ತನಿಖೆ ನಡೆಸಲು 1 ಲಕ್ಷ ರೂ. ಲಂಚ; ಲೋಕಾಯುಕ್ತ ಪೋಲಿಸ್‌ ಲೋಕಾ ಬಲೆಗೆ

ಬೆಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಪೊಲೀಸ್‌ ಅಧಿಕಾರಿಯೊಬ್ಬರು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ. ತನಿಖೆ ನಡೆಸಲು 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ರಾಮಮೂರ್ತಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ (PI), ಸಬ್-ಇನ್ಸ್ಪೆಕ್ಟರ್ (PSI) ಮತ್ತು ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತನಿಖೆ

ಕೃಷ್ಣರಾಜಪುರದ ನಿವಾಸಿ ಗೋಪಿನಾಥ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿತ್ತು. ಗೋಪಿನಾಥ್ ಅವರ ಪತ್ನಿ ಕುಟುಂಬಕ್ಕೆ ಸೇರಿದ ಚಿನ್ನಾಭರಣ ಮತ್ತು ಹಣವನ್ನು ಬೇರೆಯವರಿಗೆ ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ, ತಮ್ಮ ಚಿನ್ನಾಭರಣ ಹಾಗೂ ನಗದನ್ನು ವಾಪಸ್ ಕೊಡಿಸುವಂತೆ ಕೋರಿ ಗೋಪಿನಾಥ್ ಅವರು ರಾಮಮೂರ್ತಿನಗರ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ

ಲೋಕಾಯುಕ್ತ ಬಲೆಗೆ ಲಂಚಕೋರರು:

ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ಖಾಸಗಿ ವ್ಯಕ್ತಿ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ| ಪ್ರವಾಹದಲ್ಲಿ 220 ಜನರು ಸಾವು

ಲಂಚ ಪಡೆಯುತ್ತಿದ್ದ ಆರೋಪಿಗಳನ್ನು ಪೊಲೀಸ್ ಇನ್ಸ್‌ಪೆಕ್ಟರ್ ರಾಜಶೇಖರ್, ಸಬ್ ಇನ್ಸ್‌ಪೆಕ್ಟರ್ ರುಮಾನ್ ಪಾಷಾ ಮತ್ತು ಇಮ್ರಾನ್ ಬಾಬು ಎಂದು ಗುರುತಿಸಲಾಗಿದೆ.

ಲಂಕಕೋರರ ವಿರುದ್ಧ ಬಲೆಬೀಸಿದ ಲೋಕಾಯುಕ್ತರು:

ಈ ಪ್ರಕರಣಕ್ಕೂ ಮುನ್ನ ಕಳೆದ ಕೆಲದ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಚೇರಿ ಮೇಲೆ ಬುಧವಾರ ಆಗಷ್ಟ್‌ 13ರಂದು ಮಧ್ಯಾಹ್ನ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಉಪತಹಶಿಲ್ದಾರ್ ಸಹಿತ ಮೂವರನ್ನು ವಶಕ್ಕೆ ಪಡೆದಿದ್ದರು. ಉಪತಹಶಿಲ್ದಾರ್ ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಹಾಗೂ ಗಣೇಶ್ ಅವರನ್ನು ವಶಕ್ಕೆ ಪಡೆದಿದ್ದರು. ಸಜೀಪಮುನ್ನೂರು ನಿವಾಸಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಲೋಕಾಯುಕ್ತ ಪ್ರಭಾರ SP ಕುಮಾರಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಗಾನಾ ಪಿ.ಕುಮಾರ್, ಸುರೇಶ್ ಕುಮಾರ್, ಇನ್ಸ್‌ಪೆಕ್ಟರ್ ಚಂದ್ರಶೇಖರ, ಭಾರತಿ ಹಾಗೂ ಸಿಬ್ಬಂದಿಗಳು ಈ ದಾಳಿ ನಡೆಸಿದ್ದರು. ಇನ್ನು, ಬಂಟ್ವಾಳ ಉಪತಹಶಿಲ್ದಾರ್ ರಾಜೇಶ್ ನಾಯ್ಕ್, ಗಣೇಶ್ ಅವರ ಮೂಲಕ 20 ಸಾವಿರ ರೂ.ಗಳ ಲಂಚವನ್ನು ಬಿ.ಸಿ ರೋಡಿನ ತಾಲೂಕು ಕಚೇರಿ ಬಳಿ ದೇವಸ್ಥಾನವೊಂದರ ಸಮೀಪ ತೆಗೆದುಕೊಳ್ಳುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ನೋಡಿ: ಶವ ಹೂತಿಟ್ಟ ಪ್ರಕರಣದ ದೂರುದಾರ ಅನಾಮಿಕ ಭೀಮ INDIA TODAY ಚಾನಲ್​ಗೆ ನೀಡಿದ ಸಂದರ್ಶನ..!

Donate Janashakthi Media

Leave a Reply

Your email address will not be published. Required fields are marked *