ಅಂಬೂರು: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ (DMK) ನೇತೃತ್ವದ ಮೈತ್ರಿ ಭಾರೀ ಜಯ ಸಾಧಿಸಲಿದೆ ಎಂಬ ವಿಶ್ವಾಸವನ್ನು ರಾಜ್ಯಸಭಾ ಸದಸ್ಯ ಹಾಗೂ ದೇಶಿಯಾ ಮುರ್ಪೊಕ್ಕು ದ್ರಾವಿಡ ಕಳಘಂ (DMDK) ಖಜಾಂಚಿ ಎಲ್.ಕೆ. ಸುಧೀಶ್ ವ್ಯಕ್ತಪಡಿಸಿದ್ದಾರೆ. ಮೈತ್ರಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಭವಿಷ್ಯ ನುಡಿದರುವುದಾಗಿ newindianexpress ವರದಿ ಮಾಡಿದೆ. ಕ್ಷೇತ್ರ
ಇದನ್ನಷ್ಟೇ ಅಲ್ಲದೆ, ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಘಂ (AIADMK) ಸಂಪೂರ್ಣ ಸೋಲು ಅನುಭವಿಸಲಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ತಿರುಪಟ್ಟೂರು ಜಿಲ್ಲೆಯ ಅಂಬೂರಿನ ಬಳಿ ನಡೆದ ರಮಝಾನ್ ವಿಶೇಷ ನಮಾಜ್‌ನಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧೀಶ್, “DMDK ಮೈತ್ರಿಗೆ ಸೇರುವುದಕ್ಕೂ ಮುನ್ನವೇ ಡಿಎಂಕೆ ಸುಮಾರು 200 ಕ್ಷೇತ್ರಗಳಲ್ಲಿ ಗೆಲ್ಲುವ ಸ್ಥಿತಿಯಲ್ಲಿತ್ತು. ಈಗ ನಮ್ಮ ಬೆಂಬಲದಿಂದ ಆ ಸಂಖ್ಯೆಯನ್ನು ಸುಲಭವಾಗಿ ದಾಟಲಿದೆ. AIADMK ಈ ಚುನಾವಣೆಯಲ್ಲಿ ಸಂಪೂರ್ಣ ಸೋಲು ಕಾಣಲಿದೆ,” ಎಂದು ಹೇಳಿದರು.
ಇದನ್ನೂ ಓದಿ: ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಉಳಿಸಲು ದೇಶವ್ಯಾಪಿ ಚಳುವಳಿ: ಮೇ 15 ರಂದು ಮುಷ್ಕರ
ರಮಝಾನ್ ಪ್ರಾರ್ಥನೆಗೆ 30,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಬಳಿಕ ಸುಧೀಶ್ ಮುಸ್ಲಿಂ ಸಮುದಾಯದ ಸದಸ್ಯರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಂಬೂರು ಶಾಸಕರಾದ ವಿ. ವಿಲ್ವನಾಥನ್ ಹಾಗೂ ಡಿಎಂಕೆ ನಾಯಕರು ಉಪಸ್ಥಿತರಿದ್ದರು.
ಸೀಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, DMDK ಮತ್ತು ಡಿಎಂಕೆ ನಡುವಿನ ಚರ್ಚೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿಸಿದರು. ಮಾತುಕತೆ ಪೂರ್ಣಗೊಂಡ ಬಳಿಕ ಅಂತಿಮ ತೀರ್ಮಾನವನ್ನು ಪಕ್ಷದ ನಾಯಕತ್ವ ಪ್ರಕಟಿಸಲಿದೆ ಎಂದರು. ನಟ ವಿಜಯ್ ಸ್ಥಾಪಿಸಿದ ತಮಿಳಗ ವೆಟ್ರಿ ಕಳಘಂ (TVK) ಪಕ್ಷದ ಪ್ರಭಾವ ಕುರಿತು ಕೇಳಿದ ಪ್ರಶ್ನೆಗೆ, ಆ ಪಕ್ಷವು ಚುನಾವಣೆಯ ಮೇಲೆ ಕೆಲವು ಮಟ್ಟಿನ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡರು.
ಭಾರತೀಯ ಚುನಾವಣಾ ಆಯೋಗ ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಏಕ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ ಎಂದು ಘೋಷಿಸಿದೆ. ಒಟ್ಟು 234 ಸದಸ್ಯರ ವಿಧಾನಸಭೆಗೆ ಈ ಚುನಾವಣೆ ನಡೆಯಲಿದ್ದು, ಪ್ರಸ್ತುತ ಅವಧಿ ಮೇ 10ರಂದು ಅಂತ್ಯಗೊಳ್ಳಲಿದೆ.
ಈ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿ ಮತ್ತು ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿ (NDA) ನಡುವೆ ಮುಖ್ಯ ಪೈಪೋಟಿ ನಡೆಯಲಿದೆ. ಎಐಎಡಿಎಂಕೆ ಜೊತೆ ಬಿಜೆಪಿ (BJP) ಹಾಗೂ ಪಟಾಳಿ ಮಕ್ಕಳ ಕಚ್ಚಿ (PMK) ಕೂಡ ಕೈಜೋಡಿಸಿದೆ. ನಟ ಕಮಲ್ ಹಾಸನ್ ನೇತೃತ್ವದ ಮಕಲ್ ನೀಡ್ಹಿ ಮಯ್ಯಂ (MNM) ಕೂಡ ಡಿಎಂಕೆ ಜೊತೆ ಸೀಟ್ ಹಂಚಿಕೆ ಕುರಿತಂತೆ ಮಾತುಕತೆ ನಡೆಸುತ್ತಿದ್ದು, ವ್ಯಾಪಕ ಮೈತ್ರಿ ರೂಪಿಸುವ ಯತ್ನ ನಡೆಯುತ್ತಿದೆ.
ಇದನ್ನೂ ನೋಡಿ: ಓದು ಕಾರ್ಯಾಗಾರ | ವಿದ್ಯಾರ್ಥಿಗಳ ಕಣ್ಣಲ್ಲಿ ಕುವೆಂಪು Janashakthi Media
