ಜಾತಿ ಆಧಾರಿತ ಜನಗಣತಿ ನಡೆಸಲು ಆಗ್ರಹ: ತಮಿಳುನಾಡು ಸರ್ಕಾರಕ್ಕೆ ಅಂಬುಮಣಿ ರಾಮದಾಸ್ ಒತ್ತಾಯ

ಚೆನ್ನೈ: ಅನ್ಬುಮಣಿ ರಾಮದಾಸ್ ನೇತೃತ್ವದ ಪಾಟಾಳಿ ಮಕ್ಕಲ್ ಕಚ್ಚಿ (PMK) ತಮಿಳುನಾಡು ಸರ್ಕಾರವು ತಕ್ಷಣ ಜಾತಿ ಆಧಾರಿತ ಜನಗಣತಿ ನಡೆಸಬೇಕು ಎಂದು ಒತ್ತಾಯಿಸಿದೆ.

“ಸಾಮಾಜಿಕ ನ್ಯಾಯವನ್ನು ಕಾಪಾಡುವ ಉದ್ದೇಶದಿಂದ ‘ಸೋಶಿಯಲ್ ಜಸ್ಟಿಸ್ ಸರ್ವೇ’ ಹೆಸರಿನಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಬೇಕು ಎಂದು ಪಿಎಂಕೆ ಹಲವಾರು ಬಾರಿ ಮನವಿ ಮಾಡಿದೆ,” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಸಮೀಕ್ಷೆ ನಡೆಸಲು ತಮಿಳುನಾಡು ಸರ್ಕಾರಕ್ಕೆ ಯಾವುದೇ ಕಾನೂನು ಅಥವಾ ಆಡಳಿತಾತ್ಮಕ ಅಡೆತಡೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್‌ 11 ದಿನಗಳಲ್ಲಿ 4 ಬಾರಿ ಹೆಚ್ಚಳ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ – ಜನತೆ ತತ್ತರ

ಕರ್ನಾಟಕ ರಾಜ್ಯದಲ್ಲಿ 2025ರಲ್ಲಿ ನಡೆದ ಜಾತಿ ಸಮೀಕ್ಷೆಗೆ ಸುಮಾರು ₹635 ಕೋಟಿ ವೆಚ್ಚವಾಗಿದ್ದು, ಒಟ್ಟು 6.26 ಕೋಟಿ ಜನಸಂಖ್ಯೆಯಲ್ಲಿ 5.9 ಕೋಟಿ ಜನರ ಜಾತಿ, ಶಿಕ್ಷಣ, ಆರ್ಥಿಕ ಸ್ಥಿತಿ, ಉದ್ಯೋಗ ಸೇರಿದಂತೆ ವಿವಿಧ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.

“ಅದೇ ವಿಧಾನವನ್ನು ಅನುಸರಿಸಿ ತಮಿಳುನಾಡು ಕೂಡ ‘ಸಾಮಾಜಿಕ ನ್ಯಾಯ ಸಮೀಕ್ಷೆ’ ನಡೆಸಬಹುದು,” ಎಂದು ಮಾಜಿ ಕೇಂದ್ರ ಸಚಿವರಾದ ರಾಮದಾಸ್ ತಿಳಿಸಿದ್ದಾರೆ.

ಈ ರೀತಿಯ ಸಮೀಕ್ಷೆಗೆ ಸುಮಾರು ₹700 ಕೋಟಿ ವೆಚ್ಚವಾಗಬಹುದು, ಆದರೆ ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು ಗಮನಿಸಿದರೆ ಇದು ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಜಾತಿ ಜನಗಣತಿ ಓಬಿಸಿ ವರ್ಗಗಳ ವಿವರಗಳನ್ನು ಮಾತ್ರ ಸಂಗ್ರಹಿಸುವ ಸಾಧ್ಯತೆ ಇದೆ. ಇದು ಕೇವಲ ಜಾತಿ ಗುರುತಿಸುವ ಮಟ್ಟದಲ್ಲೇ ಸೀಮಿತವಾಗಿದ್ದು, ಸಮಾಜದ ಸಮಗ್ರ ಸ್ಥಿತಿಯನ್ನು ತೋರಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ನೋಡಿ: IPL 2026 | ಪ್ಲೇಆಫ್‌ ಪೈಪೋಟಿ: ನಾಲ್ಕು ತಂಡಗಳ ಪ್ಲಸ್‌, ಮೈನಸ್‌ ಮತ್ತು ಕಪ್‌ ಲೆಕ್ಕಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *