ಎನ್‍ಎಂ.ಪಿ 2.0: 16.72 ಲಕ್ಷ ಕೋಟಿ ರೂ. ಸಾರ್ವಜನಿಕ ಆಸ್ತಿಗಳ ರಾಷ್ಟ್ರೀಯ ಸುಲಿಗೆಯ ಕರಾಳ ನಕ್ಷೆ- ಸಿ.ಐ.ಟಿ.ಯು. ಉಗ್ರ ಖಂಡನೆ

“ರಾಷ್ಟ್ರದ ಮಾರಾಟ ನಿಲ್ಲಿಸಿ! ಸಾರ್ವಜನಿಕ ಆಸ್ತಿಗಳನ್ನು ಉಳಿಸಿ! NMP 2.0 ರದ್ದಾಗಲಿ!” ಕೋಟಿ
ಭಾರತೀಯ ಕಾರ್ಮಿಕ ವರ್ಗಕ್ಕೆ ಈ ಎನ್‍ಎಂಪಿ  2.0 ಅಗತ್ಯ ಸಾರ್ವಜನಿಕ ಸೇವೆಗಳನ್ನು ಪಡೆಯುವ  ಹಕ್ಕನ್ನು ಕಸಿದುಕೊಳ್ಳುವ ಮತ್ತೊಂದು ಆರ್ಥಿಕ ದಾಳಿ. “ವಿಕಸಿತ ಭಾರತ” ಎಂಬ ಶಬ್ದಾಡಂಬರ ಕಾರ್ಪೊರೇಟ್ ನಿಯಂತ್ರಿತ ಅರ್ಥವ್ಯವಸ್ಥೆಯನ್ನು ಮರೆಮಾಚುವ    ಒಂದು ಟೊಳ್ಳು ಶಬ್ದವಾಗಿದೆ. ಇಂತಹ ಅರ್ಥವ್ಯವಸ್ಥೆಯಲ್ಲಿ  ಸಾರ್ವಜನಿಕರು ಎರಡು ಬಾರಿ ಹಣ ತೆರುತ್ತಾರೆ—ಮೊದಲು ತೆರಿಗೆಗಳ ಮೂಲಕ ಆಸ್ತಿಗಳನ್ನು ನಿರ್ಮಿಸಲು, ನಂತರ ಅದನ್ನು ಬಳಸುವ ಹಕ್ಕಿಗಾಗಿ ಖಾಸಗಿ ಏಕಸ್ವಾಮ್ಯಗಳಿಗೆ ಟೋಲ್‍ ಗಳ ಮೂಲಕ. ಈ ಪೈಪ್‌ಲೈನ್ ಅಂದರೆ ಸಂರಚನಾ ವ್ಯವಸ್ಥೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಆಗ್ರಹಿಸಿರುವ ಸಿಐಟಿಯು ರಾಷ್ಟ್ರೀಯ ಆಸ್ತಿಗಳನ್ನು ಎನ್‍ಎಂಪಿ 2.0 ಎಂಬ ಪರಾವಲಂಬಿಯ ಹಿಡಿತದಿಂದ ರಕ್ಷಿಸಲು ಎಲ್ಲಾ ದುಡಿಮೆಗಾರರು ಹಾಗೂ ನಾಗರಿಕರು ಬೃಹತ್ ಪ್ರತಿರೋಧಕ್ಕೆ ಒಂದುಗೂಡಬೇಕು ಎಂದು ಸಿಐಟಿಯು  ಕರೆ ನೀಡಿದೆ. ಕೋಟಿ

ಫೆಬ್ರವರಿ 23 , 2026ರಂದು ಕೇಂದ್ರ ಹಣಕಾಸು ಮಂತ್ರಿಗಳು ಪ್ರಾರಂಭಿಸಿದ ʻರಾಷ್ಟ್ರೀಯ ನಗದೀಕರಣ ಸಂರಚನಾ ವ್ಯವಸ್ಥೆʼ (National Monetization Pipeline ಎನ್‍ಎಂಪಿ)) 2.0 (ಹಣಕಾಸುವರ್ಷ  2026–2030) ಯೋಜನೆಯನ್ನು ದೇಶದ ಒಂದು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆ ಸಿಐಟಿಯು ಉಗ್ರವಾಗಿ ಖಂಡಿಸಿದೆ ಹಾಗೂ ಅದನ್ನು ಸಂಪೂರ್ಣವಾಗಿ ನಿರಾಕರಿಸುವುದಾಗಿ ಹೇಳಿದೆ. 2025–26ರ ಕೇಂದ್ರ ಬಜೆಟ್‌ನ ಬಳಿಕ ‘ನೀತಿ ಆಯೋಗ’ ಬೆಳೆಸಿರುವ ಈ ಎರಡನೇ ಹಂತವು ಭಾರತದ ಸಾರ್ವಜನಿಕ ಮತ್ತು ಸರ್ಕಾರಿ ವಲಯವನ್ನು ಕಳಚಿ ಹಾಕಿ ರಾಷ್ಟ್ರೀಯ ಆಸ್ತಿಗಳ ವ್ಯವಸ್ಥಿತ ಲೂಟಿಗೆ ಮತ್ತು ಅವುಗಳನ್ನುದೇಶೀಯ ಹಾಗೂ ವಿದೇಶಿ ಏಕಸ್ವಾಮ್ಯ ಖಾಸಗಿ ಕಾರ್ಪೊರೇಟ್‍ಗಳಿಗೆಗಳಿಗೆ ಸಾರಾಸಗಟಾಗಿ ಹಸ್ತಾಂತರಿಸುವ ಕರಾಳ ಬಂಟ -ಬಂಡವಾಳಶಾಹಿ  ನೀಲ ನಕ್ಷೆಯಾಗಿದೆ ಎಂದು ವರ್ಣಿಸಿದೆ.

ಇದಕ್ಕೆ ರೂ. 16.72 ಲಕ್ಷ ಕೋಟಿ ಭಾರೀ ಮೊತ್ತದ ಗುರಿಯನ್ನು ನಿಗದಿಪಡಿಸಿಸಲಾಗಿದೆ. ಮೊದಲ ಅಂದಾಜು ರೂ. 10 ಲಕ್ಷ ಕೋಟಿ ಇದ್ದು, ಅದರಲ್ಲಿ 67% ಹೆಚ್ಚಿಸಲಾಗಿದೆ., ಎನ್‍ಎಂಪಿ 1.0 ಗಿಂತ 2.6 ಪಟ್ಟು ಹೆಚ್ಚಿನ ಪ್ರಮಾಣದ  ಗುರಿ  ಮೋದಿ ಸರಕಾರ ಅಸ್ತಿಗಳ ಸುಲಿಗೆಯನ್ನು ಮೋದಿ ಅಭೂತಪೂರ್ವ ವೇಗದಲ್ಲಿ ನಡೆಸಲಿದೆ ಎಂಬುದರ  ಸಂಕೇತವನ್ನು ನೀಡಿದೆ.ಎನ್‍ಎಂಪಿ ಎನ್‍ಎಂಪಿ 1.0 ಗುರಿಯ 89% ಸಾಧನೆಯಾಗಿದೆ ಎಂದು ಹಣಕಾಸು ಮಂತ್ರಿಗಳು  ಸಂಭ್ರಮಪಟ್ಟಿರುವುದನ್ನು ಖಂಡಿಸುತ್ತ, ಸರ್ಕಾರ “ಯಶಸ್ಸು” ಎಂದು ಕರೆಯುವುದನ್ನು ಕಾರ್ಮಿಕ ವರ್ಗವು ಒಂದಿಷ್ಟು ಅಲ್ಪ ಮೊತ್ತಕ್ಕಾಗಿ ಗಣಿಗಾರಿಕೆ, ಹೆದ್ದಾರಿಗಳು, ಕಲ್ಲಿದ್ದಲು ಮತ್ತು ಬಂದರುಗಳಂತಹ ಕ್ಷೇತ್ರಗಳಲ್ಲಿ ಸಾರ್ವಜನಿಕ ಆಸ್ತಿಗಳ ಹಗಲುದರೋಡೆ ಎಂದು ಕಾರ್ಮಿಕ ವರ್ಗ ಬಗೆಯುತ್ತದೆ ಎಂದು ಸಿಐಟಿಯು ಕಟುವಾಗಿ ಟೀಕಿಸಿದೆ. ಕೋಟಿ

ಸರ್ಕಾರ “ಯಶಸ್ಸು” ಎಂದು ಕರೆಯುವುದನ್ನು ಕಾರ್ಮಿಕ ವರ್ಗವು ಒಂದಿಷ್ಟು ಅಲ್ಪ ಮೊತ್ತಕ್ಕಾಗಿ ಗಣಿಗಾರಿಕೆ, ಹೆದ್ದಾರಿಗಳು, ಕಲ್ಲಿದ್ದಲು ಮತ್ತು ಬಂದರುಗಳಂತಹ ಕ್ಷೇತ್ರಗಳಲ್ಲಿ ಸಾರ್ವಜನಿಕ ಆಸ್ತಿಗಳ ಹಗಲುದರೋಡೆ ಎಂದು ಕಾರ್ಮಿಕ ವರ್ಗ ಬಗೆಯುತ್ತದೆ

ಎನ್‍ಎಂಪಿ 2.0 ಕುರಿತು ಪ್ರಾಥಮಿಕ ಅಧ್ಯಯನವು “ಬಂಡವಾಳ ಮರುಬಳಕೆ” ಎಂಬ ವೇಷ ತೊಡಿಸಿ ನಡೆಸುತ್ತಿರುವ ಒಂದು ಸುಲಿಗೆಕೋರ ಬಾಡಿಗೆ ಬಾಚುವ ಬಂಡವಾಳಶಾಹಿ ಕಾರ್ಯಸೂಚಿಯಿದು ಎಂಬುದನ್ನು  ಪ್ರಕಟಪಡಿಸುತ್ತದೆ. ಈ ಸಂರಚನಾ ವ್ಯವಸ್ಥೆ  ಸರಕಾರವು ಸಾರ್ವಜನಿಕ ಸರಕು-ಸೌಲಭ್ಯಗಳನ್ನು ಪೂರೈಸಬೇಕಾದ  ತನ್ನ ಪಾತ್ರವನ್ನು ಕೈಬಿಟ್ಟು ಖಾಸಗಿ ಲಾಭಪಡೆಯುವ ಶಕ್ತಿಗಳು ಬಡ್ಡಿ ಸೂರೆಮಾಡಲು ಅವಕಾಶ ಕಲ್ಪಿಸಿಕೊಡುವ   ಒಂದು ಖಾಸಗಿ ಬಾಡಿಕೆಕೋರ ಆಡಳಿತ ಮಾದರಿಯನ್ನು ಅಧಿಕೃತಗೊಳಿಸುತ್ತದೆ ಎಂದು ಸಿಐಟಿಯು ಆಕ್ರೋಶ ವ್ಯಕ್ತಪಡಿಸಿದೆ. ಕೋಟಿ

ಇದನ್ನೂ ಓದಿ: 4 ತಿಂಗಳಿಂದ ಕಬ್ಬಿನ ಹಣ ಇಲ್ಲ: ಮೈಲಾರ ಶುಗರ್ಸ್ ವಿರುದ್ಧ ರೈತರ ದೂರು

ಈ ಕಾಲದ ಬಂಡವಾಳಶಾಹಿಯಲ್ಲಿ, ಖಾಸಗಿ ಕಾರ್ಪೊರೇಟ್ ದೈತ್ಯರು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದಾಗುವುದಿಲ್ಲ.  ಅದಕ್ಕೆ ಬದಲಾಗಿ ಅವರನ್ನು  ಈಗಾಗಲೇ ನಿರ್ಮಾಣಗೊಂಡಿರುವ ಸಾರ್ವಜನಿಕ  ಆಸ್ತಿಗಳ ಮೇಲಿಂದ ಬಾಡಿಗೆ ಸಂಗ್ರಹಿಸಲು ಆಹ್ವಾನಿಸಲಾಗುತ್ತಿದೆ. ವಾಸ್ತವವಾಗಿ, ಈ ಮೂಲಕ ದಶಕಗಳ ಕಾಲ ಸಾರ್ವಜನಿಕ ಹಣದಿಂದ ನಿರ್ಮಿಸಲ್ಪಟ್ಟ ಮತ್ತು ಅಪಾಯಮುಕ್ತಗೊಂಡಿರುವ ಮೂಲಸೌಕರ್ಯವನ್ನು ಖಾಸಗಿ ಕಂಪನಿಗಳಿಗೆ ಸರ್ಕಾರ ಹಸ್ತಾಂತರಿಸುತ್ತಿದೆ. 12 ಆಯಕಟ್ಟಿನ ಹಾಗೂ ಅಗತ್ಯ ಸೇವಾ ಕ್ಷೇತ್ರಗಳಿಂದ ಖಚಿತ ಆದಾಯ ಹರಿವುಗಳನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗುತ್ತಿದ್ದು, ಅನಿವಾರ್ಯವಾಗಿ ಅವನ್ನು ಬಳಸಬೇಕಾಗಿರುವವರಿಂದ  ಟೋಲ್, ಬಳಕೆ ಶುಲ್ಕ ಮತ್ತು ಸುಂಕಗಳನ್ನು ವಸೂಲಿ ಮಾಡಲು ಅವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಕಾರ್ಪೊರೇಟ್ ಬೇಕಾಬಿಟ್ಟಿ ತೆರಿಗೆ ಕಡಿತಗಳಿಂದ ಉಂಟಾಗಿರುವ ಪ್ರಸಕ್ತ ಹಣಕಾಸು ಕೊರತೆಯನ್ನು ತುಂಬಲು ದೇಶದ ಭವಿಷ್ಯದ ಆದಾಯಗಳನ್ನು ಅಡ್ಡಿಪಡಿಸುವ ಒಂದು  ಉದ್ದೇಶಪೂರ್ವಕವಾದ ಕಾರ್ಯತಂತ್ರ ಎಂದು ಸಿಐಟಿಯು ಈ ಕ್ರಮವನ್ನು ಕಟುವಾಗಿ ಟೀಕಿಸಿದೆ.

ಇದು ಕಾರ್ಪೊರೇಟ್ ಬೇಕಾಬಿಟ್ಟಿ ತೆರಿಗೆ ಕಡಿತಗಳಿಂದ ಉಂಟಾಗಿರುವ ಪ್ರಸಕ್ತ ಹಣಕಾಸು ಕೊರತೆಯನ್ನು ತುಂಬಲು ದೇಶದ ಭವಿಷ್ಯದ ಆದಾಯಗಳನ್ನು ಅಡ್ಡಿಪಡಿಸುವ ಒಂದು  ಉದ್ದೇಶಪೂರ್ವಕವಾದ ಕಾರ್ಯತಂತ್ರ ಎಂದು ಸಿಐಟಿಯು ಈ ಕ್ರಮವನ್ನು ಕಟುವಾಗಿ ಟೀಕಿಸಿದೆ.

ಹೆದ್ದಾರಿಗಳು, ಬಹುಮಾದರಿ ಸಾಗಾಣಿಕೆ ಪಾರ್ಕ್‌ (ಎಂಎಂಎಲ್‍ಪಿ) ಗಳು ಮತ್ತು ರೋಪ್‌ವೇ ಕ್ಷೇತ್ರಗಳಲ್ಲಿ ಒಂದು ಬೃಹತ್‍ ಪ್ರಮಾಣದ ಮಾರಾಟ ನಡೆಯುತ್ತಿದೆ—ಇದು ಸಂಚಾರದ ಹಕ್ಕನ್ನು ಖಾಸಗೀಕರಣಗೊಳಿಸಿ ಪ್ರತಿಯೊಂದು ರಸ್ತೆಯನ್ನೂ ಬಾಡಿಗೆ ವಸೂಲಿ ಕೇಂದ್ರವನ್ನಾಗಿ ಮಾಡುತ್ತದೆ. ಸುಲಭ ಹಣಕ್ಕಾಗಿ ರೈಲ್ವೆ ಮತ್ತು ಬಂದರುಗಳಂತಹ ನಮ್ಮ ಅರ್ಥವ್ಯವಸ್ಥೆಯ ಆಯಕಟ್ಟಿನ ಜೀವನಾಡಿಗಳಿಗೆ ಬಾಧೆಯುಂಟು ಮಾಡಲಾಗುತ್ತಿದೆ. ವಿದ್ಯುತ್ ಕ್ಷೇತ್ರದ ಭಾರೀ ಆಸ್ತಿಗಳನ್ನು ಖಾಸಗಿ ಕೈಗಳಿಗೆ ಒಪ್ಪಿಸುವುದರಿಂದ ವಿದ್ಯುತ್ ದರಗಳು ಏರಿಕೆಯಾಗುವುದು ಅನಿವಾರ್ಯ; ಏಕೆಂದರೆ ಬಾಡಿಗೆಕೋರರು ತಮ್ಮ ಲಾಭದ ಪ್ರಮಾಣಕ್ಕೇ ಆದ್ಯತೆ ನೀಡುತ್ತಾರೆಯೇ ವಿನಹ ಇಂಧನ ಭದ್ರತೆಗೆ ಅಲ್ಲ. ಕೋಟಿ

ಕಲ್ಲಿದ್ದಲು ಕ್ಷೇತ್ರವನ್ನು ಕೂಡ ಹರಾಜಿಗೆ ಹಾಕಲಾಗುತ್ತಿದ್ದು, ದೇಶದ ಇಂಧನ ಮತ್ತು ಖನಿಜ ಸಂಪತ್ತಿನ ಮೇಲಿನ ಸಾರ್ವಭೌಮ ನಿಯಂತ್ರಣವನ್ನು ಅವನ್ನು ಕಿತ್ತುಕೊಳ್ಳುವವರಿಗೆ ಬಿಟ್ಟುಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲಿಯಂ, ನಾಗರಿಕ ವಿಮಾನಯಾನ, ದೂರಸಂಪರ್ಕ ಮತ್ತು ನಗರ ಪ್ರದೇಶಗಳ ರಿಯಲ್ ಎಸ್ಟೇಟ್ ಕ್ಷೇತ್ರಗಳನ್ನೂ ಕೂಡ  ಖಾಸಗಿ ಬಂಡವಾಳದ ಎಂದೂ ಹಿಂಗದ ಲಾಭದಾಸೆಯನ್ನು ತಣಿಸಲು ಬಲಿಪೀಠದ ಮೇಲೆ ಇಡಲಾಗುತ್ತಿದೆ. ಕೋಟಿ

ಸಾರ್ವಜನಿಕ-ಖಾಸಗಿ ಭಾಗೀದಾರಿಕೆ (ಪಿಪಿಪಿ) ರಿಯಾಯಿತಿಗಳು, ಮೂಲರಚನೆ ಹೂಡಿಕೆ ಟ್ರಸ್ಟ್‌ಗಳು (InvITs) ಮತ್ತು  ನಗದು ಹರಿವುಗಳನ್ನು ಸೆಕ್ಯುರಿಟಿಗಳಾಗಿಸುವುದು ಈ ಆಸ್ತಿಗಳನ್ನು ದಶಕಗಳ ಕಾಲ ಖಾಸಗಿ ವಲಯಕ್ಕೆ ಒತ್ತೆಯಿಡುತ್ತವೆ; ಇದರಿಂದ ಖಾಸಗಿ ಕಂಪನಿಗಳಿಗೆ ಆದಾಯದ ಒಂದು ಶಾಶ್ವತ ವರ್ಗಾವಣೆ ನಡೆಯುತ್ತದೆ.

ಭಾರತೀಯ ಕಾರ್ಮಿಕ ವರ್ಗಕ್ಕೆ ಈ ಎನ್‍ಎಂಪಿ  2.0 ಅಗತ್ಯ ಸಾರ್ವಜನಿಕ ಸೇವೆಗಳನ್ನು ಪಡೆಯುವ  ಹಕ್ಕನ್ನು ಕಸಿದುಕೊಳ್ಳುವ ಮತ್ತೊಂದು ಆರ್ಥಿಕ ದಾಳಿ.

ಖಾಸಗಿ ನಿರ್ವಾಹಕರು ಸಾರ್ವಜನಿಕ ಸೇವೆಗಿಂತ ತಮ್ಮ ಪ್ರತಿಫಲದ ದರವನ್ನು ಹೆಚ್ಚಿಸಿಕೊಳ್ಳುವದಕ್ಕೆ  ಆದ್ಯತೆ ನೀಡುತ್ತಾರಾದ್ದರಿಂದ, ದುಡಿಮೆಗಾರರು ಮತ್ತು ಸಾಮಾನ್ಯ ನಾಗರಿಕರು ಅತಿಯಾದ ಬಳಕೆ ಶುಲ್ಕಗಳ ಭಾರದಿಂದ ನಲುಗುತ್ತಾರೆ. “ವಿಕಸಿತ ಭಾರತ” ಎಂಬ ಶಬ್ದಾಡಂಬರ ಕಾರ್ಪೊರೇಟ್ ನಿಯಂತ್ರಿತ ಅರ್ಥವ್ಯವಸ್ಥೆಯನ್ನು ಮರೆಮಾಚುವ    ಒಂದು ಟೊಳ್ಳು ಶಬ್ದವಾಗಿದೆ. ಇಂತಹ ಅರ್ಥವ್ಯವಸ್ಥೆಯಲ್ಲಿ  ಸಾರ್ವಜನಿಕರು ಎರಡು ಬಾರಿ ಹಣ ತೆರುತ್ತಾರೆ—ಮೊದಲು ತೆರಿಗೆಗಳ ಮೂಲಕ ಆಸ್ತಿಗಳನ್ನು ನಿರ್ಮಿಸಲು, ನಂತರ ಅದನ್ನು ಬಳಸುವ ಹಕ್ಕಿಗಾಗಿ ಖಾಸಗಿ ಏಕಸ್ವಾಮ್ಯಗಳಿಗೆ ಟೋಲ್‍ ಗಳ ಮೂಲಕ.

ಈ ಪೈಪ್‌ಲೈನ್ ಅಂದರೆ ಸಂರಚನಾ ವ್ಯವಸ್ಥೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಆಗ್ರಹಿಸಿರುವ ಸಿಐಟಿಯು ರಾಷ್ಟ್ರೀಯ ಆಸ್ತಿಗಳನ್ನು ಎನ್‍ಎಂಪಿ 2.0 ಎಂಬ ಪರಾವಲಂಬಿಯ ಹಿಡಿತದಿಂದ ರಕ್ಷಿಸಲು ಎಲ್ಲಾ ದುಡಿಮೆಗಾರರು ಹಾಗೂ ನಾಗರಿಕರು ಬೃಹತ್ ಪ್ರತಿರೋಧಕ್ಕೆ ಒಂದುಗೂಡಬೇಕು  ಕರೆ ನೀಡಿದೆ.

“ರಾಷ್ಟ್ರದ ಮಾರಾಟ ನಿಲ್ಲಿಸಿ! ಸಾರ್ವಜನಿಕ ಆಸ್ತಿಗಳನ್ನು ಉಳಿಸಿ! NMP 2.0 ರದ್ದಾಗಲಿ!” ಎಂದು ಅದು ಕರೆನೀಡಿದೆ.

ಇದನ್ನೂ ನೋಡಿ: ಸೈದ್ದಾಂತಿಕ ಭಿನ್ನಾಭಿಪ್ರಾಯಕ್ಕೆ ಉತ್ತರ ಗಲಭೆಯೇ? Azim Premji Universityನಲ್ಲಿ ನಿಜವಾಗಿ ಏನಾಯಿತು?

Donate Janashakthi Media

Leave a Reply

Your email address will not be published. Required fields are marked *