ನಂದಿನಿ ತುಪ್ಪ ಕಲಬೆರಕೆ ಪ್ರಕರಣ: ಕಿಂಗ್ ಪಿನ್ ದಂಪತಿ ಬಂಧನ

ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರು ನಂದಿನಿ ತುಪ್ಪ ಕಲಬೆರಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ದಂಪತಿಯನ್ನು ನವೆಂಬರ್ 26ರಂದು ಬಂಧಿಸಿದ್ದಾರೆ.

ಶಿವಕುಮಾರ್ ಹಾಗೂ ರಮ್ಯಾ ಬಂಧಿತ ದಂಪತಿಗಳೆಂದು ಗುರುತಿಸಲಾಗಿದೆ. ಬೆಂಗಳೂರಿನ ನಂದಿನಿ ಪಾರ್ಲರ್ ಗಳಿಗೆ ಈ ದಂಪತಿ ನಕಲಿ ನಂದಿನಿ ತುಪ್ಪ ಸರಬರಾಜು ಮಾಡುತ್ತಿದ್ದರು. ತಮಿಳುನಾಡಿನಲ್ಲಿ ಘಟಕ ಹೊಂದಿದ್ದ ದಂಪತಿ ರಾಜ್ಯದಲ್ಲಿ ಕಲಬೆರಕೆ ತುಪ್ಪ ತಯಾರಿಸಿ, ಪ್ಯಾಕೆಟ್ ಹಾಗೂ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಸಪ್ಲೈ ಮಾಡುತ್ತಿದ್ದರು.

ಇದನ್ನೂ ಓದಿ: ಬೆಂಗಳೂರು | ಕಂಪ್ಯೂಟರ್ ಶಿಕ್ಷಣ 1ನೇ ತರಗತಿಯಿಂದಲೇ ಪ್ರಾರಂಭ – ಸಚಿವ ಮಧು ಬಂಗಾರಪ್ಪ

ಈ ಹಿಂದೆ ಬಂಧಿತರಾಗಿದ ಡಿಸ್ಟ್ರಿಬ್ಯೂಟರ್ ಮಹೇಂದ್ರ ಹಾಗೂ ದೀಪಕ್ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಶಿವಕುಮಾರ್ ಹಾಗೂ ರಮ್ಯಾ ದಂಪತಿ ಬಂಧಿಸಿದ್ದು, ನಕಲಿ ತುಪ್ಪ ತಯಾರಿಸುವ ದೊಡ್ಡ ಅತ್ಯಾಧುನಿಕ ಯಂತ್ರವನ್ನೂ ವಶಕ್ಕೆ ಪಡೆದಿದ್ದಾರೆ.

ಅಲ್ಲದೇ 1.50 ಕೋಟಿ ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪ ಜಪ್ತಿ ಮಾಡಲಾಗಿದೆ. ಸದ್ಯ ಕಿಂಗ್ ಪಿನ್ ದಂಪತಿಯನ್ನು ವಿಚಾರಣೆಗೊಳಪಡಿಸಲಾಗಿದೆ.

ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿ, ಹಮಾಲಿ ಕಾರ್ಮಿಕರಿಗೆ ಸಿಗಲಿ ಸೌಲಭ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *