ಹಕ್ಕಿ ಜ್ವರ: ನಂದೂರ್ಬಾರ್‌ನಿಂದ 8 ಮಂದಿಯ ಮಾದರಿ ಪರೀಕ್ಷೆಗೆ

ಮುಂಬೈ: ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ಹಕ್ಕಿಜ್ವರ (ಏವಿಯನ್ ಇನ್‌ಫ್ಲೂಯೆನ್ಸಾ) ಹರಡುವಿಕೆ ಹಿನ್ನೆಲೆಯಲ್ಲಿ, ಎಂಟು ಕೋಳಿ ಕಾರ್ಮಿಕರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV)ಗೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೋಳಿಗಳ ಸಂಪರ್ಕಕ್ಕೆ ಬಂದಿದ್ದ ಅಥವಾ ಕೊಲ್ಲುವ (ಕಲ್ಲಿಂಗ್) ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಈ ಕಾರ್ಮಿಕರಲ್ಲಿ ಮಾನವರಿಗೆ ಕಾಣಿಸುವ ಹಕ್ಕಿಜ್ವರದ ಯಾವುದೇ ಲಕ್ಷಣಗಳು ಇದುವರೆಗೆ ಕಂಡುಬಂದಿಲ್ಲ. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ ಔಷಧೋಪಚಾರ ನೀಡಲಾಗುತ್ತಿದೆ.

ಉತ್ತರ–ಪಶ್ಚಿಮ ಮಹಾರಾಷ್ಟ್ರದಲ್ಲಿರುವ ನಂದೂರ್ಬಾರ್ ಜಿಲ್ಲೆ ಪಕ್ಷಿಜ್ವರದಿಂದ ಪ್ರಭಾವಿತವಾಗಿದೆ.

ಇದನ್ನೂ ಓದಿ: ಮನೆ ಕಳೆದುಕೊಂಡ ಕೋಗಿಲು ಲೇಔಟ್ ನಿವಾಸಿಗಳ ಹೋರಾಟ ತೀವ್ರ ;ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಪ್ರತಿಭಟನೆ

“ಪಕ್ಷಿಗಳ ಸಂಪರ್ಕದಲ್ಲಿದ್ದ ಅಥವಾ ಕಲ್ಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಎಂಟು ಮಂದಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಮೂಗಿನ ಸ್ವ್ಯಾಬ್ ಸೇರಿದಂತೆ ಮಾದರಿಗಳನ್ನು ಮಂಗಳವಾರ ಪುಣೆಯ NIVಗೆ ಕಳುಹಿಸಲಾಗುತ್ತದೆ,” ಎಂದು ಜಿಲ್ಲಾ ಆರೋಗ್ಯಾಧಿಕಾರಿ ರವೀಂದ್ರ ಸೋನವಣೆ ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಈ ಕಾರ್ಮಿಕರಿಗೆ ಟ್ಯಾಮಿಫ್ಲು ಮಾತ್ರೆಗಳು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪರೀಕ್ಷೆಗೆ ಒಳಗಾಗಿರುವವರಲ್ಲಿ ಯಾವುದೇ ಸರ್ಕಾರಿ ನೌಕರರು ಸೇರಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ಎಲ್ಲವೂ ಸರಿಯಿದೆ ಎಂದು ಹೇಳುತ್ತಲೇ ಈಗ ಸಂಕಷ್ಟ ತಂದಿಟ್ಟರೇ ಮೋದಿಜೀ? ! ಬಿ.ಶ್ರೀಪಾದ ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *