ಮೈಸೂರು: “ಮೈಸೂರು ಅಂದರೆ ಅದಕ್ಕೊಂದು ದೈವಿಕ ಸಂಗೀತದ ಪರಂಪರೆ ಇದೆ. ನನ್ನ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕು ಎಂದು ಜಾನಕಮ್ಮ ಅವರು ಐದಾರು ವರ್ಷಗಳ ಹಿಂದೆಯೇ ಹೇಳಿದ್ದರು. ಅವರ ಆಸೆಯಂತೆಯೇ ಇಂದು ಇಲ್ಲಿನ ಮಣ್ಣಿನಲ್ಲೇ ಲೀನವಾಗುತ್ತಿದ್ದಾರೆ” ಎಂದು ನಾದಬ್ರಹ್ಮ ಹಂಸಲೇಖ ಹೇಳಿದರು.
ಜಾನಕಮ್ಮ ಅವರ ಜೀವನ ಸಾಧನೆಯನ್ನು ಸ್ಮರಿಸಿದ ಅವರು, “88 ವರ್ಷಗಳ ಪರಿಪೂರ್ಣ ಜೀವನವನ್ನು ನಡೆಸಿದ ಜಾನಕಿ ಅವರು, ಆರು ದಶಕಗಳ ಕಾಲ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಂಗೀತವನ್ನೇ ದೈವವಾಗಿ ಭಾವಿಸಿದ್ದ ಅವರು ಸಕಲ ಧರ್ಮಗಳನ್ನು ಸಮಾನವಾಗಿ ಗೌರವಿಸಿದ ಮಹಾನ್ ವ್ಯಕ್ತಿತ್ವ” ಎಂದು ಹೇಳಿದರು.
ಇದನ್ನೂ ಓದಿ: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ನಿಧನ
ಅವರ ನಿಧನವನ್ನು ತುಂಬಲಾರದ ನಷ್ಟವೆಂದು ಬಣ್ಣಿಸಿದ ಹಂಸಲೇಖ, ಜಾನಕಮ್ಮ ಅವರ ಸ್ಮರಣಾರ್ಥವಾಗಿ ಮಹತ್ವದ ಯೋಜನೆಯನ್ನು ಘೋಷಿಸಿದರು. “ಅವರ ಅಂತ್ಯಸಂಸ್ಕಾರ ನಡೆಯುವ ಸ್ಥಳದಲ್ಲೇ ಭವ್ಯವಾದ ಧ್ಯಾನಮಂಟಪ ಅಥವಾ ಜ್ಞಾನಮಂಟಪವನ್ನು ನಿರ್ಮಿಸುವ ಆಲೋಚನೆ ಇದೆ. ಕುಟುಂಬದವರು ಒಪ್ಪಿಗೆ ನೀಡಿದರೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದು ತಿಳಿಸಿದರು.
ಈ ಪುಣ್ಯ ಕಾರ್ಯಕ್ಕೆ ರಾಜ್ಯ ಸರ್ಕಾರವೂ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ಕುಟುಂಬದ ಅನುಮತಿ ಸಿಕ್ಕ ತಕ್ಷಣ ಧ್ಯಾನಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ನೋಡಿ: ಬಿಎಲ್‌ಒ ಕಾರ್ಯದಿಂದ ಮುಕ್ತಗೊಳಿಸಿ: ಜಿಲ್ಲಾಧಿಕಾರಿ ಕಚೇರಿಗೆ ಅಂಗನವಾಡಿ ನೌಕರರ ಮುತ್ತಿಗೆ Janashakthi Media
