ಸಿಪಿಐ(ಎಂ) ಹಿರಿಯ ನಾಯಕ ಎಂ.ಆರ್. ಶೆಣೈ ನಿಧನ

ಬೆಂಗಳೂರು: ಸಿಪಿಐ(ಎಂ) ಹಿರಿಯ ನಾಯಕ, ಬ್ಯಾಂಕ್ ನೌಕರ ಸಂಘಟನೆಯ ರಾಷ್ಟ್ರೀಯ ನಾಯಕ ಎಂ. ರತ್ನಾಕರ್ ಶೆಣೈ ಅವರು ಸೆಪ್ಟೆಂಬರ್ 22 ರಂದು ರಾತ್ರಿ 9:30ಕ್ಕೆ ತೀರ್ವ ಅನಾರೋಗ್ಯದಿಂದ ನಗರದ ಖಾಸಗೀ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸಮಿತಿಯು ಶ್ರದ್ದಾಂಜಲಿಯನ್ನು ವ್ಯಕ್ತಪಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ತಿಳಿಸಿದ್ದಾರೆ.

ಅವರ ನಿಧನದಿಂದ, ಚಳುವಳಿಗೆ ದೊಡ್ಡ ನಷ್ಟವಾಗಿದೆ. ಒಬ್ಬ ಹೋರಾಟಗಾರ ಒಡನಾಡಿಯನ್ನು, ಉತ್ಸಾಹಭರಿತ ಮುಂದಾಳುವನ್ನು, ಸಮೃದ್ಧ ಓದುಗನನ್ನು, ಟ್ರೇಡ್ ಯೂನಿಯನ್ ತರಗತಿಗಳಲ್ಲಿ ಅತ್ಯುತ್ತಮ ಶಿಕ್ಷಕ ಮತ್ತು ಕಾರ್ಮಿಕ ವರ್ಗದ ಚಳುವಳಿಯಲ್ಲಿ ದೃಢ ನಂಬಿಕೆಯುಳ್ಳವರನ್ನು ಕಳೆದುಕೊಂಡಿದ್ದೇವೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಕಂಬನಿ ಮಿಡಿಯುತ್ತದೆ.

ಕಾಮ್ರೇಡ್ ಎಂ.ಆರ್.ಶಣೈ ಮೂಲತಃ ಚಿಕ್ಕಮಗಳೂರು ಜಿಲ್ಲೆಯಲ್ಲಿ 1 ಸೆಪ್ಟೆಂಬರ್ 1950 ರಲ್ಲಿ ಜನಿಸಿ, ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನಲ್ಲೇ ಪೂರೈಸಿದರು. ತಮ್ಮ ಪದವಿ ವಿದ್ಯಾಭ್ಯಾಸವನ್ನು ಪೂರೈಸಿದ ಕೂಡಲೇ ಪೂನಾದಲ್ಲಿ ಪಿಲಿಪ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಆರಂಬಿಸಿದರು. ಆನಂತರ ಸ್ವಲ್ಪ ಸಮಯ ಮಂಗಳೂರಿನ ಗಣೇಶ್ ಬೀಡಿ ಕಂಪನಿಯ ಮೈಸೂರಿನ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದರು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕ ಗೌರವಧನ ಪಾವತಿಸದ 29 ಆಯುಕ್ತರ ವಿರುದ್ಧ ಪ್ರಕರಣ

1975 ರಲ್ಲಿ ಕೆನರಾ ಬ್ಯಾಂಕ್‌ಗೆ ನೌಕರರಾಗಿ ಕೆಲಸಕ್ಕೆ ಸೇರಿಕೊಂಡ ನಂತರ ಅವರ ಕೆಲಸದ ಜೊತೆಗೆ ಬ್ಯಾಂಕ್ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಕೆನರಾಬ್ಯಾಂಕ್ ಸ್ಟಾಪ್ ಎಂಪ್ಲಾಯಸ್ಸ್ ಯೂನಿಯನ್‌ಗೆ ಸೇರ್ಪಡೆಯಾಗಿ ಬ್ಯಾಂಕ್ ನೌಕರರ ಪರವಾಗಿ ಕೆಲಸ ಆರಂಭಿಸಿದರು. ಬ್ಯಾಂಕ್ ನೌಕರರ ಕುರಿತು ಅವರ ಅಪಾರವಾದ ಕಾಳಜಿ ಮತ್ತು ಹೋರಾಟದ ಮನೋಬಾವದಿಂದಾಗಿ 2004 ರಲ್ಲಿ ಕೆನರಾ ಬ್ಯಾಂಕ್ ಸ್ಟಾಪ್ ಯೂನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.

2004 ರಿಂದ 2022 ರವರೆಗೆ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ (ಬಿಇಎಫ್‌ಐ) ನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು ಮತ್ತು ಬಿಇಎಫ್‌ಐ ನ ರಾಷ್ಟಿçÃಯ ಉಪಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು. ಆ ಅವಧಿಯಲ್ಲಿ ಚಳುವಳಿಯಲ್ಲಿ ಕೆಲವು ಅಡಚಣೆಗಳು ಬಂದವು. ಅವುಗಳನ್ನೆಲ್ಲ ಮೀರಿ ಸ್ಟಾಫ್ ಯುನಿಯನ್‌ನನ್ನು ರಾಷ್ಟ್ರವ್ಯಾಪಿ ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಎಡ ಸಿದ್ಧಾಂತಗಳ ಬಗೆಗಿನ ಅವರ ನಂಬಿಕೆಗಳು ಅವರನ್ನು ಕೊನೆಯವರೆಗೂ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ  ಧ್ವಜವನ್ನು ಹೊತ್ತುಕೊಳ್ಳುವಂತೆ ಮಾಡಿತು.

ಕರ್ನಾಟಕದಲ್ಲಿ ರಿಸರ್ವ್ ಬ್ಯಾಂಕ್ ನೌಕರರ ಸಂಘವು 47 ದಿನಗಳಕಾಲ ನಡೆಸಿದ ಹೋರಾಟಕ್ಕೆ ಅವರು ನೀಡಿದ ಅವಿರತ ಬೆಂಬಲ ಬ್ಯಾಂಕ್ ನೌಕರರ ಮನಸ್ಸಿನಲ್ಲಿ ಸದಾ ಪ್ರತಿಧ್ವನಿಸುತ್ತಿದೆ. ಅವರ ಸಾವು ಅವರ ಕುಟುಂಬ ಸದಸ್ಯರಿಗೆ ಮಾತ್ರವಲ್ಲದೆ ಕೈಗಾರಿಕೆಗಳಾದ್ಯಂತ ಮತ್ತು ವಿಶೇಷವಾಗಿ ಬ್ಯಾಂಕ್‌ಗಳಲ್ಲಿ ಅವರ ಒಡನಾಡಿಗಳಿಗೆ ದೊಡ್ಡ ನಷ್ಠವಾಗಿದೆ..

ಶೆಣೈ ಅವರ ಜೀವನ ಸಂಗಾತಿಯಾಗಿದ್ದ ಕಾಂ. ಲಲಿತಾ ರತ್ನಾಕರ್‌ರವರು, ಕೆನರಾ ಬ್ಯಾಂಕ್ ಸಿಬ್ಬಂದಿ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯರಾಗಿದ್ದು ಮತ್ತು ಬಿಇಎಫ್‌ಐ ನಾಯಕಿಯಾಗಿದ್ದಾರೆ. ಅವರು ಸಂಘಟನೆಗೆ ಅಪಾರ ಕೊಡುಗೆ ನೀಡುವುದರ ಜೊತೆಗೆ ಕಾಂ. ಶೆಣೈ ಅವರ ಹೋರಾಟಗಳಲ್ಲಿ ಅವರೊಂದಿಗೆ ನಿಂತವರು. ಇವರಿಬ್ಬರಿಗೆ ಸೌಮ್ಯ ಎಂಬ ಮಗಳಿದ್ದಾರೆ.

ದೇಶದ ಆರ್ಥಿಕ ಬೆಳವಣಿಗೆಗಳ ಕುರಿತು ಆಳವಾದ ಅಧ್ಯಯನ ಮತ್ತು ತಿಳುವಳಿಕೆ ಇದ್ದ ಕಾಮ್ರೇಡ್ ಎಂ.ಆರ್.ಶೆಣೈರವರು ದುಡಿಯುವ ವರ್ಗದ ಜನರ ಪರವಾಗಿ ನಿರಂತರವಾಗಿ ತುಡಿತ ಹೊಂದಿದ್ದರು ಮತ್ತು ಅದಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕನ್ನಡ, ಇಂಗ್ಲೀಷ್, ಹಿಂದಿ ಮೂರು ಭಾಷೆಗಳ ಮೇಲೆ ಹಿಡಿತವಿದ್ದ ಇವರು ಅಸಂಘಟಿತ ಕಾರ್ಮಿಕರಿಂದ ಹಿಡಿದು ಎಲ್ಲಾ ವಿಭಾಗದ ಕಾರ್ಮಿಕ ವರ್ಗಕ್ಕೆ ರಾಜಕೀಯ ಅರ್ಥಶಾಸ್ತç ಮತ್ತು ಜಾಗತೀಕರಣದ ಬೆಳವಣಿಗೆಗಳ ಕುರಿತು ಅತ್ಯಂತ ಸರಳವಾಗಿ ಅರ್ಥಮಾಡಿಸಲು ಯಶಸ್ವಿಯಾಗಿದ್ದರು.

ಅತ್ಯಂತ ಸರಳ ವ್ಯಕ್ತಿತ್ವದ, ಜನಚಳುವಳಿಗಳ ಬಗ್ಗೆ ಅಪಾರವಾದ ಬದ್ದತೆಯನ್ನು ಹೊಂದಿದ್ದ ಸಂಗಾತಿ ಎಂ.ಆರ್.ಶೆಣೈರವರು ತಮ್ಮ 76 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಅವರ ಮಾರ್ಗದರ್ಶನ, ಬೋಧನೆಗಳು ಮತ್ತು ಅವರು ತುಳಿದ ಹಾದಿ ನಮ್ಮೆಲ್ಲರ ಮನಸ್ಸಿನಲ್ಲಿ ಅಮರವಾಗಿರುತ್ತದೆ. ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

ಇದನ್ನೂ ನೋಡಿ: ಒಳ ಮೀಸಲಾತಿ ಜಾರಿ | ಸಮಾಧಾನವೇ! ಅಸಮಾಧಾನವೇ?? ದಲಿತ ನಾಯಕ ಮಾವಳ್ಳಿ ಶಂಕರ್‌ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *