2014 ರಲ್ಲಿಯೇ ಮಾಡಬೇಕಾಗಿದ್ದನ್ನು ಈಗಲಾದರೂ ಕಾರ್ಯಗತ ಮಾಡಿ,
ನಮಗೆ ನಾಟಕವಲ್ಲ, ಕ್ರಿಯೆ ಬೇಕು-ಪ್ರಧಾನಿಗಳಿಗೆ ಬೃಂದಾ ಕಾರಟ್ ಬಹಿರಂಗ ಪತ್ರ
ಎಪ್ರಿಲ್ ೧೮ರಂದು ರಾತ್ರಿ ೮.೩೦ಕ್ಕೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ೩೩ಶೇ. ಮಹಿಳಾ ಮೀಸಲಾತಿ ಕೊಡಿಸಲಾಗಲಿಲ್ಲ ಎಂ.ಬುದಕ್ಕೆ ದೇಶದ ಮಹಿಳೆಯರ ಕ್ಷಮೆ ಕೋರುವುದಾಗಿ ಹೇಳಿದರು. ಆದರೆ ಭಾರತದ ಮಹಿಳೆಯರಿಗೆ ಆಗಿರುವ ನೋವು ಇದಲ್ಲ, ಬದಲಾಗಿ ಮಹಿಳಾ ಮೀಸಲಾತಿಯ ಪ್ರಶ್ನೆಯನ್ನು ಕುಟಿಲತನಕ್ಕೆ ಬಳಸುವಲ್ಲಿ ಪ್ರಧಾನಿಗಳು ವಿಫಲರಾಗಿದ್ದಾರೆ ಎಂದು ಮಹಿಳೆಯರು ಸಂತೋಷಪಡುತ್ತಿದ್ದಾರೆ, ಆದ್ದರಿಂದ “ದಯವಿಟ್ಟು ಮೋದಿಜೀ! ನಮಗಾಗಿ ಕಣ್ಣೀರು ಸುರಿಸಬೇಡಿ” ಎಂದು ಹಿರಿಯ ಸಿಪಿಐ(ಎಂ) ನಾಯಕಿ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯೆ ಬೃಂದಾ ಕಾರಟ್ ಎಪ್ರಿಲ್ ೨೧ರಂದು ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.
ನಿಜ, “ಮೋದಿಯವರ ಸರಕಾರಗಳ ಸರಣಿ ದ್ರೋಹಗಳಿಂದ ಮಹಿಳೆಯರು ರೋಸಿ ಹೋಗಿದ್ದಾರೆ. ಇದನ್ನು ‘ನಾರೀ ವಂದನಾ’ ಎಂದು ಕರೆಯಬೇಡಿ. ನಾವು ಪೂಜ್ಯತೆಯನ್ನಲ್ಲ, ಹಕ್ಕುಗಳನ್ನು ಹುಡುಕುತ್ತಿದ್ದೇವೆ.” ಎಂದು ಅವರು ಈ ಪತ್ರದಲ್ಲಿ ಮೋದಿ ಸರಕಾರದ ದ್ರೋಹಗಳನ್ನು ನೆನಪಿಸಿದ್ದಾರೆ. ೨೦೧೪-೨೦೧೯ರ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಿಲ್ಲ ಮಾತ್ರವಲ್ಲ, ಅದನ್ನು ಕಾರ್ಯಸೂಚಿಯಲ್ಲಿ ಸೇರಿಸಲೂ ನಿರಾಕರಿಸಿದ್ದು ಅವರು ಮಾಡಿದ ಮೊದಲ ದ್ರೋಹ. ಎರಡನೇ ಅಧಿಕಾರಾವಧಿಯಲ್ಲೂ, ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತವಿದ್ದರೂ, ಆ ಅವಧಿಯ ಕೊನೆಯ ಸಂಸತ್ ಅಧಿವೇಶನದ ವರೆಗೂ ಏನೂ ಮಾಡದೆ, ತಕ್ಷಣವೇ ಜಾರಿ ಮಾಡಬಹುದಾದ ಕಾನೂನನ್ನು ತರದಿರುವುದು ಎರಡನೇ ದ್ರೋಹ. ಆಶ್ವಾಸನೆ ನೀಡಿದಂತೆ ಜನಗಣತಿಯನ್ನು ಆರಂಭಿಸದೆ, 2011 ರ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆಯನ್ನು ತರುವ ತಮ್ಮ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಮಹಿಳಾ ಮೀಸಲಾತಿಯ ವಿಷಯವನ್ನು ಬಳಸುವ ಆಟ ಮೂರನೇ ದ್ರೋಹ ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. ದಯವಿಟ್ಟು
ಪ್ರತಿಪಕ್ಷಗಳು “ಹೆಣ್ಣು ಭ್ರೂಣ ಹತ್ಯೆ ಎಸಗುವ” ಒಂದು ಪಾಪ ಎಸಗಿವೆ ಎಂದು ಆರೋಪಿಸಿ, ಅದಕ್ಕಾಗಿ ಅವರಿಗೆ “ಶಿಕ್ಷೆಯಾಗುತ್ತದೆ” ಎಂದು ಪ್ರಧಾನಿಗಳು ಹೇಳಿರುವುದನ್ನು ಉಲ್ಲೇಖಿಸುತ್ತ, “ನೀವು ನಿಮ್ಮ ಪದಗಳನ್ನು ಹೆಚ್ಚು ಎಚ್ಚರಿಕೆಯಿಂದ ಬಳಸಬೇಕು, ಮೋದಿಜೀ. ನಿಮಗೆ ಇಂತಹ ಅನುಚಿತ ಹೋಲಿಕೆಗಳನ್ನು ಬಳಸಬೇಕೆಂದಿದ್ದರೆ, ಯಾವುದೇ ಭ್ರೂಣವಿರಲಿಲ್ಲ ಎಂದು ನೀವು ತಿಳಿದುಕೊಳ್ಳಬೇಕು. 2010 ರ ಮಹಿಳಾ ಮೀಸಲಾತಿ ಮಸೂದೆಯ ಸ್ವರೂಪದಲ್ಲಿ ಒಂದು ಪೂರ್ಣವಾಗಿ ರೂಪುಗೊಂಡಿದ್ದ “ಇರವು” ಇತ್ತು, ಮತ್ತು ಅದಕ್ಕೆ ನಿಮ್ಮ ಪಕ್ಷವು ಮತ ನೀಡಿತ್ತು. ನೀವು ಅದನ್ನು ಸಮಾಧಿ ಮಾಡಿದ್ದೀರಿ” ಯಾರಾದರೂ ಪಾಪ ಎಸಗಿದ್ದರೆ, ಅದು ಮೋದಿ ಸರಕಾರವೇ ಎಂದು ಬೃಂದಾ ಕಾರಟ್ ಕಟುವಾಗಿ ಟೀಕಿಸಿದ್ದಾರೆ. ದಯವಿಟ್ಟು
ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಸ್ಥಾನಗಳನ್ನು 850 ಕ್ಕೆ ಹೆಚ್ಚಿಸುವ ಮೂಲಕ ತಮ್ಮದೇ ಪಕ್ಷದಲ್ಲಿನ “ತಂತಮ್ಮ ಜಾಗೀರುಗಳನ್ನು ನಡೆಸುತ್ತಿರುವ, ಮತ್ತು ಮೊದಲಿಂದಲೂ ಮಹಿಳಾ ಮೀಸಲಾತಿಯ ಮಹಾವಿರೋಧಿಗಳಾಗಿರುವ ಪಾಳೆಯಗಾರೀ ಜಾತಿವಾದಿ ದೊರೆಗಳ ವಿರೋಧದೊಂದಿಗೆ” ರಾಜಿ ಮಾಡಿಕೊಂಡಿದ್ದಾರೆ. ಜೊತೆಗೆ, ಮನುವಾದಿ ದೃಷ್ಟಿಕೋನವು ಇಲ್ಲಿ ಸ್ಪಷ್ಟವಾಗಿದೆ. 2011 ರ ಜನಗಣತಿಯನ್ನು ಬಳಸಿಕೊಂಡು, ದಲಿತರು ಮತ್ತು ಆದಿವಾಸಿ ಮಹಿಳೆಯರಿಗೆ ಮೀಸಲಿಡಬೇಕಾದ ಸ್ಥಾನಗಳಲ್ಲಿ ಅವರ ಹಕ್ಕಿನ ಪಾಲನ್ನು ನಿರಾಕರಿಸಲಾಗುತ್ತಿದೆ ಎಂಬುದು ಸತ್ಯಸಂಗತಿಯಲ್ಲವೇ ಎಂದು ಬೃಂದಾ ಕಾರಟ್ ಪ್ರಶ್ನಿಸಿದ್ದಾರೆ. ದಯವಿಟ್ಟು
ಪ್ರಧಾನ ಮಂತ್ರಿಗಳಿಗೆ ನಿಜವಾಗಿಯೂ ಮಹಿಳೆಯರ “ನೋವುಗಳನ್ನು ಹಂಚಿಕೊಳ್ಳುವ” ಮತ್ತು ” ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಮಾರ್ಗದಲ್ಲಿರುವ ಪ್ರತಿಯೊಂದು ಅಡಚಣೆಯನ್ನು ತೆಗೆದುಹಾಕುವ” ಇಚ್ಛಾಶಕ್ತಿ ಇದ್ದರೆ ಅವರ ನೋವನ್ನು ಮತ್ತು ಪ್ರತಿಯೊಂದು ಅಡಚಣೆಯನ್ನು ತೆಗೆದುಹಾಕಬಹುದಾದ ಒಂದು ಮೂರ್ತ ಸಲಹೆಯನ್ನು ನೀಡುವುದಾಗಿ ಬೃಂದಾ ಕಾರಟ್ ತಮ್ಮ ಬಹಿರಂಗ ಪತ್ರದಲ್ಲಿ ಹೇಳುತ್ತಾರೆ. ಅದೆಂದರೆ, “2023 ರಲ್ಲಿ ನಿಮ್ಮ ಸರ್ಕಾರ ಮಂಡಿಸಿದ 106 ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ನೆಟ್ಟ ಮುಖ್ಯ ಅಡಚಣೆಯನ್ನು ತೆಗೆದುಹಾಕಿ. ಇದು ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯೊಂದಿಗೆ ತಳುಕು ಹಾಕುತ್ತದೆ. ಈ ವಾಕ್ಯವನ್ನು ತೆಗೆದುಹಾಕಿ ಮೋದಿಜೀ, ಮಹಿಳಾ ಮೀಸಲಾತಿಯನ್ನು ನಾಳೆಯಿಂದಲೇ ಜಾರಿಗೆ ತರಬಹುದು.” ಆದರೆ, ಮೋದಿಯವರು ಇದನ್ನು ಮಾಡುವುದಿಲ್ಲ, ಏಕೆಂದರೆ ಅವರು ಎಂದಿಗೂ ಮಹಿಳಾ ಮೀಸಲಾತಿಗೆ ಬದ್ಧರಾಗಿರಲಿಲ್ಲ ಎಂದಿದ್ದಾರೆ ಬೃಂದಾ ಕಾರಟ್. ಇದ್ದಿದ್ದರೆ, ಕಾರ್ಮಿಕರು ಮತ್ತು ರೈತರ ವ್ಯಾಪಕ ವಿರೋಧಗಳ ನಡುವೆಯೂ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳು ಮತ್ತು ಮೂರು ಕರಾಳ ಕೃಷಿ ಕಾನೂನುಗಳನ್ನು ತಂದ ಅವರು, ವ್ಯಾಪಕ ಒತ್ತಾಯಗಳು, ಬೆಂಬಲಗಳಿದ್ದಾಗ್ಯೂ ಮಹಿಳಾ ಮೀಸಲಾತಿ ಮಸೂದೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದ್ದಾರೆ. ದಯವಿಟ್ಟು
“ದಯವಿಟ್ಟು ಮೋದಿಜೀ! ನಮಗಾಗಿ ಕಣ್ಣೀರು ಸುರಿಸಬೇಡಿ – 2014 ರಲ್ಲಿ ನೀವು ಮಾಡಬೇಕಾಗಿದ್ದನ್ನು ಕಾರ್ಯಗತ ಮಾಡಿ: ಮುಂದಿನ ಸುತ್ತಿನ ಚುನಾವಣೆಗಳಲ್ಲಿ ಜಾರಿಗೆ ತರಲು ಸಾಧ್ಯವಾಗುವಂತೆ ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು, ಯಾವುದೇ ಜೋಡಣೆಗಳು, ಷರತ್ತುಗಳಿಲ್ಲದೆ ತನ್ನಿ, ನಮಗೆ ನಾಟಕವಲ್ಲ, ಕ್ರಿಯೆ ಬೇಕು” ಎಂದು ತಮ್ಮ ಬಹಿರಂಗ ಪತ್ರದ ಕೊನೆಯಲ್ಲಿ ಅವರು ಹೇಳಿದ್ದಾರೆ.
ಅವರ ಬಹಿರಂಗ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ..!
ನೀವು ಮಹಿಳಾ ಮೀಸಲಾತಿ ವಿಷಯದ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, “ಅಧಿಕಾರದಲ್ಲಿ ಮಹಿಳೆಯರ ಭಾಗವಹಿಸುವಿಕೆಗಾಗಿ ಹೋರಾಟ ದಶಕಗಳಿಂದ ನಡೆಯುತ್ತಿದೆ… ಹಲವಾರು ಮಹಿಳೆಯರು ಈ ವಿಷಯವನ್ನು ನನ್ನ ಮುಂದೆ ಎತ್ತಿದ್ದಾರೆ. ಪ್ರತಿಯೊಂದನ್ನೂ ವಿವರಿಸುತ್ತಾ ಅನೇಕ ಸೋದರಿಯರು ನನಗೆ ಬರೆದಿದ್ದಾರೆ” ಎಂದು ಹೇಳಿದ್ದೀರಿ. ದಯವಿಟ್ಟು
ಮೋದಿಜೀ, ಇಲ್ಲಿದೆ ನೀವು ಹೇಳಿದ “ದಶಕಗಳ ಹೋರಾಟ”ದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಒಬ್ಬರಿಂದ ನಿಮಗೆ ಮತ್ತೊಂದು ಪತ್ರ. ಆ ಐತಿಹಾಸಿಕ ಹೋರಾಟವನ್ನು ಮಹಿಳಾ ಸಂಘಟನೆಗಳು ಮುನ್ನಡೆಸಿದವು. ಪಂಚಾಯತ್ ಗಳಲ್ಲಿ ಲಕ್ಷಾಂತರ ಮಹಿಳೆಯರು ಪಿತೃಪ್ರಧಾನ ಸಂಸ್ಕೃತಿಗಳ ವಿರುದ್ಧ ಹೋರಾಡಿ ತಾವು ಕೇವಲ “ಬೇನಾಮಿ”ಗಳಲ್ಲ ಎಂದು ಸಾಬೀತುಪಡಿಸಿದವರ ನೇತೃತ್ವದಲ್ಲಿ ನಡೆಯಿತು, ಸಾವಿರ-ಸಾವಿರ ಮತಪ್ರದರ್ಶನಗಳು, ರ್ಯಾಲಿಗಳು, ಪ್ರತಿಭಟನೆಗಳು, ಧರಣಿಗಳು, ಅರ್ಜಿಗಳ ಮೂಲಕ ನಡೆಯಿತು. ‘ಅದಕ್ಕಾಗಿ ಪ್ರಯತ್ನ ಮಾಡುತ್ತಿರುವವರಲ್ಲಿ ನಾನೂ ಒಬ್ಬನಾಗಿದ್ದೆ’ ಎಂದೂ ನೀವು ಹೇಳಿದ್ದೀರಿ. ಇಲ್ಲ, ಮೋದಿಜೀ, ಈ ಎಲ್ಲಾ ವರ್ಷಗಳ ಹೋರಾಟದಲ್ಲಿ ನಮಗೆ ನಿಮ್ಮಿಂದ ಎಂದೂ ಯಾವುದೇ ಬೆಂಬಲ ಸಿಕ್ಕಿಲ್ಲ. ನಿಮ್ಮ ದಾವೆಯು ಗೋಡ್ಸೆಯ ಸಿದ್ಧಾಂತ ಮತ್ತು ಗಾಂಧಿಯ ಸಿದ್ಧಾಂತದ ನಡುವಿನ ದೂರದಷ್ಟೇ ಸತ್ಯದಿಂದ ಬಹಳ ದೂರವಿದೆ. ದಯವಿಟ್ಟು
ಪಂಚಾಯತ್ ಗಳಲ್ಲಿ ಲಕ್ಷಾಂತರ ಮಹಿಳೆಯರು ಪಿತೃಪ್ರಧಾನ ಸಂಸ್ಕೃತಿಗಳ ವಿರುದ್ಧ ಹೋರಾಡಿ ತಾವು ಕೇವಲ “ಬೇನಾಮಿ”ಗಳಲ್ಲ ಎಂದು ಸಾಬೀತುಪಡಿಸಿದವರ ನೇತೃತ್ವದಲ್ಲಿ ನಡೆಯಿತು, ಸಾವಿರ-ಸಾವಿರ ಮತಪ್ರದರ್ಶನಗಳು, ರ್ಯಾಲಿಗಳು, ಪ್ರತಿಭಟನೆಗಳು, ಧರಣಿಗಳು, ಅರ್ಜಿಗಳ ಮೂಲಕ ನಡೆಯಿತು. ‘ಅದಕ್ಕಾಗಿ ಪ್ರಯತ್ನ ಮಾಡುತ್ತಿರುವವರಲ್ಲಿ ನಾನೂ ಒಬ್ಬನಾಗಿದ್ದೆ’ ಎಂದೂ ನೀವು ಹೇಳಿದ್ದೀರಿ. ಇಲ್ಲ, ಮೋದಿಜೀ, ಈ ಎಲ್ಲಾ ವರ್ಷಗಳ ಹೋರಾಟದಲ್ಲಿ ನಮಗೆ ನಿಮ್ಮಿಂದ ಎಂದೂ ಯಾವುದೇ ಬೆಂಬಲ ಸಿಕ್ಕಿಲ್ಲ. ನಿಮ್ಮ ದಾವೆಯು ಗೋಡ್ಸೆಯ ಸಿದ್ಧಾಂತ ಮತ್ತು ಗಾಂಧಿಯ ಸಿದ್ಧಾಂತದ ನಡುವಿನ ದೂರದಷ್ಟೇ ಸತ್ಯದಿಂದ ಬಹಳ ದೂರವಿದೆ. ದಯವಿಟ್ಟು
ಇದನ್ನೂ ಓದಿ : ಎಡಿಸಿ, ಬುಡಕಟ್ಟು ಹಕ್ಕುಗಳು ಮತ್ತು ಎಫ್‌ಆರ್‌ಎಗಳನ್ನು ಬಿಜೆಪಿ ನಾಶಮಾಡುತ್ತಿದೆ – ಬೃಂದಾ ಕಾರಟ್
ಪ್ರಚಾರದ ಮಾತುಗಳಲ್ಲಿ ಇರುವ ಸತ್ಯಸಂಗತಿಗಳನ್ನು ಆರಿಸಿ ತೆಗೆಸೋಣ, ಮೋದಿಜೀ. ಆದರೆ ಅದರ ಮೊದಲು, ಮಹಿಳೆಯರ “ನೋವುಗಳನ್ನು ನಾವು ಹಂಚಿಕೊಳ್ಳುತ್ತೇವೆ’ ಎಂಬ ನಿಮ್ಮ ಹೇಳಿಕೆಯನ್ನು ಮತ್ತು “ಈ ದೇಶದ ಮಹಿಳೆಯರಿಗೆ ನಾನು ಭರವಸೆ ನೀಡುತ್ತೇನೆ: ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಮಾರ್ಗದಲ್ಲಿರುವ ಪ್ರತಿಯೊಂದು ಅಡಚಣೆಯನ್ನು ನಾವು ತೆಗೆದುಹಾಕುತ್ತೇವೆ”ಎಂಬ ನಿಮ್ಮ ಪಣವನ್ನು ಉಲ್ಲೇಖಿಸುತ್ತಾ, ನಿಮ್ಮ ನೋವನ್ನು ಮತ್ತು ಪ್ರತಿಯೊಂದು ಅಡಚಣೆಯನ್ನು ತೆಗೆದುಹಾಕಬಹುದಾದ ಒಂದು ಮೂರ್ತ ಸಲಹೆ ಇಲ್ಲಿದೆ. 2023 ರಲ್ಲಿ ನಿಮ್ಮ ಸರ್ಕಾರ ಮಂಡಿಸಿದ 106 ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ನೆಟ್ಟ ಮುಖ್ಯ ಅಡಚಣೆಯನ್ನು ತೆಗೆದುಹಾಕಿ. ಇದು ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯೊಂದಿಗೆ ತಳುಕು ಹಾಕುತ್ತದೆ. ಈ ವಾಕ್ಯವನ್ನು ತೆಗೆದುಹಾಕಿ ಮೋದಿಜೀ, ಮಹಿಳಾ ಮೀಸಲಾತಿಯನ್ನು ನಾಳೆಯಿಂದಲೇ ಜಾರಿಗೆ ತರಬಹುದು. ಆದರೆ ನೀವು ಇದನ್ನು ಮಾಡುವುದಿಲ್ಲ. ಮೋದಿಜೀ, ನೀವು ಎಂದಿಗೂ ಮಹಿಳಾ ಮೀಸಲಾತಿಗೆ ಬದ್ಧರಾಗಿರಲಿಲ್ಲ. ದಯವಿಟ್ಟು
2014 ರಲ್ಲಿ ನೀವು ಪ್ರಧಾನಿಯಾಗಿ ಆಯ್ಕೆಯಾದಿರಿ. ನಿಮ್ಮ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಆಶ್ವಾಸನೆ ನೀಡಿತ್ತು. ನಿಮ್ಮ ನೇತೃತ್ವದ ಮೈತ್ರಿಕೂಟ 336 ಸ್ಥಾನಗಳನ್ನು ಗೆದ್ದಿತು. ಇವುಗಳಲ್ಲಿ, ನಿಮ್ಮದೇ ಪಕ್ಷವು 282 ಸ್ಥಾನಗಳನ್ನು ಗೆದ್ದಿತು. ನೀವು ಮಾಡಿದ “ಪ್ರಯತ್ನಗಳು” ಯಾವುವು? ನಿಮ್ಮ ಮೊದಲ ಅಧಿಕಾರಾವಧಿಯಲ್ಲಿ ಮಹಿಳಾ ಮಸೂದೆಯನ್ನು ಏಕೆ ಅಂಗೀಕರಿಸಲಿಲ್ಲ ಎಂದು ಈ ದೇಶದ ಮಹಿಳೆಯರಿಗೆ ಹೇಳಿ. ಇದಿಷ್ಟೇ ಅಲ್ಲ, ಮೋದಿಜಿ, ನೀವು ಮಸೂದೆಯನ್ನು ಸರ್ಕಾರದ ಕಾರ್ಯಸೂಚಿಯಲ್ಲಿ ಸೇರಿಸಲು ಸಹ ನಿರಾಕರಿಸಿದ್ದೀರಿ. 2017 ರಲ್ಲಿ, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ, ಆಗಿನ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ರಾಜ್ಯಸಭಾ ಸದಸ್ಯರಾಗಿ, ಮಹಿಳಾ ಮೀಸಲಾತಿ ಮಸೂದೆಯನ್ನು ವ್ಯವಹಾರ ಕಾರ್ಯಸೂಚಿಯ ಭಾಗವಾಗಿ ಪಟ್ಟಿ ಮಾಡಬೇಕೆಂದು ಆಗ್ರಹಿಸಿದರು.
ನೀವು ನಿರಾಕರಿಸಿದ್ದೇಕೆ? ಜುಲೈ 2018 ರಲ್ಲಿ, ಲೋಕಸಭೆಯಲ್ಲಿ ಸಿಪಿಐ(ಎಂ) ಸಂಸದೆ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘದ (ಎಐಡಿಡಬ್ಲ್ಯೂಎ) ಪ್ರಸ್ತುತ ಅಧ್ಯಕ್ಷೆ ಪಿ.ಕೆ.ಶ್ರೀಮತಿ ಈ ವಿಷಯವನ್ನು ಎತ್ತಿದರು. 2019ರ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದ್ದುದರಿಂದ ಅದರ ತುರ್ತು ಅಗತ್ಯ ಇತ್ತು. ಹಲವು ಪಕ್ಷಗಳು ಅವರನ್ನು ಬೆಂಬಲಿಸಿದವು. ಆದರೆ ನಿಮ್ಮ ಸರ್ಕಾರ ಅವರ ಮನವಿಯನ್ನು ನಿರ್ಲಕ್ಷಿಸಿತು. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ಹಲವಾರು ವಿರೋಧ ಪಕ್ಷಗಳ ಸಂಸದೆಯರು ಸಂಸತ್ತಿನ ಒಳಗೆ ಧರಣಿ ನಡೆಸಿದರು. ಸಂಸತ್ತಿನ ಹೊರಗೆ, ಮಹಿಳೆಯರು ಬೀದಿಗಿಳಿದು ಮಸೂದೆಯನ್ನು ಕಾರ್ಯಸೂಚಿಯಲ್ಲಿ ಸೇರಿಸಬೇಕೆಂದು ಮತ್ತು ಅಂಗೀಕರಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು. ಆದರೆ ನೀವು ಏನನ್ನೂ ಮಾಡಲಿಲ್ಲ, ಏಕೆ ಶ್ರೀ ಮೋದಿಜಿ? ಪರಿಣಾಮವಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಕಳೆದುಕೊಂಡರು. ಈ ವಿಷಯದಲ್ಲಿ ಇದು ನಿಮ್ಮ ಮೊದಲ ದ್ರೋಹ.
2019 ರಲ್ಲಿ,ನೀವು ಇನ್ನೂ ಹೆಚ್ಚಿನ ಬಹುಮತದಿಂದ ಗೆದ್ದಿರಿ. ನಿಮ್ಮ ಮೈತ್ರಿಕೂಟ ಗೆದ್ದ 353 ಸ್ಥಾನಗಳಲ್ಲಿ, ನಿಮ್ಮ ಪಕ್ಷವು 303 ಸ್ಥಾನಗಳನ್ನು ಗೆದ್ದಿತು. ಇದು ಭಾರಿ ಬಹುಮತ. ನೀವು ಅದನ್ನು ಹೇಗೆ ಬಳಸಿದ್ದೀರಿ? ಉದ್ಯಮಿಗಳಿಗೆ ಸಹಾಯ ಮಾಡುವುದು ನಿಮ್ಮ ಆದ್ಯತೆಯಾಯಿತು. ನೀವು ನಾಲ್ಕು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ತಂದಿದ್ದೀರಿ. ಮೂರು ರೈತ ವಿರೋಧಿ ಮಸೂದೆಗಳನ್ನು ಅಂಗೀಕರಿಸಲು ನೀವು ನಿಮ್ಮ ಬಹುಮತವನ್ನು ಬಳಸಿದ್ದೀರಿ. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ನೀವು ನಿಮ್ಮ ಬಹುಮತವನ್ನು ಏಕೆ ಬಳಸಲಿಲ್ಲ? ದೋಷಪೂರಿತ ಮಹಿಳಾ ಮೀಸಲಾತಿ ಮಸೂದೆಯ ಒಂದು ದೋಷಪೂರಿತ ಆವೃತ್ತಿಯನ್ನು ತರಲು ನಿಮ್ಮ ಅಧಿಕಾರದ ಅವಧಿಯ ಕೊನೆಯ ಅಧಿವೇಶನದವರೆಗೆ ಅದನ್ನು ಸಂಸದೀಯ ಸಮಿತಿಗೆ ವರದಿ ಮಾಡಲು ಸಮಯವನ್ನೂ ಬಿಡದಂತೆ ನೀವು ಕಾದಿದ್ದದ್ದು ಏಕೆ,?
ಸೆಪ್ಟೆಂಬರ್ 2023 ರಲ್ಲಷ್ಟೇ, ನೀವು ಒಂದು ಮಸೂದೆಯನ್ನು ಮಂಡಿಸಿದಿರಿ, ಅದನ್ನು ʼನಾರಿ ಶಕ್ತಿ ವಂದನಾ ಅಧಿನಿಯಮ್ʼ(NSVA) ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆಯ ನಿಮ್ಮ ಆಯ್ಕೆಯನ್ನು ಈ ಪತ್ರದಲ್ಲಿ ನಾನು ನಂತರ ಚರ್ಚಿಸುತ್ತೇನೆ. ಮುಂದೆ ಬರಲಿದ್ದ 2024 ರ ಚುನಾವಣೆಯಲ್ಲಿ ನಿಮ್ಮ ಆಶ್ವಾಸನೆಯನ್ನು ಎರಡನೇ ಬಾರಿಗೆ ಮುರಿದಿದ್ದಕ್ಕಾಗಿ ಟೀಕೆಗಳನ್ನು ತಪ್ಪಿಸಲು ನಿಮ್ಮ ಸರ್ಕಾರ ಈ ಮಸೂದೆಯನ್ನು ತಂದಿದೆ ಎಂದು ಹಲವರು ಹೇಳಿದ್ದಾರೆ. ಆದರೆ ಕಾರ್ಯಸೂಚಿ ಇನಷ್ಟು ಕೆಟ್ಟದಾಗಿತ್ತು. NSVA ಸಾಂವಿಧಾನಿಕ ತಿದ್ದುಪಡಿಯಾಗಿ ಸೆಕ್ಷನ್ 334A ಅನ್ನು ಪರಿಚಯಿಸಿತು. ಇದು ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಪೂರ್ಣಗೊಂಡ ನಂತರವೇ ಜಾರಿಗೆ ತರಲಾಗುವುದು ಎಂದು ಹೇಳುತ್ತದೆ.
ಮಹಿಳಾ ಗುಂಪುಗಳು ಈ ಜೋಡಣೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದವು. ಮಹಿಳಾ ಮೀಸಲಾತಿಗೂ ಜನಗಣತಿ ಅಥವಾ ಕ್ಷೇತ್ರಗಳ ವಿಂಗಡಣೆಗೂ ಯಾವುದೇ ಸಂಬಂಧವಿಲ್ಲ, 2024 ರ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿಯ ಹಕ್ಕನ್ನು ನಿರಾಕರಿಸಲಾಗುತ್ತಿದೆ ಮತ್ತು ಈ ಸಂಪೂರ್ಣ ಪ್ರಕ್ರಿಯೆಯು ಎಂದು ಪೂರ್ಣಗೊಳ್ಳುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ನಾವು ವಾದಿಸಿದೆವು. ಈ ಹಲವು ಪ್ರಶ್ನೆಗಳನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಎತ್ತಿದವು. ನೀವು ಮತ್ತು ಒಕ್ಕೂಟ ಗೃಹಮಂತ್ರಿಗಳು 2029 ರ ಚುನಾವಣೆಯ ವೇಳೆಗೆ ಜನಗಣತಿ ಮತ್ತು ಕ್ಷೇತ್ರಗಳ ಮರುವಿಂಗಡಣೆ ಪೂರ್ಣಗೊಳ್ಳಲಿದೆ ಎಂದು ಒಂದು ‘ಖಾತರಿ” ನೀಡಿದಿರಿ’. ಮಸೂದೆ ಅಂಗೀಕರಿಸಲ್ಪಟ್ಟಿತು. ಆದರೆ ನಿಮ್ಮ ಯಾವುದೇ ಭರವಸೆಗಳನ್ನು ಜಾರಿಗೆ ತಂದಿಲ್ಲ. ದಯವಿಟ್ಟು
ಮೋದಿಜಿ, ಮಹಿಳೆಯರು ಬೆಲೆ ತೆತ್ತಿದ್ದಾರೆ.
ನೀವು ಈ ಜೋಡಣೆಯನ್ನು ಒತ್ತಾಯಿಸದಿದ್ದಿದ್ದರೆ ಮತ್ತು ನಿಮ್ಮದೇ ಪಕ್ಷವು ಮತ ನೀಡಿದ್ದ 2010 ರ ಮಸೂದೆಯನ್ನು ಮಂಡಿಸಿದ್ದರೆ, ಇಂದು ಲೋಕಸಭೆಯಲ್ಲಿ 180 ಮಹಿಳೆಯರು ಇರುತ್ತಿದ್ದರು. ಬದಲಾಗಿ, ಅವರ ಸಂಖ್ಯೆ ಕೇವಲ 74 ಕ್ಕೆ ಇಳಿದಿದೆ. ಇದು 2019 ಕ್ಕಿಂತಲೂ ಕಡಿಮೆ. ಈ ಅವಧಿಯಲ್ಲಿ ಹತ್ತು ವಿಧಾನಸಭೆಗಳಿಗೆ ಚುನಾವಣೆಗಳು ನಡೆದವು. ಮೂರನೇ ಒಂದು ಭಾಗದ ಬದಲು, ಅವರ ಸಂಖ್ಯೆ ಹತ್ತು ಪ್ರತಿಶತಕ್ಕಿಂತ ಕಡಿಮೆ. ನಿಮ್ಮ ಸ್ವಂತ ರಾಜ್ಯವಾದ ಗುಜರಾತಿನಲ್ಲಿ, 2022 ರಲ್ಲಿ ನಡೆದ ಚುನಾವಣೆಯಲ್ಲಿ 182 ವಿಧಾನಸಭಾ ಸ್ಥಾನಗಳಲ್ಲಿ, ಕೇವಲ 15 ಮಹಿಳೆಯರು ಮಾತ್ರ, ಅಂದರೆ, ಕೇವಲ 8 ಪ್ರತಿಶತ. ಸಂಸತ್ತಿನಲ್ಲಿ ನಿಮಗೆ ಮೂರನೇ ಎರಡರಷ್ಟು ಬಹುಮತವಿದ್ದರೂ, ತಕ್ಷಣವೇ ಜಾರಿಗೆ ತರಬಹುದಾದ ಕಾನೂನನ್ನು ತರಲು ನೀವು ನಿರಾಕರಿಸಿದ್ದೀರಿ. ಇದು ನಿಮ್ಮ ಎರಡನೇ ದ್ರೋಹ, ಮೋದಿಜಿ.
ಮೋದಿಜಿ, ಮಹಿಳೆಯರು ಬೆಲೆ ತೆತ್ತಿದ್ದಾರೆ.ನೀವು ಈ ಜೋಡಣೆಯನ್ನು ಒತ್ತಾಯಿಸದಿದ್ದಿದ್ದರೆ ಮತ್ತು ನಿಮ್ಮದೇ ಪಕ್ಷವು ಮತ ನೀಡಿದ್ದ 2010 ರ ಮಸೂದೆಯನ್ನು ಮಂಡಿಸಿದ್ದರೆ, ಇಂದು ಲೋಕಸಭೆಯಲ್ಲಿ 180 ಮಹಿಳೆಯರು ಇರುತ್ತಿದ್ದರು. ಬದಲಾಗಿ, ಅವರ ಸಂಖ್ಯೆ ಕೇವಲ 74 ಕ್ಕೆ ಇಳಿದಿದೆ. ಇದು 2019 ಕ್ಕಿಂತಲೂ ಕಡಿಮೆ. ಈ ಅವಧಿಯಲ್ಲಿ ಹತ್ತು ವಿಧಾನಸಭೆಗಳಿಗೆ ಚುನಾವಣೆಗಳು ನಡೆದವು. ಮೂರನೇ ಒಂದು ಭಾಗದ ಬದಲು, ಅವರ ಸಂಖ್ಯೆ ಹತ್ತು ಪ್ರತಿಶತಕ್ಕಿಂತ ಕಡಿಮೆ. ನಿಮ್ಮ ಸ್ವಂತ ರಾಜ್ಯವಾದ ಗುಜರಾತಿನಲ್ಲಿ, 2022 ರಲ್ಲಿ ನಡೆದ ಚುನಾವಣೆಯಲ್ಲಿ 182 ವಿಧಾನಸಭಾ ಸ್ಥಾನಗಳಲ್ಲಿ, ಕೇವಲ 15 ಮಹಿಳೆಯರು ಮಾತ್ರ, ಅಂದರೆ, ಕೇವಲ 8 ಪ್ರತಿಶತ. ಸಂಸತ್ತಿನಲ್ಲಿ ನಿಮಗೆ ಮೂರನೇ ಎರಡರಷ್ಟು ಬಹುಮತವಿದ್ದರೂ, ತಕ್ಷಣವೇ ಜಾರಿಗೆ ತರಬಹುದಾದ ಕಾನೂನನ್ನು ತರಲು ನೀವು ನಿರಾಕರಿಸಿದ್ದೀರಿ.
ಮಹತ್ವದ ರಾಜ್ಯ ವಿಧಾನಸಭಾ ಚುನಾವಣೆಗಳ ಮಧ್ಯೆ, ಮಹಿಳಾ ಮೀಸಲಾತಿ ವಿಷಯದ ಕುರಿತು ಹೊಸ ಸಾಂವಿಧಾನಿಕ ತಿದ್ದುಪಡಿಗಳನ್ನು ಪಾಸು ಮಾಡಿಸಿಕೊಳ್ಳಲು ನೀವು ಏಪ್ರಿಲ್ 16 ರಂದು ಸಂಸತ್ತಿನ ಅಧಿವೇಶನವನ್ನು ವಿಸ್ತರಿಸಿದಿರಿ. ವಿರೋಧ ಪಕ್ಷಗಳೊಂದಿಗೆ ಯಾವುದೇ ಪೂರ್ವಭಾವಿ ಚರ್ಚೆಯೂ ಇರಲಿಲ್ಲ, ಅಥವಾ ಮಹಿಳಾ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ಇರಲಿಲ್ಲ. ಅಂತಿಮವಾಗಿ, ಆ ಸಾಂವಿಧಾನಿಕ ತಿದ್ದುಪಡಿಗಳನ್ನು ಸದನದಲ್ಲಿ ಸೋಲಿಸಲಾಯಿತು. 2011 ರ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆಯನ್ನು ತರುವ ನಿಮ್ಮ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಮಹಿಳಾ ಮೀಸಲಾತಿಯ ವಿಷಯವನ್ನು ಬಳಸುವ ನಿಮ್ಮ ಆಟವನ್ನು ವಿಫಲಗೊಳಿಸಲಾಯಿತು. ಮೊದಲಿನಿಂದಲೂ ನೀವು ಇದೇ ಯೋಜನೆಯನ್ನು ಹೊಂದಿದ್ದರಿಂದ ಉದ್ದೇಶಪೂರ್ವಕವಾಗಿ ಜನಗಣತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದು ನಿಮ್ಮ ಮೂರನೇ ದ್ರೋಹ, ಮೋದಿಜಿ.
ನೀವು ಸಂಸತ್ತಿನಲ್ಲಿ ಸ್ಥಾನಗಳನ್ನು 850 ಕ್ಕೆ ಹೆಚ್ಚಿಸಲು ಬಯಸಿದಿರಿ. ನಿಮ್ಮ ಭಾಷಣದಲ್ಲಿ, “ನಾರಿ ಶಕ್ತಿ ವಂದನಾ ತಿದ್ದುಪಡಿ ಯಾರಿಂದಲೂ ಏನನ್ನೂ ಕಿತ್ತುಕೊಳ್ಳುವ ಬಗ್ಗೆ ಅಲ್ಲ. ನಾರಿ ಶಕ್ತಿ ವಂದನಾ ತಿದ್ದುಪಡಿ ಎಲ್ಲರಿಗೂ ಏನನ್ನಾದರೂ ನೀಡುವ ಬಗ್ಗೆ, ಅದು ನೀಡುವ ತಿದ್ದುಪಡಿಯಾಗಿತ್ತು” ಎಂದು ನೀವು ಹೇಳಿದ್ದೀರಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜಕೀಯದಲ್ಲಿ ಪಿತೃಪ್ರಾಧಾನ್ಯತೆಯನ್ನು ಕದಡಿಸಬಾರದು, ಪುರುಷರು ಅಧಿಕಾರವನ್ನು ಇಟ್ಟುಕೊಳ್ಳಲಿ- ಅವರ ಸಂಖ್ಯೆ ಹೆಚ್ಚಾಗಲಿ – ಮಹಿಳೆಯರು ಹೆಚ್ಚುವರಿ ಸೇರ್ಪಡೆಯಾಗಬಹುದು . ನಿಮ್ಮದೇ ಪಕ್ಷದಲ್ಲಿನ ತಂತಮ್ಮ ಜಾಗೀರುಗಳನ್ನು ನಡೆಸುತ್ತಿರುವ, ಮತ್ತು ಮೊದಲಿಂದಲೂ ಮಹಿಳಾ ಮೀಸಲಾತಿಯ ಮಹಾವಿರೋಧಿಗಳಾಗಿರುವ ಪಾಳೆಯಗಾರೀ ಜಾತಿವಾದಿ ದೊರೆಗಳ ವಿರೋಧದೊಂದಿಗೆ ನೀವು ರಾಜಿ ಮಾಡಿಕೊಂಡಿದ್ದೀರಿ. ಸೀಟುಗಳು ಹೆಚ್ಚಾದರೆ ಅವರಿಗೇನೂ ಧಕ್ಕೆ ಬರುವುದಿಲ್ಲ.
ಜೊತೆಗೆ, ಮನುವಾದಿ ದೃಷ್ಟಿಕೋನವು ಇಲ್ಲಿ ಸ್ಪಷ್ಟವಾಗಿದೆ. 2011 ರ ಜನಗಣತಿಯನ್ನು ಬಳಸಿಕೊಂಡು, ದಲಿತರು ಮತ್ತು ಆದಿವಾಸಿ ಮಹಿಳೆಯರಿಗೆ ಮೀಸಲಿಡಬೇಕಾದ ಸ್ಥಾನಗಳಲ್ಲಿ ಅವರ ಹಕ್ಕಿನ ಪಾಲನ್ನು ನಿರಾಕರಿಸಲಾಗುತ್ತಿದೆ ಎಂಬುದು ಸತ್ಯಸಂಗತಿಯಲ್ಲವೇ? 2001 ಮತ್ತು 2026 ರ ನಡುವೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನಸಂಖ್ಯೆಯು ಹೆಚ್ಚಿದೆ. ಅದರಿಂದಾಗಿ ಅವರ ಸೀಟುಗಳ ಅನುಪಾತವೂ ಸಹ ಹೆಚ್ಚಾಗಬೇಕು. ಆದರೆ ನಿಮ್ಮ ಪ್ರಸ್ತಾಪವು ಅವರಿಗೆ ಈ ಹಕ್ಕನ್ನು ನಿರಾಕರಿಸುತ್ತದೆ. ದಯವಿಟ್ಟು
ನಿಮ್ಮ ಭಾಷಣದಲ್ಲಿ, “ನಾರಿ ಶಕ್ತಿ ವಂದನ ತಿದ್ದುಪಡಿ ಯಾರಿಂದಲೂ ಏನನ್ನೂ ಕಿತ್ತುಕೊಳ್ಳುವ ಬಗ್ಗೆ ಅಲ್ಲ. ನಾರಿ ಶಕ್ತಿ ವಂದನ ತಿದ್ದುಪಡಿ ಎಲ್ಲರಿಗೂ ಏನನ್ನಾದರೂ ನೀಡುವ ಬಗ್ಗೆ, ಅದು ನೀಡುವ ತಿದ್ದುಪಡಿಯಾಗಿತ್ತು” ಎಂದು ನೀವು ಹೇಳಿದ್ದೀರಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜಕೀಯದಲ್ಲಿ ಪಿತೃಪ್ರಾಧಾನ್ಯತೆಯನ್ನು ಕದಡಿಸಬಾರದು, ಪುರುಷರು ಅಧಿಕಾರವನ್ನು ಇಟ್ಟುಕೊಳ್ಳಲಿ- ಅವರ ಸಂಖ್ಯೆ ಹೆಚ್ಚಾಗಲಿ – ಮಹಿಳೆಯರು ಹೆಚ್ಚುವರಿ ಸೇರ್ಪಡೆಯಾಗಬಹುದು!
ಮತ್ತು ಅಂತಿಮವಾಗಿ, ಕ್ಷೇತ್ರಗಳ ಮರುವಿಂಗಡಣೆ ಮತ್ತು ಸ್ಥಾನಗಳ ಹೆಚ್ಚಳಕ್ಕೆ ಬರೋಣ. ಇದನ್ನು ಪ್ರತ್ಯೇಕವಾಗಿ ಚರ್ಚಿಸಿ. ರಾಜ್ಯಗಳ ಜನಸಂಖ್ಯೆಯು ಅನುಪಾತದ ಹಂಚಿಕೆಗಳಿಗೆ ಆಧಾರವಾಗಿರಬಾರದು. ಏಕೆಂದರೆ ಇದು ರಾಜ್ಯಗಳನ್ನು ಅವುಗಳ ಅಭಿವೃದ್ಧಿಗಾಗಿ ಶಿಕ್ಷಿಸುತ್ತದೆ. ಅದಕ್ಕೆ ಏನು ಆಧಾರವಾಗಿರಬಲ್ಲದು? ಚರ್ಚೆಗಳು ಮತ್ತು ಸಮಾಲೋಚನೆಗಳು ನಡೆಯಲಿ. ಅದೇನೇ ಇರಲಿ, ಇದಕ್ಕೂ ಮಹಿಳಾ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ದಯವಿಟ್ಟು
ಮಹಿಳಾ ಮೀಸಲಾತಿಯ ಪ್ರಶ್ನೆಯನ್ನು ಕುಟಿಲತನಕ್ಕೆ ಬಳಸುವಲ್ಲಿ ನೀವು ವಿಫಲರಾಗಿದ್ದೀರಿ ಎಂದು ಮಹಿಳೆಯರು ಸಂತೋಷಪಡುತ್ತಿದ್ದಾರೆ. ಪ್ರತಿಪಕ್ಷಗಳು “ಹೆಣ್ಣು ಭ್ರೂಣ ಹತ್ಯೆ ಎಸಗುವ” “ಒಂದು ಪಾಪ ಎಸಗಿವೆ ಎಂದು ನೀವು ಆರೋಪಿಸುತ್ತಿದ್ದೀರಿ ಮತ್ತು ಅದಕ್ಕಾಗಿ ಅವರಿಗೆ “ಶಿಕ್ಷೆಯಾಗುತ್ತದೆ” ಎಂದಿದ್ದೀರಿ. ನೀವು ನಿಮ್ಮ ಪದಗಳನ್ನು ಹೆಚ್ಚು ಎಚ್ಚರಿಕೆಯಿಂದ ಬಳಸಬೇಕು, ಮೋದಿಜೀ. ನಿಮಗೆ ಇಂತಹ ಅನುಚಿತ ಹೋಲಿಕೆಗಳನ್ನು ಬಳಸಬೇಕೆಂದಿದ್ದರೆ, ಯಾವುದೇ ಭ್ರೂಣವಿಲ್ಲ ಎಂದು ನೀವು ತಿಳಿದುಕೊಳ್ಳಬೇಕು. 2010 ರ ಮಹಿಳಾ ಮೀಸಲಾತಿ ಮಸೂದೆಯ ಸ್ವರೂಪದಲ್ಲಿ ಒಂದು ಪೂರ್ಣವಾಗಿ ರೂಪುಗೊಂಡಿದ್ದ “ಇರವು” ಇತ್ತು, ಮತ್ತು ಅದಕ್ಕೆ ನಿಮ್ಮ ಪಕ್ಷವು ಮತ ನೀಡಿತ್ತು. ನೀವು ಅದನ್ನು ಸಮಾಧಿ ಮಾಡಿದ್ದೀರಿ. ಪಾಪವೆಂಬುದೇನಾದರೂ ಇದ್ದರೆ, ಅದು ಇದೇ. ದಯವಿಟ್ಟು
ನಿಮ್ಮ ಸರ್ಕಾರದ ಈ ಸರಣಿ ದ್ರೋಹಗಳಿಂದ ಮಹಿಳೆಯರು ರೋಸಿ ಹೋಗಿದ್ದಾರೆ. ಇದನ್ನು ‘ವಂದನಾ’ ಎಂದು ಕರೆಯಬೇಡಿ. ನಾವು ಪೂಜ್ಯತೆಯನ್ನಲ್ಲ, ಹಕ್ಕುಗಳನ್ನು ಹುಡುಕುತ್ತಿದ್ದೇವೆ. ನಮ್ಮ ಹಕ್ಕೊತ್ತಾಯದ ಮೂಲ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಸಾಂವಿಧಾನಿಕವಾಗಿ ಹೆಚ್ಚಿಸುವ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ ಎಂಬ ಬಲವಾದ ನಂಬಿಕೆಯ ಮೇಲೆ ನಿಂತಿದೆ. ನಾವು ಜಾತಿ ಜನಗಣತಿಯ ಬೇಡಿಕೆಯನ್ನು ಬೆಂಬಲಿಸುತ್ತೇವೆ. ನೀವು ತಪ್ಪಿಸ ಬಯಸುತ್ತಿರುವುದು ಇದನ್ನೇ. ಏಕೆಂದರೆ ಭಾರತದಲ್ಲಿ ಜಾತಿ ಅಸಮಾನತೆಯ ಸತ್ಯವನ್ನು ದಾಖಲಿಸುವುದು ಮತ್ತು ನಿರಾಕರಿಸಲಾಗದ ದತ್ತಾಂಶಗಳ ಮೂಲಕ ಅದನ್ನು ಕೈಗೆತ್ತಿಕೊಳ್ಳುವುದು ನಿಮಗೆ ಇಷ್ಟವಿಲ್ಲ. ದಯವಿಟ್ಟು
ಮತ್ತು ದಯವಿಟ್ಟು ಮೋದಿಜೀ! ನಮಗಾಗಿ ಕಣ್ಣೀರು ಸುರಿಸಬೇಡಿ – 2014 ರಲ್ಲಿ ನೀವು ಮಾಡಬೇಕಾಗಿದ್ದನ್ನು ಕಾರ್ಯಗತ ಮಾಡಿ: ಮುಂದಿನ ಸುತ್ತಿನ ಚುನಾವಣೆಗಳಲ್ಲಿ ಜಾರಿಗೆ ತರಲು ಸಾಧ್ಯವಾಗುವಂತೆ ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು, ಯಾವುದೇ ಜೋಡಣೆಗಳು, ಷರತ್ತುಗಳಿಲ್ಲದೆ ತನ್ನಿ, ನಮಗೆ ನಾಟಕವಲ್ಲ, ಕ್ರಿಯೆ ಬೇಕು. ದಯವಿಟ್ಟು
ನಿಮ್ಮ ವಿಶ್ವಾಸಿ
ಬೃಂದಾ ಕಾರಟ್
“ನಾನು ಈ ಮಾವಿನ ಸಸಿ ನೆಟ್ಟು ೮೫೦ ಮಾವುಗಳಲ್ಲಿ ೩೩% ನಿನ್ನೊಂದಿಗೆ
ಹಂಚಿಕೊಳ್ಳಬೇಕು ಎಂದಿದ್ದೆ. ಆದರೆ ವಿರೋಧಿಮಂದಿ ನನ್ನನ್ನು ತಡೆದರು!”
“ಅದನ್ನು ನನ್ನೊಂದಿಗೆ ಹಂಚಿಕೊಳ್ಳುತ್ತೀರಾ, ದಯವಿಟ್ಟು?”
ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ
ಇದನ್ನೂ ನೋಡಿ : ಬ್ರಿಟಿಷರಎದೆ ನಡುಗಿಸಿದ ಕ್ರಾಂತಿಕಾರಿ: ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ Janashakthi Media

