ಕರುರ್: ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಬಸ್ ಒಂದು ಮಾನವರಹಿತ ರೈಲು ಕ್ರಾಸಿಂಗ್ ದಾಟುವ ವೇಳೆ ಸರಕು ರೈಲು ಡಿಕ್ಕಿ ಹೊಡೆದ ಪರಿಣಾಮ ಸುಮಾರು 24 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶನಿವಾರ ಸಂಜೆ ಕರೂರ್ನಲ್ಲಿ ನಡೆದಿದೆ. ಕಾಲೇಜು
ಪೊಲೀಸರ ಮಾಹಿತಿ ಪ್ರಕಾರ, ಸುಮಾರು 50 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾಲೇಜು ಬಸ್ ಸಂಜೆ ವೇಳೆ ಮಾನವರಹಿತ ರೈಲು ಕ್ರಾಸಿಂಗ್ ದಾಟಲು ಪ್ರಯತ್ನಿಸುತ್ತಿದ್ದಾಗ ಸರಕು ರೈಲು ಬಸ್ಗೆ ಡಿಕ್ಕಿ ಹೊಡೆದಿದೆ. ದಿನ್ಡಿಗಲ್ನಿಂದ ಕರೂರ್ ಕಡೆಗೆ ತೆರಳುತ್ತಿದ್ದ ಈ ಸರಕು ರೈಲು ಸಿಮೆಂಟ್ ಕಾರ್ಖಾನೆಗೆ ಸರಕು ಸಾಗಣೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜೆಎನ್ಯು ವಿದ್ಯಾರ್ಥಿಗಳ ಜನಾಭಿಪ್ರಾಯ ಸಂಗ್ರಹ: ಉಪಕುಲಪತಿ ರಾಜೀನಾಮೆಗೆ ಭಾರೀ ಬೆಂಬಲ
ಘಟನೆಯ ನಂತರ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ವಿದ್ಯಾರ್ಥಿಗಳನ್ನು ರಕ್ಷಿಸಿ ಕರೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ಅಧೀಕ್ಷಕ ಜೋಶ್ ಕೆ. ತಂಗಯ್ಯ ಹಾಗೂ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿದರು. ಅಗ್ನಿಶಾಮಕ ಹಾಗೂ ರಕ್ಷಣಾ ದಳದ ಸಿಬ್ಬಂದಿಯನ್ನೂ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು.
ರೈಲ್ವೆ ಮೂಲಗಳ ಪ್ರಕಾರ, ವೀರರಕ್ಕಿಯಂ ಮತ್ತು ಪಾಲಾಯಂ ನಡುವಿನ ಹಳಿ ಭಾಗದಲ್ಲಿ ಈ ಘಟನೆ ಸಂಭವಿಸಿದೆ. ಈ ಹಳಿಯನ್ನು ಕ್ಲಿಂಕರ್ ಸಾಗಣೆಗೆ ನಿರ್ಮಿಸಲಾಗಿದೆ. ಲೋಕೊ, ಬೋಗಿಗಳು ಮತ್ತು ಹಳಿ ಎಲ್ಲವೂ ಸಿಮೆಂಟ್ ಕಾರ್ಖಾನೆಯ ಸ್ವಾಮ್ಯದಲ್ಲಿದ್ದು ಅದೇ ಸಂಸ್ಥೆ ನಡೆಸುತ್ತಿದೆ. ಈ ಮಾರ್ಗದಲ್ಲಿ ಕೆಲವು ಮಾನವರಹಿತ ರೈಲು ಕ್ರಾಸಿಂಗ್ಗಳಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಜೀವನೋಪಾಯದ ಮೇಲೆ ದಾಳಿ ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ಮಹಿಳಾ ದಿನದ ಪ್ರತಿಭಟನೆ Janashakthi Media
