ಕರಾವಳಿಯ ಸಾಂಸ್ಕೃತಿಕ ರಾಜಕಾರಣದ ಸುತ್ತ ಒಂದು ಚರ್ಚೆ; ಸಂವಾದ

ಇದೇ ಆಗಸ್ಟ್ 1ರಂದು ಮಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ರಾಜಕಾರಣ ಕುರಿತು ಒಂದು ದಿನದ ವಿಚಾರ ಮಂಡನೆ ಚರ್ಚೆ ಸಂವಾದಗಳನ್ನು ಅಭಿಮತ ಮಂಗಳೂರು ಹಾಗೂ ಭಗತ್ ಸಿಂಗ್ ಮೆಮೋರಿಯಲ್ ಟ್ರಸ್ಟ್ (ರಿ) ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಡಾ. ನಿತ್ಯಾನಂದ ಶೆಟ್ಟಿಯವರ ಕೃತಿ ‘ಅಳವು ಅರಿಯದ ಬಾಶೆ’ ಈ ಕಾರ್ಯಕ್ರಮದ ಹಿನ್ನೆಲೆಯಾಗಿತ್ತು.

– ನಂದಕುಮಾರ್ ಕುಂಬ್ರಿಉಬ್ಬು

ಈ ಹಿಂದೆ ಸಂಗ ಪರಿವಾರದಲ್ಲಿ ಸಕ್ರಿಯರಾಗಿದ್ದ ಪ್ರಾದ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ತಮ್ಮ ಈ ಕೃತಿಯಲ್ಲಿ ಯಕ್ಷಗಾನ ಕಲೆ ತಳಪಾಯದ ಸಮುದಾಯಗಳ ಕಲೆಯಾಗಿ ಹುಟ್ಟಿ ಅರಳಿದ್ದು ನಂತರ ಅದನ್ನು ಮೇಲ್ಜಾತಿಯೆನಿಸಿಕೊಂಡವರು ಮೇಲ್ವರ್ಗದವರು ತಮ್ಮ ಕೈವಶಮಾಡಿಕೊಂಡಿದ್ದರ ಬಗ್ಗೆ ಚರ್ಚಿಸಿದ್ದಾರೆ. ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ.

ವೇದಿಕೆಗೆ ದಲಿತ ಹಿನ್ನೆಲೆಯ ಹೋರಾಟಗಾರ ಎಂ ದೇವದಾಸ್ ರ ಹೆಸರನ್ನು ಇಡಲಾಗಿತ್ತು. ಬೆಳಿಗ್ಗೆ ಹತ್ತು ಗಂಟೆಯಿಂದ ಆರಂಭವಾದ ಸಂಜೆ ಐದರವರೆಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುನ್ನೂರರಷ್ಟು ಜನರು ಭಾಗವಹಿಸಿದ್ದರು.

ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ನ್ಯಾಯಾಲಯದಿಂದ ಖುಲಾಸೆ

ಪ್ರಾಸ್ತವಿಕವಾಗಿ ಮಾತುಗಳನ್ನು ಇದರ ಸಂಘಟಕರಲ್ಲಿ ಒಬ್ಬರಾದ ಮುನೀರ್ ಕಾಟಿಪಳ್ಳ ಮಾಡಿದರು.

ಶ್ರಮಿಕರ ದೈವ- ಯಕ್ಷಗಾನ ಮತ್ತು ಅಳವರಿಯದ ಬಾಶೆ (ತುಳು ಮತ್ತು ಬ್ಯಾರಿ) ಎಂಬ ವಿಚಾರದ ಬಗ್ಗೆ ಜನಪದ ವಿದ್ವಾಂಸರಾದ ಗಣನಾಥ ಎಕ್ಕಾರು ಮಂಡಿಸಿದರು.

ನಾಲ್ಕು ದಶಕಗಳ ಕೋಮುವಾದ ಕಾನೂನು ಸುವ್ಯವಸ್ಥೆಯ ವೈಫಲ್ಯ ಮತ್ತು ಮುಂದಿನ ದಾರಿ ಈ ವಿಚಾರದ ಕುರಿತು ಪತ್ರಕರ್ತ ಹಾಗೂ ಬರಹಗಾರರಾದ ನವೀನ್ ಸೂರಿಂಜೆ ವಿಚಾರ ಮಂಡಿಸಿದರು.

ನುಡಿಯ ಜನಪದ ಹಿಂದುತ್ವ/ ಆರ್ ಎಸ್ ಎಸ್ ಸಾಂಸ್ಕೃತಿಕ ರಾಜಕಾರಣ ಮತ್ತು ಕರ್ನಾಟಕ ಸಾಹಿತಿಗಳು ಎಂಬ ವಿಚಾರವಾಗಿ ಕವಿಗಳಾದ ರಘುನಂದನ್ ವಿಚಾರ ಮಂಡಿಸಿದರು.

ಯಕ್ಷಗಾನದ ಬಹುತ್ವ: ಮುಸ್ಲಿಮ್ ಪಾತ್ರಗಳು ಮತ್ತು ಸಹಭಾಗಿತ್ವ ಎಂಬ ವಿಚಾರದ ಬಗ್ಗೆ ವಾಸುದೇವ ಬೆಳ್ಳೆ ಮಂಡಿಸಿದರು.

ಕೊನೆಯಲ್ಲಿ ಅಳವು ಅರಿಯದ ಬಾಶೆ ಕೃತಿಕಾರರಾದ ಡಾ. ನಿತ್ಯಾನಂದ ಬಿ ಶೆಟ್ಟಿಯವರ ಜೊತೆ ಸಂವಾದವನ್ನು ಡಾ ನಾಗೇಗೌಡ ಕೆ. ಎಸ್ ಮತ್ತು ಕಿರಣ್ ಎಂ ಗಾಜನೂರು ನಡೆಸಿಕೊಟ್ಟರು.

ಈ ಕಾರ್ಯಕ್ರಮ ಅದರಲ್ಲೂ ಕರಾವಳಿಯ ಮಟ್ಟಿಗೆ ಬಹಳ ಅಗತ್ಯವಾದ ಕಾರ್ಯಕ್ರಮವಾಗಿತ್ತು. ಇದು ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ನಡೆದ ಮೌಲ್ಯಯುತವಾದ ಹಾಗೂ ಅಪರೂಪದ ಕಾರ್ಯಕ್ರಮ ಇದಾಗಿತ್ತು.

ಕೋಮುವಾದಿ ಫ್ಯಾಸಿಸ್ಟ್ ಚಿಂತನೆ, ರಾಜಕಾರಣ ಮತ್ತು ಹಿಂಸೆಗಳಲ್ಲಿ ಕರಾವಳಿಯನ್ನು ಮುಳುಗಿಸಿಡುವ ಪ್ರಯತ್ನಗಳನ್ನು ಬ್ರಾಹ್ಮಣಶಾಹಿ ಸಂಗಪರಿವಾರದ ಶಕ್ತಿಗಳು ಎಡಬಿಡದೇ ಪ್ರಯತ್ನಿಸುತ್ತಾ ಬರುತ್ತಿರುವುದನ್ನು ಇಡೀ ನಾಡೇ ಗಮನಿಸಿಕೊಂಡು ಬಂದಿದೆ. ಅದಕ್ಕೆ ಬಲಯಾಗುತ್ತಿರುವವರು ಶೂದ್ರರೆಂದು ಗುರುತಿಸಲ್ಪಟ್ಟ ಸಮುದಾಯಗಳ ಜನರು ಹಾಗೂ ಮುಸ್ಲಿಮ್ ಹಾಗೂ ಕ್ರೈಸ್ತ ಸಮುದಾಯಗಳಿಗೆ ಸೇರಿದ ಜನರಾಗಿದ್ದಾರೆ.

ಹಲವಾರು ಸಾವುನೋವುಗಳು, ಕಷ್ಟ ನಷ್ಟಗಳಿಗೆ ಈ ಎಲ್ಲಾ ಸಮುದಾಯಗಳು ಒಳಗಾಗುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಬಹಳ ಪ್ರಾಮುಖ್ಯತೆಯಿದೆ. ಇಂತಹ ಚರ್ಚೆ ಸಂವಾದಗಳು ಹಿಂದೆ ಇದ್ದ ವಾಸ್ತವಗಳೇನು ಈಗ ನಡೆಯುತ್ತಿರುವುದರ ಹಿಂದಿನ ವಾಸ್ತವಗಳೇನು ಎನ್ನುವುದರ ಬಗ್ಗೆ ಜನರ ಮದ್ಯೆ ಒಳನೋಟಗಳು ಚಿಂತನೆಗಳು ಹರಡಲು ಮಂಥನಗಳು ನಡೆಯಲು ದಾರಿ ಮಾಡಿಕೊಡುತ್ತವೆ. ಇಂತಹ ಕಾರ್ಯಗಳನ್ನು ಪ್ರಜ್ಞಾವಂತ ಜನಕೂಟಗಳೇ ಮಾಡಬೇಕೇ ಹೊರತು ಪ್ರಭುತ್ವದಿಂದಾಗಲೀ ಪ್ರಭುತ್ವದ ಅಂಗಸಂಸ್ಥೆಗಳಿಂದಾಗಲೀ ನಿರೀಕ್ಷಿಸಲಾಗದು.

ಪ್ರೇಕ್ಷಕರು ಹಾಗೂ ವೇದಿಕೆಯವರು ಎಲ್ಲಾ ಗೋಷ್ಟಿಗಳಲ್ಲಿ ಸಕ್ರಿಯವಾಗಿ ಬಾಗವಹಿಸಿದರು. ಪ್ರಶ್ನೆಗಳು ಉತ್ತರಗಳು ನಡೆದವು. ಸಮಯಪಾಲನೆ ಶಿಸ್ತುಬದ್ದತೆ ಚೆನ್ನಾಗಿತ್ತು. ನಿಗದಿತ ಸಮಯದೊಳಗೆ ಕಾರ್ಯಕ್ರಮ ಮುಗಿಯಿತು.

ಇಂತಹ ಕಾರ್ಯಕ್ರಮವನ್ನು ಸಂಗಟಿಸಿದ ಹಾಗೂ ಸಕ್ರಿಯವಾಗಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು.

ಇಲ್ಲಿ ಪ್ರಧಾನವಾಗಿ ಗುರುತಿಸಿ ಹೇಳಲೇ ಬೇಕಾಗಿರುವ ವಿಚಾರವೆಂದರೆ ಸಾಂಸ್ಕೃತಿಕ ರಾಜಕಾರಣವನ್ನು ಒಂದು ಬಿಡಿಯಾದ ಇಲ್ಲವೇ ಪ್ರತ್ಯೇಕವಾದ ವಿಚಾರವೆಂಬಂತೆ ಮಂಡನೆ ಚರ್ಚೆಗಳು ನಡೆದಂತಾಯಿತು.

ಅದು ಇಡೀ ಸಮಾಜದ ಮೇಲಿನ ಹಿಡಿತ ಸಾಧಿಸುವವರ ಮತ್ತು ಸಮಾಜದ ಆರ್ತಿಕ ಸಾಮಾಜಿಕ ವಿಚಾರಗಳಿಗೆ ನೇರವಾಗಿ ಹಾಗೂ ಹಿಂಬಾಗಿಲ ಮೂಲಕ ಸಂಬಂಧಿಸುವ ಅವಿಬಾಜ್ಯವಾದ ವಿಚಾರ ಎನ್ನುವುದರ ಮೇಲೆ ನೆಲೆನಿಂತು ಮಂಡನೆ ಚರ್ಚೆಗಳು ನಡೆದಿದ್ದರೆ ಇನ್ನೂ ಉತ್ತಮವಾದ ಒಳನೋಟಗಳು, ಚರ್ಚೆಗಳು ಸಾಧ್ಯವಾಗುತ್ತಿತ್ತು.

ಇದನ್ನೂ ನೋಡಿ: ಕನಿಷ್ಠ ವೇತನ ಪುನರ್‌ಪರಿಶೀಲಿಸಿದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ! | ಕಾರ್ಮಿಕರ ಎಚ್ಚರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *