ಬೆಂಗಳೂರು: ‘ಜನಮುಖಿ ಸಾಹಿತ್ಯ’ ಕುರಿತಂತೆ ನೋಂದಾಯಿಸಲ್ಪಟ್ಟ ಸುಮಾರು 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವೊಂದನ್ನು ಮೇ 30-31 ರಂದು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಮತ್ತು ‘ಸೌಹಾರ್ದ ಕರ್ನಾಟಕ’ಗಳು ಜಂಟಿಯಾಗಿ ಸಂಘಟಿಸುತ್ತಿವೆ. ಜನಮುಖಿ
ಬೆಂಗಳೂರಿನ ಕಬ್ಬನ್ ಪಾರ್ಕಿನೊಳಗಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಂಡು ವಿಚಾರ ಮಂಡಿಸಿ ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಇದನ್ನೂ ಓದಿ: ಕಾನ್ಪುರ ಬಿಸ್ಕಟ್ ಕಾರ್ಖಾನೆಯಲ್ಲಿ ಕಾರ್ಮಿಕರ ಆಕ್ರೋಶ: ವೇತನ ಹೆಚ್ಚಳ, ಉದ್ಯೋಗ ಭದ್ರತೆಗೆ ಆಗ್ರಹ
ಕಾರ್ಯಾಗಾರವನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರಲ್ಲದೇ ಹಲವು ಸಾಹಿತಿ ಚಿಂತಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಯುವ ಬರಹಗಾರರು 100ರೂ.ಗಳ ಪ್ರತಿನಿಧಿ ಶುಲ್ಕವನ್ನು ಪಾವತಿಸಿ ನೋಂದಾವಣೆ ಮಾಡಿಕೊಳ್ಳಲು ಈ ಮೂಲಕ ಕೋರಲಾಗಿದೆ. ಯುವ ಬರಹಗಾರರು 9449505789, 9632329955 ಪೋನ್ ನಂಬರ್‌ಗಳನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಸಂಯೋಜಕರಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಬಡಗಲಪುರ ನಾಗೇಂದ್ರ, ನಿಸಾರ್ ಅಹಮದ್,- ಐ.ಪಿ.ಎಸ್.(ನಿ), ಡಾ. ಎಸ್.ವೈ.ಗುರುಶಾಂತ್, ಡಾ.ಆರ್.ಮೋಹನ್ ರಾಜ್, ಡಾ. ಎಚ್.ಎಲ್. ಪುಷ್ಪ, ಬಿ.ರಾಜಶೇಖರಮೂರ್ತಿ, ಮಲ್ಲಿಗೆ ಸಿರಿಮನೆ, ಜ್ಯೋತಿ ಅನಂತಸುಬ್ಬರಾವ್, ಎಂ.ಪ್ರಕಾಶಮೂರ್ತಿ, ಇಕ್ಬಾಲ್, ಆರ್.ರಾಮಕೃಷ್ಣ, ಡಾ. ಮನೋಹರ ಚಂದ್ರಪ್ರಸಾದ್, ವಿಜಯ್ ಕುಮಾರ್.ಟಿ.ಎಸ್. ಭಾಗವಹಿಸಲಿದ್ದಾರೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 173| ಸಿನಿಮಾ – ಸಿರಾತ್, ʼಹುಡುಕಾಟದ ಗುಂಗಿನ ಸ್ಥಾಯಿ ಭಾವ ‘ Janashakthi Media
