ನಮ್ಮ ದೇಶದ ಜನರ ಆರೋಗ್ಯ-ಶುಶ್ರೂಷೆಗಳನ್ನು ಸದ್ದಿಲ್ಲದೇ ಅಪಹರಿಸಲಾಗಿದೆ. ವಿದೇಶಿ ಕೈಗಳು/ಶಕ್ತಿಗಳು ಇದನ್ನು ಮಾಡಿವೆ. ಈಗ ಆಸ್ಪತ್ರೆಗಳು ಶುಶ್ರೂಷೆ ಮಾಡಲು ಇವೆ ಹೊರತು ಹಣದ ಸುಗ್ಗಿ ಮಾಡಲು ಅಲ್ಲ ಎಂಬ ಜನಸಾಮಾನ್ಯರ ನಂಬಿಕೆಗೆ ಕುತ್ತು ಬಂದಿದೆ. ದೊಡ್ಡ ದೊಡ್ಡ ರೋಗನಿರ್ಣಯ ಮಾಡುವ ಉಪಕರಣಗಳ ಹಿಂದೆ ಖಾಸಗಿಯವರ ಪ್ರವೇಶ ಮತ್ತು ಆರೋಗ್ಯ ವ್ಯವಸ್ಥೆಯ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಿಶ್ಶಬ್ದವಾಗಿ ನಡೆಯುತ್ತಿದೆ. ಇದು ಮುಖ ಪುಟಗಳ ಸುದ್ದಿ, ದೊಡ್ಡ ಶಬ್ದ, ಪಟಾಕಿಗಳ ಸದ್ದು, ಇತ್ಯಾದಿ ಇಲ್ಲದೆ ನಡೆಯುತ್ತಿದೆ.
-ಸಂಗ್ರಹ :ಜಿ.ಎಸ್.ಮಣಿ
ಆರೋಗ್ಯ ಕ್ಷೇತ್ರದಲ್ಲಿ ಶೇ 100 ರಷ್ಟು ವಿದೇಶಿ ಹೂಡಿಕೆಗೆ ಈಗಾಗಲೇಅನುಮತಿಸಲಾಗಿದೆ. ಗರಿಷ್ಠ ಹೂಡಿಕೆಯ ಮಿತಿಯಿಲ್ಲ. ಮೇಲುಸ್ತುವಾರಿಯ ತಂಟೆಯಿಲ್ಲ. ಸ್ಥಳೀಕರಣದ ನಿಯಮಗಳಿಲ್ಲ. ಹೀಗೆ ಪೂರ್ತಿ ತಡೆರಹಿತ. ರೋಗಿಗಳ ಶುಶ್ರೂಷೆಯ ಅತ್ಯಂತ ಮಾನವೀಯ ಭಾವನೆಗಳ, ಮೌಲ್ಯಗಳ, ಸೇವಾ ತತ್ಪರತೆ ಮತ್ತು ತ್ಯಾಗಗಳ ಕ್ಷೇತ್ರವು, ಜಾಗತಿಕ ವ್ಯವಹಾರಗಳ ಹರಹಿನಡಿ ಮಾರುಕಟ್ಟೆಯಾಗಿದೆ!!ಆ ನಂತರದಲ್ಲಿ ವಿದೇಶಿ ಹೂಡಿಕೆ ಹರಿದು ಬರಲಿಲ್ಲ. ಅದು ಪ್ರವಾಹವಾಗಿ ಭೋರ್ಗರೆದು ಬಂತು. ಆಸ್ಪತ್ರೆಗಳ ಹಸ್ತಾಂತರ ದಿನಗಳ ಆಟವಾಯ್ತು. ಪರಿಣಾಮವಾಗಿ, ಕಳೆದ ಕೆಲವು ವರ್ಷಗಳಲ್ಲಿ ಭಾರತದ ಹಲವು ಆಸ್ಪತ್ರೆಗಳ ಸರಪಣಿಗಳು, ಜಾಗತಿಕ ಖಾಸಗಿ ಬಂಡವಾಳ ಕಂಪನಿಗಳು,ಸಾರ್ವಭೌಮ ನಿಧಿಗಳು, ಅಥವಾ ವಿದೇಶಿ ನಿವೃತ್ತಿ ವೇತನದ ನಿಧಿಗಳ ಪೂರ್ತಿ ಅಥವಾ ಭಾಗಶಃ ಪಾಲಾದವು. ಕೆಳಗಿನ ಪಟ್ಟಿ ನೋಡಿ:

ಈಗ ಭಾರತದ ಆಸ್ಪತ್ರೆಗಳಿಲ್ಲ!! ಇವು ಈಗ ಜಾಗತಿಕ ಹಣಕಾಸು ಸೊತ್ತುಗಳು. ಇವುಗಳ ವಾರ್ಷಿಕ ವರದಿ ನ್ಯೂ ಯಾರ್ಕ್,ಟೊರೋಂಟೊ, ಸಿಂಗಾಪುರ, ಅಭೂ ಧಾಭಿ ಗಳಲ್ಲಿ ತಯಾರಾಗಿ ಅಲ್ಲಿ ಚರ್ಚಿಸಲ್ಪಡುತ್ತವೆ. ಒಮ್ಮೆ ರೋಗಿಗಳಿಗೆ ಶುಶ್ರೂಷೆಯ ತಂಪೇರೆವ ಮಂದಿರಗಳಾಗಿದ್ದ ಈ ಆಸ್ಪತ್ರೆಗಳು ಇಂದು ಹಣ ಗುಡ್ಡೆ ಹಾಕುವ ಕೇಂದ್ರಗಳಾಗಿವೆ. ಯಾರ ಹಿತಗಳನ್ನು ಇವು ಪೊರೆಯುತ್ತಿವೆ?
ಇಂತಹ ಬದಲಾವಣೆಗಳಿಂದ ಭಾರತದ ಜನ ಸಾಮನ್ಯರ ಮೇಲೆ ಎಂತಹ ಪರಿಣಾಮ ಆಗುತ್ತದೆ?
- ಆಸ್ಪತ್ರೆಯ ಖರ್ಚುಗಳು ಗಗನಕ್ಕೆರಿವೆ-ಉತ್ತಮ ಸೌಲಭ್ಯಗಳ ದೊರೆಯುವಿಕೆಯಿಂದ ಅಲ್ಲ, ಕಂಪನಿಗಳ ಬೋರ್ಡ್ ರೂಂಗಳಲ್ಲಿ ನಿಗದಿ ಮಾಡುವ ಲಾಭಗಳ ಗುರಿಗಳಿಂದ
- ಡಾಕ್ಟರುಗಳು ಮಾರಾಟದ ಏಜೆಂಟುಗಳಾಗುವ ಪರಿಸ್ಥಿತಿಯಿಂದ. ರೋಗನಿರ್ಣಯ ಮತ್ತು ಚಿಕಿತ್ಸೆ ವಿಧಾನಗಳ ಮೂಲಕ ಲಾಭ ಪೇರಿಸುವ ಕೆಲಸ ಮಾಡಿದರೆ ಅದಕ್ಕೆ ತಕ್ಕಂತೆ ಅವರಿಗೆ ಪ್ರೋತ್ಸಾಹಧನ ಸಿಗುತ್ತದೆ.
- ಬಡವರು, ಗ್ರಾಮೀಣರು ಮತ್ತು ಸಂಕೀರ್ಣ ರೋಗ ಬಾಧಿತರು ಅಪಾರ ಲಾಭ ಕೊಡುವ ಸಾಧ್ಯತೆ ಇಲ್ಲದಿದ್ದರೆ ಅವರಿಗೆ ಹೊರ ಬಾಗಿಲು ತೋರಿಸಲಾಗುತ್ತದೆ.
- ಔಷದಿಗಳ ನೈತಿಕತೆಯನ್ನು ತ್ರೈಮಾಸಿಕ ಲಾಭ,ಹೂಡಿಕೆದಾರರ ಆಸಕ್ತಿ,ಮತ್ತು ಅಕ್ಚೂರಿಯಲ್ (ವಿಮೆಗೆ ಸಂಬಂಧಿಸಿದ) ಲೆಕ್ಕಾಚಾರಗಳು ತುಳಿದು ಹಾಕುತ್ತವೆ.
- ನಿರ್ಣಾಯಕ ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸುವ ಕರಾಮತ್ತುಗಳು ನಡೆಯುತ್ತಿವೆ.ರೋಗನಿರ್ಣಯ, ಫಾರ್ಮಸಿ, ವಿಮೆ ಮತ್ತು ಆಸ್ಪತ್ರೆ ಶುಶ್ರೂಷೆ ಎಲ್ಲವನ್ನೂ ಹತೋಟಿಗೆ ಪಡೆವ ಪ್ರವೃತ್ತಿ ಬೆಳೆಯುತ್ತಿದೆ.
ದತ್ತಾಂಶದ ಚಿನ್ನದ ಗಣಿ
ಇವೆಲ್ಲವುಗಳ ಹಿಂದೆ ಹೊಸದೊಂದು ಹಪಾಹಪಿತಲೆಯೆತ್ತಿದೆ.ಅಂಗಾಂಗ, ಭೂಮಿ ಇತ್ಯಾದಿಗಳಿಗಲ್ಲ. ದತ್ತಾಂಶಗಳಿಗೆ. ಜನರ ದೇಹ ಅವರ ಚಿನ್ನದ ಗಣಿ. ಅವರ ವ್ಯಾಪಾರ ಮಾದರಿ.
ಆಸ್ಪತ್ರೆಯ ಪ್ರತಿ ಬೇಟಿ ಅದು ರಕ್ತ ಪರೀಕ್ಷೆಗಿರಲಿ, ಎಂ ಆರ್ ಐ ಸ್ಕ್ಯಾನ್ ಇರಲಿ, ಐ.ಸಿ.ಯು ಚಿಕಿತ್ಸೆ ಇತ್ಯಾದಿ ಎಲ್ಲವೂ ದತ್ತಾಂಶ ರೂಪ ಪಡೆದು ಹಣಕ್ಕೆ ಪರಿವರ್ತನೆ ಆಗುತ್ತದೆ. ರೋಗಿಗಳ ಈ ದಾಖಲೆಗಳು ದತ್ತಾಂಶವಾಗಿ ವಿದೇಶಿ ತರಬೇತಿಗೆ ಮತ್ತು ಕೃತ್ರಿಮ ಬುದ್ದಿಮತ್ತೆಯ ವಿಶ್ಲೇಷಣೆಗೆ ಆಹಾರವಾಗಿ ಅಲ್ಲಿನ ಆರೋಗ್ಯ ರಕ್ಷಣೆ ಮಾದರಿ ವಿಮೆಗೆ ಬೇಕಾದ ದತ್ತಾಂಶ ಇತ್ಯಾದಿ ರೂಪ ಪಡೆದು ಕಾಂಚಾಣವಾಗಿ ಕುಣಿಯುತ್ತದೆ. ರೋಗಿಗಳ ಒಪ್ಪಿಗೆ ಕೇಳುವುದು ಅಪರೂಪ.
ಇದನ್ನೂ ಓದಿ: ಹಾಸ್ಟೆಲ್ ನೌಕರರಿಗೆ ಮಾಸಿಕ ₹ 36 ಸಾವಿರ ವೇತನಕ್ಕೆ ಆಗ್ರಹ; ಪ್ರತಿಭಟನೆ
ರೋಗಿಗಳ ದತ್ತಾಂಶ ಸಾರ್ವಭೌಮವಲ್ಲದ ಮತ್ತು ನಿಯಂತ್ರಣ ಇಲ್ಲವೇ ಇಲ್ಲ ಎಂಬ ಸ್ಥಿತಿಯ ಭಾರತದ ರೋಗಿಗಳ ದತ್ತಾಂಶ ಅಭಿವೃದ್ದಿ ಹೊಂದಿದ ದೇಶಗಳ ಆರೋಗ್ಯ ವ್ಯವಸ್ಥೆಗೆ ಭದ್ರ ಬುನಾದಿ. ನಮ್ಮಂತಹ ದೇಶಗಳ ಜನ ಪ್ರಯೋಗದ ಇಲಿಗಳಂತೆ!!
ರೋಗಿಗಳ ಬಳಸಿ ಪೇಟೆಂಟ್ ಪಡೆವ ಫಾರ್ಮಾ ಕಂಪನಿಗಳು
ವಿದೇಶಿ ಫಾರ್ಮ ಕಂಪನಿಗಳು ನಮ್ಮ ದೇಶದ ಆಸ್ಪತ್ರೆಗಳನ್ನು ಔಷದಗಳನ್ನು ಸಂಶ್ಲೇಶಿಸಿ, ಪ್ರಯೋಗಿಸಿ ಪೇಟೆಂಟ್ ಪಡೆಯಲು ಬಳಸುತ್ತವೆ. ಅವರ ವಿಧಾನ ಹೀಗಿದೆ: ರೋಗಿಯ ದತ್ತಾಂಶವನ್ನು ಅನಾಮೀಕರಿಸಿ ವಿದೇಶಿ ಸಂಶೋಧನಾ ಮತ್ತು ಅಭಿವೃದ್ದಿ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಕೃತ್ರಿಮ ಬುದ್ದಿಮತ್ತೆ ಈ ದತ್ತಾಂಶ ಬಳಸಿ ಔಷಧ ಕಂಡು ಹಿಡಿಯುತ್ತದೆ. ಈ ಚಿಕಿತ್ಸೆಗೆ ಸ್ಪಂದನೆಯನ್ನು ಅನುಕರಣೆ ವಿಧಾನದಲ್ಲಿ ಗ್ರಹಿಸಿ ತಕ್ಕ ಲಸಿಕೆ ತಯಾರಿಸಿ ಪರೀಕ್ಷಿಸಲಾಗುತ್ತದೆ.
ವಿಮೆ, ಆಸ್ಪತ್ರೆಗಳು ಮತ್ತು ದತ್ತಾಂಶಗಳ ದುಷ್ಟಕೂಟ-ವ್ಯವಸ್ಥಿತ ಲೂಟಿ
ಹೊಸದೊಂದು ದುಷ್ಟಕೂಟ ಹೊರಹೊಮ್ಮಿದೆ. ಅದರಲ್ಲಿ
- ಖಾಸಗಿ ವಿಮಾ ಕಂಪನಿಗಳು
- ಆಸ್ಪತ್ರೆ ಸರಪಳಿಗಳು
- ದತ್ತಾಂಶ ವಿಶ್ಲೇಷಣಾ ಸಂಸ್ಥೆಗಳು ಸೇರಿಕೊಂಡಿವೆ.

ವಿಮಾ ಕಂಪನಿಗಳು ಪ್ರಮಾಣಿತ ಪ್ಯಾಕೇಜುಗಳನ್ನು ಮಾತ್ರ ಅನುಮೋದಿಸುತ್ತವೆ. ರೋಗಿಗಳ ಆವಶ್ಯಕತೆಗಳನ್ನು ನೋಡಿ ಅಲ್ಲ. ಆಸ್ಪತ್ರೆಗಳು ಅವರ ಆಟ ಆಡುತ್ತವೆ. ಅವು
- ಬಿಲ್ಲುಗಳನ್ನು ಉಬ್ಬರಿಸುತ್ತವೆ- ಮಿತಿ ಮೀರಿ ಹೆಚ್ಚು ಮಾಡುತ್ತವೆ
- ರೋಗಗಳನ್ನು ಉತ್ಪ್ರೇಕ್ಷೆ ಮಾಡುತ್ತವೆ
- ಪರೀಕ್ಷೆಗಳನ್ನು ತಮ್ಮ ಹಣ ಮಾಡುವ ಗುರಿಗೆ ತಕ್ಕಂತೆ ದೊಡ್ಡದು ಮಾಡಿ ಶಿಫಾರಸ್ಸು ಮಾಡುತ್ತವೆ
ಡಾಕ್ಟರುಗಳು ಅತೀ ವೈದ್ಯಕೀಯಗೊಳಿಸಲು ಪರಿಸ್ಥಿತಿ ತಯಾರು ಮಾಡುತ್ತಾರೆ. ಡಾಕ್ಟರುಗಳ ಪ್ರತಿಫಲ (ಸಂಬಳ,ಪ್ರೋತ್ಸಾಹಧನ ಇತ್ಯಾದಿ) ಅವರು ಹುಟ್ಟಿಸುವ ಹುಟ್ಟುವಳಿಯ ಮೇಲೆ ಅವಲಂಬಿತವಾಗಿರುತ್ತದೆ.ಇಂತಹ ಎಲ್ಲ ದತ್ತಾಂಶಗಳು ವಿಮಾ ಕಂಪನಿ ಮತ್ತು ಕೃತ್ರಿಮ ಬುದ್ದಿಮತ್ತೆ ಕಂಪನಿಗಳಿಗೆ ಹರಿಯುತ್ತದೆ. ವಿಮಾ ಕಂಪನಿಗಳು ತಮ್ಮ ಅನುಮೋದನೆಗಳನ್ನು ಬಿಗಿಗೊಳಿಸುತ್ತಾರೆ. ಪ್ರಸ್ತಾಪ ತಿರಸ್ಕರಣೆ ತೀವ್ರವಾಗಿ,ಅಪಾಯ ಮಟ್ಟ ಹೆಚ್ಚಿಸಿ ವಿಮಾ ಕಂತುಗಳನ್ನು(ಪ್ರೀಮಿಯಂ) ಹೆಚ್ಚಿಸುತ್ತಾರೆ.
ಕಾಣದ ಅಪರಾಧ ದೃಶ್ಯ
ಔಷಧಿ ಮತ್ತು ಶುಶ್ರೂಷೆ ಭಯದ ವ್ಯವಹಾರವಾದಾಗ- ನೈತಿಕತೆಯ ಕೊನೆಯ ಮೈಲಿಗಲ್ಲುಗಳಾದ ಡಾಕ್ಟರುಗಳು ಈ ಯಂತ್ರದ ಸೆರೆಯಾಳಾಗುತ್ತಾರೆ. ರೋಗನಿರ್ಣಯಗಳನ್ನು ದೊಡ್ಡದು ಮಾಡಿ ಅಪಾರವಾದ ಪರೀಕ್ಷಾ ಖರ್ಚುಗಳನ್ನು ಸಮರ್ಥಿಸತೊಡಗುತ್ತಾರೆ. ರೋಗಿಗಳಿಗೆ ಅವಶ್ಯವಿಲ್ಲದ ವೆಚ್ಚದಾಯಕ ಪರೀಕ್ಷೆಗಳನ್ನು ಶಿಫಾರಸ್ಸು ಮಾಡುತ್ತಾರೆ. ಅವಶ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮಾಡಿಸುತ್ತಾರೆ. ಕುಟುಂಭದವರಿಗೆ ಇಂತಹ ಚಿಕಿತ್ಸೆಗಳು ರೋಗಿಯನ್ನು ಉಳಿಸಿಕೊಳ್ಳಲು ಅವಶ್ಯ ಎಂದು ಬಿಂಬಿಸುತ್ತಾರೆ. ಪ್ರತಿ ತ್ರೈಮಾಸಿಕದಲ್ಲೂ ಹೊಸ ಹೊಸ ರೋಗ ಕಂಡು ಹಿಡಿಯುತ್ತಾರೆ. ಇಂತಹ ಸನ್ನಿವೇಶದಲ್ಲಿ ಚಿಕಿತ್ಸೆ ಎಂಬುದು ದೊಡ್ಡದಾಗಿ ನಾಟಕೀಯಗೊಳಿಸಿದ ಮಾರಾಟ ಪ್ರಕ್ರಿಯೆಯಾಗುತ್ತದೆ. ಇದು ಔಷಧ/ ಶುಶ್ರೂಷೆಯಲ್ಲ. ಬದಲಿಗೆ ಸರಿಯಾದ ಅರ್ಥದಲ್ಲಿ ಇದು ಅಪರಾಧ!
ಜೈವಿಕ ಯುದ್ಧ
ಭಾರತದ ಆರೋಗ್ಯ ದತ್ತಾಂಶಗಳನ್ನು ರಾಷ್ಟ್ರೀಯ ಆಸ್ತಿ ಎಂದು ಪರಿಗಣಿಸಬೇಕು. ಯಾಕೆಂದರೆ ನಮ್ಮ ಜನರ ಆನುವಂಶಿಕತೆಯ, ಆಹಾರ ಪದ್ದತಿ, ರೋಗರುಜಿನ ಇತ್ಯಾದಿಗಳ ದತ್ತಾಂಶ ವಿದೇಶೀಯರ ಕೈ ಸೇರಿದರೆ ಅದನ್ನು ಬಳಸಿ ನಮ್ಮ ವಿರುದ್ಧವೇ ಜೈವಿಕ ಯುದ್ಧ ನಡೆಸುವ ಸಾಧ್ಯತೆ ತೆರೆದುಕೊಳ್ಳುತ್ತದೆ.
ಕೋರೋನಾ ಸಮಯದಲ್ಲಿ ಜೈವಿಕ ಯುದ್ಧ ಹೇಗೆ ನಡೆಯಬಹುದು ಎಂಬ ಪರಿಕಲ್ಪನೆ ನೀಡಿದೆ. ಇಂತಹ ಪರಿಕಲ್ಪನೆ ಬಂದರೆ ನಾವು ಒಂದು ದೇಶವಾಗಿ ಅದರಲ್ಲೂ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿ ಎಂತಹ ಅಪಾಯ ಎದುರಿಸುತ್ತಿದ್ದೇವೆ ಎಂಬುದರ ಕಲ್ಪನೆ ಬರುತ್ತದೆ.
ಕೊನೆಯದಾಗಿ…
ಆರೋಗ್ಯವನ್ನು ಭಾರತ ಇತರೆ ಉದ್ದಿಮೆಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ಜೀವ ಮತ್ತು ಸಾವು ಇದರಿಂದ ಎನ್ನುವ ಸತ್ಯ ನಮ್ಮ ಮುಂದೆ ಇರುವಾಗ ನಾವು ಪೂರ್ಣ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ.
-ವಿದೇಶಿ ಹೂಡಿಕೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧ ಹೇರಬೇಕು
-ವಿಮೆ ಮತ್ತು ಆಸ್ಪತ್ರೆಗಳ ಏಕಸ್ವಾಮ್ಯ ಮುರಿಯಬೇಕು
-ಆರೋಗ್ಯ ದತ್ತಾಂಶವನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸಿ ಅದರ ರಕ್ಷಣೆ ಮಾಡಬೇಕು
– ರಾಷ್ಟೀಯ ಆರೋಗ್ಯ ಗುಪ್ತಚರ ಸಂಸ್ಥೆಯೊಂದನ್ನು ಸ್ಥಾಪಿಸಿ ಅದಕ್ಕೆ ಸಾರ್ವಭೌಮತೆ ನೀಡಬೇಕು
-ನೈತಿಕ ವೈದ್ಯಕೀಯ ಅಭ್ಯಾಸಕ್ಕೆ ಸೂಕ್ತ ಪ್ರೋತ್ಸಾಹ ನೀಡಬೇಕು
ಇದು ದೇಶ ಉಳಿಯಲು ಅವಶ್ಯ ಬೇಕಾದ ಕ್ರಮಗಳು
ಇದನ್ನೂ ನೋಡಿ: ಸಿಯುಕೆ| ಶೈಕ್ಷಣಿಕ ಹತ್ಯೆ – ಪೊಲೀಸ್ ಬರುವ ಮುನ್ನವೇ ಕಾರ್ಪೆಂಟರ್ ಮೂಲಕ ಬಾಗಿಲು ಮುರಿದಿದ್ದು ಯಾಕೆ ? #CUK
