ಮಡಿಕೇರಿ| ಕಾಫಿ, ಏಲಕ್ಕಿ ಗಿಡಗಳನ್ನು ನಾಶ ಮಾಡಿದ ಪ್ರಕರಣ:

ಮಡಿಕೇರಿ: ಮುಕ್ಕೋಡ್ಲು ಗ್ರಾಮದಲ್ಲಿ ಬೆಳೆೆಗಾರರೊಬ್ಬರ ಎರಡು ಎಕರೆ ಜಾಗದಲ್ಲಿ ಬೆಳೆದಿದ್ದ ಕಾಫಿ ಮತ್ತು ಏಲಕ್ಕಿ ಗಿಡಗಳನ್ನು ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ವಜಾಗೊಳಿಸಬೇಕು ಮತ್ತು ಸಂತ್ರಸ್ತ ಬೆಳೆಗಾರನಿಗೆ 30 ಲಕ್ಷ ರೂ. ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಈ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಸೇವೆಯಿಂದ ವಜಾ ಮಾಡುವುದರೊಂದಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಪಂ ಕೆಡಿಪಿ ಸದಸ್ಯ, ಕಳಸ ಬ್ಲಾಕ್ ಕಾಂಗ್ರೆಸ್ ಮುಖಂಡ ಮುಹಮ್ಮದ್ ರಫೀಕ್ ಎಂಬವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಮಡಿಕೇರಿ

ಗುರುವಾರ ಎಸ್ಪಿಗೆ ಕಚೇರಿಗೆ ಆಗಮಿಸಿ ದೂರು ನೀಡಿರುವ ರಫೀಕ್, ನಿತ್ಯಾನಂದಗೌಡ ಅವರು ಪಿಎಸ್ಸೈ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪಶ್ನೆ ಪತ್ರಿಕೆ ಪಡೆದು ಪರೀಕ್ಷೆ ಬರೆದು ಸರಕಾರಿ ಹುದ್ದೆ ಗಿಟ್ಟಿಸಿಕೊಂಡಿರುವುದು, ಭ್ರಷ್ಟಾಚಾರ ನಡೆಸಿರುವುದು, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಅವರ ಪತ್ನಿ ಈ ಹಿಂದೆಯೇ ಕಳಸ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನ ಮೇರೆಗೆ ನಿತ್ಯಾನಂದಗೌಡ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು.

ಇದನ್ನೂ ಓದಿ: ಟ್ರಂಪ್ ಸುಂಕ-ಭಯೋತ್ಪಾದನೆಯ ಪಾಠಗಳು

ಸದ್ಯ ನಿತ್ಯಾನಂದಗೌಡ ಅವರು ಪಿಎಸ್ಸೈ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡಿರುವ ಬಗ್ಗೆ ದಿವ್ಯಾ ಎಂಬವರ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆಯಲ್ಲಿ ಬೆಳಕಿಗೆ ಬಂದಿದೆ. ಈ ಮೊಬೈಲ್ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈ ಮೊಬೈಲ್ ಸಂಭಾಷಣೆ ಆಧಾರದಲ್ಲಿ ನಿತ್ಯಾನಂದಗೌಡ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಮಡಿಕೇರಿ

ಪಿ.ಡಿ.ನಿತ್ಯಾನಂದಗೌಡರನ್ನು ಸೇವೆಯಿಂದ ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಶೀಘ್ರ ಗೃಹ ಸಚಿವರಿಗೂ ದೂರು ನೀಡಲಾಗುವುದು ಎಂದು ಕಳಸ ಬ್ಲಾಕ್ ಕಾಂಗ್ರೆಸ್ ಮುಖಂಡ ಮುಹಮ್ಮದ್ ರಫೀಕ್ ತಿಳಿಸಿದ್ದಾರೆ.

ಪಿ.ಡಿ.ನಿತ್ಯಾನಂದಗೌಡ ವಿರುದ್ಧ ಮುಹಮ್ಮದ್ ರಫೀಕ್ ಎಂಬವರು ದೂರು ನೀಡಿದ್ದಾರೆ. ಅಲ್ಲದೆ, ಆಡಿಯೊ ಸಂಭಾಷಣೆಯನ್ನು ತನಗೆ ಕಳುಹಿಸಿದ್ದಾರೆ. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ವಿಕ್ರಮ್ ಅಮಟೆ ಹೇಳಿದ್ದಾರೆ.

ಇದನ್ನೂ ನೋಡಿ: ಕೋಲಾರ | ಅಂಗೈ ಮೂಳೆ ಮುರಿದು ಆರು ದಿನ ಆದ್ರು ಚಿಕಿತ್ಸೆ ನೀಡದ ಸರ್ಕಾರಿ ಆಸ್ಪತ್ರೆ Janashakthi Media

Donate Janashakthi Media

Leave a Reply

Your email address will not be published. Required fields are marked *