ಪಶ್ಚಿಮ ಬಂಗಾಳ ಚುನಾವಣೆ: ಆರ್‌ಜಿ ಕರ್ ಪ್ರಕರಣದ ತಾಯಿಗೆ ಬಿಜೆಪಿ ಟಿಕೆಟ್

ಕೊಲ್ಕತ್ತಾ: ಬಿಜೆಪಿಯು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರುವ ಸಂಕಲ್ಪದೊಂದಿಗೆ ಕಾರ್ಯತಂತ್ರ ರೂಪಿಸಿದ್ದೂ, ಮಾರ್ಚ್‌ 25ರಂದು 19 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.

ಆರ್.ಜಿ. ಕರ್ ಕಾಲೇಜು, ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನಾ ದೇವನಾಥ್ ರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ: ಬೃಹತ್ ಕಾರ್ಮಿಕರ ಮೆರವಣಿಗೆ: ಲೇಬರ್ ಕೋಡ್ ವಿರುದ್ಧ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

ಪಾಣಿಹಾಟಿ ವಿಧಾನಸಭಾ ಕ್ಷೇತ್ರದಿಂದ ರತ್ನಾ ದೇವನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಪಾಣಿಹಾಟಿ ಕ್ಷೇತ್ರ ಹೈಪ್ರೊಫೈಲ್ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪಶ್ಚಿಮ ಬಂಗಾಳ ಸೇರಿದಂತೆ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಆರ್.ಜಿ. ಕರ್ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಹಿಳೆಯರ ಸುರಕ್ಷತೆ ಕಾನೂನು ಸುವ್ಯವಸ್ಥೆ ಬಗ್ಗೆ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿತ್ತು.

ಇದನ್ನೂ ನೋಡಿ: “ಯುಗಾದಿ: ಕಾವ್ಯದಲ್ಲಿ ಮೂಡುವ ಜೀವನದ ನಂಟು” Janashakthi Media

Donate Janashakthi Media

Leave a Reply

Your email address will not be published. Required fields are marked *