ಬೆಂಗಳೂರು: NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ ಮೇ 18ರಂದು ಫ್ರೀಡಂ ಪಾರ್ಕ್ನಲ್ಲಿ SFI ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿತು. ಎಸ್ಎಫ್ಐ ರಾಜ್ಯ ಅಧ್ಯಕ್ಷ ಶಿವಪ್ಪ ಎನ್ ಮಾತಾಡಿ, ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಕ್ರಮಿನಲ್ ಕೆಲಸವಾಗಿದೆ. ಭವಿಷ್ಯ ಕಟ್ಟಿಕೊಳ್ಳುವ ಮಕ್ಕಳ ಜೀವನದ ಚೆಲ್ಲಾಟವಾಡುತ್ತಿದ್ದಾರೆ.
ಈಗಾಗಲೇ ಅನೇಕ ವಿದ್ಯಾರ್ಥಿಗಳು ಮನನೊಂದ ಆತ್ಮಹತ್ಯೆ ಮಾಡಿಕೊಂಡರು. ಇದು ಕೊಲ್ಲುವ ಕೆಲಸವಲ್ಲವೇ? ಜೀವ ತೆಗೆಯುವ ಚಟುವಟಿಕೆಗಳನ್ನು ಮಾಡುವ BJP ಮುಖಂಡರು, ಸಚಿವರು, ಅಧಿಕಾರಿಗಳನ್ನು ಕ್ರಿಮಿನಲ್ಗಳು ಎನ್ನದೆ ಇನ್ನೇನು ಎನ್ನಬೇಕು. ರಾಜಸ್ಥಾನದ ಸಿಕ್ಕರ್ ನಲ್ಲಿ ನಡೆದ NTA UG NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸುತ್ತಿದ್ದೇವೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚಲ್ಲಾಟವಾಡಿರುವ ಕೇಂದ್ರ ಸರ್ಕಾರ, NTA, ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು.
ಒಂದು ದೇಶ – ಒಂದು ಪರೀಕ್ಷೆ” ಎಂಬ ಹೆಸರಿನಲ್ಲಿ ಜಾರಿಗೊಂಡಿರುವ NEET ಇಂದು ಬಡ, ಗ್ರಾಮೀಣ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೇಲೆ ಅನ್ಯಾಯ ಮಾಡುವ ವ್ಯವಸ್ಥೆಯಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: NGT ವಿಚಾರಣೆ ಬಾಕಿ ಇರುವಾಗಲೇ ವೇದಾಂತಾ ರಸ್ತೆ ಯೋಜನೆಗೆ ಅಂತಿಮ ಅನುಮತಿ ನೀಡಿದ ಕೇಂದ್ರ
ದುಬಾರಿ ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ಹಣ ಕೊಡುವ ಸಾಮರ್ಥ್ಯವಿರುವವರಿಗಷ್ಟೇ ಈ ವ್ಯವಸ್ಥೆ ಅನುಕೂಲವಾಗುತ್ತಿದೆ. ನಮ್ಮದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟವಾಗಿದೆ. ಇಲ್ಲಿ ಬಡತನ ಇನ್ನೂ ತಾಂಡವಾಡುತ್ತಿದೆ.
ಬಡ ಮಕ್ಕಳು ಪರೀಕ್ಷಾ ಹಣ ಖರ್ಚುಮಾಡಿ ಒತ್ತಡ, ನಿರಾಶೆ, ಆತಂಕ ಮತ್ತು ಭವಿಷ್ಯದ ಭಯದಿಂದ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಶಿಕ್ಷಣವು ವಿದ್ಯಾರ್ಥಿಗಳ ಕನಸುಗಳನ್ನು ಬೆಳೆಸಬೇಕೇ ಹೊರತು ಅವರ ಜೀವನವನ್ನು ಕಸಿದುಕೊಳ್ಳಬಾರದು ಎಂದರು.
ವಿಜಯ್ ಕುಮಾರ್ ರಾಜ್ಯ ಕಾರ್ಯದರ್ಶಿ ಮಾತಾನಾಡಿ ಕೇಂದ್ರಿಕೃತ ಪರೀಕ್ಷೆಯಿಂದ ವಿದ್ಯಾರ್ಥಿಯ ಪ್ರತಿಭೆಯನ್ನು ಅಳೆಯಲು ಸಾಧ್ಯವಿಲ್ಲ. ಶಿಕ್ಷಣವು ಕೆಲವರ ಹಕ್ಕಾಗಿರದೆ ಪ್ರತಿಯೊಬ್ಬರ ಹಕ್ಕಾಗಬೇಕು. ಶಿಕ್ಷಣ ಖಾಸಗಿಯಾಗಿ ಸಿಗುವುದರಿಂದ ಇಲ್ಲ ಹಣ ಇದ್ದವರಿಗೆ ಮಾತ್ರ. ಇದು ಬಡವರ ಶಿಕ್ಷಣ ಅಲ್ಲ. ಇದರಲ್ಲಿಯೂ ಕೆಲವು ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಪ್ರಶ್ನೆ ಪತ್ರಿಕೆಯನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿ ಸಿಕ್ಕಿಬಿದ್ದಿದ್ದಾರೆ. ಇಂತವರ ಬಗ್ಗೆ ಎಚ್ಚರವಹಿಸಬೇಕು. ಪೋಷಕರು ಇಂತಹ ಕೃತ್ಯಗಳಿಗೆ ಒಳಗಾಗಬಾರದು.
ರಾಜ್ಯ ಉಪಾಧ್ಯಕ್ಷರಾದ ಡಾ. ದೊಡ್ಡ ಬಸವರಾಜ್ ಮಾತನಾಡಿ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೊಡಬೇಕು ಹಾಗೂ ರಾಜ್ಯಕ್ಕೆ ಕೋಟಗಳನ್ನು ನೀಡಬೇಕು. ಇಲ್ದಿದ್ದರೆ ಕೇವಲ ಕೆಲವೇ ರಾಜ್ಯದ ವಿದ್ಯಾರ್ಥಿಗಳು ಆಯ್ಕೆಯಾಗುವ ಸಂಭವ ಹೆಚ್ಚು ಇದೆ ಇನ್ನು ಉಳಿದ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗದೆ ಅವರು ಹರರಲ್ಲ ಎನ್ನುವ ಪಟ್ಟಕ್ಕೆ ಇದು ಸಾಕ್ಷಿಯಾಗಲಿದೆ. ಮತ್ತು ಪರೀಕ್ಷೆಯನ್ನು ಬರೆಯಲು ಮಾತೃಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು. ವೈದ್ಯಕೀಯ ಪರೀಕ್ಷೆಗಳನ್ನು ರಾಜ್ಯ ಸರ್ಕಾರವೇ ನಡೆಸಿ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಬೇಕು.
ಕೋಚಿಂಗ್ ಸೆಂಟರ್ ಮಾಫಿಯಾ ಮತ್ತು ಶಿಕ್ಷಣದ ವ್ಯಾಪಾರೀಕರಣವನ್ನು ನಿಲ್ಲಿಸಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ NEET ತರಬೇತಿ ನೀಡಬೇಕು. ವಿದ್ಯಾರ್ಥಿಗಳ ಮೇಲಿನ ಅತಿಯಾದ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಬೇಕು. ಶಾಲೆ ಹಾಗೂ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಸಲಹಾ ಕೇಂದ್ರಗಳನ್ನು ಸ್ಥಾಪಿಸಬೇಕು.
ಗ್ರಾಮೀಣ, ಸರ್ಕಾರಿ ಶಾಲೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಖಚಿತಪಡಿಸಬೇಕು.
ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮತ್ತು ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪಾರದರ್ಶಕ, ನ್ಯಾಯಸಮ್ಮತ ಮತ್ತು ಭ್ರಷ್ಟಾಚಾರ ರಹಿತ ಪರೀಕ್ಷಾ ವ್ಯವಸ್ಥೆ ಜಾರಿಯಾಗಬೇಕು. ವಿದ್ಯಾರ್ಥಿಗಳನ್ನು ಶೋಷಿಸುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು.
CET ಮತ್ತು ನಿರಂತರ ಶೈಕ್ಷಣಿಕ ಸಾಧನೆ ಆಧಾರಿತ ಪ್ರವೇಶ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ SFI ನ ರಾಜ್ಯ ಅಧ್ಯಕ್ಷರಾದ ಶಿವಪ್ಪ ಅಂಬ್ಲಿಕಲ್, ರಾಜ್ಯ ಕಾರ್ಯದರ್ಶಿವಿಜಯ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ದೊಡ್ಡ ಬಸವರಾಜ್ ಗುಳ್ಳೆದಳ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷರಾದ ಕಾವ್ಯ, ಪ್ರಧಾನ್, ಸಹ ಕಾರ್ಯದರ್ಶಿ ಮಣಿಭಾರಧಿ, ರಾಜಿ ಘಫೂರ್, ಪರಿವರ್ತನ. N ಪದಾಧಿಕಾರಿಗಳು ಸೌಮ್ಯ. ಕೀರ್ತನ, ಸಂಜೀವ್ ಸಿಂಗ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media
