ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಲ್ಲ: ಸರ್ಕಾರದ ನಿರ್ಧಾರಕ್ಕೆ ನಟಿ ಪೂಜಾ ಗಾಂಧಿ ಮೆಚ್ಚುಗೆ

ಬೆಂಗಳೂರು: ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ವಿರೋಧ ಇದ್ದೇ ಇದೆ. ಕನ್ನಡ ಹೋರಾಟಗಾರರು ಹೋರಾಡುತ್ತಲೇ ಇದ್ದಾರೆ. ಇದೀಗ, “ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಲ್ಲ” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ಉತ್ತರ ಭಾರತ ಮೂಲದ ಮಳೆ ಹುಡುಗಿ ನಟಿ ಪೂಜಾ ಗಾಂಧಿ ಒಂದು ವಿಡಿಯೋ ಮಾಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ನಿರ್ಧಾರವನ್ನ ಕೊಂಡಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ .

ಪೂಜಾ ಗಾಂಧಿ ಹೇಳಿದ್ದೇನು?

ನಾನು ಪೂಜಾ ಗಾಂಧಿ ಮಾತನಾಡ್ತಾ ಇದ್ದೇನೆ. ಇವತ್ತು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಮೊದಲನೆಯದಾಗಿ, ಕರ್ನಾಟಕ ಸರ್ಕಾರಕ್ಕೆ ಹಾಗೂ ಮಧು ಬಂಗಾರಪ್ಪ ಅವರಿಗೆ ಧನ್ಯವಾದ ಹೇಳುತ್ತೇನೆ.

ಇದನ್ನೂ ಓದಿ: ವಿ.ಡಿ. ಸತೀಶನ್ ವಿರುದ್ದ 2001, 2006 ರಲ್ಲಿ ಆರ್‌ಎಸ್‌ಎಸ್ ಬೆಂಬಲ ಕೇಳಿದ ಆರೋಪ

ರಾಜ್ಯ ಸರ್ಕಾರದ ನಿರ್ಧಾರ ಕೇಳಿ ತುಂಬಾನೆ ಖುಷಿ ಆಗುತ್ತಿದೆ. ಹಿಂದಿಯನ್ನ ಒಂದು ಭಾಷೆಯಾಗಿ ಕಲಿಯೋದು ಮುಖ್ಯ. ಆದರೆ, ಇದು ಕನ್ನಡದ ಮಕ್ಕಳ ಮೇಲೆ ಹೇರಿಕೆ ಆಗಬಾರದು. ಹಿಂದಿ ಭಾಷೆ ಹೇರಿಕೆ ಆಗಬಾರದು ಅಂತ ಕನ್ನಡ ಹೋರಾಟಗಾರರು ಹೋರಾಟ ಮಾಡಿದ್ದಾರೆ.

ಕನ್ನಡ ಹೋರಾಟಗಾರರಿಗೆ ಜಯ

ರಾಜ್ಯ ಸರ್ಕಾರದ ನಿರ್ಧಾರದಿಂದ ಕನ್ನಡ ಪರ ಹೋರಾಟಗಾರರ ಹೋರಾಟಕ್ಕೆ ಜಯ ಸಿಕ್ಕಿದೆ. ಇವರಿಗೆ ನಾನು ಅಭಿನಂದನೆ ಹೇಳೋಕೆ ಇಷ್ಟಪಡ್ತೀನಿ ಅಂತಲೇ ಪೂಜಾ ಗಾಂಧಿ ಈ ಒಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇವರ ವಿಡಿಯೋ ನೋಡಿದವರು ಒಳ್ಳೆ ಮಾತುಗಳನ್ನೇ ಆಡಿದ್ದಾರೆ. ವೀರ ಕನ್ನಡತಿ ನಮ್ಮ ಕರುನಾಡು ಹೆಮ್ಮೆಯ ಮಳೆ ಹುಡುಗಿ ಪೂಜಾ ಗಾಂಧಿ ಅಂತಲೂ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಇದೇ ರೀತಿ ಇನ್ನೂ ಹಲವರು ಪೂಜಾ ಗಾಂಧಿ ಅವರ ಈ ವಿಡಿಯೋಗೆ ಒಳ್ಳೆ ಮಾತುಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಧು ಬಂಗಾರಪ್ಪ ಹೇಳಿದ್ದೇನು?

ಇನ್ಮುಂದೆ ಎಸ್.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಲ್ಲ. ಆದರೆ, ಹಿಂದಿ ಭಾಷೆಯ ಅಂಕ ಗ್ರೇಡ್ ಆಗಿಯೇ ಕನ್ವರ್ಟ್ ಆಗುತ್ತದೆ. ಇದು ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಎಫೆಕ್ಟ್ ಮಾಡೋದಿಲ್ಲ ಅಂತಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮಧು ಬಂಗಾರಪ್ಪ ಅವರ ಈ ಒಂದು ಮಹ್ವದ ಘೋಷಣೆಯ ಬಳಿಕ ನಟಿ ಪೂಜಾ ಗಾಂಧಿ ರಾಜ್ಯ ಸರ್ಕಾರ ಮತ್ತು ಮಧು ಬಂಗಾರಪ್ಪ ಅವರಿಗೆ ಅಭಿನಂದಿಸಿದ್ದಾರೆ. ಕನ್ನಡ ಹೋರಾಟಗಾರರಿಗೆ ಜಯ ಸಿಕ್ಕಿದೆ ಅಂತಲೂ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.

ಇದನ್ನೂ ನೋಡಿ: “ವೇದಿಕೆಯ ಬೆಳಕಿನಲ್ಲಿ ಬದುಕಿನ ಕಥೆಗಳು | ವಿಶ್ವ ರಂಗಭೂಮಿ ದಿನ ವಿಶೇಷ” Janashakthi Media

Donate Janashakthi Media

Leave a Reply

Your email address will not be published. Required fields are marked *