‘ವಂದೇ ಮಾತರಂ’ ಸಂಪೂರ್ಣ ಹಾಡುವ ಅಗತ್ಯವಿಲ್ಲ: ಪಿಣರಾಯಿ ವಿಜಯನ್‌

ಮೊದಲ ಎರಡು ಚರಣಗಳೇ ಸಾಕು ಎಂದ ಕೇರಳ ವಿರೋಧ ಪಕ್ಷದ ನಾಯಕ
ತಿರುವನಂತಪುರಂ: ‘ವಂದೇ ಮಾತರಂ’ನ್ನು ಸಂಪೂರ್ಣವಾಗಿ ಹಾಡುವ ಅಗತ್ಯವಿಲ್ಲ. ಮೊದಲ ಎರಡು ಚರಣಗಳನ್ನು ಹಾಡಿದರೆ ಸಾಕು ಎಂದು ಕೇರಳದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಪೂರ್ಣ ಗೀತೆಯನ್ನು ಹಾಡಿಸುವ ಪ್ರಯತ್ನವನ್ನು ಅವರು “ಆರ್‌ಎಸ್‌ಎಸ್‌ ಅಜೆಂಡಾ” ಎಂದು ಟೀಕಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ‘ವಂದೇ ಮಾತರಂ’ ಹಾಡುವ ವಿಚಾರವಾಗಿ ಉದ್ಭವಿಸಿರುವ ವಿವಾದದ ಹಿನ್ನೆಲೆ ಮಾತನಾಡಿದ ಅವರು, “ಹಿಂದೆಯೇ ಸಂಪೂರ್ಣ ಗೀತೆ ಹಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮೊದಲ ಎರಡು ಚರಣಗಳನ್ನು ಹಾಡುವಾಗ ಎದ್ದು ನಿಲ್ಲುವ ನಿಯಮವೂ ಇಲ್ಲ” ಎಂದು ಹೇಳಿದರು.

ಇತ್ತೀಚೆಗೆ ಕೇರಳದ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ‘ವಂದೇ ಮಾತರಂ’ ಸಂಪೂರ್ಣವಾಗಿ ಹಾಡಲಾಗಿದ್ದಕ್ಕೆ ಎಡಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಗೀತೆಯ ಕೆಲವು ಭಾಗಗಳು ಧಾರ್ಮಿಕ ಅಂಶಗಳನ್ನು ಒಳಗೊಂಡಿರುವುದರಿಂದ ಅವುಗಳನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಬಳಸುವುದು ಧರ್ಮನಿರಪೇಕ್ಷ ಮೌಲ್ಯಗಳಿಗೆ ವಿರುದ್ಧವಾಗುತ್ತದೆ ಎಂದು ಸಿಪಿಐ(ಎಂ) ವಾದಿಸಿದೆ.

ಇದನ್ನೂ ಓದಿ : ₹24 ಕೋಟಿ ಸೇತುವೆಯಲ್ಲಿ ಬಿರುಕು: ಗುಜರಾತ್ ಬಿಜೆಪಿ ಒಳಗೆ ಅಸಮಾಧಾನ, ಭ್ರಷ್ಟಾಚಾರ ಆರೋಪ

ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕೇರಳ ಸರ್ಕಾರ ರಾಷ್ಟ್ರೀಯ ಗೀತೆಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

1950ರಲ್ಲಿ ಸಂವಿಧಾನ ಸಭೆ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳಿಗೆ ಮಾತ್ರ ಅಧಿಕೃತ ಮಾನ್ಯತೆ ನೀಡಿತ್ತು ಎಂದು ಎಡಪಕ್ಷಗಳು ಉಲ್ಲೇಖಿಸುತ್ತಿವೆ. ಇದೇ ವಿಚಾರ ಇದೀಗ ಕೇರಳ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ನೋಡಿ : ಗೋವಂಶ ವಧೆ ಮಾಡದಂತೆ ಮುಸ್ಲಿಮರ ನಿರ್ಧಾರ – ವಯಸ್ಸಾದ ದನಗಳನ್ನು ಯಾರಿಗೆ ಮಾರಬೇಕು? ರೈತರಲ್ಲಿ ಹೆಚ್ಚಿದ ಆತಂಕ

Donate Janashakthi Media

Leave a Reply

Your email address will not be published. Required fields are marked *