ನವದೆಹಲಿ : 2026 ರ ಜನವರಿ 16 ರಿಂದ 18 ರವರೆಗೆ ತಿರುವನಂತಪುರದ ಇಎಂಎಸ್ ಅಕಾಡೆಮಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿಯು ಬಿಜೆಪಿ ಮತ್ತು ಹಿಂದುತ್ವ ಕೋಮುವಾದಿ ಶಕ್ತಿಗಳ ವಿರುದ್ಧ ತನ್ನ ದೃಢ ಹೋರಾಟವನ್ನು ಮುಂದುವರಿಸಲು ಮತ್ತು ಅದೇ ವೇಳೆಗೆ ಪಕ್ಷದ ಸ್ವತಂತ್ರ ಬಲವನ್ನು ಹೆಚ್ಚಿಸಲು ಕೆಲಸ ಮಾಡಲು ಪ್ರತಿಜ್ಞೆ ಮಾಡಿತು. ಮನರೇಗ
ಅದು ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ – ಐದು ರಾಜ್ಯಗಳಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಿತು. ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ಜನವಿರೋಧಿ ನೀತಿಗಳ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿತು; ಕೇಂದ್ರ ಕಾರ್ಮಿಕ ಸಂಘಗಳು ನೀಡಿದ ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರದ ಕರೆಗೆ ಕೇಂದ್ರ ಸಮಿತಿ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು; ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಗೊಳಿಸುವುದರ ವಿರುದ್ಧ ಗಾಂಧೀಜಿ ಹುತಾತ್ಮ ದಿನವಾದ ಜನವರಿ 30ರಿಂದ ಒಂದು ವಾರದ ಅಭಿಯಾನ ನಡೆಸಲು ನಿರ್ಧರಿಸಿತು; ವೆನೆಜುವೆಲಾ ಮೇಲೆ ಯುಎಸ್ ಆಕ್ರಮಣ ಮತ್ತು ಪ್ಯಾಲೆಸ್ಟ್ಐನ್ ಮೇಲ ಸ್ರೇಲ್ ಆಕ್ರಮಣವನ್ನು ಮತ್ತು ಈ ಎರಡರ ಬಗ್ಗೆಯೂ ಭಾರತ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಚರ್ಚಿಸಿತು.
ಇದನ್ನೂ ಓದಿ : ಮಹಾರಾಷ್ಟ್ರ| ಮತದಾನವಿಲ್ಲದೆ ಚುನಾವಣೆಗಳು ನಡೆಯುವ ಏಕೈಕ ಪ್ರಜಾಪ್ರಭುತ್ವ – ನಟ ಕಿಶೋರ್
ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಗೊಳಿಸುವುದರ ವಿರುದ್ಧ ಅಭಿಯಾನ: ಒಂದು ಹೊಸ ಕಾಯ್ದೆಯನ್ನು ತಂದು ಸೀಮಿತ ಉದ್ಯೋಗದ ಹಕ್ಕನ್ನು ಒದಗಿಸುವ ಸಾರ್ವತ್ರಿಕ, ಬೇಡಿಕೆ ಆಧಾರಿತ ಕಾನೂನಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯ ನಾಶದ ವಿರುದ್ಧ ಪಕ್ಷವು ತೀವ್ರ ಅಭಿಯಾನವನ್ನು ಕೈಗೊಳ್ಳಲಿದೆ. ಈ ಅಭಿಯಾನವು ಜನವರಿ 30 (ಮಹಾತ್ಮ ಗಾಂಧಿಯವರ ಮರಣ ವಾರ್ಷಿಕ) ರಿಂದ ಪ್ರಾರಂಭವಾಗಿ ಫೆಬ್ರವರಿ 5 ರವರೆಗೆ ಒಂದು ವಾರ ನಡೆಯಲಿದೆ.
ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರ: ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಅಧಿಸೂಚನೆಯ ವಿರುದ್ಧ ಕೇಂದ್ರ ಕಾರ್ಮಿಕ ಸಂಘಗಳು ನೀಡಿದ ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರದ ಕರೆಗೆ ಕೇಂದ್ರ ಸಮಿತಿ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ಕೇಂದ್ರ ಕಾರ್ಮಿಕ ಸಂಘಗಳು ನೀಡಿದ ಸಾರ್ವತ್ರಿಕ ಮುಷ್ಕರದ ಕರೆಯನ್ನು ಪಕ್ಷವು ಸಕ್ರಿಯವಾಗಿ ಬೆಂಬಲಿಸುತ್ತದೆ. ಮುಷ್ಕರದ ದಿನದಂದು, ಟ್ರೇಡ್ ಯೂನಿಯನ್ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಅದು ಹೇಳಿದೆ.
ಇದನ್ನೂ ನೋಡಿ : ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ? | ಗುರುರಾಜ ದೇಸಾಯಿ| Janashakthi Media #upsir
