ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಯು.ಎಸ್ ಭೇಟಿಯ ಸಂದರ್ಭದಲ್ಲಿ ಅಗಸ್ಟ್ 29ರಂದು ನ್ಯೂಯಾರ್ಕಿನ ಪ್ರಖ್ಯಾತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ಅವರು ಭಾಗವಹಿಸಿದ ‘ಅಂತರ ಧರ್ಮೀಯ ಶೃಂಗಸಭೆ’ಯ ಸುತ್ತ ನೂರಾರು ಜನ ಆರೆಸ್ಸೆಸ್-ವಿರೋಧಿ ಪ್ರದರ್ಶನ ನಡೆಸಿದರು. ಈ ಪ್ರತಿಭಟನೆ ಮತ್ತು ಶೃಂಗಸಭೆಯ ಮೊದಲು ನಡೆದ ಪ್ರಚಾರದ ಒತ್ತಡದ ಪರಿಣಾಮವು ಸ್ಪಷ್ಟವಾಗಿತ್ತು. ಭಾರತದಲ್ಲಿನ ಆರೆಸ್ಸೆಸ್ ನ ಆಕ್ರಾಮಕ ಅಲ್ಪಸಂಖ್ಯಾತ-ವಿರೋಧಿ ಧೋರಣೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್ ಭೇಟಿಗಾಗಿ ತಮ್ಮ ಕಥನವನ್ನು ಬದಲಾಯಿಸಬೇಕಾಯಿತು. ಭಾಗವತ್ ಅವರು ಇಂಡಿಯಾದ “ವೈವಿಧ್ಯತೆಯ” ಬಗ್ಗೆ ಮಾತನಾಡಿದರು. ಭಾರತದಿಂದ. ಮುಸ್ಲಿಮರನ್ನು ಓಡಿಸ ಬಯಸುವ ಅಥವಾ ಮುಸ್ಲಿಮರಿಲ್ಲದ ಭಾರತವನ್ನು ಕಲ್ಪಿಸುವ “ಹಿಂದೂಗಳು ಹಿಂದೂ” ಆಗಿ ಉಳಿಯುವುದಿಲ್ಲ ಎಂದು ಹೇಳಬೇಕಾಯಿತು.
ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಯು.ಎಸ್ ಭೇಟಿಯ ಸಂದರ್ಭದಲ್ಲಿ ಅಗಸ್ಟ್ 29ರಂದು ನ್ಯೂಯಾರ್ಕಿನ ಪ್ರಖ್ಯಾತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ಅವರು ಭಾಗವಹಿಸಿದ ‘ಅಂತರ ಧರ್ಮೀಯ ಶೃಂಗಸಭೆ’ಯ ಸುತ್ತ ನೂರಾರು ಜನ ಆರೆಸ್ಸೆಸ್-ವಿರೋಧಿ ಪ್ರದರ್ಶನ ನಡೆಸಿದರು. ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’, ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್’ ಮತ್ತು ‘ಸಿಖ್ ಒಕ್ಕೂಟ’ದಂತಹ ಭಾರತೀಯ ಮೂಲದ ಅಮೆರಿಕನರ ಸಂಘಟನೆಗಳು ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ, ಹಲವು ಅಮೆರಿಕನ್ ನಾಗರಿಕ ಜಾತ್ಯತೀತ, ಫ್ಯಾಸಿಸ್ಟ್-ವಿರೋಧಿ, ಧಾರ್ಮಿಕ ಸ್ವಾತಂತ್ರ್ಯ-ಪರ ಸಂಘಟನೆಗಳು ಭಾಗವಹಿಸಿದ್ದವು. ಶೃಂಗಸಭೆ ನಡೆಯುವವರೆಗೂ, ಅದು ಮುಗಿದ ಮೇಲೂ ಪ್ರತಿಭಟನೆ ಮುಂದುವರಿಯಿತು.

‘ಹಿಂದುತ್ವ ಕ್ಕೆ, ಆರೆಸ್ಸೆಸ್ ಗೆ ನ್ಯೂಯಾರ್ಕಿನಲ್ಲಿ ಜಾಗವಿಲ್ಲ’, ‘ಆರೆಸ್ಸೆಸ್ ಹಿಂದುತ್ವ ಎಂದರೆ ಫ್ಯಾಸಿಸಂ’, ‘ಆರೆಸ್ಸೆಸ್ ದ್ವೇಷ ಪ್ರಚಾರಕ್ಕೆ ನ್ಯೂಯಾರ್ಕಿನಲ್ಲಿ ಪ್ರವೇಶವಿಲ್ಲ’, ‘‘ಮಹಾತ್ಮಾ ಗಾಂಧಿ ಕೊಂದ ಆರೆಸ್ಸೆಸ್ ಹೊರದಬ್ಬಿ’, ‘ಆರೆಸ್ಸೆಸ್ ಕ್ರಿಶ್ಚಿಯನ್ನರ ಮೇಲೆ 900 ದಾಳಿ ನಡೆಸಿದೆ’, ‘ಮುಸ್ಲಿಮರು, ಕ್ರಿಶ್ಚಿಯನ್ನರ ನರಮೇಧ ಮಾಡುವ ಆರೆಸ್ಸೆಸ್ ಗೆ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನ ಸ್ವಾಗತ ಬೇಡ’, ‘ಫ್ಯಾಸಿಸ್ಟ್ ಆರೆಸ್ಸೆಸ್ ವಿರುದ್ಧ ದಲಿತ, ಆದಿವಾಸಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಐಕ್ಯತೆ’, ‘ಯು.ಎಸ್ ಮತ್ತು ಭಾರತದ ಕಾರ್ಮಿಕ ವರ್ಗ ಫ್ಯಾಸಿಸಂ ವಿರುದ್ಧ ಹೋರಾಡಬೇಕು’ – ಇಂತಹ ಪ್ಲೇಕಾರ್ಡುಗಳು ಪ್ರತಿಭಟನಾ ಸಭೆಯಲ್ಲಿ ಕಂಡು ಬಂದವು, ಆ ಘೋಷಣೆಗಳು ಕೇಳಿ ಬಂದವು. ಆರೆಸ್ಸೆಸ್
ಇದನ್ನೂ ಓದಿ : ‘ನಾವು ಕಳ್ಳರಲ್ಲ, ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ; ಗೆದ್ದೇ ಗೆಲ್ಲುತ್ತೇವೆ’: ಪ್ರಕಾಶ್ ರಾಜ್
ಈ ಸಭೆಯನ್ನು ‘ಒಂದು ಜಗತ್ತು: ಒಂದು ಮನುಕುಲ ನಂಬಿಕೆಯ ನಾಯಕರ ಶೃಂಗಸಭೆ’ (One World: One Humanity Faith Leaders’ Summit) ಎಂದು ಕರೆಯಲಾಗಿತ್ತು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ದಮನ, ಹಿಂಸಾಚಾರಗಳಿಂದ ಆರೆಸ್ಸೆಸ್-ಬಿಜೆಪಿ ಗಳಿಗೆ ಅಮೆರಿಕದಲ್ಲಿರುವ ಅಂಟಿರುವ ಕಳಂಕ ತೊಳೆಯಲು, ಆ ದೇಶದಲ್ಲಿ ನಿಧಿ ಸಂಗ್ರಹ ಮತ್ತಿತರ ಚಟುವಟಿಕೆಗಳಿಗೆ ತೊಡಕಾಗದಂತೆ ಪ್ರಧಾನವಾಗಿ ಅಮೆರಿಕದಲ್ಲಿರುವ ಆರೆಸ್ಸೆಸ್ ಬೆಂಬಲಿಗರು ಶೃಂಗಸಭೆಯನ್ನು ಸಂಘಟಿಸಿದ್ದರು. ಇದು ಆರೆಸ್ಸೆಸ್ ನ ಶತಮಾನೋತ್ಸವದ ಅಂಗವಾಗಿ ಸಂಘಟನೆಯ ಪ್ರಭಾವವನ್ನು ವಿಸ್ತರಿಸುವ, ಕ್ರೋಢೀಕರಿಸುವ ಪ್ರಯತ್ನದ ಭಾಗ ಸಹ.

ಇದು ಈಗಾಗಲೇ ವಿವಾದಾಸ್ಪದವಾಗಿದ್ದು, ಹಲವು ಸಂಘಟನೆಗಳು ಭಾಗವತರ ಅಮೆರಿಕ ಭೇಟಿಯನ್ನೇ ವಿರೋಧಿಸಿದ್ದವು, ಭಾಗವತ್ ಯು.ಎಸ್ ಭೇಟಿ ಘೋಷಣೆಯಾಗುತ್ತಲೇ 65 ನಾಗರಿಕ ಮತ್ತು ಅಂತರ-ಧರ್ಮೀಯ ಸಂಘಟನೆಗಳು ಅಲ್ಪಸಂಖ್ಯಾತ-ದ್ವೇಷಿ ಆರೆಸ್ಸೆಸ್ ಗೆ ನ್ಯೂಯಾರ್ಕಿನ ಪ್ರಖ್ಯಾತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದವು. ಸಾವಿರಕ್ಕೂ ಹೆಚ್ಚು ನಾಗರಿಕರು ಭಾಗವತ್ ವೀಸಾ ರದ್ದು ಮಾಡಬೇಕೆಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯ ಗೆ ಪತ್ರ ಬರೆದಿದ್ದರು. ನ್ಯೂಯಾರ್ಕ್ ಮೇಯರ್ ಮತ್ತು ಇಬ್ಬರು ಕೌನ್ಸಿಲ್ ಸದಸ್ಯರು, ಅಲ್ಲಿನ ಪಾರ್ಲಿಮೆಂಟ್ ಸದಸ್ಯ ಸಹ ಭಾಗವತ್ ಭೇಟಿಗೆ ಅನುಮತಿ ನೀಡಬಾರದೆಂದು ಸರಕಾರಕ್ಕೆ ಒತ್ತಾಯಿಸಿದ್ದರು. ಆರೆಸ್ಸೆಸ್
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವ, ಹಿಂಸಾಚಾರ ದಮನ ಹರಿಯ ಬಿಡುವ ಆರೆಸ್ಸೆಸ್ ನಾಯಕರಿಗ ವೀಸಾ ಕೊಡಬಾರದೆಂದು ಮತ್ತು ಆರೆಸ್ಸೆಸ್ ಮೇಲೆ ದಿಗ್ಬಂಧನ ಹೇರಬೇಕೆಂದು, ಅಮೆರಿಕದ U.S. Commission on International Religious Freedom (USCIRF – ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ) ಹೇಳಿತ್ತು. ಆರೆಸ್ಸೆಸ್ ನಾಯಕರಿಗೆ ಸರಕಾರ ಯಾವುದೇ ಅಧಿಕೃತ ಮಾನ್ಯತೆ ಕೊಡಬಾರದು, ಅವರನ್ನು ಭೇಟಿ ಮಾಡಬಾರದು ಎಂದೂ ಹೇಳಿತು. Human Rights Watch, Genocide Watch, the U.S. Holocaust Memorial Museum, the UN, Amnesty International and the Congressional Research Service ಮುಂತಾದ ಹಲವು ಅಂತರರಾಷ್ಟ್ರೀಯ ಸಂಘಟನೆಗಳೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಆರೆಸ್ಸೆಸ್ ನ ದಾಳಿಗಳ ದಾಖಲೆಯನ್ನು ಪ್ರಕಟಿಸಿವೆ.
ಇತ್ತೀಚೆಗೆ ಪಾರ್ಲಿಮೆಂಟಿಗೆ ಆಯ್ಕೆಯಾದ ಬ್ರಾಡ್ ಲಾಂಡರ್ “ನಾವು ಈ ದ್ವೇಷಪೂರಿತ ಫ್ಯಾಸಿಸ್ಟ್ ಸಭೆಗೆ ಅನುಮತಿ ಕೊಟ್ಡಿದ್ದಕ್ಕೆ ಆಕ್ರೋಶ ಸೂಚಿಸಲು, ಆರೆಸ್ಸೆಸ್ ಗೆ ಇಲ್ಲಿ ಪ್ರವೇಶವಿಲ್ಲ ಎಂದು ಹೇಳಲು ಬಂದಿದ್ದೇವೆ” ಎಂದರು. ಆರೆಸ್ಸೆಸ್

“ದಶಕಗಳ ಕಾಲ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರಕ್ಕೆ ಕುಖ್ಯಾತವಾದ ಒಂದು ಸಂಘಟನೆಯ ನಾಯಕನಿಗೆ ವೇದಿಕೆ ಒದಗಿಸಿದ್ದನ್ನು ಖಂಡಿಸುತ್ತೇವೆ.” ಮತ್ತು “ದ್ವೇಷಪೂರಿತ ಸಿದ್ಧಾಂತಗಳನ್ನು ನಮ್ಮ ನಗರ ತಿರಸ್ಕರಿಸುತ್ತದೆ” ಎಂದು ಕೌನ್ಸಿಲ್ ಸದಸ್ಯ ಜೂಲಿ ವೊನ್ ಹೇಳಿದರು.
ಆರೆಸ್ಸೆಸ್ ನ್ನು ನೇರವಾಗಿ ಉದ್ದೇಶಿಸಿ ಮಾತನಾಡುತ್ತಾ “ಇತರರ ಅಸ್ಮಿತೆಯನ್ನು ಅಳಿಸಿ ತಮ್ಮ ಅಸ್ಮಿತೆಗೆ ಹೆನ್ಮೆ ಪಡುವ ಅಭದ್ರ ಜನರ ಗುಂಪಾಗಿ ನಿಮ್ಮನ್ನು ಜನ ಕಾಣುತ್ತಾರೆ, ಗೇಲಿ ಮಾಡುತ್ತಾರೆ” ಎಂದು IAMC ಮಂಡಳಿ ಸದಸ್ಯ ಸಫಾ ಅಹ್ಮದ್ ಹೇಳಿದರು. ಆರೆಸ್ಸೆಸ್
“ನೂರು ವರ್ಷಗಳ ಹಿಂದೂ ಶ್ರೇಷ್ಟತೆ ಮತ್ತು ಅಲ್ಪಸಂಖ್ಯಾತರನ್ನು ರಾಕ್ಷಸೀಕರಿಸುವ ಧೋರಣೆಯನ್ನು ‘ಸಾರ್ವತ್ರಿಕ ಏಕತೆ’ ಎಂದು ಪ್ಯಾಕೇಜ್ ಮಾಡಿ ಮಾರುವ ದುಷ್ಪ್ರ ಪ್ರಚಾರದ ಕಸರತ್ತು ನೋಡಿ ಸುಮ್ಮನಿರಲು ಸಾಧ್ಯವಿಲ್ಲದ್ದರಿಂದ ನಾವಿಲ್ಲಿ ಬಂದಿದ್ದೇವೆ.” ಎಂದು Hindus for Human Rights ನ ಅನುರಾಗ್ ಖಂಡೇಲವಾಲ ಹೇಳಿದರು.
ಈ ಪ್ರತಿಭಟನೆ ಮತ್ತು ಶೃಂಗಸಭೆಯ ಮೊದಲು ನಡೆದ ಪ್ರಚಾರದ ಒತ್ತಡದ ಪರಿಣಾಮವು ಸ್ಪಷ್ಟವಾಗಿತ್ತು. ಭಾರತದಲ್ಲಿನ ಆರೆಸ್ಸೆಸ್ ನ ಆಕ್ರಾಮಕ ಅಲ್ಪಸಂಖ್ಯಾತ-ವಿರೋಧಿ ಧೋರಣೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್ ಭೇಟಿಗಾಗಿ ತಮ್ಮ ಕಥನವನ್ನು ಬದಲಾಯಿಸಬೇಕಾಯಿತು. ಭಾಗವತ್ ಅವರು ಇಂಡಿಯಾದ “ವೈವಿಧ್ಯತೆಯ” ಬಗ್ಗೆ ಮಾತನಾಡಿದರು. ಭಾರತದಿಂದ. ಮುಸ್ಲಿಮರನ್ನು ಓಡಿಸ ಬಯಸುವ ಅಥವಾ ಮುಸ್ಲಿಮರಿಲ್ಲದ ಭಾರತವನ್ನು ಕಲ್ಪಿಸುವ “ಹಿಂದೂಗಳು ಹಿಂದೂ”ಆಗಿ ಉಳಿಯುವುದಿಲ್ಲ ಎಂದು ಹೇಳಬೇಕಾಯಿತು. ಆರೆಸ್ಸೆಸ್
****************
ಇದನ್ನೂ ಓದಿ :ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ
