ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಕಳಚಿ ಹಾಕಿದ ಈ ಪರಿ

ಪ್ರೊ. ಪ್ರಭಾತ್‌ ಪಟ್ನಾಯಕ್‌
ಆಳುವ ಮಂದಿ ಏನೇ ಹೇಳಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಳಚಿ ಹಾಕಲಾಗುತ್ತಿದೆ  ಎಂಬುದೇ ಸರಳ ಸಂಗತಿ. ವಿಬಿಜಿ ರಾಮ್‌ ಜಿ ಕಾಯ್ದೆಯಲ್ಲಿ ಒದಗಿಸಿರುವ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸು ಹಂಚಿಕೆಯ ಮಾದರಿಯನ್ನು ಕಣ್ಣಮುಂದೆ ತಂದುಕೊಂಡರೆ, ಮತ್ತು “ಭ್ರಷ್ಟಾಚಾರ”ದ ವಿರುದ್ಧ ಹೋರಾಡುವ ಹೆಸರಿನಲ್ಲಿ ದುಡಿಯುವ ಬಡವರ ಮೇಲೆ ತಂತ್ರಜ್ಞಾನದ ಬಳಕೆಯ ಮೂಲಕ ಮಾಡಿದ ದಾಳಿಯನ್ನು ಗಮನಿಸಿದರೆ, ಹೊಸ ಕಾಯ್ದೆಯು ಸಾರ್ವತ್ರಿಕ ವ್ಯಾಪ್ತಿಯನ್ನು ಒದಗಿಸುತ್ತದೆಯೇ, 100 ದಿನಗಳ ಬದಲಿಗೆ 125 ದಿನಗಳನ್ನು ಒದಗಿಸುತ್ತದೆಯೇ ಎಂಬುದು ಒಂದು ಅಪ್ರಸ್ತುತ ಟೀಕೆಯಾಗುತ್ತದೆ. ಗ್ರಾಮೀಣ ಬಡವರಿಗೆ ಎಷ್ಟೇ ಸಣ್ಣ ಪ್ರಮಾಣದಲ್ಲಾಗಲೀ ಉದ್ಯೋಗದ ಹಕ್ಕನ್ನು ನೀಡುವ ಕಾಯ್ದೆಯ ಬಗ್ಗೆ ಇದ್ದ ವರ್ಗ-ವಿರೋಧ ಮತ್ತು ಜನಸಾಮಾನ್ಯರಿಗೆ ಹಕ್ಕುಗಳಿರಬಾರದು, ಕರ್ತವ್ಯಗಳಷ್ಟೇ ಇರಬೇಕು ಎಂಬ ಫ್ಯಾಸಿಸ್ಟ್‌ ಮನೋಭಾವ ಜತೆಗೂಡಿ ಗ್ರಾಮೀಣ ಕುಟುಂಬಗಳಿಗೆ ಗಮನಾರ್ಹ ಮಟ್ಟದ ಸಹಾಯವನ್ನು ಒದಗಿಸಿದ್ದ ವಿಶ್ವದ ಅತಿದೊಡ್ಡ ಉದ್ಯೋಗ ಸೃಷ್ಟಿ ಕಾರ್ಯಕ್ರಮವನ್ನು ಕಳಚಿ ಹಾಕಿವೆ. ಗ್ರಾಮೀಣ 
ಅನು: ಕೆ.ಎಂ. ನಾಗರಾಜ್

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಜಾರಿಗೆ ತಂದ ಶಾಸನಗಳಲ್ಲಿ ಬಹುಶಃ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು (ಉದ್ಯೋಗ ಖಾತರಿ ಕಾಯ್ದೆ) ಅತ್ಯಂತ ಪರಿಣಾಮಕಾರಿಯಾಗಿತ್ತು. ಅದು ಬಡವರಿಗೆ ಹಣ ವರ್ಗಾವಣೆಯನ್ನು ಒದಗಿಸಿತು ಮಾತ್ರವಲ್ಲ, ಹಿಂದಿನ “ಕೆಲಸಕ್ಕಾಗಿ ಕಾಳು” ಕಾರ್ಯಕ್ರಮದಂತೆ ಉದ್ಯೋಗ ಸೃಷ್ಟಿಯ ಯೋಜನೆಯನ್ನು ಆರಂಭಿಸಿತಷ್ಟೇ ಅಲ್ಲ,  ಉದ್ಯೋಗದ ಹಕ್ಕನ್ನು, ಅದರ ಸ್ವರೂಪವು ಎಷ್ಟು ಸಣ್ಣದೇ ಇರಲಿ, ಅದು ಮಾನ್ಯ ಮಾಡಿತು.  ಉದ್ಯೋಗ ಖಾತರಿ ಕಾಯ್ದೆಯಡಿಯಲ್ಲಿ ಪ್ರತಿ ಕುಟುಂಬಕ್ಕೂ ಗರಿಷ್ಠ 100 ದಿನಗಳ ವರೆಗಿನ ಉದ್ಯೋಗವನ್ನು ಕೇಳಿದಾಗ ಒದಗಿಸಬೇಕಾಗಿತ್ತು. ಅದಕ್ಕನುಗುಣವಾಗಿ, ಕೆಲಸದ ಅಗತ್ಯವಿದ್ದ ದುಡಿಯುವ ಗ್ರಾಮೀಣ ಕುಟುಂಬಗಳಿಗೆ ಗಮನಾರ್ಹ ಮಟ್ಟದ ಸಹಾಯವನ್ನು ಒದಗಿಸುವ ವಿಶ್ವದ ಅತಿದೊಡ್ಡ ಉದ್ಯೋಗ ಸೃಷ್ಟಿ ಕಾರ್ಯಕ್ರಮವನ್ನು ಅದು ಸ್ಥಾಪಿಸಿತ್ತು.

ಸಾಂವಿಧಾನಿಕವಾಗಿ ಈ ಹಕ್ಕನ್ನು ಗುರುತಿಸಲಾಗಿಲ್ಲವಾದರೂ, ಆ ಹಕ್ಕನ್ನು ಪ್ರತಿಷ್ಠಾಪಿಸುವ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಸಂಸತ್ತಿನೊಳಗೆ ಮಾತ್ರವಲ್ಲದೆ ಅಧ್ಯಯನ ನಿರತ ಅರ್ಥಶಾಸ್ತ್ರಜ್ಞರು, ಸಾರ್ವಜನಿಕ ಬುದ್ಧಿಜೀವಿಗಳು, ಕಾರ್ಮಿಕರ ಪ್ರತಿನಿಧಿಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳನ್ನು ಒಳಗೊಂಡಂತೆ ಸಂಸದರು ಮತ್ತು ಒಟ್ಟಾರೆ ಸಮಾಜದ ನಡುವೆ ನಡೆದ ಸಾಕಷ್ಟು ಚರ್ಚೆ ಮತ್ತು ಸಂವಾದಗಳ ನಂತರ, ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು ಮತ್ತು ಅದಕ್ಕೆ ಸಾಂವಿಧಾನಿಕವೆನ್ನಬಹುದಾದ ಭರವಸೆಯ ಸ್ಥಾನಮಾನವನ್ನು ನೀಡಲಾಗಿತ್ತು. ಈ ಕಾಯ್ದೆಯ ಬಗ್ಗೆ ಆ ಸಮಯದಲ್ಲಿದ್ದ ಯುಪಿಎ ಸರ್ಕಾರದೊಳಗೂ ಸಹ  ಭಿನ್ನಾಭಿಪ್ರಾಯಗಳಿದ್ದವು. ಆದರೆ, ಆ ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುತ್ತಿದ್ದ ಎಡ ಪಕ್ಷಗಳ ಒತ್ತಡದ ಮೇರೆಗೆ ಎಲ್ಲ ಪಕ್ಷಗಳೂ ಏಕಾಭಿಪ್ರಾಯಕ್ಕೆ ಬಂದವು ಮತ್ತು ಆ ಕಾಯ್ದೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದವು. ಅದರಲ್ಲಿ ಬಿಜೆಪಿಯೂ ಸಹ ಸೇರಿತ್ತು.

ಈ ಕಾಯ್ದೆಯ ಕಾರಣದಿಂದಾಗಿ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ಮನರೆಗ) ಗ್ರಾಮೀಣ ಜನರಿಗೆ ಮಾತ್ರವಲ್ಲದೆ ನಗರ ಪ್ರದೇಶದ ಬಡವರಿಗೂ ಸಹ ಒಂದು ಜೀವನಾಧಾರವನ್ನು ಒದಗಿಸಿತ್ತು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿದ್ದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಪರಿಸ್ಥಿತಿಯ ಒತ್ತಡದಿಂದಾಗಿ ತಮ್ಮ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ ಸಮಯದಲ್ಲಿ ಅವರು ಈ ಯೋಜನೆಯಡಿಯಲ್ಲಿ ಉದ್ಯೋಗ ಪಡೆದಾಗ, ಈ ಯೋಜನೆಯು ಜೀವನಾಧಾರವನ್ನು ಒದಗಿಸಿತ್ತು ಎಂಬುದು ಸ್ಪಷ್ಟವಾಗಿತ್ತು.

ಈ ಯೋಜನೆಯು ಸಮಾಜದಲ್ಲಿ ವರ್ಗ-ಶಕ್ತಿಗಳ ಬಲಾಬಲವನ್ನು, ಅದು ಎಷ್ಟು ಅಲ್ಪವೇ ಇರಲಿ, ಬದಲಾಯಿಸಿತು. ಭೂಮಿ ಹೊಂದಿದ್ದ ಶ್ರೀಮಂತರಿಗೆ ಇದರಿಂದ ಕೂಲಿಗಳು  ಏರಬಹುದು ಎಂದು ಭಯವಷ್ಟೇ ಅಲ್ಲ,  ಬಡವರು ಈಗ ತಮ್ಮ “ಕೈ ತಪ್ಪಿ ಹೋಗುವ” ಭಯ ಮತ್ತು ದುಡಿಯುವ ಬಡವರ ಮೇಲೆ ಸಾಮಾಜಿಕವಾಗಿ ಹೊಂದಿದ್ದ ನಿಯಂತ್ರಣ ತಪ್ಪಿಹೋಗುವ ಪ್ರಶ್ನೆಯೂ ಇದಾಗಿತ್ತು. ಉದ್ಯೋಗ ಖಾತರಿ ಯೋಜನೆಗೆ ಇದ್ದ ಈ ವರ್ಗ ವಿರೋಧವು ಬಿಜೆಪಿಯ ಸುತ್ತಲೂ ಹರಳುಗಟ್ಟಿತು. ಆಗ ತಾನೇ ಅಧಿಕಾರಕ್ಕೆ ಬಂದಿದ್ದ ಮತ್ತು ತಾನು ಹೊಂದಿದ್ದ ವರ್ಗ ಪಕ್ಷಪಾತವನ್ನು ಬಹಿರಂಗಪಡಿಸುವಷ್ಟು ವಿಶ್ವಾಸವನ್ನು ಬಿಜೆಪಿಯೂ ಹೊಂದಿತ್ತು. ಯಥಾಪ್ರಕಾರ, ಅದು ತನ್ನ ಈ ಪಕ್ಷಪಾತಕ್ಕೆ “ಅಭಿವೃದ್ಧಿ”ಯ ಹೊದಿಕೆ ಹಾಕಿತು. ಭ್ರಷ್ಟಾಚಾರದಿಂದ ಕೂಡಿದ ಈ ಯೋಜನೆಯಡಿಯಲ್ಲಿ “ಅಭಿವೃದ್ಧಿ”ಗೆ ಬಳಸಬಹುದಾದ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡಲಾಗುತ್ತಿದೆ ಎಂಬ ವಾದವನ್ನು ಅದು ಮುಂದಿಟ್ಟಿತು. ಜೊತೆಗೆ, ಜನಗಳು ಯಾವುದೇ ʼಹಕ್ಕುʼಗಳನ್ನು ಹೊಂದಿರಬಾರದು,    ಹಕ್ಕುಗಳ  ಬದಲು ʼಕರ್ತವ್ಯʼಗಳ ಮೇಲೆ ಒತ್ತು ನೀಡುವ  ಬಿಜೆಪಿಯಂತಹ  ಫ್ಯಾಸಿಸ್ಟ್ ಸಂಘಟನೆಗಳ ಮನೋಭಾವ  ವರ್ಗ-ಪಕ್ಷಪಾತದಿಂದ ಉದ್ಭವಿಸಿದ ಉದ್ಯೋಗ ಖಾತರಿ ಯೋಜನೆಯ ಮೇಲಿನ ಅದರ ವಿರೋಧವನ್ನು ಮತ್ತಷ್ಟು ಬಲಪಡಿಸಿತು.

 ಈ ಯೋಜನೆಯು ಸಮಾಜದಲ್ಲಿ ವರ್ಗ-ಶಕ್ತಿಗಳ ಬಲಾಬಲವನ್ನು, ಅದು ಎಷ್ಟು ಅಲ್ಪವೇ ಇರಲಿ, ಬದಲಾಯಿಸಿತು. ಭೂಮಿ ಹೊಂದಿದ್ದ ಶ್ರೀಮಂತರಿಗೆ ಇದರಿಂದ ಕೂಲಿಗಳು  ಏರಬಹುದು ಎಂದು ಭಯವಷ್ಟೇ ಅಲ್ಲ,  ಬಡವರು ಈಗ ತಮ್ಮ “ಕೈ ತಪ್ಪಿ ಹೋಗುವ” ಭಯ ಮತ್ತು ದುಡಿಯುವ ಬಡವರ ಮೇಲೆ ಸಾಮಾಜಿಕವಾಗಿ ಹೊಂದಿದ್ದ ನಿಯಂತ್ರಣ ತಪ್ಪಿಹೋಗುವ ಪ್ರಶ್ನೆಯೂ ಇದಾಗಿತ್ತು. ಉದ್ಯೋಗ ಖಾತರಿ ಯೋಜನೆಗೆ ಇದ್ದ ಈ ವರ್ಗ ವಿರೋಧವು ಬಿಜೆಪಿಯ ಸುತ್ತಲೂ ಹರಳುಗಟ್ಟಿತು. ಆಗ ತಾನೇ ಅಧಿಕಾರಕ್ಕೆ ಬಂದಿದ್ದ ಮತ್ತು ತಾನು ಹೊಂದಿದ್ದ ವರ್ಗ ಪಕ್ಷಪಾತವನ್ನು ಬಹಿರಂಗಪಡಿಸುವಷ್ಟು ವಿಶ್ವಾಸವನ್ನೂ ಬಿಜೆಪಿ ಹೊಂದಿತ್ತು, ಯಥಾಪ್ರಕಾರ ಅದು ತನ್ನ ಈ ಪಕ್ಷಪಾತಕ್ಕೆ “ಅಭಿವೃದ್ಧಿ”ಯ ಹೊದಿಕೆ ಹಾಕಿತು.

ಇದನ್ನೂ ಓದಿ : ಐಪಿಎಲ್ ವೇಳೆ ಅಕ್ರಮ ಬೆಟ್ಟಿಂಗ್‌ ದಂಧೆ: ಬೆಂಗಳೂರಿನಲ್ಲಿ 23 ಮಂದಿ ಬಂಧನ, ₹13.39 ಕೋಟಿ ಮೌಲ್ಯದ ವಸ್ತು ವಶ

ಏಕೆ ಹೊಸ ಕಾಯ್ದೆಗೆ ಆತುರ?

ಪರಿಣಾಮವಾಗಿ ಉದ್ಯೋಗ ಖಾತರಿ ಕಾಯ್ದೆಯ ಬದಲಿಗೆ  ಒಂದು ಹೊಸ ಕಾಯ್ದೆಯನ್ನು  ತರಲಾಯಿತು. ಈ ಕಾಯ್ದೆಯ ಅಂಗೀಕಾರವು ಬಹುತೇಕ ಒಂದು ಕೈಚಳಕವೇ ಆಗಿತ್ತು: ಅದನ್ನು ಆತುರದಿಂದ ಮಂಡಿಸಲಾಯಿತು. ಸಂಸತ್ತಿನಲ್ಲಿ ಚರ್ಚೆಯನ್ನೇ ಮಾಡದೇ ಧ್ವನಿ ಮತದ ಮೂಲಕ ಆತುರಾತುರವಾಗಿ ಅಂಗೀಕರಿಸಲಾಯಿತು ಮತ್ತು ಇದೇ ಜುಲೈ 1ರಿಂದ ಅದು ಕಾರ್ಯಗತವಾಗಲಿದೆ. ಹೊಸ ಕಾಯ್ದೆಯು ಹಲವಾರು ಬದಲಾವಣೆಗಳನ್ನು ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ಎಂದರೆ, ಹಿಂದಿನ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ 90:10 ಅನುಪಾತದಲ್ಲಿ ಭರಿಸಲಾಗುತ್ತಿದ್ದ ವೆಚ್ಚವನ್ನು ಈಗ 60:40 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಗಳು ಭರಿಸಬೇಕಾಗುತ್ತದೆ (ಈ ಅನುಪಾತವನ್ನು “ವಿಶೇಷ ವಿಧದ ರಾಜ್ಯಗಳ” ವಿಷಯದಲ್ಲಿ ಹೊರತುಪಡಿಸಲಾಗಿದೆ). ಈ ಬದಲಾವಣೆಯನ್ನು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸದೆ ಕೇಂದ್ರವು ಏಕಪಕ್ಷೀಯವಾಗಿ ನಿರ್ಧರಿಸಿದೆ. ಪ್ರಸ್ತುತ ನವ-ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ರಾಜ್ಯ ಸರ್ಕಾರಗಳು ಹಣಕಾಸು ಸಂಪನ್ಮೂಲಗಳ ಅಭಾವದಿಂದ ಬಳಲುತ್ತಿರುವಲ್ಲಿ ಪ್ರಮುಖವಾದ ಒಂದು ಅಂಶವೆಂದರೆ, ರಾಜ್ಯಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಈ ಹಿಂದೆ ವಿಧಿಸುತ್ತಿದ್ದ ಮಾರಾಟ ತೆರಿಗೆಯನ್ನು ಈಗ ಸರಕು ಮತ್ತು ಸೇವಾ ತೆರಿಗೆಯಾಗಿ ಬದಲಾಯಿಸಲಾಗಿದೆ. ಈಗಾಗಲೇ ಹಣಕಾಸು ಸಂಪನ್ಮೂಲಗಳ ಅಭಾವದಿಂದ ಬಳಲುತ್ತಿರುವ ರಾಜ್ಯಗಳ ಸರ್ಕಾರಗಳ ಮೇಲೆ ಶೇ. 40ರಷ್ಟು ಮೊತ್ತದ ಹಣಕಾಸಿನ ಹೊರೆಯನ್ನು ಈ ಹೊಸ ಯೋಜನೆ ಹೊರಿಸುತ್ತದೆ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸಲಾಗದ ಹೊಣೆಯನ್ನು ರಾಜ್ಯ ಸರ್ಕಾರದ ತಲೆಗೆ ಕಟ್ಟಲಾಗುತ್ತದೆ. ಗ್ರಾಮೀಣ 

ಹೊಸ ಕಾಯ್ದೆಯ – ವಿಕಸಿತ್‌ ಭಾರತ್‌ ಗ್ರಾಮೀಣ್‌ ರೋಜ್‌ಗಾರ್‌ ಖಾತ್ರಿ ಕಾಯ್ದೆ (ವಿಬಿ-ಜಿ ರಾಮ್‌ ಜಿ) – ಹೊಸ ಯೋಜನೆಯು ಅಧಿಸೂಚಿತ ಗ್ರಾಮೀಣ ಪ್ರದೇಶಗಳಲ್ಲಿ (ಅಂತಹ ಪ್ರದೇಶಗಳಲ್ಲಿ ಗರಿಷ್ಠ ಉದ್ಯೋಗ ದಿನಗಳ ಸಂಖ್ಯೆಯನ್ನು ಹಿಂದಿನ 100ರಿಂದ 125ಕ್ಕೆ ಹೆಚ್ಚಿಸಲಾಗಿದೆ) ಮಾತ್ರ ಕಾರ್ಯನಿರ್ವಹಿಸುವುದರಿಂದ, ಉದ್ಯೋಗ ಖಾತರಿ ಕಾಯ್ದೆಯ ಸಾರ್ವತ್ರಿಕ ವ್ಯಾಪ್ತಿಯನ್ನು ಮತ್ತು ಜೊತೆಗೆ ಅದರ ಬೇಡಿಕೆ-ಚಾಲಿತ ಸ್ವರೂಪವು ನೀಡುವ ಹಕ್ಕನ್ನು ತೊರೆಯುತ್ತಿದೆ ಎಂದು ತೋರುತ್ತದೆ. ಆದರೆ, ಈ ಅಂಶಗಳನ್ನು ಕೇಂದ್ರ ಸರ್ಕಾರದ ವಕ್ತಾರರು ನಿರಾಕರಿಸಿದ್ದಾರೆ. ಹಿಂದಿನ ಯೋಜನೆಯ 100 ದಿನಗಳ ಮಿತಿಯನ್ನು 125ಕ್ಕೆ ಏರಿಸಿರುವುದರೊಂದಿಗೆ, ಹಿಂದಿನ ಸಾರ್ವತ್ರಿಕ ವ್ಯಾಪ್ತಿ ಮತ್ತು ಅದರ ಬೇಡಿಕೆ-ಚಾಲಿತ ಸ್ವರೂಪವು ದುರ್ಬಲಗೊಳ್ಳುವುದಿಲ್ಲವೆಂದು ಅವರು, ಹೊಸ ಕಾಯ್ದೆಯು ಅಂಗೀಕಾರ ಪಡೆದ ಕೆಲವು ದಿನಗಳ ನಂತರ ಹೇಳಿದ್ದಾರೆ.

ಆದರೆ, ವಿಬಿ-ಗ್ರಾಮ್‌ಜಿ ಕಾಯ್ದೆಯು ಏನನ್ನು ಒದಗಿಸುತ್ತದೆ ಅಥವಾ ಅದು ಒದಗಿಸುವುದಿಲ್ಲ ಎಂಬುದು ಅಪ್ರಸ್ತುತವಾಗುತ್ತದೆ. ಏಕೆಂದರೆ, ಹಳೆಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ರೀತಿಯನ್ನು ಗಮನಿಸಿದರೆ, ಅದು ಈಗ ಇಲ್ಲವೇನೋ ಎನ್ನುವಷ್ಟು ಮಟ್ಟಿಗೆ ಕುಗ್ಗಿರುವುದನ್ನು ಕಾಣಬಹುದು. ಇದು ಅಧ್ಯಯನಕಾರರು ಮತ್ತು ಕಾರ್ಯಕರ್ತರ ಒಂದು ಗುಂಪು ಸಂಘಟನೆ ಲಿಬ್ಟೆಕ್ ಇಂಡಿಯಾ ಸಿದ್ಧಪಡಿಸಿದ 2025-26ರ ವರದಿಯಿಂದ ಸ್ಪಷ್ಟವಾಗುತ್ತದೆ.

ವಿಬಿ-ಗ್ರಾಮ್‌ಜಿ ಕಾಯ್ದೆಯು ಏನನ್ನು ಒದಗಿಸುತ್ತದೆ ಅಥವಾ ಅದು ಒದಗಿಸುವುದಿಲ್ಲ ಎಂಬುದು ಅಪ್ರಸ್ತುತವಾಗುತ್ತದೆ. ಏಕೆಂದರೆ, ಹಳೆಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ರೀತಿಯನ್ನು ಗಮನಿಸಿದರೆ, ಅದು ಈಗ ಇಲ್ಲವೇನೋ ಎನ್ನುವಷ್ಟು ಮಟ್ಟಿಗೆ ಕುಗ್ಗಿರುವುದನ್ನು ಕಾಣಬಹುದು.

ಅಸಂಬದ್ಧ ವಾದ

ಲಿಬ್ಟೆಕ್ ಇಂಡಿಯಾದ ವರದಿಯ ಪ್ರಕಾರ, 2024-25ಕ್ಕೆ ಹೋಲಿಸಿದರೆ 2025-26ರಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕುಟುಂಬಗಳ ಸಂಖ್ಯೆಯು ಶೇ. 8.2ರಷ್ಟು ಇಳಿಕೆಯಾಗಿದೆ ಮತ್ತು ಕೆಲಸಗಾರರ ಸಂಖ್ಯೆಯು ಶೇ. 9.1ರಷ್ಟು ಇಳಿಕೆಯಾಗಿದೆ. ಸೃಷ್ಟಿಯಾದ ಕೆಲಸದ ವ್ಯಕ್ತಿ-ದಿನಗಳ ಸಂಖ್ಯೆ ಇನ್ನೂ ತೀವ್ರವಾಗಿ (ಶೇ. 21.5ರಷ್ಟು) ಇಳಿಕೆಯಾಗಿದೆ. ಅಂದರೆ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡುವವರಿಗೆ ಒದಗುವ ಸರಾಸರಿ ಕೆಲಸದ ದಿನಗಳ ಸಂಖ್ಯೆಯು ಗಮನಾರ್ಹವಾಗಿ ಇಳಿಕೆಯಾಗಿದೆ. ಒಟ್ಟಾರೆಯಾಗಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2024-25ರಲ್ಲಿ ಲಭ್ಯವಾದ 268.44 ಕೋಟಿ ವ್ಯಕ್ತಿ-ದಿನಗಳಿಗೆ ಹೋಲಿಸಿದರೆ, ಕೇವಲ 210.73 ಕೋಟಿ ವ್ಯಕ್ತಿ-ದಿನಗಳು ಮಾತ್ರ 2025-26ರಲ್ಲಿ ಲಭ್ಯವಾಗಿವೆ. 2024-25ರಲ್ಲಿ ಲಭ್ಯವಾದಷ್ಟೇ ಪ್ರತಿ ಕುಟುಂಬದ ಸರಾಸರಿ ವ್ಯಕ್ತಿ-ದಿನಗಳು 2025-26ರಲ್ಲಿ ಲಭಿಸಿದ್ದರೆ, ಪ್ರತಿ ಕುಟುಂಬವೂ  2025-26ರಲ್ಲಿ 1938 ರೂ.ಗಳಷ್ಟು ಹೆಚ್ಚು ವರಮಾನವನ್ನು ಗಳಿಸುತ್ತಿತ್ತು ಎಂದು ಲಿಬ್ಟೆಕ್ ಅಂದಾಜಿಸಿದೆ. ಅಂದರೆ, ಉದ್ಯೋಗ ಖಾತರಿ ಯೋಜನೆಯನ್ನು ಮೊಟಕುಗೊಳಿಸಿದ ಪರಿಣಾಮವಾಗಿ ಪ್ರತಿ ಕುಟುಂಬಕ್ಕೂ ನಷ್ಟವಾಗಿದೆ.

2024-25ರ ವರ್ಷವು ಒಂದು ಅಸಾಧಾರಣ ವರ್ಷವಾಗಿದ್ದರಿಂದ, ಆ ವರ್ಷದೊಂದಿಗೆ ಮಾಡುವ ಹೋಲಿಕೆಗಳಿಗೆ ಬೆಲೆ ಇರುವುದಿಲ್ಲ ಎಂಬ ಭಾವನೆ ಬಾರದಿರಲಿ ಎಂಬ ಕಾರಣದಿಂದ ಸ್ವಲ್ಪ ಹಿಂದಕ್ಕೆ ಹೋಗುವುದು ಉತ್ತಮ. ಕೊರೊನಾ ಸಾಂಕ್ರಾಮಿಕವು ಎರಗುವ ಸ್ವಲ್ಪ ಹಿಂದೆ, 2019-20 ರಲ್ಲಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 265.35 ಕೋಟಿ ವ್ಯಕ್ತಿ-ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ನೋಡಿದರೆ, 2025-26ರಲ್ಲಿ ಕಂಡುಬಂದ ಉದ್ಯೋಗ ಕುಸಿತವು, 2024-25 ವರ್ಷದ ಹೋಲಿಕೆಯಲ್ಲಿ ಮಾತ್ರವಲ್ಲ, ಸಾಂಕ್ರಾಮಿಕ-ಪೂರ್ವ ಮಾನದಂಡ ಪ್ರಕಾರದ ಹೋಲಿಕೆಯಲ್ಲಿಯೂ ಗಮನಾರ್ಹವೇ ಎಂಬುದು ಸ್ಪಷ್ಟವಾಗುತ್ತದೆ.

2025-26ರಲ್ಲಿ ಕಂಡ ಈ ಕುಸಿತಕ್ಕೆ ತಗ್ಗಿದ ಬೇಡಿಕೆಯೇ ಕಾರಣವೆಂದು ಮತ್ತು ಇದು ಗ್ರಾಮಾಂತರ ಭಾರತದ ಬಡತನ ಇಳಿಕೆಯಿಂದ ಉಂಟಾಗಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ, ಇದು ಸಂಪೂರ್ಣವಾಗಿ ಅಸಂಬದ್ಧವಾದ ಒಂದು ವಾದವೇ ಸರಿ. ಬಡತನ ಇಳಿಕೆಯಾಗಿದೆ ಎಂಬ ದಾವೆಯು ಕೇವಲ ಒಂದು ಮನೋಭ್ರಾಂತಿಯಷ್ಟೇ. ಹಾಗೆ ನೋಡಿದರೆ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಉದ್ಯೋಗಕ್ಕಾಗಿ 2025-26ರಲ್ಲಿ ನೋಂದಾವಣೆಯಾದವರ ಸಂಖ್ಯೆಯೂ ಸಹ ಶೇ. 3.2ರಷ್ಟು ಏರಿಕೆಯಾಗಿ 2024-25ರಲ್ಲಿದ್ದ 14.98 ಕೋಟಿ ಕುಟುಂಬಗಳಿಂದ 15.46 ಕೋಟಿ ಕುಟುಂಬಗಳಿಗೆ ಏರಿತ್ತು. ಉದ್ಯೋಗ ಕಂಡುಕೊಳ್ಳುವಲ್ಲಿ ಆಸಕ್ತಿ ಒಂದು ವೇಳೆ ಇಲ್ಲದಿದ್ದರೆ ಕೆಲಸಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುತ್ತಿರಲಿಲ್ಲ.

ಬಜೆಟ್‌ ಕಡಿತ ಮತ್ತು ಹೊರತಳ್ಳುವ ತಂತ್ರಜ್ಞಾನ

ಉದ್ಯೋಗಗಳು ಕುಸಿತ ಕಂಡ ಕಾರಣಗಳಲ್ಲಿ, ನಿರ್ದಿಷ್ಟವಾಗಿ ಎರಡು ಎದ್ದು ಕಾಣುತ್ತವೆ. ಮೊದಲನೆಯದು, ಬಜೆಟ್ ಹಂಚಿಕೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಮೇಲೆ ಮಾಡಿದ ಶೇ. 5ರಷ್ಟು ಕಡಿತ. ಈ ಕಡಿತದ ಜೊತೆಗೆ, ಹಿಂದಿನ ಕೂಲಿಯ ಬಾಬ್ತು ಅದಾಗಲೇ ಪಾವತಿಸಬೇಕಿದ್ದ 10,000 ಕೋಟಿ ರೂಪಾಯಿಗಳ ಬಾಕಿಯೂ ಸೇರಿಕೊಂಡು, ಹಣಕಾಸಿನ ದೃಷ್ಟಿಯಿಂದ ಯೋಜನೆಯನ್ನು ನಿತ್ರಾಣಗೊಂಡಿತು. ಇದು ಉದ್ಯೋಗದ ಮೇಲಿನ ಬೇಡಿಕೆ ತಗ್ಗುವ ಕಾರಣವಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ಹಕ್ಕು-ಆಧರಿತ ಮತ್ತು ಬೇಡಿಕೆ-ಚಾಲಿತ ಸ್ವರೂಪದ ಉದ್ಯೋಗ ಖಾತರಿ ಯೋಜನೆಯನ್ನು ಉದ್ದೇಶಪೂರ್ವಕವಾಗಿ ಅತಿ ಕಡಿಮೆ ಹಣ ಒದಗಿಸುವ ಮೂಲಕ ನಾಶಪಡಿಸಲಾಗಿದೆ. ಯಾವುದೇ ಒಂದು ವರ್ಷದಲ್ಲಿ ಯೋಜನೆಗಾಗಿ ಮೀಸಲಿಟ್ಟ ಹಣವು ಸಾಕಾಗುವಷ್ಟು ಇಲ್ಲದ ಕಾರಣದ ಮೇಲೆ ಕೂಲಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಅಥವಾ ಅದನ್ನು ಬಾಕಿ ಉಳಿದಿರುವ ಕೂಲಿಯನ್ನು ಪಾವತಿಸಲು ಬಳಸುವುದರಿಂದ, ಕೆಲಸದ ಮೇಲಿನ ಬೇಡಿಕೆಯು ಈಡೇರದೇ ಉಳಿಯುತ್ತದೆ ಅಥವಾ ಆ ವರ್ಷದಲ್ಲಿ ಬೇಡಿಕೆ ಕಡಿತಗೊಳ್ಳುತ್ತದೆ. ಹಾಗಾಗಿ, ಲಭ್ಯವಾಗುವ ಹಣ ಕಡಿಮೆಯಾಗುವುದರ ಪರಿಣಾಮವಾಗಿ  ಯೋಜನೆ ನಿರ್ಬಂಧಿತಗೊಳ್ಳುತ್ತದೆ. ವಾಸ್ತವವಾಗಿ ಸಂಭವಿಸಿರುವುದು ಇದುವೇ.

ಉದ್ಯೋಗ ಖಾತರಿ ಯೋಜನೆಯ ಪ್ರಕರಣದಲ್ಲಿಯೂ ಸಹ “ಭ್ರಷ್ಟಾಚಾರ”ವನ್ನು ನಿರ್ಮೂಲನೆ ಮಾಡುವ ಹೆಸರಿನಲ್ಲಿ ಆಶ್ರಯಿಸಿದ ತಂತ್ರಜ್ಞಾನದ ಪರಿಣಾಮವಾಗಿ ಅಪಾರ ಸಂಖ್ಯೆಯ ದುಡಿಯುವ ಬಡವರ ಹಕ್ಕು ಎಂದು ಪರಿಗಣಿಸಲ್ಪಟ್ಟಿದ್ದನ್ನು ನಿರಾಕರಿಸಲಾಗಿದೆ. ಬಿಜೆಪಿ ಸರ್ಕಾರವು  ಜನರ ಹಕ್ಕುಗಳನ್ನು ಕಸಿದುಕೊಳ್ಳಲು ತಂತ್ರಜ್ಞಾನವನ್ನು ಬಳಕೆಮಾಡಿಕೊಳ್ಳುವ ಕೌಶಲ್ಯವನ್ನು ಕರಗತ ಮಾಡಿಕೊಂಡಿದೆ. ಇದೊಂದು ಒಂದು ಹೊಸ ಆವಿಷ್ಕಾರವೇ ಸರಿ

ಎರಡನೆಯ ಕಾರಣವೆಂದರೆ, “ಭ್ರಷ್ಟಾಚಾರ”ವನ್ನು ತಪ್ಪಿಸುವ ಹೆಸರಿನಲ್ಲಿ ಯೋಜನೆಯ ಕಾರ್ಯವಿಧಾನದಲ್ಲಿ ತಾಂತ್ರಿಕ ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಕೆಲಸಗಾರರನ್ನು ವಾಸ್ತವಿಕವಾಗಿ ಹೊರಗಿಡಲಾಗಿದೆ. ಕೂಲಿ ಪಾವತಿಗಾಗಿ ಆಧಾರ್-ಆಧಾರಿತ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಮೂಲಕ ಮತ್ತು ಆನ್‌ಲೈನ್‌ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಮೂಲಕ, ಅಂದರೆ, ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಹೆಚ್ಚಿನ ಸಂಖ್ಯೆಯ ಕೆಲಸಗಾರರನ್ನು ಯೋಜನೆಯಿಂದ ಹೊರಗಿಡಲಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ಹತ್ತಾರು ಲಕ್ಷ ಮಂದಿ ಮತದಾರರನ್ನು ಹೊರಗಿಟ್ಟ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಹೋಲುವ ವಿದ್ಯಮಾನವನ್ನು ನಾವಿಲ್ಲಿ ಕಾಣುತ್ತೇವೆ. ಚುನಾವಣೆಯ ಪ್ರಕರಣದಲ್ಲಿ, ಮತದಾರರ ಪಟ್ಟಿಯಿಂದ “ನುಸುಳುಕೋರರನ್ನು” ಹೊರಗಿಡುವ ಹೆಸರಿನಲ್ಲಿ, ಆಶ್ರಯಿಸಿದ ತಂತ್ರಜ್ಞಾನದ  ಪರಿಣಾಮವಾಗಿ  ಒಂದು ದೊಡ್ಡ ಸಂಖ್ಯೆಯ ನಾಗರಿಕರ ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯ ಪ್ರಕರಣದಲ್ಲಿಯೂ ಸಹ “ಭ್ರಷ್ಟಾಚಾರ”ವನ್ನು ನಿರ್ಮೂಲನೆ ಮಾಡುವ ಹೆಸರಿನಲ್ಲಿ ಆಶ್ರಯಿಸಿದ ತಂತ್ರಜ್ಞಾನದ ಪರಿಣಾಮವಾಗಿ ಅಪಾರ ಸಂಖ್ಯೆಯ ದುಡಿಯುವ ಬಡವರ ಹಕ್ಕು ಎಂದು ಪರಿಗಣಿಸಲ್ಪಟ್ಟಿದ್ದನ್ನು ನಿರಾಕರಿಸಲಾಗಿದೆ. ಬಿಜೆಪಿ ಸರ್ಕಾರವು (ಅದರ ಒಂದು ಅಂಗವೆಂಬಂತೆ ಭಾರತದ ಚುನಾವಣಾ ಆಯೋಗವು ಕಾರ್ಯನಿರ್ವಹಿಸುತ್ತಿದೆ) ಜನರ ಹಕ್ಕುಗಳನ್ನು ಕಸಿದುಕೊಳ್ಳಲು ತಂತ್ರಜ್ಞಾನವನ್ನು ಬಳಕೆಮಾಡಿಕೊಳ್ಳುವ ಕೌಶಲ್ಯವನ್ನು ಕರಗತ ಮಾಡಿಕೊಂಡಿದೆ. ಇದೊಂದು ಒಂದು ಹೊಸ ಆವಿಷ್ಕಾರವೇ ಸರಿ!

ವಿಬಿ-ಜಿ ರಾಮ್‌ ಜಿ ಕಾಯ್ದೆಯಲ್ಲಿ ಒದಗಿಸಿರುವ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸು ಹಂಚಿಕೆಯ ಮಾದರಿಯನ್ನು ಕಣ್ಣಮುಂದೆ ತಂದುಕೊಂಡರೆ, ಅದನ್ನು ಅನುಸರಿಸುವುದು ರಾಜ್ಯ ಸರ್ಕಾರಗಳಿಗೆ ಕಷ್ಟಕರವಾಗಿರುತ್ತದೆ ಮತ್ತು “ಭ್ರಷ್ಟಾಚಾರದ ವಿರುದ್ಧ ಹೋರಾಡುವ ಹೆಸರಿನಲ್ಲಿ ದುಡಿಯುವ ಬಡವರ ಮೇಲೆ ತಂತ್ರಜ್ಞಾನದ ಬಳಕೆಯ ಮೂಲಕ ಮಾಡಿದ ದಾಳಿಯನ್ನು ಗಮನಿಸಿದರೆ, ಹೊಸ ಕಾಯ್ದೆಯು ಸಾರ್ವತ್ರಿಕ ವ್ಯಾಪ್ತಿಯನ್ನು ಒದಗಿಸುತ್ತದೆಯೇ, ಅದು 100 ದಿನಗಳ ಬದಲಿಗೆ 125 ದಿನಗಳನ್ನು ಒದಗಿಸುತ್ತದೆಯೇ ಎಂಬುದು ಒಂದು ಅಪ್ರಸ್ತುತ ಟೀಕೆಯಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೆಗನವನ್ನು)ಕಳಚಿ ಹಾಕಲಾಗುತ್ತಿದೆ  ಎಂಬುದೇ ಸರಳ ಸಂಗತಿ.

ಹನ್ನೊಂದು ವರ್ಷಗಳ “ ಕಠಿಣ ಶ್ರಮ”ದ ಫಲ- ಮನರೆಗ ಸಮಾಧಿ

ದಿನಕ್ಕೆ ೧೮ ಗಂಟೆಗಳ ಕೆಲಸ      ಎಂದೂ ರಜೆ ತಗೊಂಡಿಲ್ಲ     ದಿನಕ್ಕೆ ಕೇವಲ ೩ ಗಂಟೆ ನಿದ್ದೆ

ಆತ್ಮಕ್ಕೆ ಚಿರಶಾಂತಿ!

ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ಇದನ್ನೂ ನೋಡಿ : ನನ್ನ ಮತ ಕಸಿಯುವ ಎಸ್‌ಐಆರ್‌ ರದ್ದುಪಡಿಸಿ – ದುಂಡುಮೇಜಿನ ಸಭೆಯಲ್ಲಿ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *