ದೊಡ್ಡಬಳ್ಳಾಪುರ: ಶಾಲೆ-ಕಾಲೇಜುಗಳಿಗೆ ತೆರಳಲು ನಿಗದಿತ ಸಮಯಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಹೊಸಹಳ್ಳಿ ವ್ಯಾಪ್ತಿಯ ಉಜ್ಜನಿ ಗ್ರಾಮದಲ್ಲಿ ನಡೆದಿದೆ. ಡಿಪೊ ಮ್ಯಾನೇಜರ್ ಸ್ಥಳಕ್ಕೆ ಬರುವವರೆಗೆ ಬಸ್ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಅವ್ಯವಸ್ಥೆ
ಪ್ರತಿನಿತ್ಯ ಬೆಳಗ್ಗೆ 8ಕ್ಕೆ ಬರಬೇಕಾದ ಸಾರಿಗೆ ಬಸ್, ಒಂಬತ್ತು ಗಂಟೆ ಆದರೂ ಬರುವುದಿಲ್ಲ. ಇದರಿಂದಾಗಿ ಪ್ರತಿನಿತ್ಯ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗುವುದು ತಡವಾಗುತ್ತಿದೆ. ಈ ಕುರಿತಂತೆ ಡಿಪೊ ಮ್ಯಾನೇಜರ್‌ಗೆ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅವ್ಯವಸ್ಥೆ
ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತಂತೆ ಚಾಲಕ, ನಿರ್ವಾಹಕ ರನ್ನು ಕೇಳಿದರೆ ಡಿಪೊದಲ್ಲಿ ಬಸ್ ಸಮಯಕ್ಕೆ ಸರಿಯಾಗಿ ಕೊಡುವುದಿಲ್ಲ. ಆದ್ದರಿಂದ ವಿಳಂಬವಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಎಂದರು.
ಇದನ್ನೂ ಓದಿ: ಬಕ್ರಿದ್ ಹಬ್ಬ ಸೌಹಾರ್ದತೆಯಿಂದ ಆಚರಣೆ ಮಾಡಿ, ಗೋವಂಶ ವಧೆ ಮಾಡಬೇಡಿ: ಅನ್ಷಾದ್ ಮನವಿ
ಗ್ರಾಮದ ಯುವ ಮುಖಂಡ ಲಕ್ಷ್ಮಿನಾರಾಯಣ್ ಪ್ರತಿಕ್ರಿಯೆ ನೀಡಿ, ಉಜ್ಜನಿ ಮೂಲಕ ದೊಡ್ಡಬಳ್ಳಾಪುರಕ್ಕೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಪ್ರತಿನಿತ್ಯ ಬಸ್‌ಗಾಗಿ ಪರದಾಟ ನಡೆಸಬೇಕಿದೆ. ಶಾಲೆ, ಕಾಲೇಜಿಗೆ ವಿಳಂಬವಾಗಿ ತೆರಳಿದರೆ ಶಿಕ್ಷಕರು, ಉಪನ್ಯಾಸಕರಿಂದ ಬೈಗುಳದ ಜತೆಗೆ ಪಾಠದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.
ಈ ಕುರಿತಂತೆ ಡಿಪೊ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ನಾಳೆಯಿಂದ ಸಮಯಕ್ಕೆ ಸರಿಯಾಗಿ ಬರುತ್ತದೆ ಎನ್ನುತ್ತಾರೆ. ಆದರೆ, ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಹೊಸಹಳ್ಳಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಖರಾರ್ ಹುಸೇನ್ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳ ಮನವೊಲಿಸಿದರು.
ಇದನ್ನೂ ನೋಡಿ: ಹಾಸ್ಟೆಲ್ ನೌಕರರ ಕಣ್ಣೀರ ಕಥೆ | ಬೆಂಗಳೂರಿನಲ್ಲಿ ಸಾವಿರಾರು ಜನರ ಪ್ರತಿಭಟನೆ Janashakthi Media
