ನವದೆಹಲಿ: ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರು ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಶಕ್ತಿಯೂ ಮರಳಿರುವ ಕಾರಣ ಜುಲೈ 27ರಂದು ಮೆದಾಂತ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಲಡಾಖ್ಗೆ ಮರಳುವ ಮುನ್ನ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲು ಅವರು ರಾಜಘಾಟ್ಗೆ ಭೇಟಿ ನೀಡಲಿದ್ದಾರೆ ಎಂದಿದ್ದಾರೆ. ಉಪವಾಸ
ಇನ್ಸ್ಟಾಗ್ರಾಂನಲ್ಲಿ ಹಂಚಿದ ವೀಡಿಯೊದಲ್ಲಿ, ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ತಮ್ಮ 26 ದಿನಗಳ ನಿರಾಹಾರ ಸತ್ಯಾಗ್ರಹದ ಸಂದರ್ಭದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ.
ಅಲ್ಲದೆ, NEET ಪರೀಕ್ಷೆಯಲ್ಲಿ ನಡೆದಿದ್ದಂತೆ ಹೇಳಲಾಗಿರುವ ಅನಿಯಮಿತತೆಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ಬೆಂಬಲವಾಗಿ, ಜೂನ್ 28ರಂದು ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿಯ ಉಪವಾಸ ಆರಂಭಿಸುವ ಮೊದಲು ತಾವೇ ರಾಜಘಾಟ್ಗೆ ಭೇಟಿ ನೀಡಿದ್ದುದನ್ನೂ ಅವರು ನೆನಪಿಸಿದ್ದಾರೆ.
ಇದನ್ನೂ ಓದಿ: ವಿರೋಧದ ಸ್ವರಕ್ಕೆ ಲಾಠಿ ಉತ್ತರವೇ? ಪ್ರತಿಭಟನೆಗಳ ಮೇಲೆ ದಮನದ ರಾಜಕೀಯ
ವಾಂಗ್ಚುಕ್ ಜೂನ್ 28ರಂದು ವಿದ್ಯಾರ್ಥಿಗಳ ನೇತೃತ್ವದ ಆಂದೋಲನಕ್ಕೆ ಸೇರಿ 26 ದಿನಗಳ ಕಾಲ ಉಪವಾಸ ಮುಂದುವರಿಸಿದ್ದರು. ಅವರ ಆರೋಗ್ಯ ಸ್ಥಿತಿ ಕಳವಳ ಹುಟ್ಟಿಸಿದ ಕಾರಣ ಜುಲೈ 18ರಂದು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನಂತರ, ಆಸ್ಪತ್ರೆಯಲ್ಲಿ ತಾನು ಬಂಧನದಲ್ಲಿರುವಂತೆ ಅನಿಸುತ್ತಿದೆ ಎಂದು ವಾಂಗ್ಚುಕ್ ಆರೋಪಿಸಿದ್ದರು.
ದೆಹಲಿ ಹೈಕೋರ್ಟ್ ಆದೇಶದ ಬಳಿಕ ಅವರನ್ನು ಗುರುಗ್ರಾಮದ ಮೆದಾಂತಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಶುಕ್ರವಾರ ತಡರಾತ್ರಿ ಉಪವಾಸ ಅಂತ್ಯಗೊಳಿಸಿದ ನಂತರವೂ ಅವರು ಅಲ್ಲಿಯೇ ಚೇತರಿಕೆ ಮುಂದುವರಿಸಿದ್ದರು.
ಪ್ರಧಾನ್ ರಾಜೀನಾಮೆಯ ನಂತರ CJP ಪ್ರತಿಭಟನೆ ಅಂತ್ಯ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ, NEET-UG ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅನಿಯಮಿತತೆಗಳ ವಿರುದ್ಧ ಕಾಕ್ರೋಚ್ ಜಂತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ ಶನಿವಾರ ಅಂತ್ಯಗೊಂಡಿತು.
ಜೂನ್ 20ರಂದು ಜಂತರ್ ಮಂತರ್ನಲ್ಲಿ ಆರಂಭವಾದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳಿಗೆ ಹೊಣೆಗಾರಿಕೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ, ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.
ಕೇಂದ್ರದೊಂದಿಗೆ ನಡೆದ ಮಾತುಕತೆಗಳ ನಂತರ CJP ತನ್ನ ರಾಷ್ಟ್ರವ್ಯಾಪಿ ಆಂದೋಲನವನ್ನು ಹಿಂಪಡೆಯುವುದಾಗಿ ಘೋಷಿಸಿದ್ದು, ಸರ್ಕಾರ ತಮ್ಮ ಬೇಡಿಕೆಗಳನ್ನು ಅಂಗೀಕರಿಸಿದೆ ಎಂದು ತಿಳಿಸಿತು.
ಇದನ್ನೂ ನೋಡಿ: ನೀಟ್ ಅಕ್ರಮ ವಿರೋಧಿಸಿ ರಾಜಭವನ ಚಲೋ: ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಎಸ್ಎಫ್ಐ ಆಗ್ರಹ Janashakthi Media
