ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ಚಾಲ್ತಿ ಖಾತೆಯ ಅಸಮತೋಲನವನ್ನು ಹೋಗಲಾಡಿಸುವ ಪ್ರಯತ್ನ ಮಿಗುತೆಯ ದೇಶವು “ಹೊಂದಿಕೊಳ್ಳು“ವಂತೆ ಮಾಡುವ ಮೂಲಕ ಆಗಬೇಕು, ಏಕೆಂದರೆ, ಇದು ಸಂಬಂಧಪಟ್ಟ ಎಲ್ಲರಿಗೂ ಒಳಿತನ್ನು ತರುತ್ತದೆ. ಆದರೆ, ಪ್ರಸ್ತುತ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯು ಇಂತಹ ಒಂದು ಏರ್ಪಾಟಿಗೆ ತದ್ವಿರುದ್ಧವಾಗಿದೆ. ಅದು ಮಿಗುತೆಯ ದೇಶವನ್ನಲ್ಲ, ಕೊರತೆಯ ದೇಶವನ್ನು ತನ್ನ ಸರಕು ಮತ್ತು ಸೇವೆಗಳ ಆಂತರಿಕ ಬಳಕೆಯಲ್ಲಿ ಇಳಿಕೆ ಮಾಡಿಕೊಳ್ಳುವ ಮೂಲಕ ತನ್ನ ಚಾಲ್ತಿ ಖಾತೆಯ ಅಸಮತೋಲವನ್ನು ಸರಿಪಡಿಸಿಕೊಳ್ಳುವಂತೆ ಬಲವಂತಪಡಿಸುತ್ತದೆ. ಈ ಪ್ರಕ್ರಿಯೆಯಲ್ಲಿ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಕೆಳಕ್ಕೆ ಹೋಗುತ್ತದೆ, ಮತ್ತು ಅದರೊಂದಿಗೆ ವಿಶ್ವ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳೂ ಕಡಿಮೆಯಾಗುತ್ತವೆ. ಇದು ನಾವು ಬದುಕುತ್ತಿರುವ ವಿಶ್ವದ ವ್ಯಾಪಾರ ಏರ್ಪಾಟುಗಳ ವಿಚಾರಹೀನತೆ. ದೇಶ ದೇಶಗಳ ಮುಖ್ಯಸ್ಥರ ತಲೆಗೆ ಬಂದೂಕು ಹಿಡಿದು, ಯುಎಸ್ ಗೆ ಅನುಕೂಲಕರವಾಗುವ ವ್ಯವಹಾರಕ್ಕೆ ಅವರು ಒಪ್ಪುವಂತೆ ಮಾಡುವ ಟ್ರಂಪ್ ಆಡಳಿತದ ಕ್ರಮಗಳು ಈ ವಿಚಾರಹೀನ ವಿಶ್ವ ವ್ಯಾಪಾರ ಏರ್ಪಾಟನ್ನು ಇನ್ನಷ್ಟು ಬಲಪಡಿಸುತ್ತವೆ. ಬಂದೂಕ
– ಪ್ರೊ. ಪ್ರಭಾತ್ ಪಟ್ನಾಯಕ್
– ಅನು: ಕೆ.ಎಂ.ನಾಗರಾಜ್
ವ್ಯಾಪಾರದಲ್ಲಿ ತೊಡಗಿರುವ ಎರಡು ದೇಶಗಳು ಮಾತ್ರ ಇರುವ ಒಂದು ವಿಶ್ವದ ಒಂದು ಅತ್ಯಂತ ಸರಳ ಚಿತ್ರವನ್ನು ಕಲ್ಪಿಸಿಕೊಳ್ಳಿ. ಎರಡರಲ್ಲಿ ಒಂದು ತನ್ನ ಚಾಲ್ತಿ ಖಾತೆಯಲ್ಲಿ ಮಿಗುತೆಯನ್ನು ಹೊಂದಿದ್ದರೆ, ಸಹಜವಾಗಿಯೇ ಇನ್ನೊಂದು ದೇಶವು ತನ್ನ ಚಾಲ್ತಿ ಖಾತೆಯಲ್ಲಿ ಅಷ್ಟೇ ಪ್ರಮಾಣದ ಕೊರತೆಯನ್ನು ಹೊಂದಿರುತ್ತದೆ. ಮಿಗುತೆಯ ದೇಶವು ಅಂತರರಾಷ್ಟ್ರೀಯ ಪೈಪೋಟಿಯಲ್ಲಿ ಹೆಚ್ಚು ಯಶಸ್ವಿಯಾಗಿದೆ ಎಂಬುದು ಸ್ವಯಂವೇದ್ಯ, ಆದ್ದರಿಂದ ಮುಕ್ತ ವ್ಯಾಪಾರದ ಸನ್ನಿವೇಶದಲ್ಲಿ ಅದು ತನ್ನ ಸಾಮರ್ಥ್ಯದ ಪೂರ್ಣ ಬಳಕೆಗೆ ಹತ್ತಿರದಲ್ಲಿದೆ ಎಂದೂ ಮತ್ತು ಈ ಪೈಪೋಟಿಯಲ್ಲಿ ದುರ್ಬಲವಾಗಿರುವ ಕೊರತೆಯ ದೇಶ ಬಹುದೊಡ್ಡ ಪ್ರಮಾಣದಲ್ಲಿ ಬಳಕೆಯಾಗದ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದೂ ಊಹಿಸಿಕೊಳ್ಳಬಹುದು. ಬಂದೂಕ
ಈಗ, ಚಾಲ್ತಿ ಖಾತೆ ಮಿಗುತೆಯ ದೇಶವು ತನ್ನ ಸರಕುಗಳ ಆಂತರಿಕ ಬಳಕೆಯನ್ನು, ತನ್ನ ಕಾರ್ಮಿಕರ ಅನುಭೋಗದ ಬಳಕೆಯನ್ನು ಹೆಚ್ಚಿಸುವ ಮೂಲಕ ವಿಸ್ತರಿಸುತ್ತದೆ ಎಂದು ಭಾವಿಸೋಣ. ಈ ದೇಶವು ಬಳಕೆಯಾಗದ ಸಾಮರ್ಥ್ಯವನ್ನು ಹೆಚ್ಚಾಗಿ ಹೊಂದಿಲ್ಲದ ಕಾರಣದಿಂದ, ಈ ಸರಕುಗಳ ಹೆಚ್ಚಿದ ಬಳಕೆಯಿಂದಾಗಿ ಅದರ ರಫ್ತುಗಳ ಪ್ರಮಾಣದಲ್ಲಿ ಇಳಿಕೆ ಕಾಣುತ್ತದೆ ಮತ್ತು ಈ ಕಾರಣದಿಂದಾಗಿ ಅದರ ಚಾಲ್ತಿ ಖಾತೆ ಮಿಗುತೆಯಲ್ಲೂ ಇಳಿಕೆ ಕಾಣುತ್ತದೆ. ಈ ದೇಶವು ಹೊಂದಿದ ಮಿಗುತೆ , ಆ ಇನ್ನೊಂದು ದೇಶವು ಹೊಂದಿದ ಕೊರತೆಗೆ ಸಮವಾಗಿ ಇರಬೇಕಾದುದರಿಂದ, ಈ ದೇಶದ ಮಿಗುತೆಯಲ್ಲಿ ಇಳಿಕೆಯಾಗುತ್ತದೆ ಎಂದರೆ ಅದಕ್ಕೆ ಅನುಗುಣವಾಗಿ ಆ ದೇಶದ ಚಾಲ್ತಿ ಖಾತೆ ಕೊರತೆಯಲ್ಲಿಯೂ ಇಳಿಕೆಯಾಗಬೇಕು. ಬಂದೂಕ
ಇದನ್ನೂ ಓದಿ: ಜುಲೈ 22 ರಂದು ಎಫ್ಟಿಎ ವಿರುದ್ಧ ರೈತರ ಪ್ರತಿಜ್ಞೆ: ಟ್ರಂಪ್ ಮತ್ತು ಮೋದಿ ಪ್ರತಿಕೃತಿಗಳ ದಹನ- ಸಂಯುಕ್ತ ಕಿಸಾನ್ ಮೋರ್ಚಾ ಕರೆ
ಇದು ಹೇಗೆ ನಡೆಯುತ್ತದೆ ಎಂಬುದನ್ನು ಹೀಗೆ ನೋಡಬಹುದು: ಮಿಗುತೆಯ ದೇಶದಿಂದ ಕೊರತೆಯ ದೇಶಕ್ಕೆ ರಫ್ತಿನಲ್ಲಿ ಇಳಿಕೆಯಾಗುತ್ತಿದ್ದಂತೆಯೇ, ಕೊರತೆಯ ದೇಶದ ಉತ್ಪಾದಕರಿಗೆ ತಮ್ಮ ಆಂತರಿಕ ಮಾರುಕಟ್ಟೆಯಲ್ಲಿ ಅವಕಾಶ ಹೆಚ್ಚುತ್ತದೆ ಮತ್ತು ಆ ಮೂಲಕ ತಮ್ಮ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಬಹುದು. ಆದ್ದರಿಂದ, ಮಿಗುತೆಯ ದೇಶದ ಕಾರ್ಮಿಕರ ಬಳಕೆಯ ಏರಿಕೆಯ ಪರಿಣಾಮವಾಗಿ ಕೊರತೆಯ ದೇಶದಲ್ಲಿ ಉತ್ಪಾದನೆ, ಉದ್ಯೋಗ ಮತ್ತು ಆಂತರಿಕ ಬಳಕೆ ಹೆಚ್ಚುತ್ತವೆ. ಬಂದೂಕ
ಅಸಮತೋಲನ ಹೋಗಲಾಡಿಸಲು…..
ಬೇರೆ ರೀತಿಯಲ್ಲಿ ಹೇಳುವುದಾದರೆ, ಮಿಗುತೆಯ ದೇಶವನ್ನು “ಹೊಂದಿಕೊಳ್ಳು”ವಂತೆ ಬಲವಂತ ಮಾಡಿದರೆ, ಅಂದರೆ ಈ ಎರಡು ದೇಶಗಳ ನಡುವಿನ ಚಾಲ್ತಿ ಖಾತೆಯ ಅಸಮತೋಲನವನ್ನು ಹೋಗಲಾಡಿಸಿದರೆ, ನಂತರ ಜಗತ್ತಿನಲ್ಲಿ ಒಟ್ಟಾಗಿ (ಪ್ರಸ್ತುತ ಉದಾಹರಣೆಯಲ್ಲಿ ಎರಡು ದೇಶಗಳಷ್ಟೇ ಇವೆ) ಚಾಲ್ತಿ ಖಾತೆಯ ಅಸಮತೋಲನ ನಿವಾರಣೆಯಾಗುತ್ತಿರುವಂತೆಯೇ, ಉತ್ಪಾದನೆ, ಉದ್ಯೋಗ ಮತ್ತು ಬಳಕೆ ಹೆಚ್ಚುತ್ತದೆ. ಆದ್ದರಿಂದ, ಮಿಗುತೆಯ ದೇಶವು “ಹೊಂದಿಕೊಳ್ಳು“ವಂತೆ ಮಾಡುವ ಮೂಲಕ ಚಾಲ್ತಿ ಖಾತೆಯ ಅಸಮತೋಲನವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು, ಏಕೆಂದರೆ, ಇದು ಸಂಬಂಧಪಟ್ಟ ಎಲ್ಲರಿಗೂ ಒಳಿತನ್ನು ತರುತ್ತದೆ ಎಂದು ಹೇಳಬಹುದು. ಬಂದೂಕ
ಆದರೆ, ಪ್ರಸ್ತುತ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯು ಇಂತಹ ಒಂದು ಏರ್ಪಾಟಿಗೆ ತದ್ವಿರುದ್ಧವಾಗಿದೆ. ಅದು ಮಿಗುತೆಯ ದೇಶವನ್ನಲ್ಲ, ಕೊರತೆಯ ದೇಶವನ್ನು ತನ್ನ ಸರಕು ಮತ್ತು ಸೇವೆಗಳ ಆಂತರಿಕ ಬಳಕೆಯಲ್ಲಿ ಇಳಿಕೆ ಮಾಡಿಕೊಳ್ಳುವ ಮೂಲಕ ತನ್ನ ಚಾಲ್ತಿ ಖಾತೆಯ ಅಸಮತೋಲವನ್ನು ಸರಿ ಮಾಡಿಕೊಳ್ಳುವಂತೆ ಬಲವಂತಪಡಿಸುತ್ತದೆ. ಇಲ್ಲಿರುವ ತರ್ಕವೆಂದರೆ, ಕೊರತೆಯ ದೇಶದಲ್ಲಿ ಅದರ ಆಂತರಿಕ ಬೇಡಿಕೆಯ ಇಳಿಕೆಯೆಂಬುದು ಅದರ ಆಂತರಿಕ ಉತ್ಪಾದನೆ ಮಾತ್ರವಲ್ಲದೆ ಅದರ ಆಮದುಗಳೂ ಇಳಿಕೆಯಾಗುವಂತೆ ಮಾಡುತ್ತದೆ. ಹಾಗಾಗಿ, ಅದರ ಚಾಲ್ತಿ ಖಾತೆಯ ಕೊರತೆಯು (ಮತ್ತು ಅದರ ಪರಿಣಾಮವಾಗಿ ಇನ್ನೊಂದು ದೇಶದ ಚಾಲ್ತಿ ಖಾತೆಯ ಮಿಗುತೆಯು) ಇಳಿಯುತ್ತದೆ ಮತ್ತು ಆ ಮೂಲಕ ಅಪೇಕ್ಷಿತ ಹೊಂದಾಣಿಕೆ ಸಾಧ್ಯವಾಗುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಕೆಳಕ್ಕೆ ಹೋಗುತ್ತದೆ, ಮತ್ತು ಅದರೊಂದಿಗೆ ವಿಶ್ವ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳೂ ಕೆಳಕ್ಕೆ ಹೋಗುತ್ತವೆ. ಈ ರೀತಿಯ ಹೊಂದಾಣಿಕೆಯಿಂದ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬಳಕೆಯ ಮಟ್ಟವೂ ಕೆಳಗಿಳಿಯುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಂದೂಕ
ಈ ರೀತಿಯಲ್ಲಿ, ಚಾಲ್ತಿ ಖಾತೆಯ ಅಸಮತೋಲವನ್ನು ಹೋಗಲಾಡಿಸುವುದಕ್ಕಾಗಿ ನಾವು ಎರಡು ರೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು: ಮಿಗುತೆಯ ದೇಶವು ಹೊಂದಿಕೊಳ್ಳುವಂತೆ ಮಾಡಿದರೆ, ವಿಶ್ವ ಉತ್ಪಾದನೆ, ಉದ್ಯೋಗ ಮತ್ತು ಬಳಕೆ ಹೆಚ್ಚುತ್ತದೆ. ಆದರೆ, ಕೊರತೆಯ ದೇಶವನ್ನು ಹೊಂದಿಕೊಳ್ಳುವಂತೆ ಬಲವಂತ ಪಡಿಸಿದರೆ, ವಿಶ್ವ ಉತ್ಪಾದನೆ, ಉದ್ಯೋಗ ಮತ್ತು ಬಳಕೆಯಲ್ಲಿ ಇಳಿಕೆಯಾಗುತ್ತದೆ. ಮಿಗುತೆಯ ದೇಶದಲ್ಲಿ ಆಂತರಿಕ ಬಳಕೆಯ ಏರಿಕೆಯು ಕಾರ್ಮಿಕರ ಬಳಕೆಯ ಹೆಚ್ಚಳದ ಮೂಲಕವೇ ಆಗದಿದ್ದರೂ ಸಹ, ವಿಶ್ವ ಬಳಕೆಯ ಏರಿಕೆಯು ಮೊದಲು ಸಂಭವಿಸಬೇಕು. ಮಿಗುತೆಯ ದೇಶದ ಅರ್ಥವ್ಯವಸ್ಥೆಯು ಅದರ ಆಂತರಿಕ ಬಳಕೆಯನ್ನು ಹೇಗಾದರೂ ಹೆಚ್ಚಿಸಲಿ ಅಥವಾ ಬಿಡಲಿ, ಕೊರತೆಯ ದೇಶದಲ್ಲಿ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುವುದರಿಂದ, ಒಟ್ಟು ವಿಶ್ವದ ಕೂಲಿ-ವೆಚ್ಚ ಮತ್ತು ವಿಶ್ವ ಬಳಕೆಯೂ ಹೆಚ್ಚುತ್ತದೆ. ಬಂದೂಕ
ಚಾಲ್ತಿ ಖಾತೆಯ ಅಸಮತೋಲವನ್ನು ಹೋಗಲಾಡಿಸುವುದಕ್ಕಾಗಿ ನಾವು ಎರಡು ರೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು: ಮಿಗುತೆಯ ದೇಶವು ಹೊಂದಿಕೊಳ್ಳುವಂತೆ ಮಾಡಿದರೆ, ವಿಶ್ವ ಉತ್ಪಾದನೆ, ಉದ್ಯೋಗ ಮತ್ತು ಬಳಕೆ ಹೆಚ್ಚುತ್ತದೆ. ಆದರೆ, ಕೊರತೆಯ ದೇಶವನ್ನು ಹೊಂದಿಕೊಳ್ಳುವಂತೆ ಬಲವಂತ ಪಡಿಸಿದರೆ, ವಿಶ್ವ ಉತ್ಪಾದನೆ, ಉದ್ಯೋಗ ಮತ್ತು ಬಳಕೆಯಲ್ಲಿ ಇಳಿಕೆಯಾಗುತ್ತದೆ.
ವಿಚಾರಹೀನ ವ್ಯಾಪಾರ ಏರ್ಪಾಟು
ಆದರೆ, ವಿಶ್ವ ವ್ಯಾಪಾರ ಏರ್ಪಾಟುಗಳು ಎಷ್ಟು ವಿಸ್ಮಯಕರವಾಗಿವೆ ಎಂದರೆ, ಚಾಲ್ತಿ ಖಾತೆಯಲ್ಲಿ ಅಸಮತೋಲ ಉಂಟಾದಾಗಲೆಲ್ಲಾ ಕೆಳದರ್ಜೆಯ ಹೊಂದಾಣಿಕೆಯ ವಿಧಾನವನ್ನು ಅನುಸರಿಸಲಾಗುತ್ತದೆಯೇ ಹೊರತು ಉನ್ನತ ದರ್ಜೆಯ ಹೊಂದಾಣಿಕೆಯ ವಿಧಾನವನ್ನಲ್ಲ. ಇದುವೇ ನಾವು ಬದುಕುತ್ತಿರುವ ವಿಶ್ವದ ವ್ಯಾಪಾರ ಏರ್ಪಾಟುಗಳ ವಿಚಾರಹೀನತೆ. ಬ್ರೆಟನ್ ವುಡ್ಸ್ ವ್ಯವಸ್ಥೆಯನ್ನು 1944 ರಲ್ಲಿ ಸ್ಥಾಪಿಸಿದ ಸಮಯದಲ್ಲಿ, ಮಿಗುತೆಯ ದೇಶಗಳೂ ಸಹ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂಬ ಪರಿಕಲ್ಪನೆಯನ್ನು ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಪ್ರಸ್ತಾಪಿಸಿದ್ದರು. ಆದರೆ, ಅಂದಿನ ದಿನಗಳಲ್ಲಿ ಯುಎಸ್ ಚಾಲ್ತಿ ಖಾತೆಯ ಮಿಗುತೆಯನ್ನು ನಿರಂತರವಾಗಿ ಹೊಂದಿದ ಒಂದು ಅರ್ಥವ್ಯವಸ್ಥೆಯಾಗಿತ್ತು, ಅದು ಮಿಗುತೆಯ ಅರ್ಥವ್ಯವಸ್ಥೆಗಳು ಹೊಂದಾಣಿಕೆ ಮಾಡಿಕೊಳ್ಳುವ ವಿಚಾರವನ್ನು ವಿರೋಧಿಸಿತು. ಬಂದೂಕ
ಆಂತರಿಕ ಬಳಕೆಯನ್ನು ಹೆಚ್ಚಿಸುವ ಕ್ರಮವನ್ನು ಅನುಸರಿಸಬೇಕಾಗಿದ್ದು, ಅದಕ್ಕೆ ಸಹಜವಾಗಿಯೇ ಕಾರ್ಮಿಕರು ತಮ್ಮ ಬಳಕೆಯ ಪ್ರಮಾಣವನ್ನು ಮೇಲಕ್ಕೇರಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ಯುಎಸ್, ಇತರ ದೇಶಗಳ ಮೇಲಿನ ತನ್ನ ದಾವೆಗಳನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಆದ್ಯತೆ ನೀಡಿತು. ಏಕೆಂದರೆ, ಈ ಕ್ರಮವು ಅದಕ್ಕೆ ಆ ದೇಶಗಳ ಮೇಲೆ ಒಂದು ರೀತಿಯ ಅಧಿಕಾರವನ್ನು ಕೊಟ್ಟಿತು. ಅದೇನೇ ಇರಲಿ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯು ಕಾರ್ಮಿಕರು ತಮ್ಮ ಬಳಕೆಯ ಪ್ರಮಾಣವನ್ನು ಏರಿಸುವುದಕ್ಕೆ ಆದ್ಯತೆಯನ್ನು ಸುತರಾಂ ನೀಡುವುದಿಲ್ಲ. ಬಂದೂಕ
1944ರಲ್ಲಿ ಬ್ರೆಟನ್ ವುಡ್ಸ್ ಸಮ್ಮೇಳನದ ನಂತರ ಬಹಳಷ್ಟು ಬದಲಾವಣೆಗಳಾಗಿವೆ. ಆ ಸಮಯದಲ್ಲಿ ಮತ್ತು ಯುದ್ಧಾನಂತರ ಬಹಳ ಸಮಯದ ವರೆಗೆ ಮಿಗುತೆಯ ದೇಶವಾಗಿದ್ದ ಯು.ಎಸ್.ನಲ್ಲಿ, 1970ರ ದಶಕದ ಮಧ್ಯಭಾಗದಿಂದ ಸತತವಾಗಿ ಚಾಲ್ತಿ ಖಾತೆ ಕೊರತೆ ಕಾಣಿಸಿಕೊಳ್ಳಲಾರಂಭಿಸಿತು. ತನ್ನ ಮಿಗುತೆಯು ನಿಂತುಹೋಗುತ್ತಿದ್ದಾಗ, ಅದು ಮಿಗುತೆಯ ದೇಶಗಳು ಹೊಂದಿಕೊಳ್ಳಬೇಕು ಎಂದು ಏಕೆ ಕೇಳಲಾರಂಭಿಸಲಿಲ್ಲ ಎಂದು ಆಶ್ಚರ್ಯಪಡಬಹುದು.
ಅಮೆರಿಕ ಅದನ್ನು ಏಕೆ ಮಾಡಲಿಲ್ಲ ಎಂಬುದಕ್ಕೆ ಸಹಜವಾಗಿ ಮೂರು ಕಾರಣಗಳಿವೆ. ಮೊದಲನೆಯದು, ಬಂಡವಾಳಶಾಹಿ ವಿಶ್ವದ “ನಾಯಕ”ನಾಗಿ ತನ್ನ ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾಗುವ ಪರಿಸ್ಥಿತಿಯನ್ನು ತನ್ನ “ನಾಯಕತ್ವ”ದ ಕರ್ತವ್ಯಗಳ ಭಾಗವಾಗಿ ಸ್ವೀಕರಿಸಬೇಕಾಗುತ್ತದೆ. ಉದಾಹರಣೆಗೆ, ತನ್ನ ಪ್ರತಿ-ಕ್ರಾಂತಿಯ ಚಟುವಟಿಕೆಗಳಿಗಾಗಿ ವಿಶ್ವಾದ್ಯಂತವೂ ಮಿಲಿಟರಿ ನೆಲೆಗಳ ಒಂದು ಸರಮಾಲೆಯನ್ನು ಅದು ನಿಭಾಯಿಸಬೇಕಾಗುತ್ತದೆ ಮತ್ತು ಅದಕ್ಕಾಗಿ ವಿದೇಶಗಳಲ್ಲಿ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುವುದರಿಂದ, ತನ್ನ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಕಾಣಬೇಕಾಗುತ್ತದೆ. ಆದ್ದರಿಂದ, ತಾನು ಅನುಭವಿಸಲಾರಂಭಿಸಿದ ಚಾಲ್ತಿ ಖಾತೆ ಕೊರತೆಯಿಂದ, ಅಮೆರಿಕವು ಅನಗತ್ಯವಾಗಿ ಆಘಾತಕ್ಕೊಳಗಾಗಲಿಲ್ಲ ಅಥವಾ ಆಶ್ಚರ್ಯಪಡಲಿಲ್ಲ. ಬಂದೂಕ
ಇದನ್ನೂ ನೋಡಿ: ರಾಜ್ಯದ ನಿರುದ್ಯೋಗ ಪ್ರಮಾಣ ಶೇ.8.6: ಕಂಬಳದ ಉದ್ಯೋಗ ಕೊಡುವಿರಾ ಮುಖ್ಯಮಂತ್ರಿಗಳೇ? Janashakthi Media
ಎರಡನೆಯದು, ವಾಸ್ತವವಾಗಿ ಯುಎಸ್ ಡಾಲರ್ “ಜಾಗತಿಕ ಹಣ”ದ ಪಾತ್ರವನ್ನು ವಹಿಸಿದ್ದರಿಂದ ಮತ್ತು ಯಾವುದೇ ಮಿತಿಯಿಲ್ಲದಷ್ಟು ಮೊತ್ತದ ಡಾಲರ್ಗಳನ್ನು ಹಿಡಿದಿಟ್ಟುಕೊಳ್ಳಲು ಉಳಿದ ವಿಶ್ವವು ಬಹುತೇಕ ಸಿದ್ಧವಿರುವುದರಿಂದ, ಮಿಗುತೆಯ ದೇಶಗಳಿಗೆ ಡಾಲರ್ಗಳನ್ನು (ಮತ್ತು ಡಾಲರ್-ಮೌಲ್ಯದ ಸ್ವತ್ತುಗಳನ್ನು) ಲಭ್ಯವಾಗುವಂತೆ ಮಾಡುವ ಮೂಲಕ ತನ್ನ ಕೊರತೆಯನ್ನು ತುಂಬಿಕೊಳ್ಳಲು ಹಣಕಾಸು ಒದಗಿಸಿಕೊಳ್ಳುವಲ್ಲಿ ಯಾವ ಸಮಸ್ಯೆಯೂ ಯುಎಸ್ಗೆ ಇರಲಿಲ್ಲ. ಆದ್ದರಿಂದ ತನಗಾಗಲಿ ಅಥವಾ ಮಿಗುತೆಯ ದೇಶಗಳಿಗಾಗಲಿ ಇತರರೊಂದಿಗೆ ಹೊಂದಿಕೊಳ್ಳುವ ತುರ್ತೇನೂ ಇಲ್ಲ ಎಂದು ಅದು ಭಾವಿಸಿತು.
ಮೂರನೆಯದು, ಪೂರ್ವ ಏಷ್ಯಾದಂತಹ ಮಿಗುತೆಯ ದೇಶಗಳಿಂದ ಯುಎಸ್ಗೆ ಮಾಡಲಾಗುತ್ತಿರುವ ಹೆಚ್ಚಿನ ರಫ್ತುಗಳನ್ನು ಸ್ವತಃ ಅಮೆರಿಕನ್ ಬಂಡವಾಳವು ತನ್ನ ಉತ್ಪಾದನಾ ಚಟುವಟಿಕೆಗಳನ್ನು ಈ ದೇಶಗಳಿಗೆ ಸ್ಥಳಾಂತರಿಸುವ ಮೂಲಕ ನಡೆಸುತ್ತಿತ್ತು. ಆದ್ದರಿಂದ, ತಮ್ಮ ಮಿಗುತೆಯನ್ನು ಇಳಿಸುವಂತೆ ಈ ದೇಶಗಳನ್ನು ಒತ್ತಾಯಿಸುವುದು ಅಮೆರಿಕನ್ ಬಂಡವಾಳದ ಹಿತಾಸಕ್ತಿಗಳಿಗೆ ಹಾನಿಯನ್ನುಂಟುಮಾಡಬಹುದು. ಹಾಗಾಗಿ, ತುರ್ತು ಅಗತ್ಯವಿಲ್ಲದ ಹೊರತು ಯಾವ ಯುಎಸ್ ಆಡಳಿತವೂ ಈ ದೇಶಗಳನ್ನು ತಮ್ಮ ಮಿಗುತೆಯನ್ನು ಇಳಿಕೆ ಮಾಡಿಕೊಳ್ಳುವಂತೆ ಬಲವಂತಪಡಿಸಲಾರದು. ಬಂದೂಕ
ಈ ಎಲ್ಲಾ ಕಾರಣಗಳಿಂದಾಗಿ, ಚಾಲ್ತಿ ಖಾತೆಯ ಕೊರತೆಯನ್ನು ಯುಎಸ್ ಸತತವಾಗಿ ಅನುಭವಿಸುತ್ತಿರುವುದನ್ನು ಕಾಣುವ ಮತ್ತು ಬದಲಾದ ಅಂತರರಾಷ್ಟ್ರೀಯ ಪರಿಸ್ಥಿತಿಯ ಹೊರತಾಗಿಯೂ, ವಿಶ್ವ ವ್ಯಾಪಾರ ಏರ್ಪಾಟುಗಳಲ್ಲಿ ಯಾವುದೇ ಬದಲಾವಣೆ ತರುವಂತೆ ಯುಎಸ್ ಕಡೆಯಿಂದ ತಕ್ಷಣದ ಆಗ್ರಹ ಇರಲಿಲ್ಲ. ತನ್ನ ಚಾಲ್ತಿ ಖಾತೆಯ ಕೊರತೆಯನ್ನು ಪರಿಹರಿಸುವ ಸಾಧನವಾಗಿ ಡಾಲರ್ಗಳು ಮತ್ತು ಡಾಲರ್-ಮೌಲ್ಯದ ಸ್ವತ್ತುಗಳು ವಿಶ್ವ ಅರ್ಥವ್ಯವಸ್ಥೆಗೆ ಹರಿದು ಬರುವುದರಿಂದಲೇ ಅದು ತೃಪ್ತಿ ಪಡೆದುಕೊಂಡಿತ್ತು. ಆದರೆ, ಪರಿಸ್ಥಿತಿಗಳು ಇತ್ತೀಚೆಗೆ ಬೇರೆಯದೇ ತಿರುವು ಪಡೆದುಕೊಂಡಿವೆ. ಬಂದೂಕ
ವಿದೇಶಿ ವಿನಿಮಯ ಮೀಸಲುಗಳನ್ನು ಡಾಲರ್ ರೂಪದಲ್ಲಿ ಹಿಡಿದಿಟ್ಟುಕೊಳ್ಳುವ ಕ್ರಮದಿಂದ ಚೀನಾವು ದೂರ ಸರಿಯುತ್ತಿರುವುದರಿಂದ ಮತ್ತು ಅಪ-ಡಾಲರೀಕರಣದ ಬೆದರಿಕೆ (ಆ ಬೆದರಿಕೆ ಇನ್ನೂ ದೂರದಲ್ಲಿದ್ದರೂ) ದಿಗಂತದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ತನ್ನ ಚಾಲ್ತಿ ಖಾತೆಯ ಕೊರತೆಯನ್ನು ಇಳಿಕೆ ಮಾಡಿಕೊಳ್ಳುವ ಅಗತ್ಯವನ್ನು ಯುಎಸ್ ಈಗ ಮನಗಾಣುತ್ತಿದೆ. ಆದರೆ, ಒಟ್ಟು ಇಡೀ ವಿಶ್ವ ಅರ್ಥವ್ಯವಸ್ಥೆಗೆ ಪ್ರಯೋಜನವಾಗುವ ರೀತಿಯಲ್ಲಿ ವಿಶ್ವ ವ್ಯಾಪಾರ ಏರ್ಪಾಟುಗಳನ್ನು ಬದಲಾಯಿಸುವ ಬಗ್ಗೆ ಅದು ಕಾಳಜಿ ವಹಿಸುವುದಿಲ್ಲ. ಇದಕ್ಕೆ ಟ್ರಂಪ್ ಅವರ ಇತ್ತೀಚಿನ ಕ್ರಮಗಳೇ ಸಾಕ್ಷಿ.
ಎರಡು ಟ್ರಂಪ್ ಅಸ್ತ್ರಗಳು
ಟ್ರಂಪ್ ಕೈಗೊಂಡಿರುವ ಕ್ರಮಗಳು ನಾವು ಮೇಲೆ ಚರ್ಚಿಸಿದ ವಿಶ್ವ ವ್ಯಾಪಾರ ವ್ಯವಸ್ಥೆಯ ವಿಚಾರಹೀನತೆಯನ್ನು ನಿವಾರಿಸುವ ಉದ್ದೇಶ ಹೊಂದಿಲ್ಲ. ಈ ಕ್ರಮಗಳು ಯುಎಸ್ ಹೊಂದಿರುವ ಕೊರತೆಯ ಪರಿಸ್ಥಿತಿಯಿಂದ ಅದು ತೊಂದರೆಗಳಿಗೆ ಒಳಗಾಗಬಾರದು ಮತ್ತು ಅದು ತನ್ನ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಒಂದು ಕೊರತೆಯ ದೇಶವು ಸಾಮಾನ್ಯವಾಗಿ ಮಾಡಬೇಕಾದ ಆಂತರಿಕ ಬೇಡಿಕೆಯ ಇಳಿಕೆಯ ಹೊಂದಾಣಿಕೆಯನ್ನು ಮಾಡದೆಯೂ ನಿವಾರಿಸಿಕೊಳ್ಳಲು ಸಾಧ್ಯವಾಗಿಸುವ ಉದ್ದೇಶವನ್ನು ಮಾತ್ರ ಹೊಂದಿವೆ. ಹಾಗೆ ನೋಡಿದರೆ, ಟ್ರಂಪ್ ಕೈಗೊಂಡಿರುವ ಕ್ರಮಗಳು ಅಮೆರಿಕದ ಆಂತರಿಕ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಲೇ ತನ್ನ ಚಾಲ್ತಿ ಖಾತೆ ಕೊರತೆಯನ್ನು ಇಳಿಸಿಕೊಳ್ಳುವ ಉದ್ದೇಶ ಹೊಂದಿವೆ. ಅದು ಹೇಗೆ ಎಂಬುದನ್ನು ನೋಡೋಣ.
ಅಪ-ಡಾಲರೀಕರಣದ ಬೆದರಿಕೆ ದಿಗಂತದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ತನ್ನ ಚಾಲ್ತಿ ಖಾತೆಯ ಕೊರತೆಯನ್ನು ಇಳಿಕೆ ಮಾಡಿಕೊಳ್ಳುವ ಅಗತ್ಯವನ್ನು ಯುಎಸ್ ಈಗ ಮನಗಾಣುತ್ತಿದೆ. ಆದರೆ, ಒಟ್ಟು ಇಡೀ ವಿಶ್ವ ಅರ್ಥವ್ಯವಸ್ಥೆಗೆ ಪ್ರಯೋಜನವಾಗುವ ರೀತಿಯಲ್ಲಿ ವಿಶ್ವ ವ್ಯಾಪಾರ ಏರ್ಪಾಟುಗಳನ್ನು ಬದಲಾಯಿಸುವ ಬಗ್ಗೆ ಅದು ಕಾಳಜಿ ವಹಿಸುವುದಿಲ್ಲ. ಇದಕ್ಕೆ ಟ್ರಂಪ್ ಅವರ ಇತ್ತೀಚಿನ ಕ್ರಮಗಳೇ ಸಾಕ್ಷಿ. ಈ ಕ್ರಮಗಳು ಅಮೆರಿಕದ ಆಂತರಿಕ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಲೇ ತನ್ನ ಚಾಲ್ತಿ ಖಾತೆ ಕೊರತೆಯನ್ನು ಇಳಿಸಿಕೊಳ್ಳುವ ಉದ್ದೇಶ ಹೊಂದಿವೆ.
ಟ್ರಂಪ್ ಬಳಸಿರುವ ಎರಡು ಮೂಲ ಅಸ್ತ್ರಗಳೆಂದರೆ, ದಂಡನಾತ್ಮಕ ಸುಂಕಗಳು ಮತ್ತು ವ್ಯಾಪಾರ ಪಾಲುದಾರರ ಮೇಲೆ ಹೇರುವ ಅಸಮಾನ ವ್ಯಾಪಾರ ಒಪ್ಪಂದಗಳು (ಇದಕ್ಕೆ ಭಾರತವೇ ಮೊದಲ ನಿದರ್ಶನ). ಈ ಅಸಮಾನ ಒಪ್ಪಂದಗಳು, ಒಂದು ದೇಶವು ಯುಎಸ್ನಿಂದ ಆಮದು ಮಾಡಿಕೊಳ್ಳಬೇಕಾದ ಮೊತ್ತವನ್ನು ಮಾತ್ರ ನಿಗದಿಪಡಿಸುತ್ತವೆ (ಅದಕ್ಕೆ ಪ್ರತಿಯಾಗಿ ಎದುರು ದಿಕ್ಕಿನಲ್ಲಿ ಏನನ್ನೂ ನಿಗದಿಪಡಿಸುವುದಿಲ್ಲ). ವಾಸ್ತವವಾಗಿ, ಈ ಅಸಮಾನ ಒಪ್ಪಂದವನ್ನು ಒಪ್ಪದ ಯಾವುದೇ ದೇಶವನ್ನು ಶಿಕ್ಷಿಸುವ ಒಂದು ಕ್ರಮವಾಗಿ ದಂಡನಾತ್ಮಕ ಸುಂಕಗಳನ್ನು ಬಳಸಲಾಗುತ್ತದೆ.
ಈ ಎರಡು ಅಸ್ತ್ರಗಳ ಪೈಕಿ, ಅಸಮಾನ ಒಪ್ಪಂದವೇ ಕಡಿಮೆ ಕೇಡಿನದು ಎಂದು ಭಾವಿಸಿ ಅದನ್ನು ದೇಶಗಳು ಸ್ವೀಕರಿಸುತ್ತವೆ. ಇಂತಹ ಬಲವಂತದ ವಿಧಾನಗಳ ಮೂಲಕ ಅದರ ವ್ಯಾಪಾರ ಕೊರತೆಯ ಗಾತ್ರವು ಸಣ್ಣದಾಗುತ್ತಿದ್ದಂತೆಯೇ, ಅಮೆರಿಕದೊಳಗೆ ದೇಶೀ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದ್ದರಿಂದ, ಉತ್ಪಾದನೆ ಮತ್ತು ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಆದರೂ, ಇದನ್ನು ಒಟ್ಟಾರೆಯಾಗಿ ವಿಶ್ವ ಅರ್ಥವ್ಯವಸ್ಥೆಗೆ ಸಾರ್ವತ್ರಿಕವಾಗಿ ಪ್ರಯೋಜನಕಾರಿಯಾಗುವ, ಆಮೂಲಕ ಯಾವುದೇ ವಿಚಾರವಂತಿಕೆಯ ಸಾಕಾರ ಮತ್ತು ಒಂದು ಪರ್ಯಾಯ ವ್ಯಾಪಾರ ವ್ಯವಸ್ಥೆ ಎಂದೇನೂ ಹೇಳುವಂತಿಲ್ಲ. ಇದು ಯುಎಸ್ ದೇಶ ದೇಶಗಳ ಮುಖ್ಯಸ್ಥರ ತಲೆಗೆ ಬಂದೂಕು ಹಿಡಿದು, ತನಗೆ ಅನುಕೂಲಕರವಾಗುವ ವ್ಯವಹಾರಕ್ಕೆ ಅವರು ಒಪ್ಪುವಂತೆ ಮಾಡುವ ಕ್ರಮವಾಗಿದೆ. ಬಂದೂಕ
ನಿಜಸಂಗತಿಯೆಂದರೆ, ವ್ಯವಹಾರಗಳನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಕುದುರಿಸಿಕೊಳ್ಳುವ ಅಮೆರಿಕವು, ಕೊರತೆಯ ದೇಶಗಳು ಹೊಂದಿಕೊಳ್ಳುವಂತೆ ಬಲವಂತಪಡಿಸುವ ವಿಚಾರಹೀನ ವಿಶ್ವ ವ್ಯಾಪಾರ ಏರ್ಪಾಟನ್ನು ಜಾರಿಗೊಳಿಸುವಲ್ಲಿ ಇನ್ನೂ ಹೆಚ್ಚಿನ ಧಾವಂತದೊಂದಿಗೆ ಸೇರಿಕೊಳ್ಳುತ್ತದೆ. ಈ ವಿಚಾರಹೀನ ಏರ್ಪಾಟನ್ನು ವಿಶ್ವದ ಮೇಲೆ ಹೇರುವಲ್ಲಿ ಸ್ವತಃ ಯುಎಸ್ ಪ್ರಮುಖ ಸಾಧನವಾಗಿದೆ. ಬಂದೂಕ
ವ್ಯಂಗ್ಯಚಿತ್ರ ಕೃಪೆ: ಮಂಜುಲ್ @ ಫೇಸ್ ಬುಕ್
