ಕಲಬುರಗಿ: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಸದಸ್ಯತ್ವ ನೋಂದಣಿ ಅಭಿಯಾನದ ಭಾಗವಾಗಿ ಜುಲೈ 4ರಂದು ಜೇವರ್ಗಿಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದರು. ಚುನಾವಣೆ
ಈ ಸಂದರ್ಭದಲ್ಲಿ ಮಾತಾಡಿದ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್, ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷದ ರಾಜ್ಯ ನಾಯಕರು ಕಾರ್ಯಕರ್ತರನ್ನು ಹುಡುಕಿಕೊಂಡು ಬರುವ ಪದ್ಧತಿ ಹೋಗಬೇಕು, ಜೆಡಿಎಸ್ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವಾಗಿದ್ದರೂ ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಗುರುತಿಸಿಕೊಳುತ್ತದೆ ಎಂದರು.
ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರರ ವೇತನ ಪರಿಷ್ಕರಣೆ ಮಾಡದೇ ಇದ್ದರೆ ಪ್ರತಿಭಟನೆ
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಬೆಳೆಸಿರೋದು ನಿಜವಾದರೂ ತಮ್ಮ ಪಕ್ಷ ಪ್ರತ್ಯೇಕ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ 50 ಲಕ್ಷ ಸದಸ್ಯರನ್ನು ಮಾಡುವ ಗುರಿಯಿಟ್ಟುಕೊಂಡಿದ್ದಾರೆ, ಎಲ್ಲರು ಅವರೊಂದಿಗೆ ಕೈಜೋಡಿಸಬೇಕಿದೆ ಎಂದು ಶರಣಗೌಡ ಹೇಳಿದರು.
ಇದನ್ನೂ ನೋಡಿ: ಅನ್ನ ತಿನ್ನುವವರೆಲ್ಲ ರೈತರ ಹೋರಾಟ ಬೆಂಬಲಿಸಬೇಕು | ಚನ್ನರಾಯಪಟ್ಟಣ ಹೋರಾಟಕ್ಕೆ ಸಾಹಿತಿ ಕಲಾವಿದರ ಸಾತ್
