SIR ವಿರುದ್ಧ ರಾಜ್ಯವ್ಯಾಪಿ ಪ್ರತಿರೋಧ: ಕಾರ್ಮಿಕರ ಮೇಲೆ ದಾಖಲೆ ಒತ್ತಡ ಅನ್ಯಾಯ – ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶಗಳು, ಆಕ್ರಮಣಕಾರಿ ನೀತಿಗಳ ವಿರುದ್ಧ ಜನರ ಬೃಹತ್ ಪ್ರತಿರೋಧದ ರೂಪ ಪಡೆದಿವೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಹೇಳಿದ್ದಾರೆ. ಕಾರ್ಮಿಕ

ಸಂಘಪರಿವಾರವು ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುತ್ತಿರುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದರು. ಮತದಾನದ ಹಕ್ಕು ಉಳಿಸಬೇಕೆಂದು ಕೇಳುವವರನ್ನು ದೇಶದ್ರೋಹಿಗಳಂತೆ ಚಿತ್ರಿಸುವ ಪ್ರಯತ್ನಗಳು ದೇಶದ ಏಕತೆ ಮತ್ತು ಸೋದರತ್ವಕ್ಕೆ ಧಕ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಮಿಕರ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಇ-ಶ್ರಮ್ ಕಾರ್ಡ್ ಪಡೆದ ಸುಮಾರು 1.07 ಕೋಟಿ ಮಂದಿ ಹಾಗೂ ಕಟ್ಟಡ ಮತ್ತು ಇತರೆ ಕ್ಷೇತ್ರಗಳ ಕಾರ್ಮಿಕರಲ್ಲಿ ಬಹುಪಾಲು ವಲಸೆ ಕಾರ್ಮಿಕರೇ ಇದ್ದಾರೆ ಎಂದು ತಿಳಿಸಿದರು. ಇಂತಹ ಜನರಿಂದ 2002ರ ದಾಖಲೆಗಳನ್ನು ಕೇಳುವುದು ಅನ್ಯಾಯವಾಗಿದ್ದು, ಅವರನ್ನು ವ್ಯವಸ್ಥೆಯಿಂದ ಹೊರಗಿಡುವ ಪ್ರಯತ್ನ ಖಂಡನೀಯ ಎಂದು ಹೇಳಿದರು.

ಇದನ್ನೂ ಓದಿ: “ಗ್ರೀನ್ ಬೆಂಗಳೂರು” ಯೋಜನೆ: ಜೂನ್ 27ರಂದು 15 ಲಕ್ಷ ಗಿಡ ನೆಡುವ ಅಭಿಯಾನ

ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಸೌಲಭ್ಯಗಳನ್ನು ನಿಲ್ಲಿಸುವ ಸಾಧ್ಯತೆಯನ್ನು ರಾಜ್ಯ ಸರ್ಕಾರ ಸೂಚಿಸಿರುವುದನ್ನೂ ಅವರು ವಿರೋಧಿಸಿದರು. ಕರ್ನಾಟಕದಲ್ಲಿ ಎಸ್ಐಆರ್ ಜಾರಿಗೆ ತಡೆಯೊಡ್ಡಲು ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕೆಂದು ಅವರು ಕರೆ ನೀಡಿದರು.

ಹಿಂದಿನ ಸಂದರ್ಭಗಳನ್ನು ಉಲ್ಲೇಖಿಸಿದ ವರಲಕ್ಷ್ಮಿ, ಫ್ರೀಡಂ ಪಾರ್ಕ್‌ನಲ್ಲಿ 25 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ದಾಖಲೆಗಳ ವಿಚಾರದಲ್ಲಿ ನಡೆಸಿದ ಹೋರಾಟವನ್ನು ಸ್ಮರಿಸಿದರು. ರಾಜ್ಯದ ಜನಸಂಖ್ಯೆಯ ಮ್ಯಾಪಿಂಗ್ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸಿದ ಈ ಕಾರ್ಯಕರ್ತೆಯರು, ಕಠಿಣ ನಿಯಮಗಳ ಕಾರಣದಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು.

2001ರ ದಾಖಲೆಗಳಿಲ್ಲದ ಕುಟುಂಬ ಸದಸ್ಯರ ದಾಖಲಾತಿಯಲ್ಲಿ ಉಂಟಾಗುತ್ತಿರುವ ಗೊಂದಲಗಳು, ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ ಎಂದು ಅವರು ತಿಳಿಸಿದರು. ತಮಿಳುನಾಡು ಮತ್ತು ಕೇರಳದಲ್ಲಿ ಕಾಣದಂತಹ ಸಮಸ್ಯೆಗಳು ಕರ್ನಾಟಕದಲ್ಲಿ ಉದ್ಭವಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನರು ದಾಖಲೆಗಳನ್ನು ಸುಲಭವಾಗಿ ಒದಗಿಸುವ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಕಠಿಣ ನಿಯಮಗಳ ಮೂಲಕ ಅವರನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂದು ವರಲಕ್ಷ್ಮಿ ಹೇಳಿದರು.

‘ಚುನಾವಣಾ ಆಯೋಗಕ್ಕೆ’ ಪ್ರತಿರೋಧ ಸಮಾವೇಶದ ಆಗ್ರಹಗಳು:

1. ಅತಾರ್ತಿಕ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.

2. ನೀವು ತಯಾರಿಸುವ ಮತದಾರರ ಪಟ್ಟಿಯ ಕರಡು ಪ್ರತಿಯನ್ನು (ಪರಿಶೀಲನೆಗೆ ಅವಕಾಶವಿರುವಂತೆ) ಕಂಪ್ಯೂಟರ್ ಓದುವ ಮಾದರಿಯಲ್ಲಿ ಕೊಡಬೇಕು.

3. ಚುನಾವಣಾ ಮ್ಯಾನ್ಯೂಯಲ್ನಲ್ಲಿ ನೀಡಲಾಗಿರುವ ನಿರ್ದೇಶನದಂತೆ, ಕರಡು ಮತದಾರರ ಪಟ್ಟಿಯನ್ನು ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆಗೆ ಮತ್ತು ತಿದ್ದುಪಡಿಗೆ ಒಳಪಡಿಸಬೇಕು.

4. ಅಪೀಲ್ ಸಲ್ಲಿಸಲು ಕನಿಷ್ಟ ಆರು ತಿಂಗಳ ಸಮಯಾವಕಾಶ ನೀಡಲೇ ಬೇಕು.

‘ರಾಜ್ಯ ಸರಕಾರಕ್ಕೆʼ ಪ್ರತಿರೋಧ ಸಮಾವೇಶದ ಆಗ್ರಹಗಳು:

1. ಸರಳ ವಿಧಾನ ಬಳಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಚೆಕ್ ಲಿಸ್ಟ್ ರೀತಿ ಕೆಲಸ ಮಾಡುವ, ರಾಜ್ಯದ ಸ್ವಾಲಂಬಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು.

2. ಅರ್ಹ ಮತದಾರರಿಗೆ ಗ್ಯಾರಂಟಿಯಾಗಿ ಸ್ಮಾರ್ಟ್ ಕಾರ್ಡ್ ವಿತರಿಸಬೇಕು.

3. ಎಸ್ಐಆರ್ ಕೇಳುವ ದಾಖಲೆಗಳಲ್ಲಿದ ಅರ್ಹ ಮತದಾರರಿಗೆ ಸ್ಥಳದಲ್ಲೇ ಅಗತ್ಯ ದಾಖಲೆ ಒದಗಿಸಬೇಕು.

ಇದನ್ನೂ ನೋಡಿ: ಪಿಚ್ಚರ್‌ ಪಯಣ -174| ಸಿನಿಮಾ – ವಲವಾರ, ಗ್ರಾಮೀಣ ಬದುಕಿನ ಸೊಗಡು | ವಿಶ್ಲೇಷಣೆ – ಎಂ.‌ನಾಗರಾಜ ಶೆಟ್ಟಿ

Donate Janashakthi Media

Leave a Reply

Your email address will not be published. Required fields are marked *