ಆಗಸ್ಟ್‌ 13ರಿಂದ 27ರವರೆಗೆ ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್‌ 13ರಿಂದ ಆರಂಭವಾಗಲಿದ್ದು, ಆಗಸ್ಟ್‌ 27ರವರೆಗೆ ನಡೆಯಲಿದೆ. ಈ ಕುರಿತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಗಸ್ಟ್

ಆಗಸ್ಟ್‌ 13ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಕಲಾಪಗಳು ಆರಂಭವಾಗಲಿವೆ. ಆಗಸ್ಟ್‌ 15, 16, 22, 23 ಹಾಗೂ 26ರಂದು ಸಾರ್ವತ್ರಿಕ ರಜೆ ಇರುವುದರಿಂದ ಆ ದಿನಗಳಲ್ಲಿ ಕಲಾಪ ನಡೆಯುವುದಿಲ್ಲ. ಉಳಿದ ದಿನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾರ್ಯಕಲಾಪಗಳು ನಡೆಯಲಿವೆ.

15 ದಿನಗಳ ಅಧಿವೇಶನದಲ್ಲಿ ಏನೇನು?

ಆಗಸ್ಟ್‌ 13ರಂದು ಖಾಸಗಿ ಮತ್ತು ಸರ್ಕಾರಿ ಕಾರ್ಯಕಲಾಪಗಳೊಂದಿಗೆ ಅಧಿವೇಶನ ಆರಂಭವಾಗಲಿದೆ. ಆಗಸ್ಟ್‌ 14ರಂದು ಸರ್ಕಾರಿ ಕಾರ್ಯಕಲಾಪಗಳು ನಡೆಯಲಿವೆ. 15 ಮತ್ತು 16ರಂದು ರಜೆ. ಆಗಸ್ಟ್‌ 17ರಿಂದ 21ರವರೆಗೆ ನಿರಂತರವಾಗಿ ಕಲಾಪ ನಡೆಯಲಿದ್ದು, 20ರಂದು ಖಾಸಗಿ ಹಾಗೂ ಸರ್ಕಾರಿ ಕಾರ್ಯಕಲಾಪಗಳಿವೆ. 22 ಮತ್ತು 23ರಂದು ವಾರಾಂತ್ಯದ ರಜೆ. ಆಗಸ್ಟ್‌ 24, 25ರಂದು ಸರ್ಕಾರಿ ಕಾರ್ಯಕಲಾಪಗಳು ನಡೆಯಲಿದ್ದು, 26ರಂದು ರಜೆ. ಆಗಸ್ಟ್‌ 27ರಂದು ಖಾಸಗಿ ಮತ್ತು ಸರ್ಕಾರಿ ಕಾರ್ಯಕಲಾಪಗಳೊಂದಿಗೆ ಅಧಿವೇಶನ ಮುಕ್ತಾಯಗೊಳ್ಳಲಿದೆ. ಆಗಸ್ಟ್

ಇದನ್ನೂ ಓದಿ : ಡಾಂಬರೀಕರಣ ಕಾಮಗಾರಿ: ಆ.5ರವರೆಗೆ ಪೀಣ್ಯ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರ ನಿರ್ಬಂಧ ಆಗಸ್ಟ್

ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಹಲವು ಪ್ರಮುಖ ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆಯಿದೆ. ಬಿಡದಿ ಟೌನ್‌ಶಿಪ್‌ ಯೋಜನೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮ, ಬರ ಪರಿಸ್ಥಿತಿ ಮತ್ತು ಬರ ಪರಿಹಾರ, ಪಂಚ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಹಾಗೂ ಅವುಗಳ ಪರಿಷ್ಕರಣೆ ಪ್ರಮುಖ ಚರ್ಚಾ ವಿಷಯಗಳಾಗಿವೆ.

ಇದರ ಜತೆಗೆ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಿದ ಪ್ರಕರಣ, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ, ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ, ಆರ್‌ಎಸ್‌ಎಸ್‌ ನೋಂದಣಿ, ರಾಮಮಂದಿರ ದೇಣಿಗೆ ಕಳ್ಳತನದ ಆರೋಪ ಹಾಗೂ ನೀಟ್‌ ಹಗರಣ ಕೂಡ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮ, ನೀಟ್‌ ಹಗರಣ, ಬರ ಪರಿಸ್ಥಿತಿ, ಕಾವೇರಿ ನೀರು ಹಂಚಿಕೆ ಮತ್ತು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಸೇರಿದಂತೆ ಹಲವು ವಿಚಾರಗಳು ಈಗಾಗಲೇ ರಾಜಕೀಯವಾಗಿ ಸೂಕ್ಷ್ಮವಾಗಿವೆ.

ಹೀಗಾಗಿ ಆಗಸ್ಟ್‌ 13ರಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವನ್ನು ವಿಪಕ್ಷಗಳು ಈ ವಿಚಾರಗಳಲ್ಲಿ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಸರ್ಕಾರದ ಉತ್ತರಗಳು ಹಾಗೂ ಪ್ರತಿಪಕ್ಷಗಳ ಆಕ್ಷೇಪಗಳಿಂದ ಅಧಿವೇಶನ ಕಾವೇರುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ, 15 ದಿನಗಳ ಮುಂಗಾರು ಅಧಿವೇಶನದಲ್ಲಿ ರಾಜ್ಯದ ಆರ್ಥಿಕತೆ, ನೇಮಕಾತಿ ಅಕ್ರಮ, ಶಿಕ್ಷಣ, ನೀರಿನ ಸಮಸ್ಯೆ, ಬರ ಪರಿಹಾರ ಮತ್ತು ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.

ಇದನ್ನೂ ನೋಡಿ : NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi

Donate Janashakthi Media

Leave a Reply

Your email address will not be published. Required fields are marked *