ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ

ಬೆಂಗಳೂರು: 2.5 ಕೋಟಿ ರು ವೆಚ್ಚದಲ್ಲಿ ಕೈದಿಗಳಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಜಾರಿಗೊಳಿಸಿದೆ. ಈಗಾಗಲೇ ಕಾರಾಗೃಹದ ಭದ್ರತೆಗೆ ಕೃತ್ತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳ ಅಳವಡಿಕೆ ಹಾಗೂ ಸಂದರ್ಶಕರಿಗೆ ಡಿಜಿಟಲ್ ಟೋಕನ್ ಬಳಿಕ ಈಗ ಅಕ್ರಮ ಚಟುವಟಿಕೆಗಳ ತಡೆಗೆ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ.
ಕಾರಾಗೃಹದಲ್ಲಿ ಕೈದಿಗಳ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಲಿನ ಪ್ರತಿ ಬ್ಯಾರಕ್, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಕೈಗಾರಿಕೆಗಳು ಹಾಗೂ ಬೇಕರಿ ಸೇರಿದಂತೆ ಇತೆರೆ ಬಯೋಮೆಟ್ರಿಕ್ ಅಳವಡಿಸಲಾಗಿದೆ.

ಇದನ್ನೂ ಓದಿ: ತಮಿಳುನಾಡು : ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ

ಆ ಪ್ರದೇಶಳ ಪ್ರವೇಶ ಹಾಗೂ ನಿರ್ಗಮನದ ವೇಳೆ ಸಜಾ ಹಾಗೂ ವಿಚಾರಣಾಧೀನ ಕೈದಿಗಳು ಬಯೋಮೆಟ್ರಿಕ್ ಬಳಸಬೇಕಿದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

10 ದಿನ ಕೈದಿಗಳಿಗೆ ಜೈಲಿನಲ್ಲಿ ಧ್ಯಾನ ಶಿಬಿರ:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ 10 ದಿನಗಳ ವಿಶೇಷ ಧ್ಯಾನ ಶಿಬಿರವನ್ನು ಕಾರಾಗೃಹ ಅಧಿಕಾರಿಗಳು ಆಯೋಜಿಸಿದ್ದಾರೆ. ಶ್ರೀ ಸತ್ಯನಾರಾಯಣ ಗೋಯೆಂಕಾ ಅವರ ವಿಪಶ್ಯನ ಧ್ಯಾನ ಮತ್ತು ಸಂಶೋಧನಾ ಕೇಂದ್ರದ ಸಹಭಾಗಿತ್ವದಲ್ಲಿ ಥ್ಯಾನ ತರಬೇತಿ ಆಯೋಜಿಸಲಾಗಿದ್ದು, ಮೊದಲ ಹಂತದಲ್ಲಿ ಕಾರ್ಯಾಗಾರದಲ್ಲಿ 25 ಕೈದಿಗಳು ಪಾಲ್ಗೊಂಡಿದ್ದಾರೆ.

ಸಮಾಜದಲ್ಲಿ ಸಮತಾಭಾವದಿಂದ ಬದುಕುವುದು ಮತ್ತು ಶಾಂತಿ ವಾತಾವರಣ ನಿರ್ಮಿಸುವ ಕುರಿತು ಕೈದಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ನೋಡಿ: ಯುದ್ಧದಲ್ಲಿ ಸೋತ ಯು.ಎಸ್ ನ್ನು ಮಾತುಕತೆಯಲ್ಲಿ ಗೆಲ್ಲಲು ಬಿಡದ ಇರಾನ್ Janashakthi Media

Donate Janashakthi Media

Leave a Reply

Your email address will not be published. Required fields are marked *