ಬೆಂಕಿ ಅವಘಡ: ಕಾರ್ಮಿಕರು ಹಾಕಿಕೊಂಡಿದ್ದ 12 ಶೆಡ್‌ಗಳು ಭಸ್ಮ!

ಬೆಂಗಳೂರು: ಪಶ್ಚಿಮ ಬಂಗಾಳದ ಕಾರ್ಮಿಕರು ಹಾಕಿಕೊಂಡಿದ್ದ ಶೆಡ್‌ಗಳಲ್ಲಿ ಬೆಂಕಿ ಅವಘಡ ಸಂಭವಿಸಿ, 12 ಶೆಡ್‌ಗಳು ಭಸ್ಮವಾಗಿರುವ ಘಟನೆ ಸೋಮಸಂದ್ರಪಾಳ್ಯದ ಖಾಲಿ ಪ್ರದೇಶದಲ್ಲಿ ನಡೆದಿದೆ.

ಎಚ್‌ಎಸ್‌ಆರ್ ಬಡಾವಣೆಯ ಎರಡನೇ ವಲಯದ ಒಂದನೇ ಮುಖ್ಯರಸ್ತೆಯಲ್ಲಿ ಇರುವ ಪ್ರಕಾಶ್ ಎಂಬುವರಿಗೆ ಸೇರಿದ ಜಾಗದಲ್ಲಿ ಕಾರ್ಮಿಕರು ಶೆಡ್‌ ನಿರ್ಮಿಸಿಕೊಂಡಿದ್ದರು. ಏಪ್ರಿಲ್‌ 26ರ ನಸುಕಿನಲ್ಲಿ ಅವಘಡ ಸಂಭವಿಸಿದೆ.

ಇದನ್ನೂ ಓದಿ: “ಜೇಬಲ್ಲಿ ಈರುಳ್ಳಿ… ಸೂರ್ಯನೇ ಹೆದರಿ ‘ಸ್ವಲ್ಪ ಸೈಡ್ ಕೊಡ್ರಿ ಸಾರ್‌!’ ಅಂದ ಕಥೆ!

ಅವಘಡದಲ್ಲಿ ಒಂದು ಫ್ರಿಜ್‌, ಎರಡು ಹಳೇ ಸ್ಕೂಟರ್ ಹಾಗೂ ಎರಡು ಸೈಕಲ್ ಸೇರಿ ಶೆಡ್‌ನಲ್ಲಿದ್ದ ವಸ್ತುಗಳು ಭಸ್ಮವಾಗಿವೆ.

ಶೆಡ್‌ಗಳಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕರು ವಾಸವಿದ್ದರು. ಚುನಾವಣೆಯಲ್ಲಿ ಮತದಾನ ಮಾಡಲು ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಂಜಾ ವ್ಯಸನಿಗಳು ಶೆಡ್‌ಗಳಿಗೆ ಬೆಂಕಿ ಹಾಕಿರುವ ಶಂಕೆ ಇದೆ. ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಇದನ್ನೂ ನೋಡಿ: ಕನಿಷ್ಠ ವೇತನಕ್ಕಾಗಿ ಕಾರ್ಮಿಕರ ಹೋರಾಟ – ಸರ್ಕಾರ ಮತ್ತು ಕೈಗಾರಿಕಾ ಮಾಲೀಕರಿಗೆ ಎಚ್ಚರಿಕೆಯ ಗಂಟೆ Janashakthi Media

Donate Janashakthi Media

Leave a Reply

Your email address will not be published. Required fields are marked *