ಬಂಡವಾಳಶಾಹಿಯನ್ನು ಸುಧಾರಿಸಬಹುದು ಎಂಬುದು ಬರಿಯ ಭ್ರಮೆ – ಪ್ರೊ. ಪ್ರಭಾತ್‌ ಪಟ್ನಾಯಕ್

ಬಂಡವಾಳಶಾಹಿಯು, ತನ್ನ ಮೇಲೆ ಇರಿಸಲಾದ ಯಾವುದೇ ನಿರ್ಬಂಧಗಳನ್ನು ನಮ್ರತೆಯಿಂದ ಸ್ವೀಕರಿಸುವುದಿಲ್ಲ, ಅಂತಹ ನಿರ್ಬಂಧಗಳನ್ನು ಅದು ಶಾಶ್ವತವಾಗಿ ಜಯಿಸಲು ಪ್ರಯತ್ನಿಸುತ್ತದೆ, ಬಂಡವಾಳಶಾಹಿಯಲ್ಲೇ ಅಡಕವಾಗಿರುವ  ಕೇಂದ್ರೀಕರಣ ಪ್ರವೃತ್ತಿ ಕಾಲಕ್ರಮೇಣ ನಿರ್ಬಂಧಗಳನ್ನು ಶಾಶ್ವತವಾಗಿ ಜಯಿಸುವಲ್ಲಿ ಅದನ್ನು  ಹೆಚ್ಚು ಹೆಚ್ಚು ಸಮರ್ಥಗೊಳಿಸುತ್ತದೆ. ದ್ದರಿಂದ, ಸುಧಾರಿತ ಬಂಡವಾಳಶಾಹಿಯ ಅಥವಾ ಕಲ್ಯಾಣ ಬಂಡವಾಳಶಾಹಿಯ ಬಗೆಗಿನ ಯಾವುದೇ ನೋಟವು ಒಂದು ಹುಚ್ಚು ಕಲ್ಪನೆಯೇ ಆಗಿಬಿಡುತ್ತದೆ. ಅಂದರೆ, ಸಮಾಜವಾದಕ್ಕೆ ಯಾವುದೇ ಪರ್ಯಾಯವಿಲ್ಲ. ಮತ್ತು, ಸಮಾಜವಾದಕ್ಕೆ ಪರಿವರ್ತನೆ ಹೊಂದುವ ಹಂತದಲ್ಲಿ, ಸಣ್ಣ ಬಂಡವಾಳಶಾಹಿ ಉದ್ದಿಮೆಗಳು ಅಸ್ತಿತ್ವದಲ್ಲಿರಲು ಬಿಡುವುದಾದರೆ, ಸದಾ ದೊಡ್ಡದಾಗುತ್ತಲೇ ಹೋಗುವ ಬಂಡವಾಳದ ದಿಮ್ಮಿಗಳನ್ನು ಸೃಷ್ಟಿಸುವ ಕೇಂದ್ರೀಕರಣದಂತಹ ಬಂಡವಾಳದ ಅಂತರ್ಗತ ಪ್ರವೃತ್ತಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿಡುವ ಬಗ್ಗೆ ತೀವ್ರ  ಕಾಳಜಿ ವಹಿಸಬೇಕಾಗುತ್ತದೆ. ಸುಧಾರಿಸಬಹುದು

– ಅನು: ಕೆ.ಎಂ.ನಾಗರಾಜ್

ಬಂಡವಾಳಶಾಹಿಯನ್ನು ಹೆಚ್ಚು ಮಾನವೀಯವಾಗುವಂತೆ ಮತ್ತು ಸಮಾಜ ಒಪ್ಪುವ ರೀತಿಯಲ್ಲಿ “ಸುಧಾರಿಸಬಹುದು” ಎಂಬ ನಂಬಿಕೆಯನ್ನು ಸಾಮಾನ್ಯವಾಗಿ ಪ್ರಗತಿಪರ ಉದಾರವಾದಿಗಳು ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು ಹೊಂದಿದ್ದಾರೆ. ಈ ಕಾರ್ಯವನ್ನು ಒಂದು ರಾಜಕೀಯ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮೂಲಕ ದೊರಕುವ ಪ್ರಭುತ್ವದ ಅಧಿಕಾರವನ್ನು ಬಳಕೆ ಮಾಡುವ ಮೂಲಕ ಸಾಧಿಸಬಹುದು ಮತ್ತು ಸುಧಾರಣೆ ಹೊಂದಿದ ಬಂಡವಾಳಶಾಹಿಯ ಈ ಸ್ಥಿತಿಯನ್ನು ಸದಾಕಾಲಕ್ಕೂ ಸಂಸ್ಥೀಕರಿಸಿದಾಗ ಸಮಾಜವಾದಕ್ಕಾಗಿ ನಡೆಯುವ ಯಾವುದೇ ಹೋರಾಟವೂ ಸರ್ವದಾ ಅನವಶ್ಯವಾಗುತ್ತದೆ ಎಂದು ಅವರು ನಂಬುತ್ತಾರೆ. ಸುಧಾರಿಸಬಹುದು

ಈ ನಂಬಿಕೆಯ ಸೈದ್ಧಾಂತಿಕ ಆಧಾರವನ್ನು ಜೆ.ಎಂ. ಕೀನ್ಸ್ರವರ ಅರ್ಥಶಾಸ್ತ್ರವು ಒದಗಿಸಿದೆ (ಅವರು ಸ್ವತಃ ಕೇಂಬ್ರಿಡ್ಜ್ ಅರ್ಥಶಾಸ್ತ್ರ ಪರಂಪರೆಯ ಸುಧಾರಣಾವಾದಿ ಬೌದ್ಧಿಕ ಸಂಪ್ರದಾಯದಿಂದ ಆಕರ್ಷಿತರಾಗಿದ್ದವರು). ತಮ್ಮ ಈ ತಾತ್ವಿಕ ಚಿಂತನೆಯನ್ನು ಕೀನ್ಸ್ “ಹೊಸ ಉದಾರವಾದ” ಎಂದು ಕರೆದರು. “ಹೊಸ” ಎಂಬ ಪೂರ್ವಪ್ರತ್ಯಯವನ್ನು ಸೇರಿಸಲಾಯಿತು ಏಕೆಂದರೆ ಅದು ಸಾಂಪ್ರದಾಯಿಕವಾಗಿ ಉದಾರವಾದ ಅರ್ಥವ್ಯವಸ್ಥೆಯಲ್ಲಿ ಪ್ರಭುತ್ವವು ತಲೆಹಾಕಬಾರದು ಎಂದು ಪ್ರತಿಪಾದಿಸಿಕೊಂಡು ಬಂದಿತ್ತು. ಆದರೆ  ಕೀನ್ಸ್‌ರವರ “ಹೊಸ ಉದಾರವಾದ”, ಅದಕ್ಕೆ ತದ್ವಿರುದ್ಧವಾಗಿ, ತಮ್ಮ ಪೂರ್ಣ ಉದ್ಯೋಗ ಮತ್ತು ವರಮಾನ ವಿತರಣೆಯಲ್ಲಿ ಹೆಚ್ಚಿನ ಸಮಾನತೆಯನ್ನು ಸಾಧಿಸುವುದಕ್ಕಾಗಿ ಪ್ರಭುತ್ವವು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಬೇಕು ಎಂದು ಪ್ರತಿಪಾದಿಸಿತು.. ಸುಧಾರಿಸಬಹುದು

ಇದನ್ನೂ ಓದಿ: ಅಮೋನಿಯಾ ಸೋರಿಕೆ ದುರಂತ – ಮೃತರ ಸಂಖ್ಯೆ 9ಕ್ಕೆ ಏರಿಕೆ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಆತಂಕ

ಎರಡನೇ ಮಹಾಯುದ್ಧಾನಂತರದ ಯುರೋಪಿನಲ್ಲಿ, ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕಾಗಿ ಮತ್ತು ಪ್ರಭುತ್ವದ ಪ್ರಜಾಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವುದಕ್ಕಾಗಿ ಅಸ್ತಿತ್ವಕ್ಕೆ ಬಂದ ಹಲವಾರು ಸೋಶಿಯಲ್‌ ಡೆಮಾಕ್ರೆಟಿಕ್ ಸರ್ಕಾರಗಳು ಕೀನ್ಸ್‌ವಾದೀ ಕಾರ್ಯಸೂಚಿಯನ್ನು ಅಳವಡಿಸಿಕೊಂಡವು. ಒಂದು “ಮಾನವೀಯ ಮುಖದ ಬಂಡವಾಳಶಾಹಿ”ಯನ್ನು ನಿರ್ಮಿಸುವುದು ಅವರ ವಿಚಾರವಾಗಿತ್ತು. ಸುಧಾರಿಸಬಹುದು

ಆದರೆ, ಯುದ್ಧಾನಂತರದ ಕೆಲವೇ ಕೆಲವು ವರ್ಷಗಳಲ್ಲಿ ನವ-ಉದಾರವಾದವು ಯುರೋಪಿನ ಈ ಪ್ರಯೋಗವನ್ನು ಹಿಂದಕ್ಕೆ ತಳ್ಳಿತು. ಉದ್ಯೋಗಾವಕಾಶಗಳನ್ನು ಯಶಸ್ವಿಯಾಗಿ ಹೆಚ್ಚಿಸುವುದಕ್ಕಾಗಿ ಪ್ರಭುತ್ವವು ಕೈಗೊಳ್ಳುವ ವೆಚ್ಚಗಳಿಗೆ ಬೇಕಾಗುತ್ತಿದ್ದ ಹಣವನ್ನು ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ಅಧಿಕ ತೆರಿಗೆಗಳನ್ನು ಹೇರುವ ಮೂಲಕ ಒದಗಿಸಿಕೊಳ್ಳಲಾಗತ್ತಿದ್ದ ಕ್ರಮವು ಹಣಕಾಸು ಬಂಡವಾಳದ ವಿರೋಧದ ಕಾರಣದಿಂದಾಗಿ ಅಸಾಧ್ಯವಾಯಿತು; ಜಾರಿಯಲ್ಲಿದ್ದ ಕಲ್ಯಾಣ ಪ್ರಭುತ್ವದ ಕಾರ್ಯಕ್ರಮಗಳನ್ನು ನಿಖರವಾಗಿ ಹಿಂತೆಗೆದುಕೊಳ್ಳದಿದ್ದರೂ, ಹಂತ ಹಂತವಾಗಿ ಕಡಿತಗೊಳಿಸಲಾಯಿತು. ಈ ರೀತಿಯಲ್ಲಿ ಹೆಚ್ಚುತ್ತಿದ್ದ ನಿರುದ್ಯೋಗದ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಫ್ರಾಂಕ್‌ವ ಮಿತ್ತೆರಾ ಅವರು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಈ ಕೀನ್ಸ್-ಪ್ರತಿಪಾದಿತ ಕ್ರಮಗಳನ್ನು ಅಳವಡಿಸಿಕೊಂಡಾಗ ಜರುಗಿದ ಘಟನಾವಳಿಗಳು ಪರಿಸ್ಥಿತಿ ಬದಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಸಾರಿದವು.

ಉದ್ಯೋಗಗಳು ಹೆಚ್ಚುವ ಮಾತಿರಲಿ, ಫ್ರಾನ್ಸ್‌ನಿಂದ ಹಣಕಾಸಿನ (ಹೂಡಿಕೆಯ) ಹೊರಹರಿವು ಆರಂಭವಾಯಿತು. ಫ್ರೆಂಚ್ ಕರೆನ್ಸಿ (ಫ್ರಾಂಕ್) ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಪಮೌಲ್ಯಕ್ಕೊಳಗಾಯಿತು. “ಹೂಡಿಕೆದಾರರ ವಿಶ್ವಾಸ”ವನ್ನು ಪುನಃ ಸಂಪಾದಿಸಲು (ಇದು ಒಂದಿಷ್ಟು ಸಟ್ಟಾಕೋರರನ್ನು ಕೇವಲ ತೃಪ್ತಿಪಡಿಸುವ ಕ್ರಮವಲ್ಲದೆ ಬೇರೇನೂ ಅಲ್ಲ) ಮಿತ್ತೆರಾ, ಕೀನ್ಸ್-ಪ್ರತಿಪಾದಿತ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ಬಂಡವಾಳಶಾಹಿಯನ್ನು “ಉತ್ತಮಪಡಿಸಲು” ಪ್ರಭುತ್ವವು ಮಧ್ಯಪ್ರವೇಶಿಸುವುದರ ಬದಲು, ಸ್ವತಃ ಪ್ರಭುತ್ವವೇ ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಸೆರೆಯಾಳಾಯಿತು. ತನಗೆ ಇಷ್ಟವಿರಲಿ, ಬಿಡಲಿ ಹಣಕಾಸು ಬಂಡವಾಳದ ಆಜ್ಞೆಯನ್ನು ಪ್ರಭುತ್ವವು ಪಾಲಿಸಬೇಕಾಯಿತು. ಉದಾರ-ಪ್ರಜಾಸತ್ತಾತ್ಮಕ ಸಮಾಜವಾದಿ ಬೌದ್ಧಿಕ-ರಾಜಕೀಯ ವಲಯಗಳು ಈ “ಸುಧಾರಿತ” ಬಂಡವಾಳಶಾಹಿಯಲ್ಲಿ ಇರಿಸಿದ್ದ ಅಪಾರ ನಿರೀಕ್ಷೆಗಳನ್ನು ಸುಳ್ಳಾಗಿಸಿ “ಸುಧಾರಿತ” ಬಂಡವಾಳಶಾಹಿ ಎಂಬುದು ಒಂದು ಭ್ರಾಂತಿ ಎಂಬುದು ಸಾಬೀತಾಯಿತು. ಸುಧಾರಿಸಬಹುದು

ಫ್ರಾನ್ಸ್‌ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಫ್ರಾಂಕ್‌ವ ಮಿತ್ತೆರಾ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಈ ಕೀನ್ಸ್-ಪ್ರತಿಪಾದಿತ ಕ್ರಮಗಳನ್ನು ಅಳವಡಿಸಿಕೊಂಡಾಗ “ಹೂಡಿಕೆದಾರರ ವಿಶ್ವಾಸ”ವನ್ನು ಪುನಃ ಸಂಪಾದಿಸಲು  ಆ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ಬಂಡವಾಳಶಾಹಿಯನ್ನು “ಉತ್ತಮಪಡಿಸಲು” ಪ್ರಭುತ್ವವು ಮಧ್ಯಪ್ರವೇಶಿಸುವುದರ ಬದಲು, ಸ್ವತಃ ಪ್ರಭುತ್ವವೇ ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಸೆರೆಯಾಳಾಯಿತು. ತನಗೆ ಇಷ್ಟವಿರಲಿ, ಬಿಡಲಿ ಹಣಕಾಸು ಬಂಡವಾಳದ ಆಜ್ಞೆಯನ್ನು ಪ್ರಭುತ್ವವು ಪಾಲಿಸಬೇಕಾಯಿತು. ಉದಾರ-ಪ್ರಜಾಸತ್ತಾತ್ಮಕ ಸಮಾಜವಾದಿ ಬೌದ್ಧಿಕ-ರಾಜಕೀಯ ವಲಯಗಳು ಈ “ಸುಧಾರಿತ” ಬಂಡವಾಳಶಾಹಿಯಲ್ಲಿ ಇರಿಸಿದ್ದ ಅಪಾರ ನಿರೀಕ್ಷೆಗಳನ್ನು ಸುಳ್ಳಾಗಿಸಿ “ಸುಧಾರಿತ” ಬಂಡವಾಳಶಾಹಿ ಎಂಬುದು ಒಂದು ಭ್ರಾಂತಿ ಎಂಬುದು ಸಾಬೀತಾಯಿತು. ಸುಧಾರಿಸಬಹುದು

ನಿಯಂತ್ರಿತ ಬಂಡವಾಳಶಾಹಿಯ ಕಲ್ಪನೆ

ಮಹಾಯುದ್ಧಾನಂತರದ ಅವಧಿಯಲ್ಲಿ ಒಂದು ನಿಯಂತ್ರಿತ ಬಂಡವಾಳಶಾಹಿಯನ್ನು ಹೊಂದುವ ಇಂತಹ ನೋಟವು ಮುಂದುವರಿದ ದೇಶಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಜಾಗತಿಕ ದಕ್ಷಿಣದ ಅನೇಕ ದೇಶಗಳಲ್ಲಿ, ರಾಷ್ಟ್ರೀಯ, (ದಲ್ಲಾಳಿ ಬಂಡವಾಳಶಾಹಿಗಳಿಗಿಂತ ಭಿನ್ನವಾದ) ದೇಶಪ್ರೇಮಿ ಬೂರ್ಜ್ವಾಗಳು ಗಣನೀಯ ಸಂಖ್ಯೆಯಲ್ಲಿದ್ದರು ಮತ್ತು ಅವರು ವಸಾಹತುಶಾಹಿ-ವಿರೋಧಿ ರಂಗದ ಭಾಗವಾಗಿದ್ದರು. ವಸಾಹತುಶಾಹಿಯಿಂದ ಬಿಡುಗಡೆ ಹೊಂದಿದ ನಂತರ ಅಸ್ತಿತ್ವಕ್ಕೆ ಬಂದ ಆರ್ಥಿಕ ನೀತಿಯ ಆಳ್ವಿಕೆಯು, ದೇಶವು ಸಾರ್ವಜನಿಕ ವಲಯದ ನೇತೃತ್ವದ “ಸಮಾಜವಾದಿ” ದಿಕ್ಕಿನ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದರೂ ಸಹ, ಬಂಡವಾಳಗಾರರಿಗೂ ಒಂದು ಪಾತ್ರವನ್ನು ಕಲ್ಪಿಸಿಕೊಟ್ಟಿತ್ತು. ಸುಧಾರಿಸಬಹುದು

ಉದಾಹರಣೆಗೆ, “ಸಮಾಜವಾದಿ ಮಾದರಿಯ ಸಮಾಜ”ವನ್ನು ನಿರ್ಮಿಸುವುದು ಅಭಿವೃದ್ಧಿಯ ಉದ್ದೇಶವೆಂದು ವರ್ಣಿಸಲಾದ ಭಾರತದಲ್ಲಿ ಈ ಗುರಿಯತ್ತ ಸಾಗುತ್ತಿರುವಾಗ ಅರ್ಥವ್ಯವಸ್ಥೆಯೊಳಗೆ ಉಳಿದಿರುವ ಮತ್ತು ಸಹಕರಿಸುವ ಸ್ವಭಾವದ ಬಂಡವಾಳಶಾಹಿ ದ್ವೀಪವು ಉತ್ಪಾದಕ ಶಕ್ತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಈ ಅಂತಿಮ ಗುರಿಯ ಸಾಧನೆಯನ್ನು ಹಾಳುಗೆಡವದಂತೆ ಅದನ್ನು ನಿಯಂತ್ರಿಸಬಹುದು ಎಂಬ ಒಂದು ಪೂರ್ವಕಲ್ಪನೆ ಇತ್ತು.

ಆದಾಗ್ಯೂ, ಈ ಹಿಂದಿನ ನೂರು ವರ್ಷಗಳ ಅವಧಿಯ ಯಾವ ಸಮಯದಲ್ಲೂ ಇಲ್ಲದಷ್ಟು ಹೆಚ್ಚಿನ ಮಟ್ಟದ ವರಮಾನ-ಅಸಮಾನತೆಯನ್ನು ಇಂದು ಭಾರತ ಹೊಂದಿದೆ ಮತ್ತು ವಿಶ್ವದಲ್ಲಿ ಅತ್ಯುನ್ನತ ಮಟ್ಟದ ವರಮಾನ-ಅಸಮಾನತೆಯನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಅದಕ್ಕಿಂತಲೂ ಮಿಗಿಲಾಗಿ, ಅಸಮಾನತೆಯ ಮಟ್ಟದ ಈ ತೀವ್ರ ಏರಿಕೆಯು ಎಂಬತ್ತರ ದಶಕದ ಆರಂಭದವರೆಗೂ ಇದ್ದ ಪ್ರವೃತ್ತಿಯನ್ನು ತಲೆಕೆಳಗು ಮಾಡಿದೆ: ಸ್ವಾತಂತ್ರ್ಯದ ಸಮಯದಲ್ಲಿ ರಾಷ್ಟ್ರೀಯ ವರಮಾನದಲ್ಲಿ ಶೇ. 12ರಷ್ಟು ಪಾಲನ್ನು ಹೊಂದಿದ್ದ ಜನಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಮಂದಿಯ ಪಾಲು 1982ರ ಹೊತ್ತಿಗೆ ಶೇ. 6ಕ್ಕೆ ಇಳಿದಿತ್ತು; ಅಂದಿನಿಂದ ನವ-ಉದಾರವಾದದ ಆಳ್ವಿಕೆಯ 2022-23ರ ವೇಳೆಗೆ ಈ ಪಾಲು ಶೇ. 22.6ಕ್ಕೆ ಏರಿದೆ (ಈ ಅಂಕಿ-ಅಂಶಗಳನ್ನು ವಿಶ್ವ ಅಸಮಾನತೆ ಡೇಟಾಬೇಸ್‌ನಿಂದ ತೆಗೆದುಕೊಳ್ಳಲಾಗಿದೆ).

ನಿಯಂತ್ರಿತವಾಗಿದ್ದ ಮತ್ತು ಅದರಿಂದಾಗಿ  ಸುಧಾರಿಸಿದ ಬಂಡವಾಳಶಾಹಿಯ ಬಗೆಗಿನ ನೋಟವು ಒಂದು ಭ್ರಾಂತಿಯಾಗಿ ಮಾರ್ಪಟ್ಟಿರುವುದಾದರೂ ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮುಂದುವರೆದ ದೇಶಗಳ ಅರ್ಥವ್ಯವಸ್ಥೆಗಳಲ್ಲಿ ಸ್ವಯಂಸ್ಫೂರ್ತ ಬಂಡವಾಳಶಾಹಿ ಅದಾಗಲೇ ಮತ್ತೆ ಪ್ರಾಬಲ್ಯ ಪಡೆದ ನಂತರ, ಭಾರತದಂತಹ ಜಾಗತಿಕ ದಕ್ಷಿಣದ ದೇಶಗಳಲ್ಲೂ ಸಹ ಅಂತಹ ಮರು ಪ್ರಾಬಲ್ಯ  ಅನಿವಾರ್ಯವಾದರೂ ಕೂಡ, ಮುಂದುವರೆದ ದೇಶಗಳ ಅರ್ಥವ್ಯವಸ್ಥೆಗಳಲ್ಲಿ  ಅಂತಹ ಮರು ಪ್ರಾಬಲ್ಯ ಏಕೆ ಕಂಡು ಬಂತು ಎಂಬ ಪ್ರಶ್ನೆ ಮತ್ತೂ ಉಳಿಯುತ್ತದೆ. ಈ ಪ್ರಶ್ನೆಗೆ ಬಂಡವಾಳಶಾಹಿಯ ಸ್ವರೂಪದಲ್ಲೇ ಉತ್ತರವಿದೆ.

ಬಂಡವಾಳದ ಅರಾಜಕತೆ

ಬಂಡವಾಳಶಾಹಿಯ ಸ್ವರೂಪವನ್ನು ಕೀನ್ಸ್‌  ಅರ್ಧದಷ್ಟು  ಮಾತ್ರ ಅರ್ಥಮಾಡಿಕೊಂಡಿದ್ದರು. ಅವರು ಸ್ಪಷ್ಟವಾಗಿ ಕಂಡದ್ದು ಏನೆಂದರೆ, ಈ ವ್ಯವಸ್ಥೆಯಲ್ಲಿ ಪ್ರತಿಯೊಂದು ವೈಯಕ್ತಿಕ ನಿರ್ಧಾರವನ್ನೂ ಕೆಲವು “ತರ್ಕಬದ್ಧ” ಲೆಕ್ಕಾಚಾರಗಳ ಆಧಾರದ ಮೇಲೆ ತೆಗೆದುಕೊಂಡಿದ್ದರೂ, ಅವುಗಳನ್ನೆಲ್ಲ ಒಟ್ಟುಗೂಡಿಸಿದಾಗ ಅದರ  ಒಟ್ಟಾರೆ ಫಲಿತಾಂಶವು “ತರ್ಕಬದ್ಧ”ವಾಗಿರುತ್ತದೆ ಎಂದು ಹೇಳಲಾಗದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ವ್ಯವಸ್ಥೆಯು ಅರಾಜಕತೆಗೆ ಒಳಪಟ್ಟಿರುತ್ತದೆ. ಈ ಅರಾಜಕತೆಯನ್ನು ಕೀನ್ಸ್ ಗುರುತಿಸಿದ್ದರು ಮತ್ತು ಈ ಅರಾಜಕತೆಯನ್ನು ನಿವಾರಿಸಲು ಪ್ರಭುತ್ವವು ಮಧ್ಯಪ್ರವೇಶಿಸಬೇಕೆಂದು ಬಯಸಿದ್ದರು.

ನಿಯಂತ್ರಿತವಾಗಿದ್ದ ಮತ್ತು ಅದರಿಂದಾಗಿ  ಸುಧಾರಿಸಿದ ಬಂಡವಾಳಶಾಹಿಯ ಬಗೆಗಿನ ನೋಟವು ಒಂದು ಭ್ರಾಂತಿಯಾಗಿ ಮಾರ್ಪಟ್ಟಿರುವುದಾದರೂ ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮುಂದುವರೆದ ದೇಶಗಳ ಅರ್ಥವ್ಯವಸ್ಥೆಗಳಲ್ಲಿ ಸ್ವಯಂಸ್ಫೂರ್ತ ಬಂಡವಾಳಶಾಹಿ ಅದಾಗಲೇ ಮತ್ತೆ ಪ್ರಾಬಲ್ಯ ಪಡೆದ ನಂತರ, ಭಾರತದಂತಹ ಜಾಗತಿಕ ದಕ್ಷಿಣದ ದೇಶಗಳಲ್ಲೂ ಸಹ ಅಂತಹ ಮರು ಪ್ರಾಬಲ್ಯ  ಅನಿವಾರ್ಯವಾದರೂ ಕೂಡ, ಮುಂದುವರೆದ ದೇಶಗಳ ಅರ್ಥವ್ಯವಸ್ಥೆಗಳಲ್ಲಿ  ಅಂತಹ ಮರು ಪ್ರಾಬಲ್ಯ ಏಕೆ ಕಂಡು ಬಂತು ಎಂಬ ಪ್ರಶ್ನೆ ಮತ್ತೂ ಉಳಿಯುತ್ತದೆ. ಈ ಪ್ರಶ್ನೆಗೆ ಬಂಡವಾಳಶಾಹಿಯ ಸ್ವರೂಪದಲ್ಲೇ ಉತ್ತರವಿದೆ.

ಅರಾಜಕತೆ ಬಂಡವಾಳಶಾಹಿಯ ಲಕ್ಷಣಗಳಲ್ಲಿ ಒಂದು ಮಾತ್ರ. ಬಂಡವಾಳಶಾಹಿಯ ಶೋಷಣಾ ಸ್ವಭಾವದ ಹೊರತಾಗಿ, ಅದಕ್ಕೆ ಇನ್ನೊಂದು ಗುಣವೂ ಇದೆ-ಅದೊಂದು  ಒಂದು ಸ್ವಯಂಸ್ಫೂರ್ತ ಅಥವಾ ಸ್ವಯಂ-ಚಾಲಿತ ವ್ಯವಸ್ಥೆ. ಬಿಡಿ ಬಿಡಿ ಆರ್ಥಿಕ ಮಾಧ್ಯಮಗಳು ಒಂದೊಂದೂ  ಯಾವ ರೀತಿಯಲ್ಲಿ ವರ್ತಿಸುತ್ತವೆಯೋ ಅದು ಸ್ಪರ್ಧೆಯ ಒತ್ತಾಯದಿಂದಾಗಿ ತೋರುವ ವರ್ತನೆ ಮತ್ತು ಇಡೀ ವ್ಯವಸ್ಥೆಯ ಕಾರ್ಯನಿರ್ವಹಣೆಯು ಇಂತಹ ಬಿಡಿ-ಬಿಡಿ ವೈಯಕ್ತಿಕ ಆರ್ಥಿಕ ಮಾಧ್ಯಮಗಳ ಇಚ್ಛೆ ಹಾಗೂ ಪ್ರಜ್ಞೆಯಿಂದ ಸ್ವತಂತ್ರವಾಗಿದ್ದು, ಅದು ಒಂದಷ್ಟು ಸ್ವಯಂಸ್ಫೂರ್ತ ಪ್ರವೃತ್ತಿಗಳನ್ನು ಹೊಂದಿದೆ.

ಕೇಂದ್ರೀಕರಣದ ಪ್ರವೃತ್ತಿ ಮತ್ತು ನಿಯಂತ್ರಣವನ್ನು ಮೀರುವ ಸಾಮರ್ಥ್ಯ

ಮಾರ್ಕ್ಸ್ ಹೇಳಿದ ಬಂಡವಾಳಶಾಹಿಯ ಅಂತಹ ಒಂದು ಪ್ರವೃತ್ತಿಯೆಂದರೆ, ಕೇಂದ್ರೀಕರಣದತ್ತ ಬಂಡವಾಳದ ಪ್ರವೃತ್ತಿ. ಅಂದರೆ, ಬಂಡವಾಳವು ಕಾಲಕ್ರಮೇಣ ಇನ್ನೂ ಹೆಚ್ಚೆಚ್ಚು ಪ್ರಮಾಣದಲ್ಲಿ ಕೇಂದ್ರೀಕರಣಗೊಳ್ಳುತ್ತಾ ಹೋಗುತ್ತದೆ. ಆದರೆ, ಬಂಡವಾಳದ ಹೆಚ್ಚು ಚರ್ಚೆಯಾಗದ ಒಂದು ಅಂತರ್ಗತ ಪ್ರವೃತ್ತಿಯೆಂದರೆ, ಬಂಡವಾಳವು ತನ್ನ ಮೇಲೆ ಇರಿಸಲಾದ ಯಾವುದೇ ನಿರ್ಬಂಧಗಳನ್ನು ಜಯಿಸಲು ಅಥವಾ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತದೆ. ಇದು ಹೊಸ ಹೊಸ ಪ್ರಕ್ರಿಯೆಗಳು ಮತ್ತು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಬಂಡವಾಳದ ಪ್ರವೃತ್ತಿಯನ್ನು ನಿಖರವಾಗಿ ಹೋಲುತ್ತದೆ. ಸುಧಾರಿಸಬಹುದು

ಒಂದು ಸಂದರ್ಭದಲ್ಲಿ ಪ್ರಭುತ್ವವು ವಿಧಿಸುವ ನಿರ್ಬಂಧಗಳನ್ನು ಜಯಿಸುವುದೇ ಒಂದು ಧಾವಂತವಾಗುತ್ತದೆ, ಏಕೆಂದರೆ, ಯಾರು ಅದನ್ನು ಮೊದಲು ಮಾಡುತ್ತಾರೆಯೋ ಅವರು ಅಧಿಕ ಲಾಭ ಪಡೆಯುತ್ತಾರೆ; ಮತ್ತೊಂದು ಸಂದರ್ಭದಲ್ಲಿ ತಾಂತ್ರಿಕವಾಗಿ ಎದುರಾಗುವ ಉತ್ಪಾದನಾ ನಿರ್ಬಂಧಗಳನ್ನು ಜಯಿಸುವುದೇ ಒಂದು ಪ್ರವೃತ್ತಿಯಾಗುತ್ತದೆ, ಏಕೆಂದರೆ, ಯಾರು ಅದನ್ನು ಮೊದಲು ಮಾಡುತ್ತಾರೆಯೋ ಅವರು ಅಧಿಕ ಲಾಭವನ್ನು ಮೊದಲು ಪಡೆಯುತ್ತಾರೆ.

ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಪ್ರಭುತ್ವವು ತನ್ನ ಮೇಲೆ ಹೇರಿದ ನಿರ್ಬಂಧವನ್ನು ಸುಲಭವಾಗಿ ದಾಟಿ ಹೋಗುವಲ್ಲಿ ಬಂಡವಾಳವು ಯಶಸ್ವಿಯಾಗದಿರಬಹುದು. ಆದರೆ ಕೇಂದ್ರೀಕರಣವು ಬಂಡವಾಳದ ಗಾತ್ರವನ್ನು ಕಾಲಕ್ರಮೇಣ ಹೆಚ್ಚಿಸುತ್ತಲೇ ಇರುವುದರಿಂದ, ಈ ನಿರ್ಬಂಧವನ್ನು ಜಯಿಸುವ ಅಥವಾ ದಾಟಿ ಹೋಗುವ ಬಂಡವಾಳದ ಸಾಮರ್ಥ್ಯವೂ ಸಹ ಹೆಚ್ಚುತ್ತಾ ಹೋಗುತ್ತದೆ, ಏಕೆಂದರೆ, ಅಂತಹ ನಿರ್ಬಂಧವನ್ನು ಜಯಿಸಲು ದೊಡ್ಡ ಬಂಡವಾಳವು ಸಣ್ಣ ಬಂಡವಾಳಕ್ಕಿಂತ ಹೆಚ್ಚು ಸಾಮರ್ಥ್ಯ ಹೊಂದಿರುತ್ತದೆ. ಆದ್ದರಿಂದ ಯಾವುದೇ ನಿರ್ದಿಷ್ಟ ಅವಧಿಯಲ್ಲಿ ಅಥವಾ ಅನುಕ್ರಮ ಅವಧಿಗಳಲ್ಲಿ ಬಂಡವಾಳವು ಕೆಲವು ನಿರ್ಬಂಧಗಳಿಗೆ ಒಳಪಟ್ಟಿದ್ದರೂ, ಕಾಲಕ್ರಮೇಣ ಕೇಂದ್ರೀಕರಣ ಸಂಭವಿಸಿದಂತೆಯೇ ಇಂದು ಒಳಪಟ್ಟಿವೆ ಎಂದು ತೋರುವ ಅದೇ ನಿರ್ಬಂಧಗಳನ್ನು ನಾಳೆ ದಾಟಿ ಹೋಗುವ ಸಾಧ್ಯತೆಯಂತೂ ಇದ್ದೇ ಇದೆ. ಸುಧಾರಿಸಬಹುದು

ಅಂದರೆ, ಬಂಡವಾಳಶಾಹಿಯ ನಿಯಂತ್ರಿತ ಸ್ಥಿತಿಯು ಶಾಶ್ವತವೇನಲ್ಲ. ನಿಯಂತ್ರಣಗಳು ಕೆಲ ಕಾಲ ಪ್ರಭಾವ ಹೊಂದಿದ್ದರೂ ಮತ್ತು ನಿಯಂತ್ರಿತ ಬಂಡವಾಳಶಾಹಿಯು ಕೆಲ ಕಾಲ ಅದೇ ಸ್ಥಿತಿಯಲ್ಲಿ ಉಳಿದಿದ್ದರೂ, ಸದಾ ಸಂಭವಿಸುವ ಬಂಡವಾಳದ ಕೇಂದ್ರೀಕರಣವು ಕಾಲಕ್ರಮೇಣ ನಿಯಂತ್ರಣಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮಾಡುತ್ತದೆ.. ಸುಧಾರಿಸಬಹುದು

ಇದೇನೂ ಊಹಾಪೋಹದ ಮಾತಲ್ಲ. ನಿಖರವಾಗಿ ಇದೇ ರೀತಿಯಲ್ಲಿ ಕೀನ್ಸ್‌ರವರ ಸಿದ್ಧಾಂತವನ್ನು ದುರ್ಬಲಗೊಳಿಸಲಾಯಿತು. ಮುಂದುವರಿದ ಬಂಡವಾಳಶಾಹಿ ದೇಶಗಳ ಪೈಕಿ ತಾತ್ಕಾಲಿಕ ಪಾವತಿ ಶೇಷದ ಬೆಂಬಲ ಅಗತ್ಯವಿದ್ದವರು ಇತರ ದೇಶಗಳಿಂದ ಅಲ್ಪಾವಧಿಯ ಹಣಕಾಸಿನ ನೆರವನ್ನು ಸ್ವೀಕರಿಸುವುದು ಅನುಕೂಲಕರವೆಂದು ಕಂಡುಕೊಂಡರು. ಆರಂಭದಲ್ಲಿ ಇಂತಹ ಅಲ್ಪಾವಧಿಯ ಹಣವು ಹೆಚ್ಚಿನ ಮಟ್ಟದ ಉದ್ಯೋಗವನ್ನು ಮತ್ತು ಜನಕಲ್ಯಾಣ ವೆಚ್ಚದ ಮಟ್ಟವನ್ನು ಕಾಯ್ದುಕೊಳ್ಳು ಪ್ರಭುತ್ವದ ಮಧ್ಯಪ್ರವೇಶದ ಶಕ್ತಿ-ಸಾಮರ್ಥ್ಯಗಳಿಗೆ ಒಂದು ಅಡಚಣೆ ಎನಿಸಲಿಲ್ಲ.  ಸುಧಾರಿಸಬಹುದು

ಆದರೆ ಬಂಡವಾಳದ ಕೇಂದ್ರೀಕರಣವು ಸಂಭವಿಸುತ್ತಿದ್ದಂತೆಯೇ ಮತ್ತು ಅರ್ಥವ್ಯವಸ್ಥೆಯೊಳಕ್ಕೆ ಬರುವ ಅಲ್ಪಾವಧಿ ಹಣಕಾಸು ಪಿಂಚಣಿ ನಿಧಿಗಳಂತಹ ಬೃಹತ್‌ ಅಂತರರಾಷ್ಟ್ರೀಯ ನಿಧಿ ಸಂಸ್ಥೆಗಳಿಂದ ದೊಡ್ಡ ಪ್ರಮಾಣದಲ್ಲಿ ಒಳಕ್ಕೆ ಹರಿದು ಬರುತ್ತಿದ್ದಂತೆಯೇ, ಅವುಗಳ ನಿರ್ಗಮನಗಳೂ (withdrawals) ಸಹ ಬೃಹತ್‌ ಪ್ರಮಾಣದಲ್ಲಿರುತ್ತವೆ. ಆಗ ಪ್ರಭುತ್ವದ ನೀತಿ ಅಂತಹ ನಿರ್ಗಮನಗಳನ್ನು ತಡೆಯುವ ನಿಟ್ಟಿನಲ್ಲಿ ಸಜ್ಜಾಯಿತು ಮತ್ತು ಈ ಕಾರ್ಯವನ್ನು ಅದು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅನುಮೋದಿಸಿದ ನೀತಿಗಳನ್ನು ಅನುಸರಿಸುವ ಮೂಲಕ ಮಾಡಿತು. ಸುಧಾರಿಸಬಹುದು

ಬಂಡವಾಳಶಾಹಿಯ ನಿಯಂತ್ರಿತ ಸ್ಥಿತಿಯು ಶಾಶ್ವತವೇನಲ್ಲ. ನಿಯಂತ್ರಣಗಳು ಕೆಲ ಕಾಲ ಪ್ರಭಾವ ಹೊಂದಿದ್ದರೂ ಮತ್ತು ನಿಯಂತ್ರಿತ ಬಂಡವಾಳಶಾಹಿಯು ಕೆಲ ಕಾಲ ಅದೇ ಸ್ಥಿತಿಯಲ್ಲಿ ಉಳಿದಿದ್ದರೂ, ಸದಾ ಸಂಭವಿಸುವ ಬಂಡವಾಳದ ಕೇಂದ್ರೀಕರಣವು ಕಾಲಕ್ರಮೇಣ ನಿಯಂತ್ರಣಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮಾಡುತ್ತದೆ.. ಇದೇ ರೀತಿಯಲ್ಲಿ ಕೀನ್ಸ್‌ರವರ ಸಿದ್ಧಾಂತವನ್ನು ದುರ್ಬಲಗೊಳಿಸಲಾಯಿತು. ಕಲ್ಯಾಣ ಬಂಡವಾಳಶಾಹಿ ಎಂಬುದು ಒಂದು ಭ್ರಾಂತಿಯಾಗಿರುವುದರಿಂದ, ಸಮಾಜವಾದಕ್ಕೆ ಯಾವುದೇ ಪರ್ಯಾಯವಿಲ್ಲ.

ನವ-ಫ್ಯಾಸಿಸಂನ ತಳದಲ್ಲಿರುವ ಸರಳ ಸತ್ಯ

ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮಾಜಿಕ ಹಿತಾಸಕ್ತಿಯವು ಎಂದು ಪರಿಗಣಿಸುವ ನೀತಿಗಳನ್ನು ಅನುಸರಿಸುವ ಅಧಿಕಾರ  ರಾಷ್ಟ್ರ-ಪ್ರಭುತ್ವದ ಕೈಗಳಲ್ಲೇ ಇರುತ್ತದೆ ಎಂದು  ಕೀನ್ಸ್‌ ಭಾವಿಸಿಕೊಂಡಿದ್ದರೆ, ಅದು ಆರಂಭದಲ್ಲಿ ತಪ್ಪೇನೂ ಆಗಿರಲಿಲ್ಲ. ಆದರೆ ಕಾಲಾನಂತರದಲ್ಲಿ ಅದು ಬುಡಮೇಲಾಯಿತು. ಇದು ಆಕಸ್ಮಿಕವೇನಲ್ಲ. ಅದು ಬಂಡವಾಳಶಾಹಿಯ ಸ್ವರೂಪದಲ್ಲೇ ಅಡಕವಾಗಿತ್ತು.

ಬಂಡವಾಳಶಾಹಿಯು, ಪಠ್ಯಪುಸ್ತಕಗಳಲ್ಲಿ ಕಲಿಸುವುದಕ್ಕಿಂತ ಭಿನ್ನವಾಗಿ, ತನ್ನ ಮೇಲೆ ಇರಿಸಲಾದ ಯಾವುದೇ ನಿರ್ಬಂಧಗಳನ್ನು ನಮ್ರತೆಯಿಂದ ಸ್ವೀಕರಿಸದೇ ಇದ್ದರೆ, ಅಂತಹ ನಿರ್ಬಂಧಗಳನ್ನು ಅದು ಶಾಶ್ವತವಾಗಿ ಜಯಿಸಲು ಪ್ರಯತ್ನಿಸಿದರೆ ಮತ್ತು ಬಂಡವಾಳದ ಕೇಂದ್ರೀಕರಣದಿಂದಾಗಿ ಕಾಲಕ್ರಮೇಣ ನಿರ್ಬಂಧಗಳನ್ನು ಶಾಶ್ವತವಾಗಿ ಜಯಿಸುವಲ್ಲಿ ಅದು ಹೆಚ್ಚು ಹೆಚ್ಚು ಸಮರ್ಥವಾಗಿದ್ದರೆ, ಆಗ ಸುಧಾರಿತ ಬಂಡವಾಳಶಾಹಿಯ ಅಥವಾ ಕಲ್ಯಾಣಕಾರೀ ಬಂಡವಾಳಶಾಹಿಯ ಬಗೆಗಿನ ಯಾವುದೇ ನೋಟವು ಒಂದು ಹುಚ್ಚು ಕಲ್ಪನೆಯೇ ಆಗಿಬಿಡುತ್ತದೆ. ಅಂತಹ ಯಾವುದೇ ನೋಟದಲ್ಲಿ ಬಂಡವಾಳದ ಮೇಲೆ ಪ್ರಭುತ್ವ ಒಂದು ಮಟ್ಟದ ನಿಯಂತ್ರಣ ಹೊಂದಿರುವುದು ಅಗತ್ಯವಾಗುತ್ತದೆ; ಮತ್ತು ಬಂಡವಾಳದ ಮೇಲೆ ನಿರ್ಬಂಧಗಳನ್ನು ಹೇರುವ ಪ್ರಭುತ್ವದ ಅಂತಹ ನಿಯಂತ್ರಣವು ಕಾಲಕ್ರಮೇಣ ಬುಡಮೇಲಾದರೆ, ಅಂತಹ ಒಂದು ನೋಟವು ಅಸಮರ್ಥನೀಯವೆಂದೇ ಹೇಳಬೇಕಾಗುತ್ತದೆ.

ಇದನ್ನೂ ನೋಡಿ: ವಿದ್ಯುತ್ ಖಾಸಗೀಕರಣ ಆದರೆ ದುಬಾರಿ ಹೊರೆ ಗ್ಯಾರಂಟಿ! | ಟಾಟಾ ಪವರ್‌ಗೆ ಲೈಸೆನ್ಸ್ ಬೇಡ, ಆಕ್ಷೇಪಣೆ ಸಲ್ಲಿಸಿ

ಸೋಶಿಯಲ್‌ ಡೆಮಾಕ್ರಸಿ ಅಥವ ಸಾಮಾಜಿಕ ಪ್ರಜಾಪ್ರಭುತ್ವದ ಪ್ರಸ್ತುತ ಬಿಕ್ಕಟ್ಟಿನ ಮತ್ತು ಅದು ತನ್ನ ನೆಲೆಯನ್ನು ನವ-ಫ್ಯಾಸಿಸಂಗೆ ಕಳೆದುಕೊಳ್ಳುತ್ತಿರುವುದರ ತಳದಲ್ಲಿರುವುದು ಈ ಸರಳ ಸತ್ಯವೇ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅದರ ರಾಜಕೀಯ ಬಿಕ್ಕಟ್ಟು, ಕೀನ್ಸ್‌-ಪ್ರತಿಪಾದನೆಗಳನ್ನು  ದುರ್ಬಲಗೊಳಿಸಿದ್ದರಿಂದ ಉದ್ಭವಿಸಿದ ಅದರ ಸೈದ್ಧಾಂತಿಕ ಬಿಕ್ಕಟ್ಟು ರಾಜಕೀಯ ಕ್ಷೇತ್ರದಲ್ಲಿ ಹೀಗೆ ಅಭಿವ್ಯಕ್ತಿಗೊಂಡಿದೆ.

ಕಲ್ಯಾಣ ಬಂಡವಾಳಶಾಹಿ ಎಂಬುದು ಒಂದು ಭ್ರಾಂತಿಯಾಗಿರುವುದರಿಂದ, ಸಮಾಜವಾದಕ್ಕೆ ಯಾವುದೇ ಪರ್ಯಾಯವಿಲ್ಲ. ಮತ್ತು, ಸಮಾಜವಾದಕ್ಕೆ ಪರಿವರ್ತನೆ ಹೊಂದುವ ಹಂತದಲ್ಲಿ, ಸಣ್ಣ ಬಂಡವಾಳಶಾಹಿ ಉದ್ದಿಮೆಗಳು ಅಸ್ತಿತ್ವದಲ್ಲಿರಲು ಬಿಡುವುದಾದರೆ, ಸದಾ ದೊಡ್ಡದಾಗುತ್ತಲೇ ಹೋಗುವ ಬಂಡವಾಳದ ದಿಮ್ಮಿಗಳನ್ನು ಸೃಷ್ಟಿಸುವ ಕೇಂದ್ರೀಕರಣದಂತಹ ಬಂಡವಾಳದ ಅಂತರ್ಗತ ಪ್ರವೃತ್ತಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *