ಕ್ಷಮೆ ಯಾಚಿಸಬೇಕಾದವರು ಯಾರು?

ನಮ್ಮ ಪ್ರಧಾನಮಂತ್ರಿಗಳು ಹೆಚ್ಚು ಮೂಲಭೂತ ಪ್ರಶ್ನೆಗಳನ್ನು ಎದುರಿಸುವ ಬದಲು, ಈಗಲೂ ತಾನು ಹೇಳಿದ್ದೇ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ತಾನು ಪ್ರತಿಭಟನಾಕಾರರಿಂದ ಅವರ  ಪ್ರತಿಕ್ರಿಯೆಗಳಿಗೆ ಕ್ಷಮಾಯಾಚನೆಯನ್ನು  ಸ್ವೀಕರಿಸಲು ಸಿದ್ಧನಾಗಿದ್ದೇನೆ ಎಂದು ಹೇಳುವಾಗ  ವಾಸ್ತವ ಸಂಪೂರ್ಣವಾಗಿ ತಲೆಕೆಳಗಾಗಿದೆ. ಯಾರು ಕ್ಷಮೆಯಾಚಿಸಬೇಕು? ಯುವ ವಿದ್ಯಾರ್ಥಿಗಳೋ  ಅಥವಾ ಸಂಪುಟ ಮತ್ತು ಸರ್ಕಾರದ ಸಾಮೂಹಿಕ ಜವಾಬುದಾರಿಕೆಯ ತತ್ವದ ಪ್ರಕಾರ  ಅಮಿತ್ ಶಾ ಮತ್ತು ನರೇಂದ್ರ ಮೋದಿಯವರೋ? ಬಹುಶಃ ಕಳೆದ ಎರಡು ವಾರಗಳಲ್ಲಿ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳ ಅನುಪಸ್ಥಿತಿಯೇ  ಎಲ್ಲವನ್ನೂ ಹೇಳುತ್ತದೆ. ಮೋದಿ ಮತ್ತು ಅವರ ಅನುಚರರು, ಸಂಸದೀಯ ಜವಾಬುದಾರಿಕೆ ಮತ್ತು ಚುನಾವಣಾ ಸಮಗ್ರತೆಯನ್ನು ಅಮಾನ್ಯಗೊಳಿಸುವ ಮೂಲಕ ವಾಸ್ತವವಾಗಿ ಬೀದಿಗಳು ಮತ್ತು ಹೋರಾಟಗಳನ್ನು ಮಾನ್ಯಗೊಳಿಸಿದ್ದಾರೆ. ಹೋರಾಟಗಳು ಬಹಳಷ್ಟು ಮುಂದುವರೆದಿವೆ, ಜನರು ಪ್ರಧಾನ ಮಂತ್ರಿಯವರು ಕ್ಷಮೆಯಾಚಿಸುವಂತೆ ಬಲವಂತಪಡಿಸುತ್ತಾರೆ. ಕ್ಷಮೆ

ನೀಲೋತ್ಪಲ ಬಸು

(ಅನು:ಕೆ.ವಿ.)

ಕಳೆದ ಕೆಲವು ವಾರಗಳಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಾಶ್ವತ ತಿರುಗುಮುರುಗು ವಾಸ್ತವದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ಸುಸ್ಪಷ್ಟ. ಅವರಿಗೆ, ಜೆನ್‌ ಝೀ  ಚಳುವಳಿ ಮತ್ತು ಅವರ ಆಳ್ವಿಕೆಯ  ವಿಶಿಷ್ಟ ಜನವಿರೋಧಿ ದಿಕ್ಕು ಜನರನ್ನು ಬಹುವಾಗಿ ಬಾಧಿಸುತ್ತಿರುವ ಗಂಭೀರ ವಾಸ್ತವದೊಂದಿಗೆ  ನೇರ ಸಂಘರ್ಷಕ್ಕೆ ಬರುತ್ತಿದೆ. ಇದರ ಖಚಿತ ಪರಿಣಾಮ ಎಂದರೆ ಅವರ ನಡುರಾತ್ರಿ ರೀಲುಗಳು, ವೀಡಿಯೋ ಸಂದೇಶಗಳು. ಇವನ್ನು ಅವರ ಆಡಳಿತ ಶೈಲಿಯನ್ನು ಮಾತ್ರವಲ್ಲದೆ, ಕಳೆದ ಕೆಲವು ವಾರಗಳ ಬೆಳವಣಿಗೆಗಳು ತೋರಿಸಿರುವ  ತಿಕ್ಕಾಟದ  ನಡುವಿನ ಭಾರೀ ಕಂದರವನ್ನು ತುಂಬುವ ರೀತಿಯಲ್ಲಿ  ವಿನ್ಯಾಸಗೊಳಿಸಲಾಗಿತ್ತು.

ಈ ಸಂವಹನದ ಕಂದಕವನ್ನು ತುಂಬುವ ಪ್ರಯತ್ನ ಮಾಡುವಾಗಲೂ, ಅವರು ಅದೇ  ತಿರುಗು ಮುರುಗು ವಾಸ್ತವದ ಗ್ರಹಿಕೆಯಲ್ಲೇ ತೊಡಗಿಕೊಂಡಿದ್ದಾರೆ.  ಜೆನ್‌ ಝೀ ಎಂದು ವಿವರಿಸಲಾಗುವ ಚಿಕ್ಕ ಪ್ರಾಯದ ಹುಡುಗರು ಮತ್ತು ಹುಡುಗಿಯರ ಆಳವಾದ ಮತ್ತು ವ್ಯಾಪಕವಾದ  ವಿರೋಧವನ್ನು ಎದುರಿಸಲು  ನಿಯೋಜಿಸಲಾದ ಕ್ರೂರ ಮತ್ತು ವಿಕಾರ ರೂಪದ ಹಿಂಸಾತ್ಮಕ ವಿಧಾನಗಳ ನಂತರವೂ, ಅವರ ಮನೋಭಾವ ಬದಲಾಗಲಿಲ್ಲ. ಅದೇ ಪಿತೃಪ್ರಾಬಲ್ಯದ ಪೋಷಕ ಭಾವದ ದನಿಯಲ್ಲಿಯೇ  ಯುವ ಪ್ರತಿಭಟನಾಕಾರರಿಗೆ ಕ್ಷಮೆ  ವ್ಯಕ್ತಪಡಿಸಿದರು. ಮಹಿಳಾ ಪ್ರತಿಭಟನಾಕಾರರು ಬಳಸಿದ ಭಾಷೆಯ ಬಗ್ಗೆ ಅವರು ವಿಶೇಷವಾಗಿ ಅಸಮಾಧಾನಗೊಂಡಿದ್ದರು. ಕುತೂಹಲದ ಸಂಗತಿಯೆಂದರೆ, ಕೆಲವು ಯುವಜನರು ವ್ಯಂಗ್ಯವಾಗಿ, ‘ಅಂಕಲ್ ತಡವಾಗಿದೆ, ದಯವಿಟ್ಟು ನಿದ್ದೆ ಮಾಡಿ” ಎಂದು ಪ್ರತ್ಯುತ್ತರ ಕೊಟ್ಟರು.!

ಇದು ವಯಸ್ಸಿನ ಅಂತರದ, ಅವರು ಮತ್ತು ಪ್ರತಿಭಟನಾಕಾರರ ನಡುವಿನ ಹಲವು ತಲೆಮಾರುಗಳ ಅಂತರದ ವಿಷಯ ಅಲ್ಲ, ಇದು ಮೂಲಭೂತ ದೃಷ್ಟಿಕೋನದ ಪ್ರಶ್ನೆ. ಯುವಜನರು ಪ್ರಜಾಪ್ರಭುತ್ವಗಳಲ್ಲಿ ಜವಾಬುದಾರಿಕೆಯ  ಮೂಲಭೂತ ಪ್ರಶ್ನೆಯನ್ನು ಎತ್ತಿದ್ದಾರೆ. ಪ್ರತಿಭಟನೆಗಳ ಮೂಲ ಬೇಡಿಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಒತ್ತಾಯಿಸುವುದರ ಬಗ್ಗೆ ಮಾತ್ರವಲ್ಲ ಎಂದು ಅರಿತುಕೊಳ್ಳುವುದು ಮೋದಿಯವರಿಗೆ  ಸಾಧ್ಯವಾಗುತ್ತಿಲ್ಲ. ಇದು ಕೊರತೆಗಳನ್ನು ತುಂಬಲು ಮಾತ್ರವಲ್ಲ,  ಅವರ ಕನಸುಗಳು ಭಗ್ನಗೊಂಡಿರುವ ಸತ್ಯವನ್ನು ಅರ್ಥಮಾಡಿಕೊಳ್ಳಲು ಸರ್ಕಾರದ ಸಂಪೂರ್ಣ ಅಸಮರ್ಥತೆ ಮತ್ತು ವೈಫಲ್ಯದಿಂದ ಮೂಡಿ ಬಂದ ಜವಾಬುದಾರಿಕೆ ಕಾಣದಿರುವ ವಿಷಯಕ್ಕೆ ಸಂಬಂಧಪಟ್ಟದ್ದು. ಕ್ಷಮೆ

ಭ್ರಮೆಯಲ್ಲಿದ್ದಾರೆ

ಮೋದಿ ಕುದುರೆಗಿಂತ ಮೊದಲು ಬಂಡಿಯನ್ನು ತಂದಿಡುತ್ತಾರೆ. ಹೆಚ್ಚು ಮೂಲಭೂತ ವಿಷಯಗಳನ್ನು ಎದುರಿಸುವ ಬದಲು, ಇನ್ನೂ ತಾನು ಹೇಳಿದ್ದೇ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ತಾನು ಪ್ರತಿಭಟನಾಕಾರರಿಂದ ಅವರ  ಪ್ರತಿಕ್ರಿಯೆಗಳಿಗೆ ಕ್ಷಮಾಯಾಚನೆಯನ್ನು  ಸ್ವೀಕರಿಸಲು ಸಿದ್ಧನಾಗಿದ್ದೇನೆ ಎಂದು ಹೇಳುವಾಗ ಇದುವೇ ಮೂಲಭೂತ ಪ್ರಶ್ನೆ ಎಂದು ಯೋಚಿಸುವುದೇ ಅವರಿಗೆ ಅನುಕೂಲಕರವಾಗಿ ಕಾಣುತ್ತದೆ.  ಇಲ್ಲಿ ವಾಸ್ತವ ಸಂಪೂರ್ಣವಾಗಿ ತಲೆಕೆಳಗಾಗಿದೆ.  ನಿಜವಾಗಿ,  ಕ್ಷಮೆಯಾಚಿಸಬೇಕಾದವರು ಸ್ವತಃ ಮೋದಿಯವರೇ- ಯುವಜನರಿಂದ!

 ಯುವಜನರು ಪ್ರಜಾಪ್ರಭುತ್ವಗಳಲ್ಲಿ ಜವಾಬುದಾರಿಕೆಯ  ಮೂಲಭೂತ ಪ್ರಶ್ನೆಯನ್ನು ಎತ್ತಿದ್ದಾರೆ. ಪ್ರತಿಭಟನೆಗಳ ಮೂಲ ಬೇಡಿಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಒತ್ತಾಯಿಸುವುದರ ಬಗ್ಗೆ ಮಾತ್ರವಲ್ಲ ಎಂದು ಅರಿತುಕೊಳ್ಳುವುದು ಮೋದಿಯವರಿಗೆ  ಸಾಧ್ಯವಾಗುತ್ತಿಲ್ಲ.

ದಿಲ್ಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿನ ಇತರ ಏಜೆನ್ಸಿಗಳು ಎಸಗಿರುವುದು  ವಿಕಾರ ಕೃತ್ಯಗಳು ಎಂಬುದಕ್ಕೆ ಈಗ ರಾಶಿ-ರಾಶಿ ಸಾಕ್ಷ್ಯಗಳು ಸಿಗುತ್ತಿವೆ.  ವಿಸ್ತಾರವಾದ ವಿವರಗಳು ಈಗ ಹೊರಬಂದಿವೆ. ಪ್ರತಿಭಟನೆಗಳನ್ನು ನಿಭಾಯಿಸಲು ಕಾಶ್ಮೀರ ಕಣಿವೆಯಲ್ಲಿ ಬಳಸಿದ್ದ ಪೆಲೆಟ್‌ ಗುಂಡುಗಳನ್ನು, ಈಗ ಮೊದಲ ಬಾರಿಗೆ ಕಾಶ್ಮೀರದ ಹೊರಗೂ ಹಾರಿಸಲಾಗಿದೆ. ಮೊಳೆ ಜಡಿದ ಕೋಲುಗಳ ಬಳಕೆ. ಮತ್ತು ಎಲ್ಲಕ್ಕಿಂತ ಹೆಚ್ಚು ಸಿನಿಕ  ಕೃತ್ಯವೆಂದರೆ, ತಮ್ಮ ವಶದಲ್ಲಿರುವ ಟ್ರಕ್ಕನ್ನು ಕಲ್ಲುಗಳನ್ನು ತುಂಬಿಡಲು  ಬಳಸಿರುವುದು, ಆ ಮೂಲಕ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಅದರ ಆರೋಪವನ್ನು ಯುವ ಪ್ರತಿಭಟನಾಕಾರರ ಮೇಲೆ ವರ್ಗಾಯಿಸುವ ತಂತ್ರ.  ಇವೆಲ್ಲ ಸೈಬರ್ ತಾಣಗಳಲ್ಲಿ ಮಾತ್ರವಲ್ಲದೆ ದಿಲ್ಲಿ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್‌ನ ವಿಚಾರಣೆಗಳಲ್ಲಿಯೂ ಹೊರಬರುತ್ತಿವೆ. ಸರ್ಕಾರದ ಉನ್ನತ ಕಾನೂನು ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ ಮತ್ತು ದಿಲ್ಲಿ ಪೊಲೀ ಉನ್ನತ ಅಧಿಕಾರಿಗಳು ಯಾವುದೇ ಸಮಂಜಸವಾದ ವಿವರಣೆ ಕೊಡಲಾರದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.

ಕ್ಷಮೆಯಾಚನೆಯನ್ನು ಸ್ವೀಕರಿಸುವ ಬೂಟಾಟಿಕೆ

ಯಾರು ಕ್ಷಮೆಯಾಚಿಸಬೇಕು? ಯುವ ವಿದ್ಯಾರ್ಥಿಗಳೋ  ಅಥವಾ ಸಂಪುಟ ಮತ್ತು ಸರ್ಕಾರದ ಸಾಮೂಹಿಕ ಜವಾಬುದಾರಿಕೆಯ ಪ್ರತಿಷ್ಠಾಪಿತ ತತ್ವದ ಪ್ರಕಾರ  ಅಮಿತ್ ಶಾ ಮತ್ತು ನರೇಂದ್ರ ಮೋದಿಯವರೋ? ಉತ್ತರ ಅನಿವಾರ್ಯ. ಬಹುಶಃ ಕಳೆದ ಎರಡು ವಾರಗಳಲ್ಲಿ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳ ಅನುಪಸ್ಥಿತಿಯೇ  ಎಲ್ಲವನ್ನೂ ಹೇಳುತ್ತದೆ.

“…ನಾನು ನಿನ್ನ ಮೇಲೆ ಮಾಡಿರುವ ಎಲ್ಲ ಅತ್ಯಾಚಾರಗಳನ್ನೂ ಕ್ಷಮಿಸಿದ್ದೇನೆ”

ವ್ಯಂಗ್ಯ ಚಿತ್ರ ಕೃಪೆ: ರಾಜೇಂದ್ರ ಧೋಡಪ್‌ಕರ್‌

ಇದನ್ನೂ ಓದಿ : ಯುಪಿಐ ವಿಚಾರದಲ್ಲಿ ಅಮೆರಿಕದ ಒತ್ತಡ: ನಿರ್ಮಲಾ ವಿರುದ್ಧ ಬ್ರಿಟ್ಟಾಸ್ ಆರೋಪ

ಕ್ಷಮೆಯಾಚನೆಯನ್ನು ಸ್ವೀಕರಿಸಲು ಸಿದ್ಧ ಎಂಬ ಬೂಟಾಟಿಕೆಯ ಪ್ರದರ್ಶನದ ನಂತರವೂ, ಬಿಜೆಪಿ-ಐಟಿ ಸೆಲ್ ಮತ್ತು ಹಿಂದುತ್ವ ಬ್ರಿಗೇಡ್‌ನ ಬೇಟೆನಾಯಿಗಳು  ಯುವ ಪ್ರತಿಭಟನಾಕಾರರಿಗೆ ಕಿರುಕುಳ, ಬೆದರಿಕೆ ಮತ್ತು ಭಯಭೀತಗೊಳಿಸುವುದನ್ನು ಮುಂದುವರೆಸಿವೆ. ಎದ್ದು ಕಾಣುವ ಒಂದು ಸ್ಪಷ್ಟ ಉದಾಹರಣೆ- ನೋಯ್ಡಾದಲ್ಲಿ ವಾಸಿಸುವ 15 ವರ್ಷದ ಬಾಲಕಿಯನ್ನು ಕ್ಷಮೆಯಾಚಿಸುವಂತೆ ಒತ್ತಡ ಹಾಕಲಾಯಿತು. ನಂತರವೂ  ಬೆದರಿಕೆ ಮತ್ತು ಕಿರುಕುಳ ಮುಂದುವರೆಯಿತು, ಆ ಹುಡುಗಿ ಮತ್ತು ಆಕೆಯ ತಾಯಿಯನ್ನು ಅವರ ನಿವಾಸ ಬಿಟ್ಟು ಬೇರೆಡೆ ಹೋಗುವಂತೆ ಬಲವಂತಪಡಿಸಲಾಯಿತು.

ಮಹಿಳಾ ಮೀಸಲಾತಿಯ ವಿಷಯದಲ್ಲೂ  ಸರಕಾರದ ಪ್ರಯತ್ನಗಳ ವಿರುದ್ಧ ವಿಪಕ್ಷಗಳು ಕತ್ತಿ ಮಸೆದಿವೆ ಎಂಬ  ದೊಡ್ಡ ನಕಲಿ ದೂರಿನ ನಂತರ, ಮಹಿಳಾ ಹಕ್ಕುಗಳ ಪ್ರಶ್ನೆಯಲ್ಲಿ ಸರ್ಕಾರದ ಠಕ್ಕುತನ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.   ಮಹಿಳಾ ಸಂಘಟನೆಗಳ ವಿಶಾಲ ವೇದಿಕೆಯು ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯಿಂದ ಬೇರ್ಪಡಿಸಿ ತಕ್ಷಣವೇ ಜಾರಿಗೆ ತರಲು ನಿರಂತರ ಧರಣಿ ಕೈಗೊಂಡಿದೆ. ಆದರೇನು ಮಾಡೋಣ! ಸಂಸತ್ತಿನಲ್ಲಿ ನಡೆಸಿದ ನಾಟಕವು ಮಹಿಳಾ ಮೀಸಲಾತಿಯನ್ನು ಖಚಿತಪಡಿಸುವ  ಗುರಿಯನ್ನು ಹೊಂದಿರಲಿಲ್ಲ, ಬದಲಿಗೆ, ಕಳ್ಳತನದಿಂದ  ಕ್ಷೇತ್ರ ಮರುವಿಂಗಡಣೆಯನ್ನು ತರುವುದೇ ಅವರಿಗೆ ಬೇಕಾಗಿದ್ದುದು. ಆ ಮೂಲಕ, ಸಂಸತ್ತು ಮತ್ತು ವಿಧಾನಸಭೆ ಸ್ಥಾನಗಳ ಮರುಜೋಡಣೆಯಿಂದಲೇ  ನಮ್ಮ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಮೇಲೆ ಬಿಜೆಪಿ-ಆರ್‌ಎಸ್‌ಎಸ್‌ನ ಹಿಡಿತವನ್ನು ಶಾಶ್ವತಗೊಳಿಸಬಹುದು ಎಂಬ ಭ್ರಾಂತಿಯ  ಬೆನ್ನಟ್ಟಿದ್ದರು.

ಆಪರೇಷನ್ ಕಮಲಹೊಲಸು ಅನ್ವೇಷಣೆ

ಈ ಅಷ್ಟೇನೂ ಅವ್ಯಕ್ತವಲ್ಲದ ಗುರಿಯನ್ನು ಅನುಸರಿಸುವ ಇನ್ನೊಂದು ಆಯಾಮವೆಂದರೆ ‘ಆಪರೇಷನ್ ಕಮಲ’ದ ಹೊಲಸು ಅನ್ವೇಷಣೆ. ವಾಸ್ತವಿಕವಾಗಿ ಇದರ ಅರ್ಥ, ವಿಪಕ್ಷಗಳ ಚುನಾಯಿತ ಪ್ರತಿನಿಧಿಗಳ ವಹಿವಾಟು. ಇದು ಕೂಡ  ಜನರ ಅಭಿಪ್ರಾಯಗಳು ಮತ್ತು ಅವುಗಳ ಅಭಿವ್ಯಕ್ತಿ ಜಡವಾಗಿವೆ ಎಂಬ  ಅದೇ ತಪ್ಪು ಎಣಿಕೆಯ ಭ್ರಾಂತಿ. ಇತ್ತೀಚಿನ ಉಪಚುನಾವಣೆಗಳ ಫಲಿತಾಂಶವು ಜನರ ಮನಸ್ಥಿತಿ ಏನೆಂಬುದರ ಪ್ರಾಥಮಿಕ ಸೂಚನೆಯಾಗಿದೆ.

ಎಂಎಲ್‌ಎ ಗಳು     ಎಂಪಿಗಳು     ಪ್ರತಿಭಟನಾಕಾರರು

ವ್ಯಂಗ್ಯ ಚಿತ್ರ ಕೃಪೆ: ಅಲೋಕ್‌ ನಿರಂತರ್‌, ಸಕಾಳ್

ಸಂಸತ್ತಿನ ಒಳಗೆ ಮತ್ತು ಚುನಾವಣಾ ಸಮಗ್ರತೆಯ ಪ್ರಶ್ನೆಯ ಸುತ್ತ ಬಹಳಷ್ಟು ನಡೆಯುತ್ತಿದೆ ಎಂಬುದಲ್ಲದೆ , ಜನರ ಜೀವನೋಪಾಯದ ಮೂಲಭೂತ ಪ್ರಶ್ನೆಗಳು ಇನ್ನೂ ಜೋರಾಗಿ ಕೇಳಿಬರುತ್ತಿವೆ. MGNREGA ನ ಬೇಡಿಕೆ ಚಾಲಿತ ೧೦೦ ದಿನಗಳ ಕೆಲಸದ ಜಾಗದಲ್ಲಿ VBGRAMG ನ್ನು ತಂದಿರುವುದು ಗ್ರಾಮೀಣ ಸಂಕಷ್ಟ ಮತ್ತು ನಿರುದ್ಯೋಗವನ್ನು ಉಲ್ಬಣಗೊಳಿಸುತ್ತಿದೆ. ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರ ಐಕ್ಯತೆಯು ವಿಸ್ತಾರಗೊಳ್ಳುತ್ತ  ಜನಗಳ  ಅಸಮಾಧಾನಕ್ಕೆ  ಹೆಚ್ಚೆಚ್ಚು .ವ್ಯಾಪಕವಾಗಿ ದನಿ ಕೊಡುತ್ತಿದೆ. ಕಾರ್ಪೊರೇಟ್ ಆಪ್ತರ ಲಜ್ಜೆಗೆಟ್ಟ ಮುದ್ದಾಟದಿಂದ, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ (ಎಂಎಸ್‌ಎಂಇ) ವಲಯಗಳಂತಹ ಕ್ಷೇತ್ರಗಳಿಂದ  ಸಂಪೂರ್ಣ ಹಿಂತೆಗೆದುಕೊಂಡಿರುವುದರಿಂದ ಕಾರ್ಮಿಕರ ಸಂಕಷ್ಟಗಳೂ ಹೆಚ್ಚುತ್ತಿವೆ,  ಇದು  ನಿರುದ್ಯೋಗ ಮತ್ತು ಅರೆ-ಉದ್ಯೋಗದ ಬಿಕ್ಕಟ್ಟುಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ಆದ್ದರಿಂದ ಕಾರ್ಮಿಕ ಸಂಹಿತೆಗಳನ್ನು ಅವರ ಹಕ್ಕುಗಳ ವಿಸ್ತರಣೆಯಾಗಿ ಅಲ್ಲ, ದಮನದ ಮೂಲವಾಗಿ ನೋಡಲಾಗುತ್ತಿದೆ.

ಈ ಅಷ್ಟೇನೂ ಅವ್ಯಕ್ತವಲ್ಲದ ಗುರಿಯನ್ನು ಅನುಸರಿಸುವ ಇನ್ನೊಂದು ಆಯಾಮವೆಂದರೆ ‘ಆಪರೇಷನ್ ಕಮಲ’ದ ಹೊಲಸು ಅನ್ವೇಷಣೆ. ವಾಸ್ತವಿಕವಾಗಿ ಇದರ ಅರ್ಥ, ವಿಪಕ್ಷಗಳ ಚುನಾಯಿತ ಪ್ರತಿನಿಧಿಗಳ ವಹಿವಾಟು. ಇದು ಕೂಡ  ಜನರ ಅಭಿಪ್ರಾಯಗಳು ಮತ್ತು ಅವುಗಳ ಅಭಿವ್ಯಕ್ತಿ ಜಡವಾಗಿವೆ ಎಂಬ  ಅದೇ ತಪ್ಪು ಎಣಿಕೆಯ ಭ್ರಾಂತಿ. ಇತ್ತೀಚಿನ ಉಪಚುನಾವಣೆಗಳ ಫಲಿತಾಂಶವು ಜನರ ಮನಸ್ಥಿತಿ ಏನೆಂಬುದರ ಪ್ರಾಥಮಿಕ ಸೂಚನೆಯಾಗಿದೆ.

ಪರಿಣಾಮವಾಗಿ, ಮೂಲ ವರ್ಗಗಳ ಸಂಘಟನೆಗಳು ಸಮರದ ಹಾದಿಯಲ್ಲಿವೆ. ಆಗಸ್ಟ್ 10 ಕ್ಕೆ, ಈ ಸಂಘಟನೆಗಳು ದೊಡ್ಡ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸಿದ ತಮ್ಮ ರಾಷ್ಟ್ರೀಯ ಸಮಾವೇಶಗಳಿಂದ ಅತ್ಯಂತ  ವಿಶಾಲ ನೆಲೆಯ ಕರೆಯನ್ನು ನೀಡಿವೆ. ವಾಸ್ತವವೆಂದರೆ ಮೋದಿ ಮತ್ತು ಅವರ ಅನುಚರರು, ಸಂಸದೀಯ ಜವಾಬುದಾರಿಕೆ ಮತ್ತು ಚುನಾವಣಾ ಸಮಗ್ರತೆಯನ್ನು ಅಮಾನ್ಯಗೊಳಿಸುವ ಮೂಲಕ ವಾಸ್ತವವಾಗಿ ಬೀದಿಗಳು ಮತ್ತು ಹೋರಾಟಗಳನ್ನು ಮಾನ್ಯಗೊಳಿಸಿದ್ದಾರೆ. ಹೋರಾಟಗಳು ಬಹಳಷ್ಟು ಮುಂದುವರೆದಿವೆ, ಜನರು ಪ್ರಧಾನ ಮಂತ್ರಿಯವರು ಕ್ಷಮೆಯಾಚಿಸುವಂತೆ ಬಲವಂತಪಡಿಸುತ್ತಾರೆ. ಕ್ಷಮೆ

ಇದನ್ನೂ ನೋಡಿ : ಪುರೋಹಿತಶಾಹಿ ಆರೆಸ್ಸೆಸ್ ನ ಖೆಡ್ಡಾ ಕುರಿತು ಮೈಯೆಲ್ಲಾ ಕಣ್ಣಾಗಿರಿ ಜೆನ್ ಜಿಗಳೇ… Janashakthi Media

 

Donate Janashakthi Media

Leave a Reply

Your email address will not be published. Required fields are marked *