ನವದೆಹಲಿ| ದೇಶದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವಿಕರಿಸಿದ ಸಿ.ಪಿ.ರಾಧಾಕೃಷ್ಣನ್

ನವದೆಹಲಿ:  ಇಂದು ಸೆ.12 ರಂದು ದೇಶದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಅವರು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಧಾಕೃಷ್ಣನ್‌ಗೆ ಪ್ರಮಾಣವಚನ ಬೋಧಿಸಿದರು.

ಇದನ್ನೂ ಓದಿ: ವಿಧಾನ‌ ಪರಿಷತ್ ಗೆ ನಾಮಕರಣಗೊಂಡ ನಾಲ್ಕೂ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ರಾಧಾಕೃಷ್ಣನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಗುಜರಾತ್‌ನ ರಾಜ್ಯಪಾಲ ದೇವವ್ರತ್ ಆಚಾರ್ಯ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಮಧ್ಯಾಹ್ನ 12 ಗಂಟೆಗೆ ರಾಜ್ಯಸಭೆಯ ಸಭಾ ನಾಯಕರನ್ನು ರಾಧಾಕೃಷ್ಣನ್ ಭೇಟಿಯಾಗಲಿದ್ದಾರೆ. ನಂತರ ನಡೆಯಲಿರುವ ಸಭೆಗೆ ಎಲ್ಲ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ.

ಇದನ್ನೂ ನೋಡಿ: ನಾಲ್ಕು ದಶಕಗಳಿಂದ ಧರ್ಮಸ್ಥಳದಲ್ಲಿ ಕೊಲೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆ – ಡಾ. ಕೆ.ಪ್ರಕಾಶ್‌ Janashakthi

Donate Janashakthi Media

Leave a Reply

Your email address will not be published. Required fields are marked *