ಪೈ ಲೇಔಟ್ ನಿವಾಸಿಗಳ ಬೀದಿ ಪ್ರತಿಭಟನೆ: ಕೆಟ್ಟ ರಸ್ತೆ, ಒಳಚರಂಡಿ ಸಮಸ್ಯೆಗೆ ತಕ್ಷಣ ಕ್ರಮಕ್ಕೆ ಆಗ್ರಹ

ಬೆಂಗಳೂರು: ಟಿನ್ ಫ್ಯಾಕ್ಟರಿ ಜಂಕ್ಷನ್ ಸಮೀಪದ ಪೈ ಲೇಔಟ್ ನಿವಾಸಿಗಳು ಜೂನ್‌ 4ರಂದು ಬೀದಿಗಿಳಿದು, ಕೆಟ್ಟ ರಸ್ತೆಗಳು, ಮುಚ್ಚಿಹೋಗಿರುವ ಒಳಚರಂಡಿ ವ್ಯವಸ್ಥೆ ಮತ್ತು ಕಸದ ಸಂಗ್ರಹಣೆಯ ಸಮಸ್ಯೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪೈ ಲೇಔಟ್ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ (PLRWA) ಆಯೋಜಿಸಿದ ಈ ಮೆರವಣಿಗೆಯಲ್ಲಿ 100ಕ್ಕೂ ಹೆಚ್ಚು ನಿವಾಸಿಗಳು ಭಾಗವಹಿಸಿದ್ದರು. ಇದರಲ್ಲಿ ಉದ್ಯೋಗಿಗಳು, ಹಿರಿಯ ನಾಗರಿಕರು, ಮಕ್ಕಳು ಹಾಗೂ ಮಹಿಳೆಯರೂ ಸೇರಿದ್ದರು.

ಪ್ರತಿಭಟನಾಕಾರರು “We Want Safe Roads” ಎಂಬ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಸಂಡೆ ಬಜಾರ್ ವ್ಯಾಪಾರಿಗಳ ಕಾರ್ಯಾಚರಣೆಗೆ ಮುಂದಾದ ನಗರಪಾಲಿಕೆ: ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಐದು ಪ್ರಮುಖ ಬೇಡಿಕೆಗಳು

ಸಂಘವು ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ: ಒಳಚರಂಡಿಗಳ ಹೂಳು ತೆರವು, ರೈಲು ಅಂಡರ್‌ಬ್ರಿಡ್ಜ್ ಕೆಳಗಿನ ಮಳೆನೀರು ಕಾಲುವೆಯ ಸ್ವಚ್ಛತೆ ಹಾಗೂ ಅಗಲವರ್ಧನೆ, ಗುಂಡಿ ಬಿದ್ದ ರಸ್ತೆಗಳ ಅಸ್ಫಾಲ್ಟಿಂಗ್, ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಮತ್ತು ನಿಯಮಿತ ಮನೆಮನೆ ಕಸದ ಸಂಗ್ರಹಣೆ.

ಈ ಪ್ರದೇಶದಲ್ಲಿ ಸುಮಾರು 68 ಅಪಾರ್ಟ್‌ಮೆಂಟ್ ಸಂಕೀರ್ಣಗಳು ಹಾಗೂ 200 ಸ್ವತಂತ್ರ ಮನೆಗಳು ಸೇರಿ 5,000ಕ್ಕೂ ಹೆಚ್ಚು ನಿವಾಸಿಗಳು ವಾಸಿಸುತ್ತಿದ್ದಾರೆ.

“ನಾವು ಕಾನೂನು ಪಾಲಿಸುವ ನಾಗರಿಕರು, ವರ್ಷದಿಂದ ವರ್ಷಕ್ಕೆ ಆದಾಯ ತೆರಿಗೆ ಹಾಗೂ ಆಸ್ತಿ ತೆರಿಗೆ ಪಾವತಿಸುತ್ತಿದ್ದೇವೆ. ಆದರೆ ಮೂಲಭೂತ ನಗರ ಸೌಲಭ್ಯಗಳನ್ನು ನಮಗೆ ನೀಡಲಾಗುತ್ತಿಲ್ಲ,” ಎಂದು PLRWA ಕಾರ್ಯದರ್ಶಿ ಎನ್.ಎಚ್. ಸುಬ್ರಮಣಿಯನ್ ಹೇಳಿದರು.

ಅವರು ಮುಂದುವರಿದು, “ಕಳೆದ ಹಲವು ತಿಂಗಳುಗಳಿಂದ ನಾವು ಹಲವು ಬಾರಿ ಅಧಿಕೃತ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ನೆಲಮಟ್ಟದ ಕ್ರಮ ನಡೆದಿಲ್ಲ. ಈ ವರ್ಷಿನ ಪರಿಸ್ಥಿತಿಯನ್ನು ನಾವು IPL ಎಂದು ಕರೆಯುತ್ತೇವೆ — Inaction, Promises and Lapses. ಇದು ಮುಂದುವರಿಯಲು ಸಾಧ್ಯವಿಲ್ಲ, ಶಾಶ್ವತ ಪರಿಹಾರ ಸಿಗುವವರೆಗೆ ನಾವು ಪ್ರತಿಭಟನೆ ಮುಂದುವರಿಸುತ್ತೇವೆ,” ಎಂದರು.

ತಕ್ಷಣದ ಕ್ರಮ ಭರವಸೆ

ಮೆರವಣಿಗೆಯ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು PLRWA ನಾಯಕರನ್ನು ಸಂಪರ್ಕಿಸಿದರು. ನಂತರ ಕೆ.ಆರ್. ಪುರಂ ವಲಯದ ಜಂಟಿ ಆಯುಕ್ತೆ ಸುಧಾ ಅವರನ್ನು ಸ್ಥಳಕ್ಕೆ ನಿಯೋಜಿಸಲಾಯಿತು.

ಅವರು ನಿವಾಸಿಗಳೊಂದಿಗೆ ತುರ್ತು ಸಭೆ ನಡೆಸಿ, ಮುಚ್ಚಿಹೋಗಿರುವ ಮಳೆನೀರು ಕಾಲುವೆ ಹಾಗೂ ಹಾಳಾದ ರಸ್ತೆಗಳನ್ನು ಪರಿಶೀಲಿಸಿದರು. ಐದು ಪ್ರಮುಖ ಬೇಡಿಕೆಗಳ ಕುರಿತು ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಇದನ್ನೂ ನೋಡಿ: ಕಡಬ ಸಮುದಾಯ ಆಸ್ಪತ್ರೆ ಅವ್ಯವಸ್ಥೆ | ವೈದ್ಯರ ಕೊರತೆ, ಔಷಧಿ ಅಭಾವ, ಲ್ಯಾಬ್ ಸಿಬ್ಬಂದಿ ಕೊರತೆಯಿಂದ ರೋಗಿಗಳ ಪರದಾಟ

Donate Janashakthi Media

Leave a Reply

Your email address will not be published. Required fields are marked *