ನೀಲೋತ್ಪಲ ಬಸು
ಚುನಾವಣಾ ಆಯೋಗಕ್ಕೆ, ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಉದ್ದೇಶಕ್ಕೆ ವ್ಯತಿರಿಕ್ತವಾಗಿ, ಪಶ್ಚಿಮ ಬಂಗಾಲದಲ್ಲಿ ಕೈಬಿಡಬಹುದಾದ ಹೆಸರುಗಳ ಒಟ್ಟು ಸಂಖ್ಯೆ ತುಂಬಾ ಚಿಕ್ಕದಾಗಿದೆ ಎಂದು ಕಂಡು ಬಂತು. ಅದರ ಈ ಊಹೆಯು ಯಾವುದೇ ಮೂರ್ತ ಅಧ್ಯಯನವನ್ನು ಆಧರಿಸಿರಲಿಲ್ಲ, ಬದಲಿಗೆ ಅದು ಪಶ್ಚಿಮ ಬಂಗಾಳದ ಪಟ್ಟಿಯಲ್ಲಿ ರೋಹಿಂಗ್ಯಾಗಳು ಸೇರಿದಂತೆ ಒಂದೂವರೆ ಕೋಟಿ ನುಸುಳುಕೋರರಿದ್ದಾರೆ ಎಂದು ಬೊಬ್ಬೆ ಹಾಕುತ್ತಿದ್ದ ರಾಜ್ಯ ಮಟ್ಟದ ಬಿಜೆಪಿ ನಾಯಕರು ಮತ್ತು ಅಮಿತ್ ಷಾರ ಹೇಳಿಕೆಗಳನ್ನು ಆಧರಿಸಿತ್ತು. ಅದಕ್ಕಾಗಿಯೇ “ತಾರ್ಕಿಕ ಸಾಮಂಜಸ್ಯ” ಎಂಬ ಹೊಸ ಆವಿಷ್ಕಾರ, “ನ್ಯಾಯನಿರ್ಣಯದ ಅಡಿಯಲ್ಲಿರುವವರು” ಎಂಬ ಒಂದು ಹೊಸ ವಿಧದ ಸೃಷ್ಟಿ. ಸುಪ್ರಿಂ ಕೋರ್ಟಿನ ಕಲಾಪಗಳಲ್ಲಿ ಸುಮಾರು 91 ಲಕ್ಷ ಮತದಾರರ, ಅಂದರೆ ಒಟ್ಟು ಮತದಾರರಲ್ಲಿ ಶೇಕಡಾ 12 ರಷ್ಟು ಹೆಸರುಗಳನ್ನು ಕೈಬಿಡುವುದಕ್ಕೆ ಮಂಜೂರಾತಿಯ ಮುದ್ರೆ! ಅದೇ ವೇಳೆಗೆ ಲೋಕಸಭಾಧ್ಯಕ್ಷರು ಮತ್ತು ರಾಜ್ಯಸಭಾಧ್ಯಕ್ಷರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಲೋಕಸಭೆಯ 123 ಸದಸ್ಯರು ಮತ್ತು ರಾಜ್ಯಸಭೆಯ 60 ಸದಸ್ಯರು ಮಂಡಿಸಿದ್ದ ಮಹಾಭಿಯೋಗ ನಿರ್ಣಯವನ್ನು ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸದೆ ಸಾರಾಸಗಟು ವಜಾಗೊಳಿಸಿದರು ಎಂಬುದೂ ಗಮನಾರ್ಹ. ಎಸ್‌ಐಆರ್
ಸ್ವಾತಂತ್ರ್ಯ ಹೋರಾಟದ ಚೈತನ್ಯವನ್ನು ವಾಸ್ತವಕ್ಕಿಳಿಸುವಲ್ಲಿ ಭಾರತೀಯ ಸಂವಿಧಾನ ಮತ್ತು ಸಾಂವಿಧಾನಿಕ ಯೋಜನೆಯಲ್ಲಿ ನ್ಯಾಯಾಂಗದ ಪಾತ್ರವನ್ನು ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡಿದ ಯಾರಿಗಾದರೂ, ಸುಪ್ರೀಂ ಕೋರ್ಟ್‌ನಿಂದ ಬಂದಿರುವ ಮಾತು ಆಘಾತಕಾರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್))ಯಿಂದ ಎದ್ದು ಬಂದಿರುವ ಪ್ರಶ್ನೆಗಳನ್ನು ಪರೀಕ್ಷಿಸುತ್ತಿದ್ದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಭಾಗವಾಗಿದ್ದ ನ್ಯಾಯಾಧೀಶರಲ್ಲಿ ಒಬ್ಬರು, “ಈ ಚುನಾವಣೆಯಲ್ಲಿ ಯಾರಾದರೂ ಮತ ಚಲಾಯಿಸಲು ಸಾಧ್ಯವಾಗದಿದ್ದರೆ, ಅವರಿಗೆ ಆ ಹಕ್ಕನ್ನು ಶಾಶ್ವತವಾಗಿ ವಂಚಿತಗೊಳಿಸಬಹುದು ಎಂದರ್ಥವೇ?” ಎಂದರು. ಸಂವಿಧಾನದಲ್ಲಿ ಮತ್ತು ಅದೇ ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳಲ್ಲಿ ಒಂದು ಸಾಂವಿಧಾನಿಕ ಹಕ್ಕಾಗಿ ಗುರುತಿಸಲ್ಪಟ್ಟ ಮತದಾನದ ಹಕ್ಕಿನ ಇಂತಹ ʼಸೃಜನಶೀಲʼ ವ್ಯಾಖ್ಯಾನವು ವಿಲಕ್ಷಣವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮತದಾನದ ಹಕ್ಕನ್ನು ಪೋಸ್ಟ್‌ಡೇಟೆಡ್ ಚೆಕ್‌ನಂತೆ ಪರಿಗಣಿಸಬಹುದು, ಅದನ್ನು ಅಗತ್ಯವು ಕಳೆದುಹೋದಾಗ ಮಾತ್ರ ನಗದು ಮಾಡಬಹುದಾದದ್ದು ಎಂದು ಅರ್ಥವೇ?
ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಪದೇ ಪದೇ ಮತ್ತು ದೀರ್ಘವಾಗಿ ಟಿಪ್ಪಣಿ ಮಾಡಿದ್ದೇವೆ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ. ಈ ವಿಷಯದ ಕುರಿತ ಸುಪ್ರೀಂ ಕೋರ್ಟ್‌ನ ಕಲಾಪಗಳು ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಅರ್ಹತೆಗೆ ಪರದೆ ಎಳೆದಿವೆ. ಆದರೆ ಈ ಬಗ್ಗೆ ಯಾವುದೇ ಅಂತಿಮ ನಿರ್ಣಯಕ್ಕೆ ಬರುವ ಬದಲು, ಇದು ಒಂದು ಮೂಲಭೂತ ಸಾಂವಿಧಾನಿಕ ಪ್ರಶ್ನೆಯ ಮೇಲೆ ಅತಿ ದೊಡ್ಡ ವಿವಾದವನ್ನು ಬಡಿದೆಬ್ಬಿಸುತ್ತದೆ. ಮೇಲೆ ಹೇಳಿದ ನ್ಯಾಯಾಧೀಶರ ಅಭಿಪ್ರಾಯವನ್ನು ಮುಂದಕ್ಕೊಯ್ದು, ಏಪ್ರಿಲ್ 6 ರಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಅಸಹ್ಯಕರ ಸ್ವರೂಪಕ್ಕೆ ತನ್ನ ಮಂಜೂರಾತಿಯನ್ನು ನೀಡಿತು. ಆರಂಭದಲ್ಲಿ ಹಾಲಿ ಮತದಾರರ ಪಟ್ಟಿಯಿಂದ 60 ಲಕ್ಷಕ್ಕೂ ಹೆಚ್ಚು ಮತದಾರರನ್ನು ಕೈಬಿಟ್ಟ ನಂತರ, ಭಾರತದ ಚುನಾವಣಾ ಆಯೋಗ “ತಾರ್ಕಿಕ ಸಾಮಂಜಸ್ಯ”ದ ಕೊರತೆಯನ್ನು ಕಂಡುಹಿಡಿಯುವ ಅತ್ಯಂತ ವಿವಾದಾತ್ಮಕ ಹಾದಿಯನ್ನು ಅನುಸರಿಸಲು ಪಶ್ಚಿಮ ಬಂಗಾಳವನ್ನೇ ಆರಿಸಿಕೊಂಡಿತು. ಒಂದು ತೀವ್ರವಾದ ಮನೆ-ಮನೆ ಭೇಟಿಗಳ ಭೌತಿಕ ವಿಧಾನವನ್ನು ಆಶ್ರಯಿಸುವುದಕ್ಕೆ ವ್ಯತಿರಿಕ್ತವಾಗಿ, ಇದು ಹೆಸರುಗಳ ಮ್ಯಾಪಿಂಗ್ ಆಗದ ಅಂದರೆ ತಾಳೆಯಾಗದ ಮತದಾರರ ಸಾಫ್ಟ್‌ವೇರ್ ಚಾಲಿತ, ಅಲ್ಗಾರಿದಮ್ ಸಿದ್ಧಪಡಿಸಿಕೊಟ್ಟ ಪಟ್ಟಿಯ ಮರುಪರಿಶೀಲನೆಯ ಕಸರತ್ತು ಆಗಿ ಬಿಟ್ಟಿತು.
ಹೊಸ ಆವಿಷ್ಕಾರ-ಹೊಸ ವಿಧ!
ಮತದಾನದ ಹಕ್ಕನ್ನು ಎಷ್ಟೊಂದು ಪ್ರಮಾಣದಲ್ಲಿ ಕಸಿದುಕೊಳ್ಳಲಾಗಿದೆ ಎಂಬುದನ್ನು ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ, ಅಂದರೆ 2002-03 ರ ಮತದಾರರ ಪಟ್ಟಿಯೊಂದಿಗೆ ತಾಳೆಯಾಗದ 60 ಲಕ್ಷಕ್ಕೂ ಹೆಚ್ಚು ಜನರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಲಾಯಿತು ಎಂಬುದರಿಂದಲೇ ಅಂದಾಜು ಮಾಡಬಹುದು. ಆದರೆ, ಚುನಾವಣಾ ಆಯೋಗಕ್ಕೆ, ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಉದ್ದೇಶಕ್ಕೆ ವ್ಯತಿರಿಕ್ತವಾಗಿ, ಕೈಬಿಡಬಹುದಾದ ಹೆಸರುಗಳ ಒಟ್ಟು ಸಂಖ್ಯೆ ತುಂಬಾ ಚಿಕ್ಕದಾಗಿದೆ ಎಂದು ಕಂಡು ಬಂತು. ಅದರ ಈ ಊಹೆಯು ಯಾವುದೇ ಮೂರ್ತ ಅಧ್ಯಯನವನ್ನು ಆಧರಿಸಿರಲಿಲ್ಲ, ಬದಲಿಗೆ ಅದು ಪಶ್ಚಿಮ ಬಂಗಾಳದ ಪಟ್ಟಿಯಲ್ಲಿ ರೋಹಿಂಗ್ಯಾಗಳು ಸೇರಿದಂತೆ ಒಂದೂವರೆ ಕೋಟಿ ನುಸುಳುಕೋರರಿದ್ದಾರೆ ಎಂದು ಬೊಬ್ಬೆ ಹಾಕುತ್ತಿದ್ದ ರಾಜ್ಯ ಮಟ್ಟದ ಬಿಜೆಪಿ ನಾಯಕರು ಮತ್ತು ಅಮಿತ್ ಷಾರ ಹೇಳಿಕೆಗಳನ್ನು ಆಧರಿಸಿತ್ತು. ಅದಕ್ಕಾಗಿಯೇ “ತಾರ್ಕಿಕ ಸಾಮಂಜಸ್ಯ”ದ ಈ ಹೊಸ ಆವಿಷ್ಕಾರ. ಈ ಹೊಸ ಅಡ್ಡಗೋಲು ದಾಟಲಾರರು ಎಂದು ಶಂಕಿಸಲಾದವರನ್ನು ‘ಅಂಡರ್ ಅಡ್ಜುಡಿಕೇಶನ್’ ( ನ್ಯಾಯನಿರ್ಣಯದ ಅಡಿಯಲ್ಲಿರುವವರು) ಎಂಬ ಒಂದು ಹೊಸ ವಿಧಕ್ಕೆ ಸೇರಿಸಲಾಯಿತು. ಇದು ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ತಮ್ಮನ್ನು ಯಶಸ್ವಿಯಾಗಿ ಸೇರಿಸಿಕೊಳ್ಳುವ ಮೂಲಕ ಮೊದಲ ಹಂತದ ಪರಿಶೀಲನೆಯನ್ನು ಪೂರ್ಣಗೊಳಿಸಿದ ಮತದಾರರ ಒಂದು ವಿಭಾಗ ಎಂಬುದು ಸ್ಪಷ್ಟ. ಅಂತಹ ಸಂದರ್ಭಗಳಲ್ಲಿ, ‘ಅಂಡರ್ ಅಡ್ಜುಡಿಕೇಶನ್’ ಎಂಬ ಈ ವಿಧದಲ್ಲಿ 60 ಲಕ್ಷ ಮತದಾರರು ಇದ್ದಾರೆ ಎಂಬುದು ಮತದಾರರ ಹೆಸರುಗಳನ್ನು ತೆಗೆದುಹಾಕುವ ಪೂರ್ವಯೋಜನೆ ಎಂಬುದರ ಸೂಚನೆ.
”ತಾರ್ಕಿಕ ಸಾಮಂಜಸ್ಯ”ದ ಹೊಸ ಅಡ್ಡಗೋಲು ದಾಟಲಾರರು ಎಂದು ಶಂಕಿಸಲಾದವರನ್ನು ‘ಅಂಡರ್ ಅಡ್ಜುಡಿಕೇಶನ್’ (ನ್ಯಾಯನಿರ್ಣಯದ ಅಡಿಯಲ್ಲಿರುವವರು) ಎಂಬ ಒಂದು ಹೊಸ ವಿಧಕ್ಕೆ ಸೇರಿಸಲಾಯಿತು. ಈ ವಿಧದಲ್ಲಿ 60 ಲಕ್ಷ ಮತದಾರರು ಇದ್ದಾರೆ ಎಂಬುದು ಮತದಾರರ ಹೆಸರುಗಳನ್ನು ತೆಗೆದುಹಾಕುವ ಪೂರ್ವಯೋಜನೆ ಎಂಬುದರ ಸೂಚನೆ…..”ನ್ಯಾಯನಿರ್ಣಯದ ಅಡಿಯಲ್ಲಿ” ವರ್ಗೀಕರಿಸುವ ಇಡೀ ಪ್ರಕ್ರಿಯೆಯು ಎಷ್ಟು ಬೇಕಾಬಿಟ್ಟಿಯಾಗಿದೆ ಎಂಬುದು ಅದೇ ದಿನ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಹ್ತಾಬ್ ಶೇಖ್ ಅವರನ್ನು ಮತ್ತೆ ಪಟ್ಟಿಗೆ ಸೇರಿಸಿಕೊಳ್ಳುವುದನ್ನು ಖಚಿತಪಡಿಸಿದಾಗ ಸ್ಪಷ್ಟವಾಯಿತು.

ವ್ಯಂಗ್ಯಚಿತ್ರ: ಪೊನ್ನಪ್ಪ @ ಫೇಸ್‌ಬುಕ್
ಇದನ್ನೂ ಓದಿ :ಅಧ್ಯಕ್ಷ ಟ್ರಂಪ್ ಅಬ್ಬರದ ಹೊರತಾಗಿಯೂ ಪಶ್ಚಿಮ ಏಷ್ಯಾದಲ್ಲಿ ಎರಡು ವಾರಗಳ ಕದನ ವಿರಾಮ
ಸಾಂವಿಧಾನಿಕ ವಿಡಂಬನೆ
ಏಪ್ರಿಲ್ 6 ರ ವಿಚಾರಣೆಯ ಸಮಯದಲ್ಲಿ, ಸರಿಸುಮಾರು 27 ಲಕ್ಷ ಮತದಾರರು ದೋಷಮುಕ್ತರಾಗಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ವಕೀಲರು ಪ್ರಕಟಿಸಿದರು. ಇದಕ್ಕೂ ಮೊದಲು, ಮಾರ್ಚ್ ಮೂರನೇ ವಾರದಲ್ಲಿ, ಸುಪ್ರೀಂ ಕೋರ್ಟ್ ಇನ್ನೂ ಪಟ್ಟಿಗೆ ಮರಳಲು ಸಾಧ್ಯವಾಗದವರಿಗೆ ಪರಿಹಾರವನ್ನು ಪಡೆಯಲು ನ್ಯಾಯಾಂಗ ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಆದೇಶಿಸಿತ್ತು. ಆದರೆ, ಈ ನ್ಯಾಯಮಂಡಳಿಗಳ ಅಧಿಸೂಚನೆ ಹೊರಡಿಸಿದ್ದರೂ, ಅವು ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದು ಅದೇ ವಿಚಾರಣೆಯ ಸಮಯದಲ್ಲಿ ಅಧಿಕೃತವಾಗಿ ಒಪ್ಪಿಕೊಳ್ಳಲಾಯಿತು. ‘ಅಂಡರ್ ಅಡ್ಜುಡಿಕೇಶನ್’ ಪಟ್ಟಿಯಲ್ಲಿರುವವರು, ಬಹಳಷ್ಟು ಕಷ್ಟದಿಂದ, ತಮ್ಮ ದಿನಗೂಲಿಗಳನ್ನು ಕಳೆದಕೊಂಡು ವಿಚಾರಣಾ ಕೇಂದ್ರಗಳನ್ನು ತಲುಪಲು ಬಹಳ ದೂರ ಪ್ರಯಾಣಿಸಿದ್ದರು. ಆದರೂ, ಅವರ ಹೆಸರುಗಳನ್ನು ಮತ್ತೆ ಸೇರಿಸಲು ಸಾಧ್ಯವಾಗಲಿಲ್ಲ. ಏಪ್ರಿಲ್ 6 ರ ಕಲಾಪಗಳು ಚುನಾವಣಾ ಆಯೋಗಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಹಾಗೆಯೇ ಇಡಲು, ಸುಮಾರು 91 ಲಕ್ಷ ಮತದಾರರ, ಅಂದರೆ ಒಟ್ಟು ಮತದಾರರಲ್ಲಿ ಶೇಕಡಾ 12 ರಷ್ಟು ಹೆಸರುಗಳನ್ನು ಕೈಬಿಡುವುದಕ್ಕೆ ಮಂಜೂರಾತಿಯ ಮುದ್ರೆಯೊತ್ತಿದವು.. ಇದು ಒಂದು ದೊಡ್ಡ ಸಂಖ್ಯೆ ಎಂದು ನ್ಯಾಯಾಲಯವೂ ಒಪ್ಪಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಆದರೆ, ಆಘಾತಕಾರಿ ಮತ್ತು ನೋವಿನ ಸಂಗತಿಯೆಂದರೆ, ಸುಪ್ರೀಂ ಕೋರ್ಟ್ ಪರಿಷ್ಕರಣೆಗೆ ಬದಲಾಗಿ ಮತದಾನದ ಹಕ್ಕನ್ನು ಸಾಮೂಹಿಕವಾಗಿ ಕಸಿದುಕೊಳ್ಳುವ ಚುನಾವಣಾ ಆಯೋಗದ ಪೂರ್ವಯೋಜಿತ ಕಸರತ್ತಿಗಿಂತ ಮತದಾರರ ಸಾಂವಿಧಾನಿಕ ಹಕ್ಕಿಗೆ ಆದ್ಯತೆ ನೀಡಲಿಲ್ಲ,
ನೂರು ಅಪರಾಧಿಗಳನ್ನು ಬಿಡುಗಡೆ ಮಾಡಲಿಕ್ಕಾಗಿ ಒಬ್ಬ ನಿರಪರಾಧಿಯನ್ನು ಸಹ ಬಲಿಕೊಡಲು ಸಾಧ್ಯವಿಲ್ಲ ಎಂಬ ಸ್ಥಾಪಿತ ನ್ಯಾಯಶಾಸ್ತ್ರವನ್ನು ಮಾನ್ಯ ಮಾಡುವ ದೇಶದಲ್ಲಿ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಸರುಗಳನ್ನು ಕೈಬಿಡುವುದು ಒಂದು ಸಂಪೂರ್ಣ ಸಾಂವಿಧಾನಿಕ ವಿಡಂಬನೆಯಾಗಿದೆ. “ನ್ಯಾಯನಿರ್ಣಯದ ಅಡಿಯಲ್ಲಿ” ವರ್ಗೀಕರಿಸುವ ಇಡೀ ಪ್ರಕ್ರಿಯೆಯು ಎಷ್ಟು ಬೇಕಾಬಿಟ್ಟಿಯಾಗಿದೆ ಎಂಬುದು ಅದೇ ದಿನ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಹ್ತಾಬ್ ಶೇಖ್ ಅವರನ್ನು ಮತ್ತೆ ಪಟ್ಟಿಗೆ ಸೇರಿಸಿಕೊಳ್ಳುವುದನ್ನು ಖಚಿತಪಡಿಸಿದಾಗ ಸ್ಪಷ್ಟವಾಯಿತು. ಕಲ್ಕತ್ತಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಆತನ ದಾಖಲೆಗಳ ಮೌಲ್ಯಮಾಪನಕ್ಕಾಗಿ ವಿಶೇಷ ವಿಚಾರಣೆ ನಡೆಸಿದರು. ಶೇಖ್ ಅವರು ಎಸ್‌ಐಆರ್ ನ ಭಾಗವಾಗಿ ತಮ್ಮ ಪಾಸ್‌ಪೋರ್ಟ್ ಅನ್ನು ಸಲ್ಲಿಸಿದರು. ಆ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಚುನಾವಣಾ ಆಯೋಗ ನ್ಯಾಯನಿರ್ಣಯದ ಸಮಯದಲ್ಲಿ ಅವರ ಹೆಸರನ್ನು ಕೈಬಿಡಲು ಕಾರಣವಾದ ಸಂದರ್ಭಗಳನ್ನು ಸಲ್ಲಿಸದಿದ್ದುದು ‘ತಾಂತ್ರಿಕ ಕಾರಣ”ಗಳಿಂದ ಎಂದು ಉಲ್ಲೇಖಿಸಿದೆ ಎಂದು ತಮ್ಮ ಆದೇಶದಲ್ಲಿ ಹೇಳಿದರು. ಅಂತಿಮವಾಗಿ ಪಾಸ್‌ಪೋರ್ಟ್ ಸಾಕಷ್ಟು ಪುರಾವೆ ಎಂದು ತೀರ್ಮಾನಿಸಲಾಯಿತು ಮತ್ತು ಶೇಖ್ ಅವರನ್ನು ಮಾನ್ಯ ಮತದಾರರಾಗಿ ಸೇರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಯಿತು. ಇದು ಇಂತಹ ನಿಕೃಷ್ಟ ಕ್ರಮಗಳು ಇಡೀ ಪ್ರಕ್ರಿಯೆಯನ್ನು ನಿಜವಾಗಿಯೂ ಹಾಳುಮಾಡಿವೆ ಎಂಬುದಕ್ಕೆ ನಿರ್ಣಾಯಕ ಪುರಾವೆಯಾಗಿದೆ.
ಆಘಾತಕಾರಿ ಮತ್ತು ನೋವಿನ ಸಂಗತಿಯೆಂದರೆ, ಸುಪ್ರೀಂ ಕೋರ್ಟ್ ಪರಿಷ್ಕರಣೆಗೆ ಬದಲಾಗಿ ಮತದಾನದ ಹಕ್ಕನ್ನು ಸಾಮೂಹಿಕವಾಗಿ ಕಸಿದುಕೊಳ್ಳುವ ಚುನಾವಣಾ ಆಯೋಗದ ಪೂರ್ವಯೋಜಿತ ಕಸರತ್ತಿಗಿಂತ ಮತದಾರರ ಸಾಂವಿಧಾನಿಕ ಹಕ್ಕಿಗೆ ಆದ್ಯತೆ ನೀಡಲಿಲ್ಲ, ನೂರು ಅಪರಾಧಿಗಳನ್ನು ಬಿಡುಗಡೆ ಮಾಡಲಿಕ್ಕಾಗಿ ಒಬ್ಬ ನಿರಪರಾಧಿಯನ್ನು ಸಹ ಬಲಿಕೊಡಲು ಸಾಧ್ಯವಿಲ್ಲ ಎಂಬ ಸ್ಥಾಪಿತ ನ್ಯಾಯಶಾಸ್ತ್ರವನ್ನು ಮಾನ್ಯ ಮಾಡುವ ದೇಶದಲ್ಲಿ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಸರುಗಳನ್ನು ಕೈಬಿಡುವುದು ಒಂದು ಸಂಪೂರ್ಣ ಸಾಂವಿಧಾನಿಕ ವಿಡಂಬನೆಯಾಗಿದೆ.
ಅಪಾರದರ್ಶಕತೆ – ವಿಶಿಷ್ಟ ಲಕ್ಷಣ
ಅಪಾರದರ್ಶಕತೆ ಈ ಇಡೀ ಕಸರತ್ತಿನ ವಿಶಿಷ್ಟ ಲಕ್ಷಣವಾಗಿದೆ ಎಂಬುದು “ನ್ಯಾಯನಿರ್ಣಯದ ಅಡಿಯಲ್ಲಿ”” ಪಟ್ಟಿಯನ್ನು ಯಂತ್ರ-ಓದಲಾರದ ಪಿಡಿಎಫ್ ಆವೃತ್ತಿಗಳಲ್ಲಿ ತಯಾರಿಸಲಾಗಿತ್ತು , ಆ ಮೂಲಕ ಫಲಿತಾಂಶಗಳನ್ನು ವಿಶ್ಲೇಷಿಸಲು ಸಾಧ್ಯವಾಗದಂತೆ ಮಾಡಲಾಗಿತ್ತು ಎಂಬ ಸಂಗತಿಯಿಂದಲೇ ಸ್ಪಷ್ಟವಾಗುತ್ತದೆ. ಗೌರವಾನ್ವಿತ ಫ್ಯಾಕ್ಟ್ ಚೆಕ್ ತಾಣವಾದ , ʼಆಲ್ಟ್ ನ್ಯೂಸ್ʼ ಕೋಲ್ಕತ್ತಾದ ಎರಡು ವಿಧಾನಸಭಾ ಕ್ಷೇತ್ರಗಳನ್ನು ಅಧ್ಯಯನ ಮಾಡಿತು ಮತ್ತು ಮ್ಯಾಪಿಂಗ್ ಮಾಡಲು ಸಾಧ್ಯವಾಗದವರ ಆರಂಭಿಕ ಪಟ್ಟಿಗೆ ವಿರುದ್ಧವಾಗಿ, ಕೈಬಿಡಲಾದ ಮುಸ್ಲಿಮ್ ಹೆಸರುಗಳ ಅನುಪಾತ ಬಹಳ ಹೆಚ್ಚಿದೆ ಎಂದು ಕಂಡುಹಿಡಿದಿದೆ. ಸಂಶೋಧಕರು ಪಿಡಿಎಫ್ ಫೈಲ್‌ಗಳನ್ನು ತತ್ಪರತೆಯಿಂದ ಡಿಜಿಟಲೀಕರಣಗೊಳಿಸಿದರು ಮತ್ತು ವಿಶ್ಲೇಷಣೆಯನ್ನು ಕೈಗೊಳ್ಳಲು ಡಿಜಿಟಲ್ ಆವೃತ್ತಿಗಳನ್ನು ಪುನರ್ನಿರ್ಮಿಸಿದರು ಎಂದು ವೆಬ್‌ಸೈಟ್ ಹೇಳಿಕೊಂಡಿದೆ. ಹಲವಾರು ಅಧ್ಯಯನಗಳು ಕೂಡ ಈ ಸ್ಪಷ್ಟವಾಗಿಯೂ ಪೂರ್ವಕಲ್ಪಿತ ಪ್ರಕ್ರಿಯೆಯ ಬಿರುಕುಗಳಲ್ಲಿ ಬಿದ್ದವರಲ್ಲಿ ಹೆಚ್ಚಿನವರು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳಿಂದ ಬಳಲುತ್ತಿರುವವರು ಎಂಬ ಅದೇ ತೀರ್ಮಾನಕ್ಕೆ ಬಂದಿವೆ. ಅದರೊಳಗೆ ಸಹ, ಮತದಾನದ ಹಕ್ಕನ್ನು ಕಳೆದುಕೊಂಡಿರುವವರಲ್ಲಿ ಮುಸ್ಲಿಮರು ಮತ್ತು ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.
ಏಪ್ರಿಲ್ 6 ರ ಅದೇ ದಿನದಂದು, ಲೋಕಸಭಾಧ್ಯಕ್ಷರು ಮತ್ತು ರಾಜ್ಯಸಭಾಧ್ಯಕ್ಷರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ದೋಷಾರೋಪಣೆ ನಿರ್ಣಯವನ್ನು ವಜಾಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಲೋಕಸಭೆಯ 123 ಸದಸ್ಯರು ಮತ್ತು ರಾಜ್ಯಸಭೆಯ 60 ಸದಸ್ಯರು ಮಂಡಿಸಿದ್ದ ಮಹಾಭಿಯೋಗ ನಿರ್ಣಯವನ್ನು ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸದೆ ಸಾರಾಸಗಟು ವಜಾಗೊಳಿಸಲಾಯಿತು.
“ಟ್ರಿಬ್ಯೂನಲ್‌ಗಳು ವಿಚಾರಣೆ ಮಾಡುತ್ತವೆ,ಅದನ್ನು ತರಾತುರಿಯಲ್ಲಿ ಮಾಡಬೇಕೆಂದೇನೂ
ನಾವು ಹೇಳಬಯಸುವುದಿಲ್ಲ”-ಪಶ್ಚಿಮ ಬಂಗಾಲ ಎಸ್‌ಐಆರ್ ಬಗ್ಗೆ ಸುಪ್ರಿಂ ಕೋರ್ಟ್
ಇದನ್ನೂ ನೋಡಿ :ಇಂದಿಗೆ ಅಂಬೇಡ್ಕರ್ ರಾಡಿಕಲ್ ಚಿಂತನೆಗಳು

“ಏನು , ನಾವು ತರಾತುರಿ ?”
ವ್ಯಂಗ್ಯಚಿತ್ರ: ಆರ್. ಪ್ರಸಾದ್ @ ಫೇಸ್‌ಬುಕ್
