ಮಂಗಳೂರು| ಆರಿಫ್ ಹತ್ಯೆ ಪ್ರಕರಣದ ತನಿಖೆ ಸಿಸಿಬಿ ಯ ಎಸಿಪಿ ಗೆ ವರ್ಗಾವಣೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರು ನಗರದಲ್ಲಿ ನಡೆದ ಆರಿಫ್ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ಶಾಖೆಯ (CCB) ಸಹಾಯಕ ಪೊಲೀಸ್ ಆಯುಕ್ತರಿಗೆ (ACP) ವರ್ಗಾಯಿಸಿ ಆದೇಶಿಸಿದ್ದಾರೆ. ಪ್ರಕರಣದ ಗಂಭೀರತೆ ಮತ್ತು ಪಿತೂರಿಯ ಆಳವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹತ್ಯೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಗುರುತಿಸಿದ್ದಾರೆ. “ಆರೋಪಿಗಳು ಸತತವಾಗಿ ತಮ್ಮ ಅಡಗುದಾಣಗಳನ್ನು ಬದಲಾಯಿಸುತ್ತಿರುವುದು ಬಂಧನಕ್ಕೆ ಸವಾಲಾಗಿದೆ. ಆದರೆ ಶೀಘ್ರದಲ್ಲೇ ಅವರನ್ನು ಸೆರೆಹಿಡಿಯಲಾಗುವುದು,” ಎಂದು ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ವಿರೋಧಿ ಹೇಳಿಕೆಗಳಿಗೆ ಸೆನ್ಸರ್‌: ದೂರದರ್ಶನ ಪ್ರಸಾರ ಬಹಿಷ್ಕರಿಸಿದ ಸಿಪಿಐ

ತನಿಖೆಯ ವೇಳೆ ಹತ್ಯೆಯ ಸಂಚು ರೂಪಿಸಲು ಮತ್ತು ಆರೋಪಿಗಳು ಪರಾರಿಯಾಗಲು ನೆರವು ನೀಡಿದ ಹಲವು ಶಂಕಿತರನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಅಡಗಿಕೊಳ್ಳಲು ಆಶ್ರಯ ನೀಡುವವರ ವಿರುದ್ಧ ಆಯುಕ್ತರು ಕಠಿಣ ಎಚ್ಚರಿಕೆ ನೀಡಿದ್ದಾರೆ.

“ಯಾರೇ ಆಗಲಿ ಆರೋಪಿಗಳಿಗೆ ನೆರವು ನೀಡಿದಲ್ಲಿ ಅಥವಾ ರಕ್ಷಣೆ ನೀಡಿದಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 249(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಿದಂತೆಯೇ ಈಗಲೂ ಯಾವುದೇ ಹಿಂಜರಿಕೆಯಿಲ್ಲದೆ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಪುನರುಚ್ಚರಿಸಿದ್ದಾರೆ.

ಇದನ್ನೂ ನೋಡಿ: ಇರಾನ್ ಮೇಲೆ ಯು.ಎಸ್.-ಇಸ್ರೇಲ್ ದಾಳಿ: ಜಾಗತಿಕ ಪರಿಣಾಮಗಳು – ಎನ್.ಕೆ. ವಸಂತರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *