ಶ್ರೀನಗರ: ಹವಾಮಾನ ಬದಲಾವಣೆಯ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಭಾರಿ ಮಳೆಯ ಆರಂಭವಾದ ನಂತರ ಕೇವಲ ಎರಡು ವಾರಗಳಲ್ಲಿ 15ರಿಂದ 16 ಮೋಡ ಸ್ಫೋಟ (ಕ್ಲೌಡ್‌ಬರ್ಸ್ಟ್) ಘಟನೆಗಳು ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗಳಿಂದ ಉಂಟಾದ ಆಕಸ್ಮಿಕ ಪ್ರವಾಹ, ಕೆಸರು ಹರಿವು ಮತ್ತು ಭೂಕುಸಿತಗಳು ಕೃಷಿಭೂಮಿ ಹಾಗೂ ಸಾರ್ವಜನಿಕ-ಖಾಸಗಿ ಆಸ್ತಿಗಳಿಗೆ ಭಾರೀ ಹಾನಿ ಉಂಟುಮಾಡಿವೆ.
ಇತ್ತೀಚಿನ ಘಟನೆ ಜುಲೈ 11ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರವಾಸಿ ತಾಣದ ಅವೂರಾ ಪ್ರದೇಶದಲ್ಲಿ ನಡೆದಿದೆ. ಮೋಡ ಸ್ಫೋಟದಿಂದ ಉಂಟಾದ ಆಕಸ್ಮಿಕ ಪ್ರವಾಹದಿಂದ ವಾಸಸ್ಥಾನಗಳು ಜಲಾವೃತವಾಗಿದ್ದು, ಕೃಷಿ ಭೂಮಿಗಳು ಹಾನಿಗೊಂಡಿವೆ. ಹರಿದು ಬಂದ ನೀರು ಹೋಟೆಲ್‌ಗಳ ಒಳಗೂ ನುಗ್ಗಿದೆ. ಜಮ್ಮು
ಹೋಟೆಲ್‌ಗಳಲ್ಲಿ ಇದ್ದ ಪ್ರವಾಸಿಗರನ್ನು ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದಾರೆ. ಜಮ್ಮು
ಇದನ್ನೂ ಓದಿ: ಪಂಚಮ’ ಪತ್ರಿಕೆ ಆರ್ಥಿಕ ಸಂಕಷ್ಟದಿಂದಲ್ಲ, ಚಳವಳಿಯೊಳಗಿನ ವಿಶ್ವಾಸದ ಕೊರತೆಯಿಂದ ಸ್ಥಗಿತ: ಎಚ್. ಗೋವಿಂದಯ್ಯ
ಇದಕ್ಕೂ ಮೊದಲು ಜುಲೈ 7ರಂದು ಡೋಡಾ ಜಿಲ್ಲೆಯ ತತ್ತರೀ ಪಟ್ಟಣದಲ್ಲಿ ಮೋಡ ಸ್ಫೋಟ ಸಂಭವಿಸಿ ಪ್ರವಾಹ ಮತ್ತು ಕೆಸರು ಹರಿವು ಉಂಟಾಯಿತು. ಈ ಘಟನೆದಲ್ಲಿ 20ರಿಂದ 25 ಮನೆಗಳು ಹಾಗೂ 41 ಅಂಗಡಿಗಳು ಹಾನಿಗೊಂಡಿವೆ. ಹಲವಾರು ವಾಹನಗಳು ಮಣ್ಣಿನಡಿ ಸಿಲುಕಿದ್ದು, ಕೆಲವು ವಾಹನಗಳನ್ನು ಚೆನಾಬ್ ನದಿಯಲ್ಲಿ ನೀರು ಹೊತ್ತುಕೊಂಡು ಹೋಗಿದೆ.
ಉತ್ತರ ಕಾಶ್ಮೀರದ ಗುರೇಜ್ ಮತ್ತು ತುಲೈಲ್ ಕಣಿವೆ ಪ್ರದೇಶಗಳೂ ಈ ತಿಂಗಳ ಆರಂಭದಲ್ಲೇ ಇಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗಿವೆ.
ಕಾಶ್ಮೀರ ಹವಾಮಾನ ಇಲಾಖೆಯ ನಿರ್ದೇಶಕ ಮುಖ್ತಾರ್ ಅಹ್ಮದ್ ಅವರು, “ಮೋಡ ಸ್ಫೋಟಗಳ ಪ್ರಮಾಣ ಹೆಚ್ಚುತ್ತಿರುವುದು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಕ್ಕೆ ಹೊಂದಿಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ,” ಎಂದು ಎಚ್ಚರಿಸಿದ್ದಾರೆ.
ಮೋಡ ಸ್ಫೋಟಗಳಂತಹ ಸ್ಥಳೀಯ ಹವಾಮಾನ ಬದಲಾವಣೆಗಳನ್ನು ಮುಂಚಿತವಾಗಿ ಊಹಿಸುವುದು ಬಹಳ ಕಷ್ಟಕರವಾಗಿದೆ. ಇವುಗಳನ್ನು ನಿಖರವಾಗಿ ಊಹಿಸಲು ವಿಶ್ವದ ಯಾವುದೇ ಹವಾಮಾನ ಮಾದರಿಗಳು ಇನ್ನೂ ಸಮರ್ಥವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುತ್ತಿದ್ದು, ಭವಿಷ್ಯದಲ್ಲಿ ಹೆಚ್ಚುವ ಅಪಾಯಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿವೆ.
ಇದನ್ನೂ ನೋಡಿ: “ಭೂಗಳ್ಳರ ಸರ್ಕಾರ!” ಜನಾಕ್ರೋಶ ಸಮಾವೇಶದಲ್ಲಿ ಜಿ.ಎನ್. ನಾಗರಾಜರ ಆಕ್ರೋಶ Janashakthi Media
