ಮಂಗಳೂರು| ಸ್ಟೇಟ್ ಬ್ಯಾಂಕ್–ಬೋಂದೆಲ್ ರೂಟ್‌ನಲ್ಲಿ ಹೆಚ್ಚುವರಿ ಬಸ್ ಸೇವೆಗೆ ಮನವಿ

ಮಂಗಳೂರು: ಸ್ಟೇಟ್ ಬ್ಯಾಂಕ್ ನಿಂದ ಬೋಂದೆಲ್ ನಡುವೆ ಹೆಚ್ಚುವರಿ ಸರಕಾರಿ ಕೆ.ಎಸ್.ಆರ್.ಟಿ ಬಸ್ ಸಂಚಾರ ಸೇವೆಗೆ ಕ್ರಮಕೈಗೊಳ್ಳಲು ಒತ್ತಾಯಿಸಿ ಡಿವೈಎಫ್ಐ ಕೊಂಚಾಡಿ ಘಟಕದ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಜೂನ್‌ 29ರಂದು ಮನವಿಯನ್ನು ಸಲ್ಲಿಸಲಾಯಿತು. ಮಂಗಳೂರು

ಈ ಮನವಿ ಪತ್ರದ ಸಾರಾಂಶ ಕೆಳಗಿನಂತಿದೆ.

1. ಸ್ಟೇಟ್ ಬ್ಯಾಂಕ್- ಬೊಂದೇಲ್ ರೂಟಿನ ಸಿಟಿ ಬಸ್ಸುಗಳಲ್ಲಿ ರೂಟ್ ನಂಬರ್ 19 ಮತ್ತು ರೂಟ್ ನಂಬ್ರ 14 ಎಂಬ ಬಸ್ಸುಗಳು ಲಾಲ್ ಬಾಗ್ ಮತ್ತು ಕಂಕನಾಡಿ ಎಂಬ ರೂಟಿನಲ್ಲಿ ಸಂಚರಿಸುತ್ತಿದೆ. ಮಂಗಳೂರು

2. ಇವುಗಳಲ್ಲಿ ಕಂಕನಾಡಿ ರೂಟಿನಲ್ಲಿ ಎರಡು ಬಸ್ಸುಗಳು ಇವೆ. ಉಳಿದವುಗಳು ಲಾಲ್ ಬಾಗ್ ರೂಟಿನಲ್ಲಿ ಸಂಚರಿಸುತ್ತಿದೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಮತದಾರ ಪಟ್ಟಿ ಪರಿಶೀಲನೆ: ಕರ್ನಾಟಕದಲ್ಲಿ SIR ಆರಂಭ

3. ಈ ಬಸ್ಸುಗಳು ಪ್ರಯಾಣಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಸಂಚರಿಸುತ್ತಿಲ್ಲ. ಮುಖ್ಯವಾಗಿ ರೂಟ್ ನಂಬ್ರ 14 ಹೋಲಿ ಟ್ರಿನಿಟಿ ಎಂಬ ಬಸ್ಸು ಬೊಂದೇಲ್ ಕಡೆ ಹೋಗುವಾಗ ಮತ್ತು ಬೊಂದೇಲ್‌ನಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಹೋಗುವಾಗ ಕೊಂಚಾಡಿ ಶ್ರೀರಾಮಾಶ್ರಮ ಶಾಲೆಯ ಎದುರು ಇರುವ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದಾಗಲೀ ಅಥವಾ ಇಳಿಸುವುದಾಗಲೇ ಮಾಡದೆ ಮುಂದಿನ ಒಂದೂವರೆ ಫರ್ಲಾಂಗ್ ದೂರದ ನಿಲ್ದಾಣಗಲ್ಲಿ ನಿಲ್ಲಿಸುತ್ತಿದ್ದಾರೆ. ಇದೇರೀತಿ ರೂಟ್ ನಂಬರ್ 19 ರಲ್ಲಿ ಸಂಚರಿಸುವ ಪಿರೇರಾ ಮತ್ತು ಹಸಿರು ಬಣ್ಣದ ಆಶೇಲ್ ಎಂಬ ಬಸ್ಸುಗಳು ಕೂಡಾ ಮೇಲಿನ ನಿಲ್ದಾಣದಲ್ಲಿ ನಿಲ್ಲಿಸುತ್ತಿಲ್ಲ.

4. ಇದರಿಂದ ಕೊಪ್ಪಲಕಾಡು ಮತ್ತು ಕೊಂಚಾಡಿ ಬೈಲ್ ಪ್ರದೇಶದ ಪ್ರಯಾಣಿಕರಿಗೆ ಅನಗತ್ಯವಾಗಿ ತೊಂದರೆಯಾಗುತ್ತಿದೆ.

5. ಅಷ್ಟೇ ಮುಖ್ಯವಾಗಿ ಬೆಳಿಗ್ಗೆ ಶಾಲಾ ಕಾಲೇಜು ಮತ್ತು ಕೆಲಸಗಳಿಗೆ ಹೋಗುವವರಿಗೆ ಬೆಳಗಿನ ಸಮಯ ತುಂಬಾ ತೊಂದರೆಯಾಗುತ್ತಿದೆ.

6. ಬಹಳ ನಿರ್ದಿಷ್ಟವಾಗಿ ಬೆಳಗಿನ ಸಮಯ 8-45 ಕ್ಕೆ ಸ್ಟೇಟ್ ಬ್ಯಾಂಕ್ ಕಡೆ ಸಂಚರಿಸುವ ಹೋಲಿ ಟ್ರಿನಿಟಿ (ರೂಟ್ ನಂಬ್ರ 14 )ಎಂಬ ಬಸ್ಸು ಇಲ್ಲಿ ನಿಲ್ಲಿಸದಿರುವುದರಿಂದ ಈ ರೂಟಿನ ಪ್ರಯಾಣಿಕರು ಅನಂತರದ ಬಸ್ಸು 9-25ರ ತನಕ ಅಂದರೆ ಸುಮಾರು 40 ನಿಮಿಷ ಕಾಯಬೇಕಾಗುತ್ತದೆ. ಬಹುಷಃ ಇಷ್ಟೊಂದು ದೀರ್ಘ ಅವಧಿ ಬೇರೆ ಯಾವ ರೂಟಿನಲ್ಲೂ ಇಲ್ಲ. ಉಡುಪಿ, ಕಾಸರಗೋಡು ಗಳಿಗೆ 5 ನಿಮಿಷಕ್ಕೊಂದು ಬಸ್ಸು ಇದೆ.

ಈ ರೂಟಿನಲ್ಲಿ ಕನಿಷ್ಟ ಪಕ್ಷ ರೈಲ್ವೇ ನಿಲ್ದಾಣದಿಂದ ಕನಿಷ್ಟ 10 ನಿಮಿಷಕ್ಕೊಂದು ಬಸ್ಸು ಸಂಚರಿಸುವಂತೆ ಕೆ.ಎಸ್.ಆರ್.ಟಿ.ಸಿ. ನಿರ್ಧರಿಸಬೇಕೇಂದು ನಾವು ಆಗ್ರಹಿಸುತ್ತೇವೆ. ಅದೇ ರೀತಿ ರೂಟ್ ನಂಬರ್ 19( ಲಾಲ್‌ಬಾಗ್ ಕಡೆಯಿಂದ) ರಲ್ಲೂ ಈಗ ಒಂದು ಬಸ್ಸು ಮಾತ್ರ ಇದೆ. ಇನ್ನು ಕನಿಷ್ಟ 4 ಬಸ್ಸುಗಳನ್ನು ಸಂಚರಿಸುವಂತೆ ಕೆ.ಎಸ್.ಆರ್.ಟಿ.ಸಿ. ಅನುಕೂಲ ಮಾಡಿ ಕೊಡಬೇಕಾಗಿ ವಿನಂತಿ.

7. ಆದುದರಿಂದ ಮೇಲಿನ ಎಲ್ಲಾ ಬಸ್ಸುಗಳ ರೂಟ್ಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಸರಕಾರಿ ಬಸ್ಸುಗಳನ್ನು ಓಡಿಸಬೇಕಾಗಿ ನಾವು ಆಗ್ರಹಿಸುತ್ತೇವೆ.

ಈ ವೇಳೆ ಡಿವೈಎಫ್ಐ ಮುಖಂಡರಾದ ವೆಂಕಟೇಶ್, ರವಿಚಂದ್ರ ಕೊಂಚಾಡಿ, ದಯಾನಂದ ಕೊಪ್ಪಲಕಾಡು ಉಪಸ್ಥಿತರಿದ್ದರು.

ಇದನ್ನೂ ನೋಡಿ: “ಇರಾನ್ – ಯು.ಎಸ್. ನಡುವಿನ MoUನಲ್ಲಿ ಏನಿದೆ?” | ಎನ್‌ ಕೆ ವಸಂತರಾಜ, ಗುರುರಾಜ ದೇಸಾಯಿ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *