ಬೆಂಗಳೂರು: SIR, ಕರ್ನಾಟಕದಲ್ಲಿ ಬಿಹಾರ ಮತ್ತು ಬಂಗಾಳಕ್ಕಿಂತಲೂ ಹೆಚ್ಚಿನ ಅವಾಂತರಗಳನ್ನು, ಅನಾಹುತಗಳನ್ನು ತಂದೊಡ್ಡುವುದು ನಿಚ್ಚಳವಾಗಿದೆ. ಮನೆ ಮನೆಗೆ ಹೋಗಿ ಮತ ಪರಿಶೀಲನೆ ಮಾಡುವ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ತಲುಪಿದೆ. ಅಘಾತಕಾರಿ ಅಂಕಿ ಅಂಶಗಳನ್ನು ಸ್ವತಃ ಚುನಾವಣಾ ಆಯೋಗ ಪ್ರಕಟಿಸಿದೆ. ರಾಜ್ಯದ 1 ಕೋಟಿ 10 ಲಕ್ಷ [1,10,59,288] ಮತದಾರರು ಡಿಲೀಟ್ ಪಟ್ಟಿಯಲ್ಲಿ ಇದ್ದಾರೆ. ಅಂದರೆ ರಾಜ್ಯದ 20% [19.95] ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು SIಖ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. SIR
ಅಂದರೆ ಪ್ರತಿ ಐದು ಜನರಲ್ಲಿ ಒಬ್ಬರು ಪಟ್ಟಿಯಿಂದ ಹೊರ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ. ಬೆಂಗಳೂರಿನ ಮತದಾರರ ಪಟ್ಟಿಯಲ್ಲಿನ 40% ಮಂದಿ ಕಾಣೆಯಾಗಲಿದ್ದಾರೆ. ಗಡಿ ಭಾಗಗಳಲ್ಲಿರುವ ಹಾಗೂ ವಲಸೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿಯೂ ಬೃಹತ್ ಸಂಖ್ಯೆಯ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. SIR
ಇಷ್ಟಕ್ಕೇ ಮುಗಿಯಿತು ಎಂದುಕೊಳ್ಳುವಂತಿಲ್ಲ. ಇದಿನ್ನುಮೊದಲ ಗಂಡಾಂತರ.ಇದಲ್ಲದೆ ಇನ್ನೆರಡು ಗಂಡಾಂತರಗಳು ಕಾದಿವೆ. ಮ್ಯಾಪಿಂಗ್ ಆಗದವರು ಮತ್ತು ಲಾಜಿಕಲ್ ಡಿಸ್ಕ್ರಿಪೆನ್ಸಿಅಡಿ ಬರುವವರು. ಚುನಾವಣಾ ಆಯೋಗದ ಪ್ರಕಾರ ಮ್ಯಾಪಿಂಗ್ ಆಗದವರ ಸಂಖ್ಯೆ 34 ಲಕ್ಷಜನ. ಇವರೆಲ್ಲರಿಗೂ ನೋಟೀಸ್ ಬರಲಿದೆ.
ಇದನ್ನೂ ಓದಿ: ಸೆಯುತಾ ವಲಸೆ ಸಂಕಷ್ಟ: ಸ್ಪೇನ್ ಕಮ್ಯೂನಿಸ್ಟ್ ಪಕ್ಷಗಳಿಂದ ಮೊರೊಕ್ಕೊ ವಿರುದ್ಧ ತೀವ್ರ ಆರೋಪ
ಇದಲ್ಲದೆ ಲಾಜಿಕಲ್ ಡಿಸ್ಕ್ರಿಪೆನ್ಸಿ ಎನ್ನುವ ಸರ್ಪ ಪ್ರತಿ BLOಗಳ ಆಪ್ ಒಳಗಡೆಯೇ ಅವತುಕೂತಿದೆ. ಇದನ್ನು ಮುಟ್ಟಬೇಡಿ ಎಂದು BLOಗಳಿಗೆ ಹೇಳಲಾಗಿದೆ. ಕೇಂದ್ರ ಚುನಾವಣಾಧಿಕಾರಿ ಅನ್ಬುಕುಮಾರ್ ಅವರೂ ಇದರ ಕುರಿತು ಮಾತನಾಡದೆ ಮೌನವಹಿಸಿದ್ದಾರೆ. ಇದು ಆಲ್ಗ್ಯಾರಿದಂ ಮೇಲೆ ಕೆಲಸಮಾಡುತ್ತದೆ. ಅಂದರೆ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ತಾಳ ದೆಹಲಿಯ ಕೈಗಳಲ್ಲಿ ಇದೆ. ಇದೊಂದು ರೀತಿಯ ಟ್ರಂಪ್ ಕಾರ್ಡ್. SIR
ಬಂಗಾಳದಲ್ಲಿ ಅತಿ ಹೆಚ್ಚಿನ ಅವಾಂತರ ಸೃಷ್ಟಿಸಿದ್ದು, ಈಗ ಹಾಲಿ 34 ಲಕ್ಷ ಜನ ಎಲ್ಲಾ ದಾಖಲೆಗಳಿದ್ದರೂ ಮತದಾನದ ಹಕ್ಕು ಇಲ್ಲದೆ ನ್ಯಾಯಲಯಕ್ಕೆ ಅಲಿಯುತ್ತಿರುವುದು ಇದರಿಂದಲೇ. ಈ ಸರ್ಪವೂ ಕರ್ನಾಟಕವನ್ನು ಕಚ್ಚಲಿದೆ. ಎಷ್ಟು ವಿಷ ಕಕ್ಕಬೇಕು ಎಂಬುದನ್ನು ದಿಲ್ಲಿ ದೊರೆಗಳು ಎಲ್ಲಾ ಪ್ರಕ್ರಿಯೆ ನೋಡಿಕೊಂಡು ತೀರ್ಮಾನ ಮಾಡುತ್ತಾರೆ. SIR
ಚುನಾವಣಾ ಆಯೋಗಕ್ಕೆ ಮೂರು ಮುಖ್ಯ ಪ್ರಶ್ನೆಗಳು:
1. ನೀವು ಡಿಲೀಟ್ ಮಾಡಲು ಹೊರಟಿರುವ 20% ಮತದಾರರಲ್ಲಿ 15% ಜನ ಬೇರೆ ಕಡೆಗೆ ಸ್ಥಳಾಂತರ ಗೊಂಡಿರುವವರು ಮತ್ತು BLOಗಳು ಮನೆಗೆ ಭೇಟಿ ನೀಡಿದಾಗ ಮನೆಯಲ್ಲಿ ಇಲ್ಲದವರು. [Shifted and Absent]. ಅಂದರೆ ಸತ್ತವರೂ ಅಲ್ಲ, ಎರಡು ಕಡೆ ನೊಂದಾವಣಿ ಆದವರೂ ಅಲ್ಲ. ಇದ್ದಾರೆ ಆದರೆ ಬೇರೆ ಕಡೆ ಇದ್ದಾರೆ ಮತ್ತು BLOಗಳು ಹೋದಾಗ ಸಿಗಲಿಲ್ಲ. ಅಂದರೆ ಜೀವಂತ ಮತದಾರರು. ರಾಜ್ಯದ ಹೆಚ್ಚು ಕಡಿಮೆ ಒಂದು ಕೋಟಿ ಜೀವಂತ ಮತದಾರರನ್ನು ನೀವು ಡಿಲೀಟ್ ಮಾಡಲು ಹೇಗೆ ಸಾಧ್ಯ?
2. ಎನ್ಯುಮುರೇಷನ್ ಫಾರಂ 100% ವಿತರಿಸಿದ್ದೇವೆ. 99.56% ಡಿಜಿಲಿಟೀಕರಣ ಆಗಿಹೋಗಿದೆ. ಚಾಮರಾಜನಗರ, ಕೊಡಗು, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ಹಾಸನ, ಬೆಂಗಳೂರು ಉತ್ತರ ಜಿಲ್ಲೆಗಳಲ್ಲಿ 100% ಡಿಜಿಲಿಟೀಕರಣ ಮುಕ್ತಾಯಗೊಂಡಿದೆ ಎಂದು ಘೋಷಿಸಿದ್ದೀರಿ. ಇಂದಿಗೂ ಇನ್ಯುಮುರೇಷನ್ ಫಾರಂ ಪಡೆಯದೆ ಪರದಾಡುತ್ತಿರುವ, ಖಾಲಿ ಫಾರಂ ಕೈಯಲ್ಲಿ ಹಿಡಿದು ಕೂತಿರುವ ನೂರಾರು ಜೀವಂತ ಉದಾಹರಣೆಗಳನ್ನು ನಾವು ನೀಡುತ್ತೇವೆ. ಏನು ಉತ್ತರ ನೀಡುತ್ತೀರಿ?
3. ಲಾಜಿಕಲ್ ಡಿಸ್ಕ್ರಿಪೆನ್ಸಿಸಾಫ್ಟ್ ವೇರ್ ಅನ್ನುಪ್ರತಿ BLO ಆಫ್‌ನಲ್ಲಿ ಹಾಕಿಟ್ಟಿದ್ದೀರಿ. ಆದರೆ ಅದರ ಬಗ್ಗೆ BLA ಗಳಿಗೆ ಏಕೆ ತರಭೇತಿ ನೀಡಿಲ್ಲ? ನೀವೂ ಏಕೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ? SIR
4. ಆಬ್ಸೆಂಟ್, ಶಿಫ್ಟೆಂಡ್, ಡೆತ್, ಡುಪ್ಲಿಕೇಟ್ ಅಂಡ್ ಅದರ್ಸ್ ಇಷ್ಟಿಷ್ಟು ಎಂದು ಅಂಕಿ ಅಂಶ ನೀಡಿದ್ದೀರಿ. ಇರಲ್ಲಿ ಈ ಅದರ್ಸ್ ಎಂದರೆ ಯಾರು? ಕೊನೆಯ ಬಹು ಮುಖ್ಯ ಪ್ರಶ್ನೆ ನೀವು ಪತ್ತೆಹಚ್ಚಿದ ಬಾಂಗ್ಲೇದೇಶಿ ಜನರ ಸಂಖ್ಯೆ ಎಷ್ಟು? ಈ ಇಡೀ ಪ್ರಕ್ರಿಯೆ ಒಳ ನುಸುಳುಕೋರರನ್ನು ಪತ್ತೆ ಹಚ್ಚಲು ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮೀತ್ ಶಾ ಅವರೇ ಹೇಳುತ್ತಿರುವಾಗ, ನೀವು ಈ ಪ್ರಕ್ರಿಯೆ ಮೂಲಕ ಎಷ್ಟು ನುಸುಳುಕೋರರ ಅಕ್ರಮ ಮತಗಳನ್ನು ಪತ್ತೆಹೆಚ್ಚಿದಿರಿ ಎಂಬ ಲೆಕ್ಕ ಏಕೆ ನೀಡುತ್ತಿಲ್ಲ? SIR
ಕರ್ನಾಟದಲ್ಲಿ ಈ ಪ್ರಮಾಣದ ಮತಗಳು ಡಿಲೀಟ್ ಆಗಲು ಅಸಲಿ ಕಾರಣಗಳು:
1. SIR ಪ್ರಕ್ರಿಯೆಯೇ ಗುಣತಃ ಅವೈಜ್ಞಾನಿಕವಾಗಿದೆ, ಅಪ್ರ ಜಾತಾಂತ್ರಿಕವಾಗಿದೆ ಮತ್ತು ದುರುದ್ದೇಶಗಳಿಂದ ಕೂಡಿದೆ. ಕೇಂದ್ರದಲ್ಲಿರುವ ಬಿಜೆಪಿ ಪಕ್ಷದ ಅಕ್ರಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಜನರ ಮೇಲೆ ಹೇರಲಾಗಿದೆ. ಇಲ್ಲಿ ನಡೆಯುತ್ತಿರುವ ಹಾಲಿ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲವೇ ಅಲ್ಲ. ಪರಿಷ್ಕರಣೆ ಎಂಬ ಪದ ಹೆಸರಿಗೆ ಮಾತ್ರ. ಇಲ್ಲಿ ನಡೆಯುತ್ತಿರುವುದು ಇಡೀ ರಾಜ್ಯದ ಎಲ್ಲಾ ಮತಗಳನ್ನು ರದ್ದುಗೊಳಿಸಿ, ಜನರನ್ನು ಪೇಚಾಟಕ್ಕೆ ಸಿಕ್ಕಿಸುವ ಪ್ರಕ್ರಿಯೆ ಮೂಲಕ ವಿಕೃತ ಪಟ್ಟಿ ತಯಾರಿಸುವುದು. ಮನಬಂದಂತೆ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು, ಬಿಟ್ಟು ಹೋದವರು ಹೊಸದಾಗಿ ನೊಂದಾಯಿಸಿಕೊಳ್ಳಿ ಎಂಬ ಉಡಾಫೆ ಉತ್ತರ ನೀಡುವುದು ಅಕ್ರಮ, ಅಪ್ರ ಜಾತಾಂತ್ರಿ, ಅಸಾಂವಿಧಾನಿಕ, ಅನೈತಿಕ ವಿಧಾನ. SIR
2. ಇಡೀ ಪ್ರಕ್ರಿಯೆಯನ್ನು ಬೇಜವಬ್ದಾರಿ ಮತ್ತು ಅವ್ಯವಸ್ಥಿತವಾಗಿ ನಡೆಸಲಾಗಿದೆ. ಈ ಕ್ಲಿಷ್ಟಕರ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವಿಲ್ಲದಷ್ಟು ಕಡಿಮೆ ಶಿಕ್ಷಣ ಹೊಂದಿರುವ BLO ಗಳನ್ನು ನೇಮಿಸಿ, ಸೂಕ್ತ ತರಭೇತಿಯನ್ನೂ ನೀಡದೆ, ಅವರ ತಲೆಯ ಮೇಲೆ ಕೂತು ಅವರನ್ನೂ ಅಪಾರ ಸಂಕಟಕ್ಕೆ ಈಡು ಮಾಡಿ, ಗಡಿಬಿಡಿಯಲ್ಲಿ ಮತ್ತು ಅವ್ಯವಸ್ಥಿತವಾಗಿ ಇಡೀ ಪ್ರಕ್ರಿಯೆಯನ್ನು ನಡೆಸಲಾಗಿದೆ. ಈ ಅವ್ಯವಸ್ಥೆಗೆ BLO ಗಳನ್ನು ಹೊಣೆ ಮಾಡುವುದನ್ನು ಮತ್ತು ಶಿಕ್ಷಿಸುವುದನ್ನು ನಾವು ಖಂಡಿಸುತ್ತೇವೆ. ತಪ್ಪಿನ ಹೊಣೆಯನ್ನು ಚುನಾವಣಾ ಆಯೋಗ ಹೊರಬೇಕಿದೆ. ಶಿಕ್ಷೆ ನೀಡುವುದಾದರೆ ತನಗೆ ನೀಡಿಕೊಳ್ಳಬೇಕಿದೆ.
3. ಮೂರನೇ ಅತಿ ಮುಖ್ಯ ಕಾರಣ ಇದರಲ್ಲಿ ಶಿಫ್ಟಿಂಗ್ ಆದವರು ಮತ್ತು ಮನೆಯಲ್ಲಿ ಇಲ್ಲದವರನ್ನೆಲ್ಲಾ ಡಿಲೀಟೆಡ್ ಓಟರ್ಸ್ ಎಂದು ಪರಿಗಣಿಸುವ SIR ಪ್ರಕ್ರಿಯೆಯಲ್ಲೇ ಅಡಗಿದೆ. ದುಡಿಮೆಗಾಗಿ ಅಲೆಯುತ್ತಿರುವ, ವಲಸೆ ಹೋಗುತ್ತಿರುವ, ವಲಸೆ ಬಂದಿರುವ ಪ್ರದೇಶಗಳಲ್ಲಿ ಅತಿ ಹೆಚ್ಚು ಡಿಲೀಷನ್ ನಡೆಯಲು ಇದೇ ಮುಖ್ಯ ಕಾರಣ. ಯಾರದೇ ಮತದ ಹಕ್ಕನ್ನು ಅವರು ಬೇರೆಡೆ ಹೋಗಿದ್ದಾರೆ ಎಂಬ ಕಾರಣಕ್ಕೆ ಡಿಲೀಟ್ ಮಾಡುವುದು ಘೋರ ಅನ್ಯಾಯ. ಮತಿಭ್ರಮೆಗೆ ಒಳಗಾದವರು ಅಥವಾ ಅಕ್ರಮ ವಲಸಿಗರು ಎಂದು ಸಾಬೀತಾಗದ ಹೊರತು ಯಾರನ್ನೂ ಡಿಲೀಟ್ ಮಾಡಲು ಬರುವುದಿಲ್ಲ.
4. ಸ್ಥಳಾಂತರಗೊಂಡವರನ್ನು ತಲುಪುವ ಮತ್ತು ಒಳಗೊಳ್ಳುವ ಯಾವ ಪ್ರಯತ್ನವೂ ಇಡೀ ಪ್ರಕ್ರಿಯೆಯಲ್ಲಿ ಇಲ್ಲ. ಬಾಡಿಗೆ ಮನೆ ಬದಲಾಯಿಸುವುದು, ದುಡಿಯಲು ಬೇರೆ ಕಡೆ ಹೋಗುವುದು ಅಕ್ರಮವಲ್ಲ. ಇಡೀ ದೇಶವೇ ಇದ್ದ ಸ್ಥಳದಲ್ಲಿ ಉದ್ಯೋಗಗಳಲ್ಲಿದೆ ಅಲೆಮಾರಿಯಾಗಿದೆ. ಇಂತಹ ಸಂದರ್ಭದಲ್ಲಿ BLO ಬಂದಾಗ ಮನೆಯಲ್ಲಿಇರಲಿಲ್ಲ, ಬೇರೆ ಕಡೆ ವರ್ಗಗೊಂಡಿದ್ದಾರೆ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಿಂದಲೇ ತೆಗೆಯುವುದು ಅಕ್ರಮ ಮಾತ್ರವಲ್ಲ ಅಪರಾಧ. ಇದು ಸಾಮೂಹಿಕ ಮತಹತ್ಯೆ. ಮತ ಹತ್ಯೆಯ ದೋಷಿಗಳು ಚುನಾವಣಾ ಆಯೋಗ ಮತ್ತು ಅದರ ಹಿಂದೆ ಕೂತಿರುವ ಕೇಂದ್ರ ಸರ್ಕಾರ.
ಚುನಾವಣಾ ಆಯೋಗಕ್ಕೆ ನಮ್ಮ ತುರ್ತು ಒತ್ತಾಯಗಳು:
1. ಇಷ್ಟು ಡಿಲೀಷನ್ ಏಕಾಯಿತು? ಎಂಬ ಕುರಿತು ಸಮಗ್ರ ಅವಲೋಕನ ಆಗಬೇಕು. ಸಾಮಾಜಿಕ ಸಂಘಟನೆಗಳಿಗೂ ಇದರಲ್ಲಿ ವಿಚಾರ ಮಂಡಿಸಲು ಅವಕಾಶ ನೀಡಬೇಕು. [ಚುನಾವಣಾ ಆಯೋಗ ಸಾರ್ವಜನಿಕ ಭೇಟಿಗೆ ಅವಕಾಶವನ್ನೇ ನೀಡುತ್ತಿಲ್ಲ. ನಮ್ಮ ಯಾವ ಪತ್ರಗಳಿಗೂ ಉತ್ತರಿಸಿಲ್ಲ ಎಂಬುದನ್ನು ಗಮನಿಸಬೇಕು].
2. ಸ್ಥಳಾಂತರ ಗೊಂಡವರನ್ನು ಮತ್ತು ಮನೆಯಲ್ಲಿ ಇಲ್ಲದಿದ್ದವರನ್ನು ಯಾವುದೇ ಕಾರಣಕ್ಕೂ ಡಿಲೀಟ್ ಪಟ್ಟಿಗೆ ಸೇರಿಸಬಾರದು. ಅವರು ಇರುವ ಸ್ಥಳಗಳಲ್ಲೇ ಎನ್ಯುಮುರೇಶನ್ ಫಾರಂ ಮತ್ತು ಫಾರಂ 8ನ್ನು ಕೊಡುವವ್ಯವಸ್ಥೆಆಗಬೇಕು.
3. ಈ ಮೂಲಭೂತ ದೋಷವನ್ನು ಸರಿ ತಿದ್ದಲು ಎನ್ಯುಮುರೇಷನ್ ಪ್ರಕ್ರಿಯೆಯ ಅವಧಿಯನ್ನು ಕನಿಷ್ಟ ಒಂದು ತಿಂಗಳಿಗೆ ವಿಸ್ತರಿಸಬೇಕು ಮತ್ತು ಸ್ಥಳಾಂತರಗೊಂಡು ಬಂದಿರುವ ಮತದಾರರನ್ನೂ ಪ್ರತಿ ಬೂತಿನಲ್ಲಿ ಪತ್ತೆಹಚ್ಚಿ ಫಾರಂನಂ. 8 ನ್ನು ನೀಡಿ ಹೊಸ ವಿಳಾಸಕ್ಕೆ ವರ್ಗಾವಣೆ ಮಾಡಿಕೊಳ್ಳಬೇಕು. ಡಿಲೀಟ್ ಮಾಡಬಾರದು.
4. ಕರಡು ಪಟ್ಟಿ ಪ್ರಕಟವಾದ ನಂತರ ಚುನಾವಣಾ ಆಯೋಗದ ಮ್ಯಾನ್ಯುಯಲ್ ನಲ್ಲಿ ಇರುವ ನಿರ್ದೇಶನದಂತೆ ಪ್ರತಿ ಬೂತ್ ಪ್ರದೇಶಗಳಲ್ಲಿ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಬೇಕು. ಎಲ್ಲರ ಸಮ್ಮುಖದಲ್ಲಿ ಮುಕ್ತ ಪರಿಶೀಲನೆ ನಡೆಸಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು. ದುಡಿಯಲು ಬೇರೆಡೆ ಹೋಗಿದ್ದರೂ ಸಾರ್ವಜನಿಕ ಸಾಕ್ಷ್ಯದ ಆಧಾರದ ಮೇಲೆ ಅವರ ಮತವನ್ನು ಉಳಿಸಬೇಕು. ಬೇರೆ ಕಡೆಯಿಂದ ಸ್ಥಳಾಂತರಗೊಂಡು ಬಂದಿರುವವರನ್ನೂ ಸ್ಥಳೀಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು.
ಕರ್ನಾಟಕದ ತಾಳ್ಮೆಯನ್ನು ಪರೀಕ್ಷಿಸದಿರಿ:
ಚುನಾವಣಾ ಆಯೋಗ ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಕರ್ನಾಟಕದ ನಾಗರೀಕ ಸಮಾಜ ಮುಂದಿಡುತ್ತಿರುವ ಯಾವ ಪ್ರಸ್ತಾಪಗಳನ್ನೂ ಪರಿಗಣಿಸುವ ಪ್ರಯತ್ನವನ್ನೇ ಮಾಡಿಲ್ಲ. ಕೋಟ್ಯಾಂತರ ಜನ ಡಿಲೀಟ್ ಆಗುತ್ತಿದ್ದರೂ ಅವರ ಮಾತಿನಲ್ಲಿ ಯಾವ ಆತಂಕವೂ ಇಲ್ಲ, ಕಾಳಜಿಯೂ ಇಲ್ಲ. ಎಲ್ಲಾ 100% ಸರಿಯಾಗಿದೆ ಎಂಬ ಭ್ರಮೆ ಮೂಡಿಸುವ ಕೆಲಸಮಾಡುತ್ತಿದೆ. ಕೋಟ್ಯಾಂತರ ಜನರ ಮತದಾನದ ಹಕ್ಕಿನ ಜೊತೆ ಚೆಲ್ಲಾಟವಾಡಲಾಗುತ್ತಿದೆ.
ಈ ಅಪಾರ ಪ್ರಮಾಣದ ಡಿಲೀಷನ್ ಕುರಿತು ಆತ್ಮಾವಲೋಕನಕ್ಕೆ ಚುನಾವಣಾ ಆಯೋಗ ಒಡ್ಡಿಕೊಳ್ಳದಿದ್ದಲ್ಲಿ, ನಮ್ಮ ನಿಲುವನ್ನು ಮುಂದಿಡಲು ಅವಕಾಶವನ್ನೂ ನೀಡದಿದ್ದಲ್ಲಿ, ಅಕ್ರಮ ಡಿಲೀಷನ್ ಗಳನ್ನು ಕೈ ಬಿಡದಿದ್ದಲ್ಲಿ, ಕನಿಷ್ಟ SIR ಪ್ರಕ್ರಿಯೆಯ ಅವಧಿಯನ್ನು ವಿಸ್ತರಣೆ ಮಾಡದಿದ್ದಲ್ಲಿ ತೀವ್ರ ಸ್ವರೂಪದ ಪ್ರತಿರೋಧಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಚುನಾವಣಾ ಆಯೋಗವೇ ಸಂಪೂರ್ಣ ಹೊಣೆಯಾಗಲಿದೆ.
ಕೊನೆಯದಾಗಿ SIR ವಿರೋಧಿ ಕರ್ನಾಟಕದ ಕುರಿತು:
SIR ವಿರೋಧಿ ಕರ್ನಾಟಕ ಎಂಬುದು ಕರ್ನಾಟಕದ ಬಹುತೇಕ ಜನಪರ ಸಂಘಟನೆಗಳ ಹಾಗೂ ಜಾತ್ಯಾತೀತ ಪಕ್ಷಗಳ ಒಕ್ಕೂಟವಾಗಿದೆ. ಇದರಲ್ಲಿ ಎದ್ದೇಳು ಕರ್ನಾಟಕ, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಮುಸ್ಲಿಂ ಮತ್ತಹದೇಮ ಹಾಜ್, ನಮ್ಮ ಮತ ನಮ್ಮ ಹಕ್ಕು, ಜಾಗೃತ ಕರ್ನಾಟಕ, ಸರ್ವೋದಯ ಕರ್ನಾಟಕ, ಆಮ್ ಆದ್ಮಿಪಾರ್ಟಿ, ಸಿಪಿಐ, ಸಿಪಿಯಂ,,ಎಸ್ ಯುಸಿ. ಐ, ಎಸ್.ಡಿ.ಪಿ.ಐ, ವೆಲ್ಫೇರ್ ಫಾರ್ಟಿಆಫ್ ಇಂಡಿಯಾ, ಆಲ್ ಇಂಡಿಯಾ ಬಿಎಸ್ ಪಿ, ಮುಂತಾದವರು ಸಹ ಭಾಗಿಗಳಾಗಿದ್ದೇವೆ.
“ನಾಗರೀಕ ಮತಕಾವಲು ಸಮಿತಿ ”ಗಳನ್ನು ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಅಪಾರ ಪ್ರಮಾಣದ ಬೂತ್ ಮಟ್ಟದಲ್ಲೂ ರಚಿಸಿ ಜನರ ಮತ ಹಕ್ಕನ್ನು ರಕ್ಷಿಸಲು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರಕ್ಕೂ ರಾಜ್ಯದ ಜನರ ಮತ ಹಕ್ಕನ್ನು ರಕ್ಷಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾ ಬರುತ್ತಿದ್ದೇವೆ. ರಾಜ್ಯದ ಪ್ರತಿಯೊಬ್ಬ ಮತದಾನದ ಹಕ್ಕು ಸುರಕ್ಷಿತಗೊಳ್ಳುವ ತನಕ ಈ ಅಭಿಯಾನ ಮತ್ತು ಹೋರಾಟ ಮುಂದುವರಿಯಲಿದೆ. ಕರ್ನಾಟಕದ ಈ ಸಂಕಟಮಯಸ್ಥಿತಿಯಲ್ಲಿ ಮಾಧ್ಯಮ ಮಿತ್ರರ ಗರಿಷ್ಟ ಪ್ರಮಾಣದ ನೆರವನ್ನು ಕೋರುತ್ತೇವೆ. SIR ಕುರಿತ ನೀವು ಕೇಳುವ ಯಾವುದೇ ರೀತಿಯ ಮಾಹಿತಿ, ಗ್ರೌಂಡ್ ಫೀಡ್ ಬ್ಯಾಕ್ ಮತ್ತು ಅಗತ್ಯ ಸ್ಪಷ್ಟೀಕರಣಗಳನ್ನು ಒದಗಿಸಲು ನಾವು ಉತ್ಸುಕುರಾಗಿದ್
