾಯದ ಲಕ್ಷ್ಮಿ ನಾರಾಯಣ, ರಂಗ ನಿರ್ದೇಶಕ ಸುರೇಶ್ ಅನಗಳ್ಳಿ, ಸ್ಪಂದನ ತಂಡದ ರಮೇಶ್ ಸಾಲುಗುಂದಿ ಅವರಿಗೆ ರಂಗ ಗೌರವ ಸಲ್ಲಿಸಲಾಯ್ತು, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ
ಕೆ ಪ್ರಭಾಕರ್ ಉಪಸ್ಥಿತರಿದ್ದರು.

ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಗುಂಡಣ್ಣ ಚಿಕ್ಕಮಗಳೂರು ಈ ಸಮುದಾಯ 50 ಕಾರ್ಯಕ್ರಮಕ್ಕೆ ಸಹಕರಿಸಿದ ಶ್ರಮಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು.

ಇದನ್ನೂ ನೋಡಿ: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1% ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *