ಸಂಪುಟ ವಿಸ್ತರಣೆ: 19 ಹೊಸ ಸಚಿವರು; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಬೆಂಗಳೂರು: ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ನಡೆದಿದ್ದು, 19 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಸಚಿವರನ್ನು ಒಳಗೊಂಡಂತೆ ಸಂಪುಟದ ಒಟ್ಟು ಸಂಖ್ಯೆಯು ಈಗ 33ಕ್ಕೆ ಏರಿಕೆಯಾಗಿದೆ. ಸಂಪುಟ

ಪ್ರಮಾಣವಚನದ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಕುರಿತು ಚರ್ಚೆಗಳು ಚುರುಕುಗೊಂಡಿವೆ. ಅಧಿಕೃತ ಪ್ರಕಟಣೆ ಹೊರಬೀಳದಿದ್ದರೂ, ಉನ್ನತ ಮೂಲಗಳ ಪ್ರಕಾರ ಸಂಭಾವ್ಯ ಖಾತೆಗಳ ಪಟ್ಟಿ ಹೀಗಿದೆ:

ಇದನ್ನೂ ಓದಿ: ಹರಿಯಾಣ| ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ವಿರೋಧ: ರೈತ–ಕಾರ್ಮಿಕರ ಹೋರಾಟ ಘೋಷಣೆ

ಸಂಭಾವ್ಯ ಖಾತೆ ಹಂಚಿಕೆ:

1. ಪಿ.ಎಂ. ನರೇಂದ್ರಸ್ವಾಮಿ – ಸಮಾಜ ಕಲ್ಯಾಣ

2. ಬಸವರಾಜ ರಾಯರೆಡ್ಡಿ – ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ

3. ಎಸ್.ಎಸ್. ಮಲ್ಲಿಕಾರ್ಜುನ – ತೋಟಗಾರಿಕೆ ಮತ್ತು ಗಣಿ-ಭೂವಿಜ್ಞಾನ

4. ಎನ್. ಚಲುಬರಾಯಸ್ವಾಮಿ – ಕೃಷಿ

5. ಕೆ.ಎಂ. ಶಿವಲಿಂಗೇಗೌಡ – ವಸತಿ

6. ಲಕ್ಷ್ಮಣ ಸವದಿ – ಸಹಕಾರ ಮತ್ತು ಸಕ್ಕರೆ

7. ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

8. ಜಮೀರ್ ಅಹಮದ್ ಖಾನ್ – ವಕ್ಫ್, ಹಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ

9. ಕೆ.ಎನ್. ಬಸವಂತಪ್ಪ – ಪೌರಾಡಳಿತ

10. ವಿಜಯಾನಂದ ಕಾಶಪ್ಪನವರ್ – ಕೈಮಗ್ಗ, ಜವಳಿ ಮತ್ತು ಕೃಷಿ ಮಾರುಕಟ್ಟೆ

11. ಅಜಯ್ ಸಿಂಗ್ – ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳು

12. ರುದ್ರಪ್ಪ ಲಮಾಣಿ – ಅಬಕಾರಿ

13. ಹೆಚ್.ಸಿ. ಬಾಲಕೃಷ್ಣ – ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ

14. ರಿಜ್ವಾನ್ ಅರ್ಷದ್ – ಉನ್ನತ ಶಿಕ್ಷಣ

15. ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಮತ್ತು ರೇಷ್ಮೆ

16. ಬಿ. ನಾಗೇಂದ್ರ – ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ

17. ಸಂತೋಷ್ ಎಸ್. ಲಾಡ್ – ಕಾರ್ಮಿಕ ಇಲಾಖೆ

18. ಶಿವರಾಜ ತಂಗಡಗಿ – ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ

19. ಟಿ. ರಘುಮೂರ್ತಿ – ಪರಿಶಿಷ್ಟ ವರ್ಗಗಳ ಕಲ್ಯಾಣ

ಈ ಖಾತೆ ಹಂಚಿಕೆ ಕುರಿತು ಮಹತ್ವದ ಸಭೆಗಳು ನಡೆದಿದ್ದು, ಶೀಘ್ರದಲ್ಲೇ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಸಚಿವರ ಸಾಮರ್ಥ್ಯ, ಪ್ರಾದೇಶಿಕ ಸಮತೋಲನ ಮತ್ತು ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಅಂತಿಮಗೊಳಿಸಲಾಗುತ್ತಿದೆ.

ಇದನ್ನೂ ನೋಡಿ: ‘ಶ್ರಮಿಕರ ದೈವ – ಯಕ್ಷಗಾನ ಮತ್ತು ಅಳವು ಅರಿಯದ ಭಾಷೆ: ತುಳು ಮತ್ತು ಬ್ಯಾರಿ’ | ಡಾ. ಗಣನಾಥ ಎಕ್ಕಾರು

Donate Janashakthi Media

Leave a Reply

Your email address will not be published. Required fields are marked *