ಕೊನೆಗೂ ಭಾರತ -ಯುಎಸ್ ವ್ಯಾಪಾರ ಒಪ್ಪಂದವಾಗಿದೆಯೆಂಬ ಸುದ್ದಿ ಬಂದಿದೆ. . ಇದು ಕೂಡ ಈ ಹಿಂದೆ ಭಾರತ-ಪಾಕಿಸ್ತಾನ ಯುದ್ಧವಿರಾಮದ ಸಂದರ್ಭದಂತೆ ಯುಎಸ್ ಅಧ್ಯಕ್ಷರ ಮೂಲಕವೇ, ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಪ್ರಕಟವಾಗಿದೆ. ಭಾರತ ಸರಕಾರದ ಕಡೆಯಿಂಧ ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ. ಅಧ್ಯಕ್ಷ ಟ್ರಂಪ್ ಈ ಪೋಸ್ಟಿನಲ್ಲಿ ಪ್ರಧಾನ ಮಂತ್ರಿ ಮೋದಿಯೊಂದಿಗೆ ಗೆಳೆತನ ಮತ್ತು ಗೌರವದಿಂದಾಗಿ, ಅವರ ಕೋರಿಕೆಯಂತೆ, ಸಂಯುಕ್ತ ಸಂಸ್ಥಾನಗಳು ಮತ್ತು ಭಾರತದ ನಡುವೆ ಒಂದು ವ್ಯಾಪಾರ ವ್ಯವಹಾರಕ್ಕೆ, ತಕ್ಷಣವೇ ಜಾರಿಗ ಬರುವಂತೆ ನಾವು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ. “ಇದರ ಪ್ರಕಾರ ಯುಎಸ್ ಪ್ರತಿಸುಂಕವನ್ನು ಕಡಿಮೆ ದರದಲ್ಲಿ ಹಾಕುತ್ತದೆ, ಅದನ್ನು 25ಶೇ.ದಿಂದ 18ಶೇ.ಕ್ಕೆ ಇಳಿಸುತ್ತದೆ. ಅದೇ ರೀತಿಯಲ್ಲಿ ಅವರುಯುಎಸ್‍ಗೆ ಎದುರಾಗಿ ಸುಂಕದರಗಳನ್ನು ಮತ್ತು ಸುಂಕೇತರ ಅಡೆ-ತಡೆಗಳನ್ನು ಸೊನ್ನೆಗೆ ಇಳಿಸಲು ಮುಂದಾಗುತ್ತಾರೆ. ಪ್ರಧಾನ ಮಂತ್ರಿಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ “ಅಮೆರಿಕನ್ ಸರಕುಗಳ ಖರೀದಿ”ಗೆ ಬದ್ಧ ಎಂದು ಹೇಳಿದ್ದಾರೆ” ಎಂದು ಮುಂದುವರೆದು ತಮ್ಮ ಪೋಸ್ಟ್ನಲ್ಲಿ ಟ್ರಂಫ್ ಹೇಳಿದ್ದಾರೆ. 500 ಬಿಲಿಯನ್ ಡಾಲರಿಗಿಂತಲೂ ಹೆಚ್ಚಿನ ಮಟ್ಟದಲ್ಲಿ .ಅಮೆರಿಕಾದಿಂದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಮತ್ತೂ ಬಹಳಷ್ಟು ಉತ್ಪನ್ನಗಳನ್ನು ಭಾರತ ಖರೀದಿಸಲಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಭಾರತ
ಭಾರತದ ಪ್ರಧಾನ ಮಂತ್ರಿಗಳು ತಮ್ಮ ಎಕ್ಸ್ ಪೋಸ್ಟಿನಲ್ಲಿ ಭಾರತದ ಸರಕುಗಳ ಮೇಲೆ ಸುಂಕದರಗಳನ್ನು 50ಶೇ.ದಿಂದ 18ಶೇ.ಕ್ಕೆ ಇಳಿಸಿದ್ದಕ್ಕೆ ಅದ್ಯಕ್ಷ ಟ್ರಂಪ್ ರವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದರೆ ‘ಒಪ್ಪಂದ’ ಎಂಬ ಪದವನ್ನು ಬಳಸದಿರುವುದನ್ನು ವಿಶ್ಲೇಷಕರು ವಿಶೇಷವಾಗಿ ಗಮನಿಸಿದ್ದಾರೆ. ಸುಂಕದರ ಳಿಕೆಗೆ ಪ್ರತಿಯಾಗಿ ಭಾರತ ನು ಭರವಸೆ ನೀಡಿದೆ ಎಂಬುದನ್ನೂ ಹೇಳಿಲ್ಲ. ಭಾರತದ ವಾಣಿಜ್ಯ ಮಂತ್ರಿ ಮತ್ತು ಕೈಗಾರಿಕಾ ಮಂತ್ರಿಗಳು ಒಪ್ಪಂದವಾಗಿರುವುದನ್ನು ದೃಢಪಡಿಸಿದ್ದಾರೆ, ಒಪ್ಪಂದದ ವಿವರಗಳನ್ನು ಹೇಳಿಲ್ಲ. ಆದ್ದರಿಂದ ಈ ‘ಒಪ್ಪಂದ’ದ ಬಗ್ಗೆ ಬಹಳಷ್ಟು ಪ್ರಶ್ನೆಗಳು ಎದ್ದಿವೆ.
ಸಿಪಿಐ(ಎಂ) ಪೊಲಿಟ್‍ಬ್ಯುರೊ ಇದೊಂದು ಸಮತೋಲನವಿಲ್ಲದ ವ್ಯಾಪಾರ ವ್ಯವಹಾರ ಎಂದು ಟಿಪ್ಪಣಿ ಮಾಡಿದೆ.
ಇದನ್ನೂ ಓದಿ : ಗಣತಂತ್ರದ ಆದ್ಯತೆಗಳೂ ಜನತಂತ್ರದ ಆತಂಕಗಳೂ
ಯುಎಸ್ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದ ಘೋಷಣೆಯು ಕಾರ್ಪೊರೇಟ್ ಮಾಧ್ಯಮಗಳಲ್ಲಿ ಸಂಭ್ರಮವನ್ನು ಉಂಟುಮಾಡಿದೆ. ಆದರೆ ಒಪ್ಪಂದದ ವಿವರಗಳು ಇನ್ನೂ ಲಭ್ಯವಿಲ್ಲದ ಕಾರಣ ಇಂತಹ ಸಂಭ್ರಮ ಸಂಪೂರ್ಣವಾಗಿ ಅನುಚಿತ.. ವ್ಯಾಪಾರ ಒಪ್ಪಂದದ ಸಂಪೂರ್ಣ ವ್ಯಾಪ್ತಿ ಮತ್ತು ವಿವರಗಳು ಲಭ್ಯವಾದಾಗ ಮಾತ್ರ, ಯಾರಾದರೂ ಸರಿಯಾದ ಮೌಲ್ಯಮಾಪನವನ್ನು ಮಾಡಲು ಸಾಧ್ಯ ಎಂದು ಅದು ಹೇಳಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಮಾಡಿದ ಪ್ರಕಟಣೆಯು ಭಾರತೀಯ ಸರಕುಗಳ ಆಮದು ಶೇ. 18 ರಷ್ಟು ಸುಂಕವನ್ನು ಎದುರಿಸಲಿದೆ, ಆದರೆ ಭಾರತವು ಯುಎಸ್ ಸರಕುಗಳ ಮೇಲಿನ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸುತ್ತದೆ ಎಂದು ಹೇಳುತ್ತದೆ. ಈ ರೀತಿ ಸುಂಕಗಳ ನಿರ್ಮೂಲನೆ ಮಾಡಿದರೆ ಅದು ದೇಶದೊಳಕ್ಕೆ ಯುಎಸ್ ಸರಕುಗಳ ಪ್ರವಾಹವೇ ಹರಿದು ಬರಲು ಕಾರಣವಾಗುತ್ತದೆ. ಇದು ನಮ್ಮ ಕೈಗಾರಿಕೆಗಳು ಮತ್ತು ಕಾರ್ಮಿಕರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸುಂಕೇತರ ಅಡೆತಡೆಗಳನ್ನು ತೆಗೆದುಹಾಕುವುದೆಂದರೆ ಸಬ್ಸಿಡಿಗಳು ಮತ್ತು ಭಾರತೀಯ ರೈತರಿಗೆ ಬೆಂಬಲ ನೀಡುವ ಇತರ ಕ್ರಮಗಳನ್ನು ತೆಗೆದುಹಾಕುವುದು. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ ಮತ್ತು 500 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಇಂಧನ, ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ ಎಂದು ಟ್ರಂಪ್ ಹೇಳಿರುವುದು ನಿಜವಾಗಿದ್ದರೆ, ಈ ವ್ಯಾಪಾರ ಒಪ್ಪಂದ ಭಾರತದ ಸಾರ್ವಭೌಮತ್ವವನ್ನು ಬದಿಗೊತ್ತಿ ಅದನ್ನು ಅಧೀನ ಸ್ಥಾನದಲ್ಲಿಟ್ಟು ಮಾಡಿದ ಅತ್ಯಂತ ಅಸಮಾನ ಸ್ವರೂಪದ್ದು ಎಂದೇ ತೋರಿಸುತ್ತದೆ ಎಂದು ಸಿಪಿಐ(ಎಂ) ಹೇಳಿದೆ.
ಸರ್ಕಾರವು ಸಂಪೂರ್ಣ ವ್ಯಾಪಾರ ಒಪ್ಪಂದವನ್ನು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಮಂಡಿಸುವುದು, ಈ ಮೂಲಕ ಇದರ ಮೇಲೆ ಕೂಲಂಕುಷ ಚರ್ಚೆ ನಡೆಯುವುದು ಬಹಳ ಮುಖ್ಯ. ಭಾರತೀಯ ಉದ್ದಿಮೆ, ಕೃಷಿ ಮತ್ತು ದುಡಿಯುವ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಯಾವುದೇ ಹಾನಿಕಾರಕ ನಿಬಂಧನೆಗಳನ್ನು ರದ್ದುಗೊಳಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಇದನ್ನೂ ನೋಡಿ: “ಮನರೇಗಾ ನಮ್ಮ ಹಕ್ಕು: V B GRAM G ವಿರುದ್ಧ ಜನಪಂಚಾಯತ್” | ಉದ್ಯೋಗ ಖಾತರಿ Janashakthi Media
