ನೀಲೋತ್ಪಲ ಬಸು
ಜೂನ್ ಮತ್ತು ಜುಲೈ ತಿಂಗಳುಗಳು ಜನಸಮೂಹಗಳ ಹೋರಾಟಗಳ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. ಶಿಕ್ಷಣ ಸಚಿವಾಲಯ ಮತ್ತು ಸರ್ಕಾರದ ನಿರ್ಲಜ್ಜ ಹೊಲಬುಗೇಡಿತನದಿಂದಾಗಿ ವಿದ್ಯಾರ್ಥಿಗಳ ಕಾರ್ಯಾಚರಣೆ ಅಗಾಧ ಸ್ವರೂಪ ಪಡೆಯಿತು. ಜುಲೈ 20 ರಿಂದ ಪ್ರತಿಭಟನಾಕಾರರ ಮೇಲೆ ಹರಿಯಬಿಟ್ಟ ಅಭೂತಪೂರ್ವ ದಮನಕ್ಕೆ ಜನರಿಂದ ಬಂದ ಪ್ರಚಂಡ ಪ್ರತಿಕ್ರಿಯೆಯಿಂದಾಗಿ, ಸರ್ಕಾರವು ಸಂಪೂರ್ಣವಾಗಿ ಹಿಂದಕ್ಕೆ ಸರಿಯಬೇಕಾಗಿ ಬಂದಿದೆ. ನಿಜ, ಎನ್ಟಿಎ ಯನ್ನು ವಿಸರ್ಜಿಸಬೇಕು ಎಂಬ ವಿದ್ಯಾರ್ಥಿಗಳ ಪ್ರಮುಖ ಆಗ್ರಹವನ್ನು ಇನ್ನೂ ಅಂಗೀಕರಿಸಲಾಗಿಲ್ಲ. ಇದು ಎನ್ಇಪಿ 2020 ಗುರಿಯಾಗಿಸಿಕೊಂಡಿರುವ ವ್ಯಾಪಾರೀಕರಣ ಮತ್ತು ಕೇಂದ್ರೀಕರಣದ ಒಟ್ಟಾರೆ ಚೌಕಟ್ಟಿನಿಂದಲೇ ಉದ್ಭವಿಸಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಧರ್ಮೇಂದ್ರ ಪ್ರಧಾನ್ ಅವರ ಒತ್ತಾಯದ ರಾಜೀನಾಮೆಯು, ಎನ್ಇಪಿ ಯ ಕುರಿತೇ ಮತ್ತಷ್ಟು ಚರ್ಚಿಸಲು ಹಾಗೂ ಅದನ್ನು ಪುನರ್ ಪರಿಶೀಲಿಸಲು ಖಂಡಿತವಾಗಿಯೂ ಅವಕಾಶ ಮಾಡಿಕೊಟ್ಟಿದೆ.
ಅನು: ಸಿ.ಸಿದ್ದಯ್ಯ
ಕದನದ ಫಲಿತಾಂಶವು ಅತ್ಯಂತ ಬೆರಗುಗೊಳಿಸುವಂತಿದೆ. ಒಂದು ರೀತಿಯಲ್ಲಿ, ಅದರಲ್ಲಿ ಕಾಣಬಂದ ಚೈತನ್ಯ, ಚೇತರಿಕೆ ಮತ್ತು ಸ್ಥೈರ್ಯಗಳು ಅಭೂತಪೂರ್ವವಾಗಿದ್ದವು. ಬಿಜೆಪಿ-ಆರ್ಎಸ್ಎಸ್ ನೇತೃತ್ವದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಅಹಂಕಾರ ಮತ್ತು ಅವಾಹಕತೆಯು ಉತ್ತರದಾಯಿತ್ವ ಎಂಬುದು ಅಸಹನೀಯವಾಗಿರುವ ಒಂದು ಸಾಮ್ರಾಜ್ಯದ ಆಡಳಿತ ಶೈಲಿಯನ್ನು ಪರಿಪೂರ್ಣಗೊಳಿಸಿರುವುದನ್ನು ಕಂಡಿದ್ದೇವೆ. ವಾಸ್ತವವಾಗಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಈ ಮೂಲಭೂತ ತತ್ವವನ್ನು ಟೊಳ್ಳಾಗಿಸಿದ್ದೇ ಈ ಸಂಘರ್ಷಕ್ಕೆ ಕಾರಣವಾಯಿತು. ಸರ್ಕಾರದ ಧೋರಣೆಯು ಎಷ್ಟು ಹಾಸ್ಯಾಸ್ಪದ ಮಟ್ಟಕ್ಕೆ ತಲುಪಿತ್ತೆಂದರೆ, ಪ್ರಧಾನಿಯವರು ಕಳೆದ ಹನ್ನೆರಡು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿಲ್ಲ. ಇತ್ತೀಚೆಗೆ, ಇದು ವಿದೇಶಿ ಪತ್ರಕರ್ತರಿಂದಲೂ ತೀಕ್ಷ್ಣವಾದ ಟೀಕೆಗಳನ್ನು ಕೆರಳಿಸಲು ಪ್ರಾರಂಭಿಸಿದೆ. ನಿರ್ದಯ ಅಜೇಯತೆಯ ಬಿಂಬವನ್ನು ಕಟ್ಟಿಕೊಡಲು, ಸರ್ಕಾರ, ಪ್ರಧಾನಮಂತ್ರಿ ಮತ್ತು ಅವರ ಆಪ್ತ ಸಹವರ್ತಿಗಳು ಹಾಗೂ ರಣತಂತ್ರಜ್ಞರ ತಂಡವು ಈ ಬಡಿವಾರದ ನಿಲುವಿಗೇ ಗಟ್ಟಿಯಾಗಿ ಅಂಟಿಕೊಂಡರು. ಬಹುಶಃ ಇದು 2014 ರ ‘ದೇಶಕ್ಕೆ ಪ್ರಬಲ ಸರ್ಕಾರ ಮತ್ತು ಸಮರ್ಥ ನಾಯಕನ ಅಗತ್ಯವಿದೆ’ ಎಂಬ ಘೋಷಣೆಯನ್ನು ಸಾಕಾರಗೊಳಿಸಲು ಇರಬಹುದು. ಆದರೆ ಅದಿಷ್ಟೂ ವ್ಯರ್ಥವಾಗಿದೆ.
ಜೂನ್ ಮತ್ತು ಜುಲೈ ತಿಂಗಳುಗಳು ಜನಸಮೂಹಗಳ ಹೋರಾಟಗಳ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. 150 ಕ್ಕೂ ಹೆಚ್ಚು ಸಂದರ್ಭಗಳಲ್ಲಿ, ಕೇಂದ್ರೀಕೃತ ಪರೀಕ್ಷೆಗಳು ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾಗಿವೆ. ಆದ್ದರಿಂದ, ಸರ್ಕಾರವು ಮಾಹಿತಿ ಸೋರಿಕೆಯ ಮುನ್ಸೂಚನೆಗಳಿದ್ದರೂ ಅದನ್ನು ನಿರಾಕರಿಸಲು ಕೈಲಾದ ಪ್ರಯತ್ನಗಳನ್ನೆಲ್ಲ ಮಾಡಿತು. ಆದರೆ ಹದಿಹರೆಯದವರು ಜಾಗರೂಕರಾಗಿದ್ದರು. ಅವರ ನೈತಿಕ ಹ್ಯಾಕಿಂಗ್ ಎನ್ಟಿಎ ವ್ಯವಸ್ಥೆಯ ಅವಸ್ಥೆಯನ್ನು ಬಗೆದು ತೋರಿಸಿತು. ಮತ್ತು ಕಪ್ಪುಪಟ್ಟಿಗೆ ಸೇರಿಸಲಾದ ವಿಕ್ರಯದಾರರಿಗೆ ಅನುಕೂಲವಾಗುವಂತೆ ಟೆಂಡರ್ನಲ್ಲಿ ವಂಚನೆ ಮತ್ತು ಕೈಚಳಕ ನಡೆಸಿದ ಸ್ಪಷ್ಟ ಪುರಾವೆಗಳನ್ನು ಒದಗಿಸಿತು. ಪ್ರಧಾನ್ ಮತ್ತು ಅವರ ಎನ್ಟಿಎ ಬಟ್ಟಬಯಲಾಯಿತು. ಇದು ಹೋರಾಟಕ್ಕೆ ಮತ್ತು ಜಂತರ್ ಮಂತರ್ಗೆ ಸಂಕೇತ ನೀಡಿತು.
ಸೋನಮ್ ವಾಂಗ್ಚುಕ್ ಅನಿರ್ದಿಷ್ಟಾವಧಿ ಉಪವಾಸವನ್ನು ಆರಂಭಿಸಿದ್ದು ಸಂಯುಕ್ತ ವಿದ್ಯಾರ್ಥಿ ಚಳವಳಿಗೆ ಭಾರೀ ಉತ್ತೇಜನೆ ನೀಡಿತು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಸಂಘಟಿತ ವಿದ್ಯಾರ್ಥಿ ಚಳವಳಿಯ, ವಿಶೇಷವಾಗಿ ಎಡಪಂಥೀಯ ವಿಭಾಗದ ಸತತ ಶ್ರಮ ಹಾಗೂ ಅದುಮಿಟ್ಟಿದ್ದ ಆಕ್ರೋಶ ಮತ್ತು ಹತಾಶೆಗಳ ಸ್ವಯಂಸ್ಫೂರ್ತ ಪ್ರವಾಹ— ಈ ಎರಡರ ಸಂಗಮವು ಸಮಸ್ತ ಯುವ ಜನಾಂಗವನ್ನೇ ಆವರಿಸಿದ ಒಂದು ದೊಡ್ಡ ಮಹಾಪೂರವನ್ನು ಎಬ್ಬಿಸಿತು. ಪೋಷಕರು ಮತ್ತು ಇತರ ಪ್ರಜಾಪ್ರಭುತ್ವ ವಿಭಾಗಗಳು ಸಹ ತಮ್ಮ ಬೆಂಬಲವನ್ನು ದನಿಯೆತ್ತಿ ವ್ಯಕ್ತಪಡಿಸಿದವು. ಜುಲೈ 18 ರಂದು ವಾಂಗ್ಚುಕ್ ಅವರನ್ನು ಬೌನ್ಸರ್ಗಳ ಹೊಲಸು ಮಾದರಿಯಲ್ಲಿ ಅಪಹರಿಸಿ ಒಯ್ದದ್ದು, ಅವರನ್ನು ಅವರ ಕುಟುಂಬದ ಆಕ್ಷೇಪಣೆಯ ಹೊರತಾಗಿಯೂ ಒಂದು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ಪ್ರತಿಭಟನೆಯು ಇನ್ನಷ್ಟು ಗಟ್ಟಿಯಾಗಿ ಮೊಳಗುವಂತೆ ಮಾಡಿತು. ಆಸ್ಪತ್ರೆಯ ಹಾಸಿಗೆಯನ್ನು ಒಂದು ರೀತಿಯ ಜೈಲಾಗಿಯೇ ಮಾರ್ಪಡಿಸಲು ಸರಕಾರ ಮತ್ತು ಭದ್ರತಾ ಪಡೆಗಳು ಅವರ ಆರೋಗ್ಯದ ಬಗ್ಗೆ ಕಾಳಜಿಯ ನೆಪವನ್ನು ಬಳಸಿಕೊಳ್ಳಲು ಬಯಸಿದ್ದವು ಎಂಬುದು ಸ್ಪಷ್ಟವಾಗಿತ್ತು.

ಕೃಪೆ: ಪಿ.ಮಹಮ್ಮದ್, ಫೇಸ್ ಬುಕ್
ಆದರೆ ಸರ್ಕಾರದ ತಂತ್ರವು ತಿರುಗುಬಾಣವಾಯಿತು ಎಂಬುದು ಸ್ಪಷ್ಟ. ಇದು ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಹೆದರಿಸುವ ಬದಲು, ಜಂತರ್ ಮಂತರ್ನಲ್ಲಿ ನೆರೆಯುತ್ತಿದ್ದ ಜನಸಮೂಹವು ಮತ್ತಷ್ಟು ಹೆಚ್ಚಾಯಿತು ಮತ್ತು ದೇಶಾದ್ಯಂತ ಪ್ರತಿಭಟನೆಯ ಬಲವಾದ ಅಲೆಯು ಹರಡಲು ಇದು ಒಂದು ನಿಜವಾದ ಪ್ರೇರಕಶಕ್ತಿಯಾಗಿ ಕೆಲಸ ಮಾಡಿತು. ಅಂತಿಮವಾಗಿ ಜುಲೈ 20 ರಂದು ʼಸಂಸತ್ ಚಲೋʼದಲ್ಲಿ ಪ್ರತಿಭಟನಾಕಾರರು ಅಭೂತಪೂರ್ವ ಪ್ರಮಾಣದಲ್ಲಿ ನೆರೆದರು.
ಶಿಕ್ಷಣ ಸಚಿವಾಲಯ ಮತ್ತು ಸರ್ಕಾರದ ನಿರ್ಲಜ್ಜ ಹೊಲಬುಗೇಡಿತನದಿಂದಾಗಿ ವಿದ್ಯಾರ್ಥಿಗಳ ಈ ಕಾರ್ಯಾಚರಣೆ ಅಗಾಧ ಸ್ವರೂಪ ಪಡೆಯಿತು. ಮುಖ್ಯವಾಹಿನಿಯ ಮಾಧ್ಯಮಗಳ ಕೆಲವು ವಿಭಾಗಗಳಲ್ಲಿನ ವರದಿಗಳಲ್ಲಿಯೂ ಸಹ ಇದು ಈಗ ಬಹಿರಂಗಕ್ಕೆ ಬರುತ್ತಿದೆ. ಉದಾಹರಣೆಗೆ, ಎನ್ಟಿಎ 270 ಕ್ಕೂ ಹೆಚ್ಚು ಪರೀಕ್ಷೆಗಳನ್ನು ಕೇವಲ 24 ಖಾಯಂ ಸಿಬ್ಬಂದಿಯೊಂದಿಗೆ 197 ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯನ್ನು ಅವಲಂಬಿಸಿ ನಡೆಸಿದೆ ಎಂದು ಈಗ ಗೊತ್ತಾಗಿದೆ., ಕಾರ್ಯನಿರ್ವಹಿಸುವ ಸಿಸಿಟಿವಿ ಕಣ್ಗಾವಲಿನಂತಹ ಹೆಚ್ಚಿನ ಮೂಲಭೂತ ಭದ್ರತಾ ಕ್ರಮಗಳು ಬಹುಪಾಲು ಇಲ್ಲ ಎಂಬುದೂ ಕೂಡ ಸ್ಪಷ್ಟವಾಗಿದೆ. ಇದು 2024 ರ NEET-UG ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎನ್ಟಿಎ ಯನ್ನು ಸುಧಾರಿಸಲು ರಾಧಾಕೃಷ್ಣನ್ ಸಮಿತಿ ಸೂಚಿಸಿದ ಪ್ರಮುಖ ಸುಧಾರಣೆಗಳನ್ನು ಅನುಷ್ಠಾನಗೊಳಿಸಿಲ್ಲ ಎಂಬುದನ್ನು ಎತ್ತಿ ತೋರಿದೆ.
ಇದು ಶಿಕ್ಷಣ ಇಲಾಖೆಯ ವಿಷಯ ಮಾತ್ರವೇ ಅಲ್ಲ. ಉದ್ಯೋಗಾವಕಾಶಗಳ ಶೋಚನೀಯ ಪರಿಸ್ಥಿತಿ ಮತ್ತು ಯುವಜನರಿಗೆ ಎಲ್ಲಾ ಅವಕಾಶಗಳು ಸಂಪೂರ್ಣವಾಗಿ ಮುಚ್ಚಿರುವುದು ಇಂತಹದೊಂದು ಉತ್ಕ್ರಾಂತಿ ಸಂಭವಿಸಲು ಕಾಯುತ್ತಿದ್ದ ಹಂತವನ್ನು ತಲುಪಿದೆ. ರೈತರು, ಕಾರ್ಮಿಕರು ಮತ್ತು ಮಹಿಳೆಯರಂತಹ ಇತರ ಪ್ರಮುಖ ವಿಭಾಗಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಪರಿಣಾಮವೂ ಈಗ ಏರಿಕೆಯಾಗಿದೆ. ಈ ಎಲ್ಲಾ ವಿಭಾಗಗಳು ಸಹ ಪ್ರಮುಖ ಬೇಡಿಕೆಗಳ ಮೇಲೆ ಚಳುವಳಿಯ ಹಾದಿಯಲ್ಲಿವೆ.
ಎನ್ಟಿಎ ಯನ್ನು ವಿಸರ್ಜಿಸಬೇಕು ಎಂಬ ವಿದ್ಯಾರ್ಥಿಗಳ ಪ್ರಮುಖ ಆಗ್ರಹವನ್ನು ಇನ್ನೂ ಅಂಗೀಕರಿಸಲಾಗಿಲ್ಲ. ಭಾರತದಂತಹ ವಿಶಾಲವಾದ ಮತ್ತು ವೈವಿಧ್ಯಮಯ ದೇಶದಲ್ಲಿ, ಇಂತಹ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯ ಕಲ್ಪನೆಯೇ ಸ್ಪಷ್ಟವಾಗಿ ಸಮರ್ಥನೀಯವಲ್ಲ. ಕೆಲವು ರಾಜ್ಯ ಸರ್ಕಾರಗಳ ವಿರೋಧದ ಹೊರತಾಗಿಯೂ ಇದು ಮುಂದುವರಿದಿದ್ದು, ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯನ್ನು ಇದು ಎತ್ತಿ ತೋರಿಸುತ್ತದೆ.
ಇದು ಎನ್ಇಪಿ 2020 (ರಾಷ್ಟ್ರೀಯ ಶಿಕ್ಷಣ ನೀತಿ 2020) ಗುರಿಯಾಗಿಸಿಕೊಂಡಿರುವ ವ್ಯಾಪಾರೀಕರಣ ಮತ್ತು ಕೇಂದ್ರೀಕರಣದ ಒಟ್ಟಾರೆ ಚೌಕಟ್ಟಿನಿಂದಲೇ ಉದ್ಭವಿಸಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಧರ್ಮೇಂದ್ರ ಪ್ರಧಾನ್ ಅವರ ಒತ್ತಾಯದ ರಾಜೀನಾಮೆಯು, ಎನ್ಇಪಿ ಯ ಕುರಿತೇ ಮತ್ತಷ್ಟು ಚರ್ಚಿಸಲು ಹಾಗೂ ಅದನ್ನು ಪುನರ್ ಪರಿಶೀಲಿಸಲು ಖಂಡಿತವಾಗಿಯೂ ಅವಕಾಶ ಮಾಡಿಕೊಟ್ಟಿದೆ.
ಆದರೆ ಇದು ಶಿಕ್ಷಣ ಇಲಾಖೆಯ ವಿಷಯ ಮಾತ್ರವೇ ಅಲ್ಲ. ಉದ್ಯೋಗಾವಕಾಶಗಳ ಶೋಚನೀಯ ಪರಿಸ್ಥಿತಿ ಮತ್ತು ಯುವಜನರಿಗೆ ಎಲ್ಲಾ ಅವಕಾಶಗಳು ಸಂಪೂರ್ಣವಾಗಿ ಮುಚ್ಚಿರುವುದು ಇಂತಹದೊಂದು ಉತ್ಕ್ರಾಂತಿ ಸಂಭವಿಸಲು ಕಾಯುತ್ತಿದ್ದ ಹಂತವನ್ನು ತಲುಪಿದೆ. ರೈತರು, ಕಾರ್ಮಿಕರು ಮತ್ತು ಮಹಿಳೆಯರಂತಹ ಇತರ ಪ್ರಮುಖ ವಿಭಾಗಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಪರಿಣಾಮವೂ ಈಗ ಏರಿಕೆಯಾಗಿದೆ. ಈ ಎಲ್ಲಾ ವಿಭಾಗಗಳು ಸಹ ಪ್ರಮುಖ ಬೇಡಿಕೆಗಳ ಮೇಲೆ ಚಳುವಳಿಯ ಹಾದಿಯಲ್ಲಿವೆ.
ಜುಲೈ 20 ರಿಂದ ಪ್ರತಿಭಟನಾಕಾರರ ಮೇಲೆ ಹರಿಯಬಿಟ್ಟ ಅಭೂತಪೂರ್ವ ದಮನಕ್ಕೆ ಜನರಿಂದ ಬಂದ ಪ್ರಚಂಡ ಪ್ರತಿಕ್ರಿಯೆಯಿಂದಾಗಿ, ಸರ್ಕಾರವು ಸಂಪೂರ್ಣವಾಗಿ ಹಿಂದಕ್ಕೆ ಸರಿಯಬೇಕಾಗಿ ಬಂದಿದೆ ಮತ್ತು ಪ್ರಧಾನ್ ಅವರ ರಾಜೀನಾಮೆಯ ಬೇಡಿಕೆಯನ್ನು ಒಪ್ಪಿಕೊಳ್ಳುವ ಬಲವಂತಕ್ಕೊಳಗಾಗಿದೆ. ಮೊಳೆ ಹೊಡೆದ ಲಾಠಿಗಳು, ಪೆಲೆಟ್ ಗನ್ಗಳ ಬಳಕೆ ಮತ್ತು ಯಾವುದೇ ಗುರುತು/ಹೆಸರಿಲ್ಲದ ಭದ್ರತಾ ಪಡೆಗಳ ನಿಯೋಜನೆಯು ಈ ಭಯಾನಕ ಸನ್ನಿವೇಶವನ್ನು ಇನ್ನಷ್ಟು ಗಂಭೀರಗೊಳಿಸಿತು.
ಎಎನ್ಐ ಮತ್ತು ಇತರ ಪ್ರಮುಖ ಚಾನೆಲ್ಗಳಂತಹ ಮುಖ್ಯವಾಹಿನಿ ಮಾಧ್ಯಮಗಳು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ರಾಕ್ಷಸೀಕರಿಸಲು ಹೇಗೆ ಯತ್ನಿಸಿದವು ಎಂಬುದನ್ನು ಸ್ವತಂತ್ರ ಮಾಧ್ಯಮಗಳು ಮತ್ತು ಫ್ಯಾಕ್ಟ್-ಚೆಕ್ ತಾಣಗಳ ಚುರುಕಾದ ವಿಶ್ಲೇಷಣೆಗಳು ಬಯಲಿಗೆಳೆದಿವೆ.

‘ನಿರ್ಭಯತೆ’ ವಿದ್ಯಾರ್ಥಿಗಳ ಈ ಉತ್ಸರ್ಗದ ಕೇಂದ್ರ ಬಿಂದು ಎಂಬುದು ಮಹತ್ವದ ಸಂಗತಿಯಾಗಿ ಅತ್ಯಂತ ಸ್ಪಷ್ಟವಾಗಿ ಹೊರಹೊಮ್ಮುತ್ತದೆ. ಸರ್ಕಾರವು ಪಟ್ಟುಬಿಡದ ಹಾಗೂ ಕಟ್ಟುನಿಟ್ಟಾದ ಧೋರಣೆ ತಳೆಯಲು ನಡೆಸಿದ ಕ್ರೂರ ಪ್ರಯತ್ನ ಮತ್ತು ‘ಮೋದಿ ಆಡಳಿತದಲ್ಲಿ ಯಾವುದೇ ರಾಜೀನಾಮೆಗಳು ನಡೆಯುವುದಿಲ್ಲ’ ಎಂಬ ಗತ್ತಿನ ಮಾತುಗಳು ಅಂತಿಮವಾಗಿ ಮಂಡಿಯೂರಬೇಕಾಯಿತು. ವಾಸ್ತವವಾಗಿ, ಪ್ರಧಾನಮಂತ್ರಿಯವರ ಮದ್ಯರಾತ್ರಿ ಮನವಿ ಮತ್ತು ಯುವಜನರ ಕುರಿತು ಅವರಿಗಿರುವ ಕಪಟ ಕಳಕಳಿಯು ಬಹುತೇಕ ಹಾಸ್ಯಾಸ್ಪದವಾಗಿ ಕಂಡುಬಂದಿತು.
ಈ ಹೋರಾಟದಲ್ಲಿ ಪೀಳಿಗೆಯ ಆಯಾಮದ ಪೂರ್ಣ ತೀವ್ರತೆಯನ್ನು ಅರ್ಥೈಸಿಕೊಳ್ಳುವ ಅಗತ್ಯವೂ ಇದೆ. ಸರ್ಕಾರದ ಕಠಿಣ ಪ್ರತಿಕ್ರಿಯೆಗಳನ್ನು ಹಾಸ್ಯಾಸ್ಪದವೆಂದು ತೋರಿಸಲು ಯುವಜನರು ವ್ಯಂಗ್ಯ, ವಿಡಂಬನೆ, ಕೀಟಲೆ, ಮೀಮ್ಸ್, ಕಾರ್ಟೂನ್ಗಳು ಹಾಗೂ ಅಂತಹ ಇತರ ಶೈಲಿಗಳನ್ನು ಬಳಸಿದರು. ಇದು ವಾಟ್ಸಾಪ್ ಮೂಲಕ ಬರುವ ಸುಳ್ಳು ಸಂದೇಶಗಳಿಗೆ ಭಕ್ತಿಯಿಂದ ಕೈಮುಗಿವ ಪೀಳಿಗೆಯಾಗಿರಲಿಲ್ಲ; ಬದಲಿಗೆ, ಸರ್ಕಾರದ ವಾದಗಳು ಮತ್ತು ಪ್ರತಿಪಾದನೆಗಳಿಗೆ ತಿರುಗೇಟು ನೀಡಲು, ಪ್ರತಿಕ್ರಿಯಿಸಲು ಮತ್ತು ಅವುಗಳನ್ನು ಗೇಲಿ ಮಾಡಲು ಇನ್ಸ್ಟಾಗ್ರಾಮ್ ಅನ್ನು ವ್ಯಾಪಕವಾಗಿ ಬಳಸಿದ ಒಂದು ಭಿನ್ನ ಪೀಳಿಗೆ. ಅಶೋಕ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನದ ಪ್ರಕಾರ, 15 ರಿಂದ 29 ವರ್ಷದೊಳಗಿನ ಯುವಜನತೆ 2029 ರ ವೇಳೆಗೆ ಜನಸಂಖ್ಯೆಯ ಶೇಕಡಾ 39 ರಷ್ಟನ್ನು ತಲುಪಲಿದ್ದಾರೆ. ಹೀಗಿರುವಾಗ ಜುಲೈನಲ್ಲಿ ನಡೆದ ಘಟನೆಯು ಸರ್ಕಾರಕ್ಕೆ ಒಂದು ಕಟ್ಟುನಿಟ್ಟಾದ ಮುನ್ನೆಚ್ಚರಿಕೆಯಾಗಿದೆ.
ಇದು ವಾಟ್ಸಾಪ್ ಮೂಲಕ ಬರುವ ಸುಳ್ಳು ಸಂದೇಶಗಳಿಗೆ ಭಕ್ತಿಯಿಂದ ಕೈಮುಗಿವ ಪೀಳಿಗೆಯಾಗಿರಲಿಲ್ಲ; ಬದಲಿಗೆ, ಸರ್ಕಾರದ ವಾದಗಳು ಮತ್ತು ಪ್ರತಿಪಾದನೆಗಳಿಗೆ ತಿರುಗೇಟು ನೀಡಲು, ಪ್ರತಿಕ್ರಿಯಿಸಲು ಮತ್ತು ಅವುಗಳನ್ನು ಗೇಲಿ ಮಾಡಲು ಇನ್ಸ್ಟಾಗ್ರಾಮ್ ಅನ್ನು ವ್ಯಾಪಕವಾಗಿ ಬಳಸಿದ ಒಂದು ಭಿನ್ನ ಪೀಳಿಗೆ. ಅಶೋಕ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನದ ಪ್ರಕಾರ, 15 ರಿಂದ 29 ವರ್ಷದೊಳಗಿನ ಯುವಜನತೆ 2029 ರ ವೇಳೆಗೆ ಜನಸಂಖ್ಯೆಯ ಶೇಕಡಾ 39 ರಷ್ಟನ್ನು ತಲುಪಲಿದ್ದಾರೆ. ಹೀಗಿರುವಾಗ ಜುಲೈನಲ್ಲಿ ನಡೆದ ಘಟನೆಯು ಸರ್ಕಾರಕ್ಕೆ ಒಂದು ಕಟ್ಟುನಿಟ್ಟಾದ ಮುನ್ನೆಚ್ಚರಿಕೆಯಾಗಿದೆ.
ಮಾತುಕತೆ ಹಾಗೂ ಬೇಡಿಕೆಗಳ ಅಂಗೀಕಾರದ ನಂತರ, ಕೇಂದ್ರ ಸರ್ಕಾರ ಮಾತ್ರವಲ್ಲದೆ, ಬಿಜೆಪಿ ನೇತೃತ್ವದ ಕೆಲವು ಪ್ರಮುಖ ರಾಜ್ಯ ಸರ್ಕಾರಗಳು ಸಹ ತಮ್ಮ ಕ್ರಮಗಳಿಂದ ಹಿಂದೆ ಸರಿಯಬೇಕಾಯಿತು. ಶಾಂತಿಯುತ ಪ್ರತಿಭಟನೆಯ ಹಕ್ಕು ಒಂದು ಸಾಂವಿಧಾನಿಕ ಹಕ್ಕು ಹಾಗೂ ಅದನ್ನು ಹತ್ತಿಕ್ಕಲು ಆಡಳಿತವು ನಡೆಸುವ ನಿರಂಕುಶ ಹಿಂಸಾಚಾರಕ್ಕೆ ಕಾನೂನು ಮತ್ತು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ನ ಪುನರುಚ್ಚರಿಸಿರುವುದು, ಸರಕಾರ ಬಿಟ್ಟುಕೊಡಬೇಕಾಗಿ ಬಂದುದಕ್ಕಿಂತ ಕಡಿಮೆಯಿದ್ದರೂ, ನ್ಯಾಯಸಮ್ಮತ ವಿರೋಧಕ್ಕೆ ಮತ್ತಷ್ಟು ಬಲ ನೀಡಿದೆ.
ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರದ ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಮಾದರಿಯ ಪ್ರತಿಕ್ರಿಯೆಗಳನ್ನು ಬಯಲಿಗೆಳೆಯುವಲ್ಲಿ ಸಂಸತ್ತಿನಲ್ಲಿರುವ ವಿರೋಧ ಪಕ್ಷಗಳೂ ಕೂಡ ಪ್ರಮುಖ ಪಾತ್ರ ವಹಿಸಿವೆ. ಇದು ಈ ಹೋರಾಟದ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಿತು. ಇದು ಸಹಜವೇ ಆಗಿತ್ತು. ವಾಸ್ತವವಾಗಿ, ‘ವಿರೋಧ ಪಕ್ಷ ಮುಕ್ತ ಭಾರತ’ ಎಂಬ ಘೋಷಣೆ ಮತ್ತು ಚುನಾಯಿತ ವಿರೋಧ ಪಕ್ಷದ ಶಾಸಕರನ್ನು ದನ-ಕರುಗಳಂತೆ ಬಹಿರಂಗವಾಗಿ ಖರೀದಿ ಮಾಡುವುದು, ಜನರು ರಸ್ತೆಗಿಳಿದು ಮಾಡುವ ಹೋರಾಟಕ್ಕೆ ಮತ್ತಷ್ಟು ಸಮರ್ಥನೆ ಮತ್ತು ನ್ಯಾಯಸಮ್ಮತತೆಯನ್ನು ನೀಡಿದೆ. ಆದ್ದರಿಂದ, ಪ್ರಸ್ತುತ ಸರ್ಕಾರದ ಏಕೈಕ ಫಲಾನುಭವಿಗಳಾಗಿರುವ ಕಾರ್ಪೊರೇಟ್ಗಳ ಬೆಂಬಲದೊಂದಿಗೆ ನಡೆಯುತ್ತಿರುವ ಆರ್ಎಸ್ಎಸ್-ಬಿಜೆಪಿಯ ನವ-ಫ್ಯಾಸಿಸ್ಟ್ ಆಡಳಿತವನ್ನು ವಿರೋಧಿಸುವ ಶಕ್ತಿಗಳ ಬಲವಾದ, ವಿಶಾಲವಾದ ಮತ್ತು ಆಳವಾದ ಒಗ್ಗಟ್ಟಿನೊಂದಿಗೆ, ನಾವು ಮತ್ತಷ್ಟು ಪ್ರಬಲ ಹೋರಾಟಗಳ ಮೂಲಕ ಭವಿಷ್ಯವನ್ನು ಎದುರಿಸಲು ಸಿದ್ಧರಾಗೋಣ.
(ಜುಲೈ 29, 2026)
