ಧರ್ಮಸ್ಥಳ ಕೊಲೆ ಪ್ರಕರಣ | ಮಣ್ಣಿಗೆ ದೂಡಿದ‌ ದೇಹಗಳದೆಷ್ಟೋ!! ಲೆಕ್ಕ ಇಟ್ಟವರಾರು??

ಧರ್ಮಸ್ಥಳದ ಸುತ್ತಮುತ್ತಲಿನ ವಿದ್ಯಮಾನಗಳನ್ನು ನಿಗೂಢವಾಗಿಯೇ ಉಳಿಸಿ ಬಿಡುವ ಪ್ರಯತ್ನ ನಿರಂತರವಾಗಿ ‌ನಡೆಯುತ್ತಿದೆ. ಅಂದು ಪದ್ಮಲತಾ ‌ಪ್ರಕರಣದಿಂದ ಹೊರಬಂದ ಸತ್ಯವನ್ನು ಅಲ್ಲೇ ಹೂತುಹಾಕಿದ ಪ್ರಭಾವ ಅಂದಿನಿಂದ ಇಂದಿನವರೆಗೆ ಮಣ್ಣಿಗೆ ದೂಡಿದ‌ ದೇಹಗಳದೆಷ್ಟೋ!! ಲೆಕ್ಕ ಇಟ್ಟವರಾರು?? ಧರ್ಮಸ್ಥಳ

ವಿಮಲಾ ಕೆ. ಎಸ್‌ 

ಬಂದನೊಬ್ಬ ಭೀಮ, ನಾನು‌ ಸತ್ತವರನ್ನು ‌ಹೂತಿರುವೆ‌, ಸತ್ಯ‌ ಹೊರಬರಲಿ ಎಂದು. ಕಳೆದುಕೊಂಡ ಕುಟುಂಬದವರಿಗೆ ಆಸೆ ಚಿಗುರಿದರೆ ತಪ್ಪಲ್ಲವಲ್ಲ.‌ ಮಗಳು ಕಾಣೆಯಾಗಿ‌ ಕಣ್ಮರೆಯಾದವಳ ಅಸ್ಥಿಪಂಜರವಾದರೂ ಹುಡುಕಿ ಕೊಡಿ ಎಂದು ಬಂದವರು ಅನನ್ಯ ಭಟ್ ತಾಯಿ ಸುಜಾತ ಭಟ್. ನಮ್ಮೆಲ್ಲರ ಸಹಾನುಭೂತಿ ಇದೆ ಆ ತಾಯಿಯ ನೋವಿಗೆ.

ಭೀಮ ತೋರಿದ ಜಾಗದಲ್ಲಿ ಅಗೆಯಲಾಗುತ್ತಿದೆ. ಏನು ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಇದುವರೆಗೂ ಎಸ್.ಐ.ಟಿ. ಅಧಿಕೃತವಾಗಿ ಏನೂ ಹೇಳಿಲ್ಲ. ಆದರೆ …..ದೂರು ಕೊಟ್ಟವರ ಬಗ್ಗೆ, ಸತ್ಯ ಮತ್ತು ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವವರ ಮೇಲೆ ಮನಸೋ ಇಚ್ಚೆ ಅಪಪ್ರಚಾರ ನಡೆಯುತ್ತಿದೆ. ಧರ್ಮಸ್ಥಳ

ಇದನ್ನೂ ಓದಿ: ಒಳಮೀಸಲಾತಿ ತಕ್ಷಣವೇ ಜಾರಿ ಮಾಡಿ ಮುಖ್ಯಮಂತ್ರಿಗೆ ದೇವನೂರು ಮಹದೇವ ಬಹಿರಂಗ ಪತ್ರ ಧರ್ಮಸ್ಥಳ

ಧರ್ಮಸ್ಥಳ ಜನರ ಧಾರ್ಮಿಕ ನಂಬಿಕೆಯ ಕ್ಷೇತ್ರ. ಅದರ ಬಗ್ಗೆ ಯಾರ‌ ತಕರಾರಿಲ್ಲ. ಆ ಸ್ಥಳದಲ್ಲಿ ಘಟಿಸಿದ ಘಟನೆಗಳಿಗೆ , ಗತಿಸಿದ ಜೀವಗಳ ಬಲಿ ಪಡೆದವರು ‌ಯಾರೆಂದು ಸತ್ಯ ಬಯಲು ಮಾಡಿರೆಂದರೆ ಯಾರಿಗೇಕೆ ಕಷ್ಟ ‌ಎನಿಸಬೇಕು.

ಯಾವುದೇ ಕಾರಣದಿಂದ ನಡೆದ ಘಟನೆಗಳಿಗೆ ಧರ್ಮದ ಲೇಪನ ಹಚ್ಚಿ ಆಕಾಶ ಭೂಮಿ ಒಂದು ಮಾಡುವ ಜನ ಇಲ್ಲಿ ಸತ್ತವರೆಲ್ಲರೂ ಇವರು ಪ್ರತಿಪಾದಿಸುವ ಧರ್ಮದವರು. ಹಾಗಿದ್ದೂ ಯಾಕೆ…..ನ್ಯಾಯಕ್ಕಾಗಿ ಒತ್ತಾಯಿಸುತ್ತಿಲ್ಲ!!

ಬಿಡಿ…ಇಲ್ಲಿ ಒತ್ತಾಯಿಸದಿರುವುದೇ ಹೆಚ್ಚು ‘ಅರ್ಥ’ಪೂರ್ಣ ಇರಬಹುದು. ಆದರೆ…..ಅಪರಾಧಿಗಳು ಯಾರೆಂದೇ ತಿಳಿಯದಿರುವಾಗಲೂ ಯಾರನ್ನೋ ರಕ್ಷಿಸಲು ಇವರು ಯಾಕೆ ಟೊಂಕ ಕಟ್ಟಿ‌‌ ನಿಂತಿದ್ದಾರೆ?

ಮೊದಲು..ಇದು‌ ಕಮ್ಯುನಿಸ್ಟ್ ರ ಸಂಚು ಎಂದರು. ನಂತರ ಕೇರಳ ಸರಕಾರ ಎಂದರು. ಅಷ್ಟಕ್ಕೆ ಸುಮ್ಮನಾಗದೇ ವಿಧಾನಸಭಾ ಅಧಿವೇಶನದಲ್ಲಿಯೂ ಅದೇ ಚರ್ಚೆ. ನ್ಯಾಯಕ್ಕಾಗಿ ಒತ್ತಾಯಿಸಿ ಸತ್ಯ‌ ಹೊರತೆಗೆಯಿರಿ ಎಂದಲ್ಲ. ಬದಲಿಗೆ ಭೀಮನ ಮೇಲೆ ಗದಾಪ್ರಹಾರ. ಆತ ತೋರಿದ ಜಾಗದಲ್ಲಿ ಏನೂ ಸಿಗದಿರುವುದರಿಂದ ಆತನ ಮೇಲೆ ಕ್ರಮ ಕೈಗೊಳ್ಳಬೇಕಂತೆ. ಆತನಿಂದಲೇ ಎಸ್.ಐ. ಟಿ ಖರ್ಚು ವೆಚ್ಚ‌ ಭರಿಸಬೇಕಂತೆ. ನಮಸ್ತೆ ಸದಾ ವತ್ಸಲೆ ಮಾತೃಭೂಮೆ ಎನ್ನುವ‌ವರಿಗೆ, ಮಾತೃದೇವೋ ಭವ‌ ಎನ್ನುವವರಿಗೆ ಸೌಜನ್ಯ, ಪದ್ಮಲತಾ ವೇದವಲ್ಲಿ ಯರು ಹೆಣ್ಣಾಗಿ ಕಾಣಿಸುತ್ತಿಲ್ಲವೇ.

ಇಷ್ಟೇ ಸಾಲದೆಂಬಂತೆ ಮಗಳ ಅಸ್ಥಿಪಂಜರ ಸಿಕ್ಕರೆ ಹಿಂದೂ ಧಾರ್ಮಿಕ ನಂಬಿಕೆಯಂತೆ ‌ಸಂಸ್ಕಾರ ಮಾಡಿ‌ ಸಮಾಧಾನ ಪಡೆಯಲು ತಹತಹಿಸುತ್ತಿರುವ ಸುಜಾತ ಭಟ್ ರ‌ ಮೇಲೆ ದಾಳಿ ಶುರುವಾಗಿದೆ. ಕುಟುಂಬದ ಸದಸ್ಯರು ಎಂದು ಹೇಳಿಕೊಂಡ ವ್ಯಕ್ತಿಯನ್ನು ಕೂರಿಸಿಕೊಂಡು‌ ನಡೆಸುವ ಸಂದರ್ಶನದಲ್ಲಿ ಆ ನೊಂದ ತಾಯಿಯ ಕುರಿತು ಅದೆಷ್ಟು ಹಗುರವಾದ ಮಾತುಗಳನ್ನು ಆಡಿಸುತ್ತಾರೆ. ಆಕೆಯ ಚಾರಿತ್ರ್ಯವಧೆಗೂ ಹೇಸದಂತಹ ಮಾತುಗಳು !!

ಅಸಹಜ ಸಾವೆಂದು ಹೂಳಲಾಗಿದೆ. ಇದು ಸ್ಥಳೀಯ ಗ್ರಾಮ ಪಂಚಾಯತ್ ನ ಮಾಜಿಗಳು ಹೇಳಿದ ಮಾತು. ಹಾಗೆಂದ ಮೇಲೆ ಅಸಹಜ ಸಾವಿನ‌ ಕಾರಣ ತಿಳಿಯಲು ಇವರೆಲ್ಲರಿಗೆ ಅಂಜಿಕೆ ಯಾಕೆ?? ಎಂದರೆ…….ಸತ್ಯ ಹೊರಬಂದರೆ ಬಯಲಾಗುವವರ ಬಗ್ಗೆ ಕಾಳಜಿಯೆ??

ಯೋನಿ ಯಲ್ಲಿ ಮಣ್ಣು ತುಂಬಿದ ಸ್ಥಿತಿಯಲ್ಲಿ , ಕುಂಭದ್ರೋಣವಾಗಿ ಸುರಿದ ಮಳೆಯಲ್ಲಿ ನೆನೆದ ಜಾಗದಲ್ಲಿ ‌ಅವಳ ಹೆಗಲಿನ ಸ್ಕೂಲ್ ಬ್ಯಾಗ್ ಒಂದಿನಿತೂ ಒದ್ದೆಯಾಗದೆ ಮೈಯ್ಯೆಲ್ಲ ಗಾಯವಾದ ಸೌಜನ್ಯಳ ನೆನಪು ನಿಮಗೆ ಕಾಡದಿದ್ದರೆ ನೀವು ಇನ್ಯಾವತ್ತೂ ನಡೆಯುವ ಯಾವುದೇ ಅತ್ಯಾಚಾರಗಳ ಬಗ್ಗೆ ಉಸಿರೆತ್ತುವ ನೈತಿಕತೆಯ ಚೌಕಟ್ಟಿನ ಹೊರಗೆ ನಿಲ್ಲಬೇಕು. ಹೆಣದ ಮೇಲೂ ಓಟಿನ ಬೇಟೆಯಾಡುವವರಿಗೆ ಲಾಭ..ಲಾಭ ಲಾಭವಷ್ಟೇ ಬೇಕು.

ಈಗ ಸಾಲ ಪಡೆದ‌ ಮಹಿಳೆಯರ ಪ್ರತಿಭಟನೆಗಳನ್ನು ಸಂಘಟಿಸಲಾಗುತ್ತಿದೆ. ಇದೇನು ಕುತಂತ್ರ. ಇತ್ತ ಮಹುಳೆಯರ ಮೇಲೆ ಅತ್ಯಾಚಾರ , ಕೊಲೆ ನಡೆದಿದೆ ಎಂದು ಇರುವ ದೂರಿಗೆ ಉತ್ತರ ಕೇಳಿದರೆ ಅದನ್ನು ಕ್ಷೇತ್ರಕ್ಕೆ ಮಾಡಿದ ಅಪಚಾರವೆಂದು ಪ್ರಚಾರ ಮಾಡಿ ತಮ್ಮ ಕುಲದ ಮೇಲೆ ನಡೆದ ದೌರ್ಜನ್ಯದ ಪರವಾಗಿ ಮಹಿಳೆಯರನ್ನೇ ಬೀದಿಗಿಳಿಸುವ ಅನಿವಾರ್ಯತೆ ಯಾಕೆ ಬಂದಿದೆ. ಸತ್ಯವಿದ್ದಲ್ಲಿ ಭಯವೇಕೆ??

ಇಲ್ಲಿ ನ್ಯಾಯಕ್ಕಾಗಿ ಕಾದು ನಿಂತವರಲ್ಲಿ ಒಬ್ಬರೂ ಹೆಣದ ರಾಜಕಾರಣ ಮಾಡಲು ಸೂಕ್ತವಾದವರಲ್ಲ. ಹಾಗಾಗಿ ನ್ಯಾಯದ ದಾರಿಗೆ ಅಡ್ಡ‌ನಿಲ್ಲುವವರ ಸಾಲಿನಲ್ಲಿ ಬಲಾಢ್ಯ ರೇ ಇದ್ದಾರೆ. ನ್ಯಾಯಕ್ಕಾಗಿ ತಹತಹಿಸುತ್ತಿರುವ ಪದ್ಮಲತಾ, ವೇದವಲ್ಲಿ, ಯಮುನಾ ನಾರಾಯಣ ಸೌಜನ್ಯ ರ ಜೊತೆ ನಾವಿದ್ದೇವೆ.
ನಮಗೆ ನ್ಯಾಯ ನೀತಿ ಸತ್ಯ ಧರ್ಮಗಳ ಪರ ನಿಂತು ಮಾತ್ರ ಗೊತ್ತು.

ಇದನ್ನೂ ನೋಡಿ: ಅಮೆರಿಕಾದ ಎದೆ ನಡುಗಿಸಿದ್ದ ಮಹಾನ್‌ ನಾಯಕ ಫಿಡೆಲ್‌ ಕ್ಯಾಸ್ಟ್ರೊ Janashakthi Media ಧರ್ಮಸ್ಥಳ

Donate Janashakthi Media

Leave a Reply

Your email address will not be published. Required fields are marked *