ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಶಕ್ತಿಗಳಿಗೆ ಕಳವಳಕಾರಿ: ಎಂ ಎ ಬೇಬಿ

ನವದೆಹಲಿ: ಕೇರಳಂನಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ಕ್ಕೆ ಗಂಭೀರ ಹಿನ್ನಡೆ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವು ಇವು ವಿಧಾನಸಭಾ ಚುನಾವಣೆ ಫಲಿತಾಂಶಗಳ ಎರಡು ಪ್ರಮುಖ ಲಕ್ಷಣಗಳು ಎಂದು ಈ ಫಲಿತಾಂಶಗಳ ಬಗ್ಗೆ  ಮಾತನಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಹೇಳಿದ್ದಾರೆ.

ಡಿಎಂಕೆ ನೇತೃತ್ವದ ಮೈತ್ರಿಕೂಟವು ಕೂಡ ತಮಿಳುನಾಡಿನಲ್ಲಿ ಹಿನ್ನಡೆ ಅನುಭವಿಸಿದೆ. ಅಲ್ಲಿ ವಿಜಯ್ ನೇತೃತ್ವದ ಟಿವಿಕೆ ಪ್ರಮುಖ ಶಕ್ತಿಯಾಗಿ ಮೂಡಿಬಂದಿದೆ ಎಂದು ಈ ಕುರಿತು ಪತ್ರಿಕಾಗೋ಼ಷ್ಠಿಯಲ್ಲಿ ಮಾತಾಡುತ್ತ ಅವರು ಹೇಳಿದರು. ಚುನಾವಣೆ

ಬಿಜೆಪಿಗೆ ಅಸ್ಸಾಂ ಅನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಮತ್ತು ಎನ್‌ಆರ್ ಕಾಂಗ್ರೆಸ್ ಕೂಡ ಪುದುಚೇರಿಯಲ್ಲಿ ಮತ್ತೊಮ್ಮೆ ಗೆದ್ದಿತು. ಚುನಾವಣೆ

ಇದನ್ನೂ ಓದಿ: ಪದ್ಮನಾಭಪುರಂ ಮತ್ತು ಕಿಲ್ವೇಲೂರು ಕ್ಷೇತ್ರಗಳಲ್ಲಿ ಸಿಪಿಎಂ ಗೆಲುವು!

ಕೇರಳಂನಲ್ಲಿ ಹತ್ತು ವರ್ಷಗಳ ನಿರಂತರ ಆಡಳಿತದ ನಂತರ ಎಲ್‌ಡಿಎಫ್ ಸೋಲನುಭವಿಸಿದೆ, ಈ ಅವಧಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿಧಿಸಿದ ಆರ್ಥಿಕ ನಿರ್ಬಂಧಗಳ ನಡುವೆಯೂ ಜನರ ಕಲ್ಯಾಣಕ್ಕಾಗಿ ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸಲು ತನ್ನಿಂದ ಸಾಧ್ಯವಾದುದೆಲ್ಲವನ್ನೂ ಮಾಡಿತು.

ಪಶ್ಚಿಮ ಬಂಗಾಳದಲ್ಲಿ, ಬಿಜೆಪಿ ಹಲವಾರು ಅಂಶಗಳ,ಪ್ರಯೋಜನ ಪಡೆಯಿತು, ಅದರಲ್ಲಿ ಭ್ರಷ್ಟ ಟಿಎಂಸಿ ಸರ್ಕಾರದ ವಿರುದ್ಧ ಬಲವಾದ ಆಡಳಿತ ವಿರೋಧಿ ಅಲೆಯೂ  ಸೇರಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಹೇಳಿದರು. ಚುನಾವಣೆ

ಬಿಜೆಪಿಯ ಕೋಮುವಾದಿ, ವಿಭಜನಕಾರೀ ಮತ್ತು ವಿಷಭರಿತ  ದ್ವೇಷ ಅಭಿಯಾನ, ಅವರು ಖರ್ಚು ಮಾಡಿದ ಅಪಾರ ಹಣ ಮತ್ತು ಭಾರತದ ಚುನಾವಣಾ ಆಯೋಗ (ECI), SIR ವ್ಯಾಯಾಮ ಸೇರಿದಂತೆ ಕೇಂದ್ರೀಯ ಸಂಸ್ಥೆಗಳ ದುರುಪಯೋಗ – ಇವೆಲ್ಲವೂ ಅವರ ಗೆಲುವಿಗೆ ಕಾಣಿಕೆ ನೀಡಿವೆ. ಇಂತಹ ಧ್ರುವೀಕೃತ ಪರಿಸ್ಥಿತಿಯಲ್ಲಿಯೂ ಸಹ, ಎಡಪಂಥೀಯರು ತಮ್ಮ ಪ್ರದರ್ಶನವನ್ನು ಸ್ವಲ್ಪಮಟ್ಟಿಗೆ ಉತ್ತಮ ಪಡಿಸಿಕೊಳ್ಳಲು ಸಾಧ್ಯವಾಗಿದೆ.

ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ, ಫಲಿತಾಂಶಗಳು ಬಿಜೆಪಿ ನೇತೃತ್ವದ ಬಲಪಂಥೀಯ ಕೋಮುವಾದಿ ಶಕ್ತಿಗಳ ಉತ್ಕರ್ಷವನ್ನು  ತೋರಿಸುತ್ತವೆ, ಇದು ಎಲ್ಲಾ ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಶಕ್ತಿಗಳಿಗೆ ಆಳವಾದ ಕಳವಳದ ವಿಷಯವಾಗಿದೆ ಎಂದು ಎಂ ಎ ಬೇಬಿ ಹೇಳಿದರು.

ಸಿಪಿಐ(ಎಂ) ಮತ್ತು ಅದರ ಮಿತ್ರಪಕ್ಷಗಳಲ್ಲಿ ನಂಬಿಕೆ ಇರಿಸಿ ಮತ ಚಲಾಯಿಸಿದ ಜನರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತ ಎಂ ಎ ಬೇಬಿಯವರು, ಸಿಪಿಐ(ಎಂ) ಜನರ ತೀರ್ಪನ್ನು ಗೌರವಿಸುತ್ತದೆ ಮತ್ತು ಕೇರಳದಲ್ಲಿ ಎಲ್‌ಡಿಎಫ್ ಸೋಲಿಗೆ ಕಾರಣವಾದ ಕಾರಣಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತದೆ, ಪಕ್ಷವು ಅಗತ್ಯವಿರುವ ಎಲ್ಲಾ ಸರಿಪಡಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಜನರ ಹಕ್ಕುಗಳಿಗಾಗಿ ಮತ್ತು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡುವುದಾಗಿ ಹೇಳಿದರು.

ಮುಂಬರುವ ಪೊಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿಯ ಸಭೆಗಳು ಸಮಗ್ರ ವಿಶ್ಲೇಷಣೆಯನ್ನು ಕೈಗೊಳ್ಳುತ್ತವೆ ಮತ್ತು ಚುನಾವಣಾ ಫಲಿತಾಂಶಗಳಿಂದ ಹೊರಹೊಮ್ಮುತ್ತಿರುವ ಹೊಸ ರಾಜಕೀಯ ಪರಿಸ್ಥಿತಿಯಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ರೂಪಿಸುತ್ತವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಕೇರಳದಲ್ಲಿ ಹೊಸ ವಿರೋಧ ಪಕ್ಷದ ಹೆಗಲ ಮೇಲೆ ದೊಡ್ಡ ಜವಾಬ್ದಾರಿಗಳಿವೆ”

ಕೇರಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಆಡಳಿತ ವಿರೋಧಿ ಭಾವನೆಯಿಂದ ಉಂಟಾಗಿಲ್ಲ ಎಂದು ಕೇರಳದ ಮಾಜಿ ಹಣಕಾಸುಮಂತ್ರಿ ಮತ್ತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಡಾ. ಟಿ.ಎಂ. ಥಾಮಸ್ ಐಸಾಕ್ ಹೇಳಿದ್ದಾರೆ. ಬಿಜೆಪಿಗೆ ಮೂರು ಸ್ಥಾನಗಳ ಗೆಲುವು ಯಾರಿಂದಾಗಿ ಸಂಭವಿಸಿದೆ ಎಂಬುದನ್ನು ಪರಿಶೀಳಿಸಬೇಕಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಚುನಾವಣಾ ಫಲಿತಾಂಶಗಳು ಬಿಡುಗಡೆಯಾದ ನಂತರ ಥಾಮಸ್ ಐಸಾಕ್ ಫೇಸ್‌ಬುಕ್ ಮೂಲಕ ಪ್ರತಿಕ್ರಿಯಿಸುತ್ತ  ಹೊಸ ವಿರೋಧ ಪಕ್ಷದ ಹೆಗಲ ಮೇಲೆ ದೊಡ್ಡ ಜವಾಬ್ದಾರಿಗಳಿವೆ ಎಂದು ಹೇಳಿದ್ದಾರೆ. ಚುನಾವಣೆ

ಎಲ್‌ಡಿಎಫ್ ಇತಿಹಾಸದಲ್ಲಿ ಅತಿದೊಡ್ಡ ಸೋಲುಗಳಲ್ಲಿ ಒಂದು ಈಗ ಸಂಭವಿಸಿದೆ. ಕೇರಳದ ಇತಿಹಾಸದಲ್ಲಿ ಅತ್ಯುತ್ತಮ ಅಭಿವೃದ್ಧಿ ಆಂದೋಲನದ ದಶಕದ ಕೊನೆಯಲ್ಲಿ ಈ ಹಿನ್ನಡೆ ಸಂಭವಿಸಿರುವುದು ಅದೃಷ್ಟದ ತಿರುವು. ಹಿಂದೆಂದೂ ಕಾಣದ ಸಾಮಾಜಿಕ ಮತ್ತು ಕಲ್ಯಾಣ ಅಭಿವೃದ್ಧಿ. ಇದರೊಂದಿಗೆ, ಅಭೂತಪೂರ್ವ ಮೂಲಸೌಕರ್ಯ ನಿರ್ಮಾಣವನ್ನು ಹಿಂದೆಂದೂ ಅನುಭವಿಸಿಲ್ಲ. ಇದು ಮುಂದುವರಿಯಬೇಕೇ? ಅದರ ರಾಜಕೀಯವೇನು? ಎಲ್‌ಡಿಎಫ್ ಈ ಕುರಿತು ಚರ್ಚೆಯನ್ನು ಸೃಷ್ಟಿಸಲು ಪ್ರಯತ್ನಿಸಿತು. ಆದರೆ ಯುಡಿಎಫ್‌ನ ತಪ್ಪು ಮಾಹಿತಿಯ ಅಪಪ್ರಚಾರ  ಮೇಲುಗೈ ಸಾಧಿಸಿದೆ ಎಂಬುದು ಸ್ಪಷ್ಟವಾಗಿದೆ. ಇವುಗಳಲ್ಲಿ ಒಂದು ಬಿಜೆಪಿ-ಎಲ್‌ಡಿಎಫ್ ಒಪ್ಪಂದವಾಗಿದೆ ಎಂದು ಯುಡಿಎಫ್ ನಡೆಸಿದ ನಿರ್ಲಜ್ಜ ಸುಳ್ಳು ಪ್ರಚಾರ. ಚುನಾವಣೆ

ಬಿಜೆಪಿಗೆ ಮೂರು ಸ್ಥಾನಗಳಲ್ಲಿ ಗೆಲುವು ಯಾರಿಂದಾಗಿ ಸಿಕ್ಕಿತು? ಎಲ್‌ಡಿಎಫ್ ಈ ಮೂರರಲ್ಲೂ ಎರಡನೇ ಸ್ಥಾನದಲ್ಲಿದೆ. ಯುಡಿಎಫ್‌ ನಂತರದ ಸ್ಥಾನದಲ್ಲಿದೆ.  2021 ಕ್ಕೆ ಹೋಲಿಸಿದರೆ ಇವುಗಳಲ್ಲಿ ಎರಡರಲ್ಲಿ  ಅದರ ಮತ ಪಾಲು ಸುಮಾರು ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ ಎಂಬ ಸಂಗತಿಯತ್ತ ಅವರು ಗಮನ ಸೆಳೆದಿದ್ದಾರೆ.

ಮುಂಬರುವ ದಿನಗಳಲ್ಲಿ ನಾವು ಸಾಮೂಹಿಕವಾಗಿ ಜನರು ಮತ್ತು ಪಕ್ಷದ ಬೆಂಬಲಿಗರ ಟೀಕೆಗಳನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುತ್ತೇವೆ ಮತ್ತು ಮತ್ತು ತಿದ್ದುಪಡಿಗಳನ್ನು ಮಾಡುತ್ತೇವೆ. ಕೆಲವು ಪ್ರಮುಖ ವೈಫಲ್ಯಗಳಿವೆ ಎಂಬ ತಪ್ಪು ತಿಳುವಳಿಕೆ ಇರಬಾರದು. ಸಾಮಾನ್ಯವಾಗಿ, ಕೇರಳದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರ ಬದಲಾವಣೆಯಾಗುತ್ತಿದೆ, ಈ ಬಾರಿ ಹತ್ತು ವರ್ಷಗಳ ನಂತರ. ಆಗಿದೆ.  ಅದೂ ಕೂಡ ಯಾವುದೇ ಸ್ಪಷ್ಟ ಸರ್ಕಾರ ವಿರೋಧಿ ಭಾವನೆ ಇಲ್ಲದೆ. ಈ ಸಂದರ್ಭದಲ್ಲಿ, ಸ್ವ-ವಿಮರ್ಶೆಯ ಮಹತ್ವ ಹೆಚ್ಚಾಗುತ್ತದೆ ಎಂ<ದು ಅವರು ಹೇಳಿದ್ದಾರೆ.

ಹೊಸ ವಿರೋಧ ಪಕ್ಷವು ದೊಡ್ಡ ಜವಾಬ್ದಾರಿಗಳನ್ನು ಹೊಂದಿದೆ. ಜನಕಲ್ಯಾಣದ ವಿಷಯಗಳಲ್ಲಿ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಶಿಕ್ಷಣದ ರಕ್ಷಣೆಯನ್ನು ಕೈಗೆತ್ತಿಕೊಳ್ಳುವುದು ಅವಶ್ಯಕ. KIIFB ಮೂಲಕ ಪ್ರಾರಂಭಿಸಲಾದ ಯೋಜನೆಗಳು ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಇದರ ಜೊತೆಗೆ, ಯುಡಿಎಫ್ ನೀಡಿದ ಭರವಸೆಗಳು ಕೂಡ ಇವೆ.

ಕೇರಳದ ವಿರುದ್ಧ ಕೇಂದ್ರದ ಕುತಂತ್ರಗಳನ್ನು ಬೆಂಬಲಿಸುವ ಸಂಪ್ರದಾಯವನ್ನು UDF ಹೊಂದಿದೆ. ಇದುವರೆಗಿನ ಅದರ ನಿಲುವನ್ನು ಆಧರಿಸಿ, ಕೇಂದ್ರದ ಆರ್ಥಿಕ ದಿಗ್ಬಂಧನವನ್ನು ನಿವಾರಿಸುವ ಸಾಮರ್ಥ್ಯ UDF ಗೆ ಇದೆಯೇ ಎಂದು ನೋಡಬೇಕಾಗಿದೆ ಎಂದು ಡಾ. ಥಾಮಸ್‌ ಐಸಾಕ್‌ ಹೇಳುತ್ತಾರೆ.

ಇದನ್ನೂ ನೋಡಿ: ಕತ್ತೆ ಕಿರುಬ: ಕಾಡಿನ ಮೌನ ರಕ್ಷಕ, ಪ್ರಕೃತಿಯ ಸ್ವಚ್ಛತಾ ಕಾರ್ಮಿಕ Janashakthi Media

Donate Janashakthi Media

Leave a Reply

Your email address will not be published. Required fields are marked *