ಜಿ.ಎಸ್.ಮಣಿ
ಸೆಪ್ಟೆಂಬರ್ 12 ಮತ್ತು 13 ರಂದು ದೆಹಲಿಯಲ್ಲಿ ಭಾರತದ ಅದ್ಯಕ್ಷತೆಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತದೆ. ಆರ್ಥಿಕ ಸಹಕಾರದ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಈ ದೇಶಗಳು ಸಾಧಿಸಿದ್ದೇನು ಎನ್ನುವುದರ ಕಡೆಗೆ ಗಮನ ಹರಿಸುವುದು ಅವಶ್ಯ ಮತ್ತು ಅರ್ಥಪೂರ್ಣ. ಬ್ರಿಕ್ಸ್
ಬ್ರೆಜಿಲ್, ರಷ್ಯಾ, ಭಾರತ (ಇಂಡಿಯ) ಚೈನ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಸಂಘಟನೆಯಾಗಿ ಮೂಡಿ ಬಂದ ಬ್ರಿಕ್ಸ್ ಈಗ ಇರಾನ್, ಈಜಿಪ್ಟ್, ಸೌದಿ ಅರೇಬಿಯ, ಇಥಿಯೊಪಿಯಾ,ಇಂಡೊನೇಶಿಯ ಮತ್ತು ಯು.ಎ.ಇ (ಸಂಯುಕ್ತ ಅರಬ್ ಅಮಿರಾತ್ ) ಸೇರಿ 11 ದೇಶಗಳ ಬೃಹತ್ ಸಂಘಟನೆಯಾಗಿ ಬೆಳೆದಿದೆ. ವ್ಯಾಪಾರ ಮತ್ತು ರಾಜತಾಂತ್ರಿಕ ತಳಹದಿಯ ಮೇಲೆ ಬಲಿಷ್ಠಗೊಳ್ಳುತ್ತಿರುವ ಜಾಗತಿಕ ಸಂಘಟನೆ ಇದಾಗಿದೆ. ಸಾಮ್ರಾಜ್ಯಶಾಹಿಯ ಏಕಾಧಿಪತ್ಯಕ್ಕೆ ಎದುರಾಗಿ ಇದು ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ. ಸದಸ್ಯ ರಾಷ್ಟ್ರಗಳಿಗೆ ಬದಲಿ ವ್ಯಾಪಾರ ಸಂಹಿತೆಯಡಿ ಬೆಳೆಯುವ ಅವಕಾಶಗಳನ್ನು ಇದು ಮಾಡಿಕೊಟ್ಟಿದೆ.
ಚೀನಾ ಹೊರತುಪಡಿಸಿದರೆ ಉಳಿದ ಬ್ರಿಕ್ಸ್ ದೇಶಗಳು ತಮ್ಮ ಶೇ30 ಕ್ಕಿಂತ ಹೆಚ್ಚಿನ ಆಮದನ್ನು ಸದಸ್ಯ ಬ್ರಿಕ್ಸ್‌ದೇಶಗಳಿಂದಲೇ ಮಾಡಿಕೊಂಡವು. ಇರಾನ್ ತನ್ನ ಆಮದಿನ ಶೇ 65 ರಷ್ಟನ್ನು ಸದಸ್ಯ ರಾಷ್ಟ್ರಗಳಿಂದಲೇ ಮಾಡಿಕೊಂಡರೆ ಇಥಿಯೊಪಿಯ ಶೇ 45ಕ್ಕಿಂತ ಹೆಚ್ಚು ಆಮದನ್ನು ಸದಸ್ಯ ರಾಷ್ಟ್ರಗಳಿಂದಲೇ ಮಾಡಿಕೊಳ್ಳುತ್ತದೆ. ಇದಕ್ಕೆ ಸಮಾನಾಂತರವಾಗಿ ಸದಸ್ಯರಾಷ್ಟ್ರಗಳ ಮೇಲೆ ರಫ್ತು ಅವಲಂಬನೆಯೂ ಹೆಚ್ಚಿದೆ. ಚಾರ್ಟ 2 ಮತ್ತು 3ನ್ನು ನೋಡಿ.

ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ದೇಶದ ಗಡಿಯಾಚೆಗಿನ ಪಾವತಿಯ ಸಮಸ್ಯೆ ದೊಡ್ಡದಾಗಿ ಅಭಿವೃದ್ದಿಶೀಲ ದೇಶಗಳನ್ನು ಕಾಡುತ್ತದೆ. ಅಮೇರಿಕದ ಡಾಲರ್ ಮೂಲಕ ಪಾವತಿಸುವುದು ಸಾಮಾನ್ಯ ಪದ್ದತಿ. ವಿದೇಶಿ ಬ್ಯಾಂಕ್ ಗಳ ಮೂಲಕ ನಮ್ಮ ನಾಣ್ಯಗಳಿಗೆ (ಕರೆನ್ಸಿ) ಡಾಲರ್ ಕೊಂಡು ಆ ಮೂಲಕ ಪಾವತಿ ಮಾಡಬೇಕಾಗುತ್ತದೆ. ವಿದೇಶಿ ನಾಣ್ಯದ ಪರಿವರ್ತನೆಗೆ ವಿನಿಮಯ ಶುಲ್ಕ ಮತ್ತು ಪಾವತಿಗಳಿಗೆ ಸೇವಾಶುಲ್ಕ ನೀಡಬೇಕಾಗುತ್ತದೆ. ಅಲ್ಲದೆ ಈ ಪ್ರಕ್ರಿಯೆಗೆ ಸಾಕಷ್ಟು ಸಮಯವೂ ಹಿಡಿಯುತ್ತದೆ. ಇಂದಿನ ತಂತ್ರಜ್ಞಾನದ ಬಳಕೆಯಿಂದ ಮೇಲೆ ಹೇಳಿದ ತೊಡಕುಗಳನ್ನು ನಿವಾರಿಸುವ ಕೆಲಸವನ್ನೂ ಬ್ರಿಕ್ಸ್ ಮಾಡುತ್ತಿದೆ.
ಬ್ರಿಕ್ಸ್ ದೇಶಗಳ ವ್ಯಾಪಾರ ವಹಿವಾಟು ಜಾಗತಿಕ ವಹಿವಾಟಿನ ನಾಲ್ಕನೆ ಒಂದರಷ್ಟು ಪ್ರಮಾಣವನ್ನು ಮುಟ್ಟಿದೆ. ಚೀನಾ ದೇಶದ ಬ್ರಿಕ್ಸ್ ರಫ್ತು 500 ಶತಕೋಟಿ ಡಾಲರುಗಳಿಗೆ ತಲುಪಿದೆ. ಇನ್ನುಳಿದ ದೇಶಗಳ ರಫ್ತು 80 ರಿಂದ 180 ಶತಕೋಟಿ ಡಾಲರುಗಳಿಗೆ ಏರಿದೆ. ಇದೇ ರೀತಿ ಆಮದು ಸಹ ಹೆಚ್ಚುತ್ತಿದೆ. ಅಮೇರಿಕ ಜಗತ್ತಿನ ಅತಿ ದೊಡ್ಡ ವ್ಯಾಪಾರವಿರುವ ದೇಶ. ಬ್ರಿಕ್ಸ್ ನ ಚೀನಾ, ರಷ್ಯ ಮತ್ತು ಭಾರತ ಜಗತ್ತಿನ ಹತ್ತು ಅತಿ ದೊಡ್ಡ ವ್ಯಾಪಾರವಿರುವ ದೇಶಗಳಾಗಿ ಹೊರಹೊಮ್ಮಿವೆ. ಈ ದೇಶಗಳು ಬರುವ ದಿನಗಳಲ್ಲಿ ಅಮೇರಿಕವನ್ನು ಸರಿಗಟ್ಟುವ/ಮೀರಿಸುವ ವ್ಯಾಪಾರ ದೇಶಗಳಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಉಕ್ರೇನ್ ಯುದ್ದ ಸಂದರ್ಭದಲ್ಲಿ ಅಮೇರಿಕ ರಷ್ಯಾದ ಮೇಲೆ ಸ್ವಿಫ್ಟ್(SWIFT) ಬಳಕೆ ನಿರ್ಭಂಧ ಹೇರಿದ್ದು ಸಾಕಷ್ಟು ಹೊಡೆತ ನೀಡಿತು. ಬ್ರಿಕ್ಸ್ ಬಲಿತರೆ ಇಂತಹ ಅನ್ಯಾಯಗಳನ್ನು ತಡೆಯಲು ಮತ್ತು ಈ ದೇಶಗಳು ಸುಲಭವಾಗಿ ಯು ಎಸ್ ಸಾಮ್ರಾಜ್ಯಶಾಹಿಯನ್ನು ಎದುರಿಸಲು ಸಾಧ್ಯವಾಗುತ್ತದೆ. ಬ್ರಿಕ್ಸ್

ಇದನ್ನೂ ಓದಿ : ಹೊಸ ಗಣಿ ಕಾನೂನಿಗೆ ವಿರೋಧ: ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ಆರೋಪ
ಭಾರತ ಈ ವರ್ಷ ಬ್ರಿಕ್ಸ್ ನ ಅದ್ಯಕ್ಷ ಸ್ಥಾನ ಅಲಂಕರಿಸಿದೆ. ಬ್ರಿಕ್ಸ್ ವಿಷಯದಲ್ಲಿ ಭಾರತ ಸ್ಪಷ್ಟ ನಿಲುವುಗಳನ್ನು ತೋರಿ ಅದರ ಅನುಷ್ಟಾನಕ್ಕೆ ಒತ್ತು ನೀಡಿರುವುದು ಕಂಡುಬಂದಿಲ್ಲ. ಅಮೇರಿಕದ ಒತ್ತಡಗಳಿಗೆ ಪಕ್ಕಾಗಿ ಎಡಬಿಡಂಗಿ ನೀತಿಗಳನ್ನು ಹೊಂದಿರುವ ಲಕ್ಷಣಗಳಂತೂ ಕಾಣುತ್ತಿವೆ. ನಮ್ಮದೇ ಕೊಡುಗೆಯಾಗಿರುವ ಯುಪಿಐ ನ ಪ್ರಸರಣ, ಸ್ವಿಫ್ಟಗೆ ಪರ್ಯಾಯದ ಸೃಜನೆ ಇತ್ಯಾದಿಗಳಲ್ಲಿ ಭಾರತ ನೆತೃತ್ವದ ಸ್ಥಾನ ವಹಿಸಿ ದುಡಿಯುವ ಅವಕಾಶಗಳು ಇದ್ದರೂ ಅದು ಕಣ್ಣು ಮುಚ್ಚಿಕೊಂಡೆ ಕುಳಿತಿರುವಂತೆ ಕಾಣಿಸುತ್ತಿದೆ. ಬ್ರಿಕ್ಸ್
|
ಕೊಷ್ಟಕ 1: ಬ್ರಿಕ್ಸ್ ದೇಶಗಳ ಸಾಧನೆ
|
|
1991 | 2009 | 2024 |
| ಬ್ರಿಕ್ಸ್ನ(5 ದೇಶಗಳು) ಜಿಡಿಪಿ(ವಿಶ್ವ ಜಿಡಿಪಿಯ ಶೇಕಡಾವಾರಾಗಿ) | – | 14.8% | 24.8% |
| ಬ್ರಿಕ್ಸ್ನ ಜಿಡಿಪಿ ಬೆಳವಣಿಗೆ ದರ | 1.5% | 4.5% | 4.2% |
| ಬ್ರಿಕ್ಸ್ನ (5 ದೇಶಗಳು) ಕೈಗಾರಿಕಾ ಉತ್ಪನ್ನದಲ್ಲಿ ಮೌಲ್ಯವರ್ಧನೆ (ವಿಶ್ವ ಕೈಗಾರಿಕಾಉತ್ಪನ್ನದಲ್ಲಿ ಮೌಲ್ಯವರ್ಧನೆಯ ಶೇಕಡಾವಾರಾಗಿ) | 8% | 28% | 45% |
| ಬ್ರಿಕ್ಸ್ನ (5 ದೇಶಗಳು) ರಫ್ತು (ವಿಶ್ವ ರಫ್ತಿನ ಶೇಕಡಾವಾರಾಗಿ) | – | 16.2% | 21.8% |
ಕೊಷ್ಟಕ-2
ಬ್ರಿಕ್ಸ್ ದೇಶಗಳ 2025 ರ ಜಿಡಿಪಿ ಅವರ ಸ್ಥಾನಗಳ ಪ್ರಕಾರ
| ದೇಶ | ಜಿಡಿಪಿ
ಶತಕೋಟಿ ಡಾಲರುಗಳಲ್ಲಿ |
ಸ್ಥಾನ |
| ಚೀನಾ | 19626.247 | 2 |
| ಭಾರತ | 3916.312 | 7 |
| ರಷ್ಯ ಒಕ್ಕೂಟ | 2587.938 | 9 |
| ಬ್ರೆಜಿಲ್ | 2279.918 | 12 |
| ಇಂಡೊನೇ಼ಷಿಯ | 1445.612 | 18 |
| ಸಂಯುಕ್ತ ಅರಬ್ ಅಮಿರಾತ್ (ಯುಎಇ) | 571.643 | 32 |
| ದಕ್ಷಿಣ ಆಫ್ರಿಕಾ | 427.141 | 43 |
| ಇರಾನ್ | 371.196 | 46 |
| ಇಜಿಪ್ಟ್ | 364.64 | 47 |
| ಇಥಿಯೊಪಿಯ | 109.109 | 74 |
ಹೊಸ, ಗಡಿಯಾಚೆಯ ಪಾವತಿ ಪದ್ದತಿ
| ವೈಷಿಷ್ಟ್ಯ | ಅಮೇರಿಕದ ಡಾಲರ್ ಬಳಸುವ ಹಳೆ ಪದ್ದತಿ | ಡಿಜಿಟಲ್ ನಾಣ್ಯದ ಹೊಸ ಪದ್ದತಿ |
| ಮಧ್ಯವರ್ತಿ | ಮೊದಲು ನಮ್ಮ ನಾಣ್ಯದಿಂದ ಡಾಲರಿಗೆ ಪರಿವರ್ತಿಸಬೇಕು(ವಿನಿಮಯ ಮತ್ತು ಸೇವಾ ಶುಲ್ಕಗಳು ವ್ಯರ್ಥ ಖರ್ಚು) | ಎರಡು ದೇಶಗಳ ನಾಣ್ಯಗಳ ನೇರ ಪರಿವರ್ತನೆ |
| ವೇಗ | 2ರಿಂದ 5 ದಿನಗಳು | ತಕ್ಷಣ |
| ಶುಲ್ಕಗಳು | ವಿನಿಮಯ ಮತ್ತು ಸೇವೆ | ನಗಣ್ಯ (ಶೂನ್ಯಕ್ಕೆ ಹತ್ತಿರ) |
| ಹೊರ ಹತೋಟಿ | ಪಾಶ್ಚಿಮಾತ್ಯ ದೇಶಗಳ ನಿರ್ಬಂಧ/ ಅಮೇರಿಕದ ನೀತಿಗಳ ಪ್ರಭಾವ | ಸ್ವತಂತ್ರ ಮತ್ತು ಸಾರ್ವಭೌಮ |
ಇದನ್ನೂ ನೋಡಿ : “ಆಪರೇಷನ್ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media
