ಯಶಸ್ವಿ ಸಾರ್ವತ್ರಿಕ ಮುಷ್ಕರ: ಕಾರ್ಮಿಕ ವರ್ಗಕ್ಕೆ ಸಿಪಿಐ(ಎಂ) ಅಭಿನಂದನೆಗಳು

ನವದೆಹಲಿ: ಜುಲೈ 9, 2025 ರಂದು ಯಶಸ್ವಿ ಸಾರ್ವತ್ರಿಕ ಮುಷ್ಕರಕ್ಕಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕಾರ್ಮಿಕ ವರ್ಗವನ್ನು ಅಭಿನಂದಿಸಿದೆ.

ವಿವಿಧ ಸ್ಥಳಗಳಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಮತ್ತು ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸದಂತೆ ಕಾರ್ಮಿಕರನ್ನು ಬೆದರಿಸಲು ಪ್ರಯತ್ನಿಸಲಾಗಿದೆ ಎಂದು ವರದಿಗಳು ತೋರಿಸುತ್ತವೆ. ಅಂತಹ ಎಲ್ಲಾ ದಾಳಿಗಳನ್ನು ಎದುರಿಸಿ, ಮುಷ್ಕರ ಯಶಸ್ವಿಯಾಗಿ ನಡೆಯಿತು.

ಇದನ್ನೂ ಓದಿ: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಥಳಿತ; ಸಾವು

ರೈತರು, ಕೃಷಿ ಕಾರ್ಮಿಕರು ಮತ್ತು ವಿವಿಧ ವಿಭಾಗಗಳ ಜನರು ಸಹ ಸೌಹಾರ್ದ ವ್ಯಕ್ತಪಡಿಸುತ್ತ ಕಾರ್ಮಿಕರೊಂದಿಗೆ ಸೇರಿಕೊಂಡು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದರು.

ಕಾರ್ಮಿಕ ವರ್ಗದ ಜೊತೆ ನಿಂತು ಈ ಸಾರ್ವತ್ರಿಕ ಮುಷ್ಕರ ಭಾರೀ ಯಶಸ್ಸು ಗಳಿಸುವಂತೆ ಮಾಡಿರುವ ಎಲ್ಲ ಜನರನ್ನು ಸಿಪಿಐ(ಎಂ) ಅಭಿನಂದಿಸುವುದಾಗಿ ಹೇಳಿರುವ ಪೊಲಿಟ್‍ಬ್ಯುರೊ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕ ಸಂಹಿತೆಗಳು ಮತ್ತು ಅದರ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧದ ಧ್ವನಿಯನ್ನು ಆಲಿಸಬೇಕು, ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಕಾರ್ಮಿಕ ವರ್ಗದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದೆ.

ಇದನ್ನೂ ನೋಡಿ: ಯುದ್ಧವೂ ಉದ್ಯಮವಾದಾಗ….! -ಡಾ.ಸಿದ್ದನಗೌಡ ಪಾಟೀಲ ವಿಶ್ಲೇಷಣೆಯಲ್ಲಿ Janashakthi Media

Donate Janashakthi Media

Leave a Reply

Your email address will not be published. Required fields are marked *