ನವದೆಹಲಿ: ಯು.ಎಸ್ ಮತ್ತು ಇರಾನ್ ಸರಕಾರಗಳ ನಡುವೆ ದೀರ್ಘ ಕಾಲ ಮಾತುಕತೆ ಮತ್ತು ಚೌಕಾಶಿಯ ನಂತರ ಪಶ್ಚಿಮ ಏಶ್ಯಾ ಯುದ್ಧ ನಿಲ್ಲಿಸುವ ಮತ್ತು ಶಾಂತಿ ಸ್ಥಾಪನೆಯ ಒಡಂಬಡಿಕೆ ಪತ್ರ (ಎಂ.ಒ.ಯು) ವನ್ನು ಅಂತಿಮಗೊಳಿಸಿವೆ. ಇದು ಒಪ್ಪಂದವಲ್ಲ. ಆದರೆ ತಕ್ಷಣದ ಕೆಲವು ಕ್ರಮಗಳ ಜಾರಿ ಮತ್ತು ಅಂತಿಮ ಒಪ್ಪಂದದ ಚೌಕಟ್ಟು ಇದರಲ್ಲಿದೆ.
ಈ ಚಾರಿತ್ರಿಕ ಯು.ಎಸ್-ಇರಾನ್ ಒಡಂಬಡಿಕೆ ಪತ್ರಕ್ಕೆ ಅಧ್ಯಕ್ಷ ಟ್ರಂಪ್ ಮತ್ತು ಇರಾನ್ ಅಧ್ಯಕ್ಷರು ಈಗಾಗಲೇ ಇ-ಸಹಿಯನ್ನು ಮಾಡಿದ್ದಾರೆ. ಶುಕ್ರವಾರ (ಜೂನ್ 19) ರಂದು ಜಿನೆವಾದಲ್ಲಿ ಎರಡೂ ದೇಶಗಳ ವಿದೇಶ ಸಚಿವರು ಭೌತಿಕವಾಗಿ ಸಹಿ ಹಾಕಲಿದ್ದಾರೆ. ಈ ಚಾರಿತ್ರಿಕ ಒಡಂಬಡಿಕೆ ಪತ್ರದ 14 ಅಂಶಗಳು ಇಲ್ಲಿವೆ:
1. ಯು.ಎಸ್-ಇರಾನ್ ಮತ್ತು ಅವರ ಸಹಚರರು, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ತಕ್ಷಣ ಮತ್ತು ಶಾಶ್ವತವಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡಿವೆ
2. ಯು.ಎಸ್ ಮತ್ತು ಇರಾನ್ ಪರಸ್ಪರರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲು ಮತ್ತು ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರಲು ಒಪ್ಪಿಕೊಂಡಿವೆ
3. ಯು.ಎಸ್ ಮತ್ತು ಇರಾನ್ ಪರಸ್ಪರ ಒಪ್ಪಿಗೆಯಿಂದ ವಿಸ್ತರಿಸದಿದ್ದರೆ, 60 ದಿನಗಳೊಳಗಾಗಿ ಮಾತುಕತೆ ನಡೆಸಿ ಅಂತಿಮ ಒಪ್ಪಂದಕ್ಕೆ ಬರಲು ಬದ್ಧವಾಗಿವೆ.
4. ಯು.ಎಸ್ ವಿಧಿಸಿದ ನೌಕಾ ದಿಗ್ಬಂಧನವನ್ನು ತಕ್ಷಣ ತೆರವು ಮಾಡಲು ಆರಂಭಿಸಿ, 30 ದಿನಗಳ ಒಳಗೆ ಪೂರ್ಣವಾಗಿ ತೆರವು ಮಾಡುತ್ತದೆ
5. ಇರಾನ್ 60 ದಿನಗಳೊಳಗೆ ಹೊರ್ಮುಝ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳು ಯಾವುದೇ ಶುಲ್ಕವಿಲ್ಲದೆ ಸುರಕ್ಷಿತವಾಗಿ ಹಾದು ಹೋಗಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ
6. ಇರಾನ್ ನ ಪುನರ್-ರಚನೆ ಮತ್ತು ಆರ್ಥಿಕ ಅಭಿವೃದ್ಧಿಗೆ, ಯು.ಎಸ್ ಮತ್ತು ಅದರ ಪ್ರಾದೇಶಿಕ ಸಹಚರರು ಪರಸ್ಪರ ಒಪ್ಪಿಗೆಯಿಂದ ಕನಿಷ್ಟ 300 ಶತಕೋಟಿ ಡಾಲರ್ ನ ಯೋಜನೆಯನ್ನು ತಯಾರಿಸಲಿವೆ.
7. ವಿಶ್ವಸಂಸ್ಥೆ, ಐ.ಎ.ಇ.ಎ ಗಳದ್ದು ಸೇರಿದಂತೆ ಇರಾನ್ ವಿರುದ್ಧ ವಿಧಿಸಲಾದ, ಪ್ರಾಥಮಿಕ ಮತ್ತು ಅಧೀನ ಇತ್ಯಾದಿ ಎಲ್ಲ ರೂಪಗಳಲ್ಲಿರುವ ದಿಗ್ಬಂಧನಗಳನ್ನು ಕೊನೆಗೊಳಿಸಲು ಯು.ಎಸ್ ಕ್ರಮಗಳನ್ನು ಕೈಗೊಳ್ಳುತ್ತದೆ
8. ಇರಾನ್ ಅಣ್ವಸ್ತ್ರಗಳನ್ನು ಪಡೆಯುವುದಿಲ್ಲ ಅಥವಾ ಅಭಿವೃದ್ಧಿ ಪಡಿಸುವುದಿಲ್ಲ ಎಂದು ಮತ್ತೆ ಖಚಿತಪಡಿಸುತ್ತದೆ. ಪುಷ್ಟೀಕರಿಸಿದ ಅಣು ಸಾಮಗ್ರಿಗಳ ಸಂಗ್ರಹದ ನಿರ್ವಹಣೆಯನ್ನು ಐ.ಎ.ಇ.ಎ ಮೇಲ್ವಿಚಾರಣೆಯಲ್ಲಿ ಮಾಡಲು ಒಪ್ಪಿಕೊಳ್ಳುತ್ತದೆ
9. ಅಂತಿಮ ಒಪ್ಪಂದಕ್ಕೆ ಬರುವವರೆಗೆ, ಇರಾನ್ ಈಗಿನ ಅಣು ಯೋಜನೆಯನ್ನು ಪ್ರಸ್ತುತ ಸ್ವರೂಪದಲ್ಲಿ ಮುಂದುವರೆಸುತ್ತದೆ, ಹಾಗೂ ಯು.ಎಸ್ ಯಾವುದೇ ಹೊಸ ದಿಗ್ಬಂಧನ ವಿಧಿಸುವುದಿಲ್ಲ ಮತ್ತು ಹೆಚ್ಚಿನ ಪಡೆಗಳನ್ನು ನಿಯೋಜಿಸುವುದಿಲ್ಲ
10. ಯು.ಎಸ್ ಭಂಡಾರ (ಟ್ರೆಶರಿ) ಇಲಾಖೆ ಇರಾನಿ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಅದರ ುಪ-ುತ್ಪನ್ನಗಳು ಮತ್ತು ಸಂಬಂಧಿತ ಬ್ಯಾಂಕಿಂಗ್, ವಿಮೆ ಮತ್ತು ಸಾಗಾಣಿಕೆ ಸೇವೆಗಳಿಗೆ (ಈಗಿರುವ ದಿಗ್ಬಂಧನಗಳಿಂದ) ವಿನಾಯಿತಿ ಘೋಷಿಸುತ್ತದೆ
11. ಯು.ಎಸ್, ಎಲ್ಲ ಸ್ಥಗಿತಗೊಳಿಸಿದ ಮತ್ತು ನಿರ್ಬಂಧಿಸಲಾದ ಇರಾನಿನ ಎಲ್ಲ ನಿಧಿಗಳನ್ನು ಅದರ ಬಳಕೆಗೆ ಮುಕ್ತಗೊಳಿಸುತ್ತದೆ
12. ಯು.ಎಸ್ ಮತ್ತು ಇರಾನ್ ಈ ಒಡಂಬಡಿಕೆ ಪತ್ರ(ಎಂ.ಒ.ಯು) ದಲ್ಲಿರುವ ಮತ್ತು ಮುಂಬರುವ ಒಪ್ಪಂದದ ಜಾರಿಯ ಮೇಲ್ವಿಚಾರಣೆ ಮಾಡಲು ನಿರ್ವಾಹಕ ವ್ಯವಸ್ಥೆಯನ್ನು ಸ್ಥಾಪಿಸುವುದು
13. ಈ ಒಡಂಬಡಿಕೆ ಪತ್ರ(ಎಂ.ಒ.ಯು)ಕ್ಕೆ ಸಹಿ ಹಾಕಿದ ಮತ್ತು ಕದನವಿರಾಮ, ನೌಕಾ ದಿಗ್ಬಂಧನ, ತೈಲ ಸಾಗಾಣಿಕೆ ವಿನಾಯಿತಿ ಮತ್ತು ನಿಧಿ ಮುಕ್ತಗೊಳಿಸುವ ಪ್ರಮುಖ ಅಂಶಗಳ ಜಾರಿಯ ನಂತರ, ಯು.ಎಸ್ ಮತ್ತು ಇರಾನ್ ಅಂತಿಮ ಒಪ್ಪಂದಕ್ಕೆ ಮಾತುಕತೆ ಆರಂಭಿಸುತ್ತವೆ
14. ಅಂತಿಮ ಒಪ್ಪಂದವನ್ನು ಎಲ್ಲರಿಗೂ ಬಾಧ್ಯವಾದ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದ ಮೂಲಕ ದೃಢೀಕರಿಸಲಾಗುತ್ತದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ -174| ಸಿನಿಮಾ – ವಲವಾರ, ಗ್ರಾಮೀಣ ಬದುಕಿನ ಸೊಗಡು | ವಿಶ್ಲೇಷಣೆ – ಎಂ.ನಾಗರಾಜ ಶೆಟ್ಟಿ
