ಬೆಂಗಳೂರು ಇಂಡಿಯಾ ನ್ಯಾನೋ 2026ರಲ್ಲಿ ಹೊಸ ಆವಿಷ್ಕಾರಗಳು
ಬೆಂಗಳೂರು: ತಂತ್ರಜ್ಞಾನ ಸಮ್ಮೇಳನದಲ್ಲಿ ಆರೋಗ್ಯ ಕ್ಷೇತ್ರ ಪ್ರಮುಖ ಚರ್ಚೆಯ ವಿಷಯವಾಗಿ ಹೊರಹೊಮ್ಮಿದ್ದು, ನ್ಯಾನೋ ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳು ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಕ್ಷೇತ್ರದಲ್ಲಿ ಕ್ರಾಂತಿ ತರಬಹುದೆಂಬ ನಿರೀಕ್ಷೆಯನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ. ಕ್ಯಾನ್ಸರ್
‘Nanotech’s Next Frontier: AI & Beyond – Conceive, Converge, Commercialize’ ಎಂಬ ಥೀಮ್‌ನಡಿ ನಡೆದ 14ನೇ ಬೆಂಗಳೂರು ಇಂಡಿಯಾ ನ್ಯಾನೋ 2026 ಸಮ್ಮೇಳನದಲ್ಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಪ್ರೊಮೋಶನ್ ಸೊಸೈಟಿ (KSTePS) ಮತ್ತು ಜವಾಹರಲಾಲ್ ನೆಹರು ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಕೇಂದ್ರ (JNCASR) ಸಂಯುಕ್ತವಾಗಿ ಕಾರ್ಯಕ್ರಮವನ್ನು ಆಯೋಜಿಸಿತು. ‘Nano in Health’ ಅಧಿವೇಶನದಲ್ಲಿ ನ್ಯಾನೋ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಆರೋಗ್ಯ ಸೇವೆಯನ್ನು ಹೆಚ್ಚು ಲಭ್ಯ, ಕಡಿಮೆ ವೆಚ್ಚದ ಮತ್ತು ಪರಿಣಾಮಕಾರಿಯಾಗಿಸಲು ಹೇಗೆ ಸಹಕಾರಿಯಾಗಬಹುದು ಎಂಬುದನ್ನು ಸಂಶೋಧಕರು ವಿವರಿಸಿದರು. ಕ್ಯಾನ್ಸರ್
ಒಂದು ಅಧ್ಯಯನದಲ್ಲಿ AI ಆಧಾರಿತ ನ್ಯಾನೋಸೆನ್ಸರ್ ಬಳಸಿ ಉಸಿರಿನ ಮೂಲಕವೇ ಪ್ರೀ-ಡಯಾಬಿಟೀಸ್ ಪತ್ತೆಹಚ್ಚುವ ಸಾಧನವನ್ನು ಪರಿಚಯಿಸಲಾಯಿತು. ಟಿಸಿಎಸ್ ರಿಸರ್ಚ್‌ನ Embedded Devices and Intelligent Systems (EDIS) ವಿಭಾಗದ ಹಿರಿಯ ವಿಜ್ಞಾನಿ ಪರಮಿತಾ ಕಾರ್ ಚೌಧುರಿ ಅವರು, ಭಾರತದಲ್ಲಿ ಸುಮಾರು 13.6 ಕೋಟಿ ಜನರು ಪ್ರೀ-ಡಯಾಬಿಟೀಸ್‌ನಿಂದ ಬಳಲುತ್ತಿದ್ದು, ಬಹುತೇಕರು ಅದು ಡಯಾಬಿಟೀಸ್‌ಗೆ ತಿರುಗುವವರೆಗೆ ಪತ್ತೆಯಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗೃಹ ಜ್ಯೋತಿ ಪರಿಶೀಲನೆ: ಆಗಸ್ಟ್ 30 ಗಡುವು ಸಮೀಪ; 55% ಪರಿಶೀಲನೆ ಪೂರ್ಣ
ಪ್ರೀ-ಡಯಾಬಿಟೀಸ್ ಅನ್ನು ಆರಂಭದಲ್ಲೇ ಪತ್ತೆಹಚ್ಚಿದರೆ ಜೀವನಶೈಲಿ ಬದಲಾವಣೆಗಳ ಮೂಲಕ ನಿಯಂತ್ರಿಸಬಹುದು. ಈ ಹಿನ್ನೆಲೆಯಲ್ಲಿ ಸರಳ, ನೋವಿಲ್ಲದ ಪರೀಕ್ಷಾ ಸಾಧನವು ಆರಂಭಿಕ ಚಿಕಿತ್ಸೆಗೆ ಸಹಾಯಕವಾಗಲಿದೆ. ಕೈಯಲ್ಲಿ ಹಿಡಿದು ಬಳಸಬಹುದಾದ ಈ ಸಾಧನವು ಉಸಿರಿನಲ್ಲಿನ ಹಲವು ಬಯೋಮಾರ್ಕರ್‌ಗಳನ್ನು ವಿಶ್ಲೇಷಿಸಿ, ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ವ್ಯಕ್ತಿಯನ್ನು ನಾನ್-ಡಯಾಬಿಟಿಕ್, ಪ್ರೀ-ಡಯಾಬಿಟಿಕ್ ಅಥವಾ ಡಯಾಬಿಟಿಕ್ ಎಂದು ಗುರುತಿಸುತ್ತದೆ.
ಇನ್ನೊಂದು ಅಧ್ಯಯನದಲ್ಲಿ ಕ್ಯಾನ್ಸರ್ ಇಮ್ಯುನೋಥೆರಪಿಯನ್ನು ಸುಧಾರಿಸಲು ನ್ಯಾನೋ ತಂತ್ರಜ್ಞಾನ ಬಳಕೆಯ ಕುರಿತು ವಿವರಿಸಲಾಯಿತು. ಐಐಟಿ-ಬಾಂಬೆ ಪ್ರಾಧ್ಯಾಪಕಿ ಪ್ರಕೃತಿ ತಯಾಲಿಯಾ ಅವರು ನ್ಯಾನೋಪಾರ್ಟಿಕಲ್ ಆಧಾರಿತ ಇಮ್ಯುನೋಥೆರಪಿ ಕುರಿತು ಸಂಶೋಧನೆ ಮಂಡಿಸಿದರು.
ಇತ್ತೀಚಿನ CAR-T ಸೆಲ್ ಥೆರಪಿ ರಕ್ತ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದರೂ, ಅದು ದುಬಾರಿ ಮತ್ತು ಘನ ಗಡ್ಡೆಗಳ (solid tumours) ಚಿಕಿತ್ಸೆಯಲ್ಲಿ ಪರಿಣಾಮಕಾರಿಯಲ್ಲ ಎಂಬುದನ್ನು ಅವರು ವಿವರಿಸಿದರು. ಇದಕ್ಕೆ ಪರಿಹಾರವಾಗಿ, ದೇಹದೊಳಗೇ ಇಮ್ಯೂನ್ ಸೆಲ್‌ಗಳನ್ನು ಜನ್ಯವಾಗಿ ಪರಿವರ್ತಿಸುವ ಬಯೋಮಟೀರಿಯಲ್ ಸ್ಕಾಫೋಲ್ಡ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ವಿಶೇಷ ಪ್ರಯೋಗಾಲಯಗಳಲ್ಲಿ ಸೆಲ್‌ಗಳನ್ನು ಹೊರತೆಗೆದು ಮರುಸೇರಿಸುವ ಅಗತ್ಯವಿಲ್ಲ.
ಈ ರೀತಿಯ ತಂತ್ರಜ್ಞಾನಗಳು ಕಡಿಮೆ ವೆಚ್ಚದ ಇಮ್ಯುನೋಥೆರಪಿಗಳಿಗೆ ದಾರಿ ಮಾಡಿಕೊಡುವುದರ ಜೊತೆಗೆ, ರ್ಯೂಮಟಾಯ್ಡ್ ಆರ್ಥ್ರೈಟಿಸ್‌ನಂತಹ ಆಟೋಇಮ್ಯೂನ್ ರೋಗಗಳ ಚಿಕಿತ್ಸೆಯಲ್ಲಿಯೂ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇ-ವೆಸ್ಟ್‌ಗೆ ಡಿಜಿಟಲ್ ಪರಿಹಾರ
ಬಳಕೆ ಬಳಿಕ ತ್ಯಜಿಸಲ್ಪಡುವ ಅನೇಕ ಎಲೆಕ್ಟ್ರಾನಿಕ್ ಸಾಧನಗಳು ಮಾನ್ಯ ರಿಸೈಕ್ಲರ್‌ಗಳ ಬಳಿ ತಲುಪದೇ ವ್ಯರ್ಥವಾಗುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಜೈನ್ (deemed-to-be) ವಿಶ್ವವಿದ್ಯಾಲಯದ ಅಧ್ರಿಜಾ ಅನ್ಯತ್ ಬೊರ್ಗೊಹೈನ್ ಮತ್ತು ದಕ್ಷ್ ಜೈನ್ ಅವರು ಪ್ರತಿಯೊಂದು ಎಲೆಕ್ಟ್ರಾನಿಕ್ ಉತ್ಪನ್ನಕ್ಕೂ ಯೂನಿಕ್ QR ಕೋಡ್ ನೀಡುವ ಪ್ರೋಟೋಟೈಪ್ ಅಭಿವೃದ್ಧಿಪಡಿಸಿದ್ದಾರೆ.
ಮೊಬೈಲ್ ಆಪ್‌ಗೆ ಸಂಪರ್ಕಿತವಾಗಿರುವ ಈ ವ್ಯವಸ್ಥೆ ಉತ್ಪಾದನೆಯಿಂದ ರಿಸೈಕ್ಲಿಂಗ್‌ವರೆಗೆ ಸಾಧನದ ಹಾದಿಯನ್ನು ಟ್ರ್ಯಾಕ್ ಮಾಡುತ್ತದೆ. ಇದರಿಂದ ಮೌಲ್ಯಯುತ ವಸ್ತುಗಳನ್ನು ಮರುಪಡೆಯಲು ಸಹಾಯವಾಗುವುದರ ಜೊತೆಗೆ, EPR (Extended Producer Responsibility) ನಿಯಮಗಳನ್ನು ಅನುಸರಿಸುವುದೂ ಸುಲಭವಾಗುತ್ತದೆ.
“ನಮ್ಮ ಉದ್ದೇಶ ಲಾಭ ಗಳಿಸುವುದಲ್ಲ; ಸಸ್ಟೇನಬಿಲಿಟಿ, ಟ್ರೇಸಬಿಲಿಟಿ ಮತ್ತು ಇ-ವೆಸ್ಟ್ ಸರಿಯಾದ ರಿಸೈಕ್ಲರ್‌ಗಳಿಗೆ ತಲುಪುವುದನ್ನು ಖಚಿತಪಡಿಸುವುದು,” ಎಂದು ಅಧ್ರಿಜಾ ತಿಳಿಸಿದ್ದಾರೆ.
ಇದನ್ನೂ ನೋಡಿ: ಕನಿಷ್ಠ ವೇತನ ಪುನರ್‌ಪರಿಶೀಲಿಸಿದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ! | ಕಾರ್ಮಿಕರ ಎಚ್ಚರಿಕೆ Janashakthi Media
