ಶಾಲಾ ಬಸ್ ಚಾಲಕರಲ್ಲಿ ಮೊಬೈಲ್ ಬಳಕೆ ಆತಂಕಕಾರಿ: ಮಕ್ಕಳ ರಸ್ತೆ ಸುರಕ್ಷತೆ ಕುರಿತು ಗಂಭೀರ ಎಚ್ಚರಿಕೆ

ಹೈದರಾಬಾದ್: ಶಿಕ್ಷಣ ಸಂಸ್ಥೆಗಳು ನೇಮಿಸಿರುವ ಸುಮಾರು 55,995 ಶಾಲಾ ಬಸ್ ಚಾಲಕರು ಮಕ್ಕಳನ್ನು ಸಾರಿಸುವ ವೇಳೆ ಮೊಬೈಲ್ ಫೋನ್ ಬಳಸುತ್ತಿರುವುದು ಪತ್ತೆಯಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ “ಶಾಲಾ ಮಕ್ಕಳಿಗೆ ಸುರಕ್ಷತೆ” ಸಮನ್ವಯ ಸಭೆಯಲ್ಲಿ ಈ ಅಂಶವನ್ನು ಹೈದರಾಬಾದ್ ಟ್ರಾಫಿಕ್ ಪೊಲೀಸರು ಬಹಿರಂಗಪಡಿಸಿದರು. ಚಾಲಕ

ಈ ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಶಾಲಾ ಆಡಳಿತ ಮಂಡಳಿಗಳು ಭಾಗವಹಿಸಿದ್ದವು. ಅಧಿಕಾರಿಗಳ ಪ್ರಕಾರ, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಲ್ಲಿ 94% ಮಂದಿ ಹೆಲ್ಮೆಟ್ ಧರಿಸುತ್ತಿಲ್ಲ ಎಂಬುದು ಕೂಡ ಗಂಭೀರ ವಿಚಾರವಾಗಿದೆ. ಇದು ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಕಡ್ಡಾಯವಾಗಿದ್ದರೂ ಪಾಲನೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ವಿರುದ್ಧ ಎಐ ಬಳಸಿ ಅಶ್ಲೀಲ ಚಿತ್ರ ಹರಡಿದ ಮೂವರ ಬಂಧನ

ಸಭೆಯಲ್ಲಿ ತಿಳಿಸಿದಂತೆ, ತೆಲಂಗಾಣದಲ್ಲಿ ಪ್ರತಿವರ್ಷ ಸುಮಾರು 7,500 ಮಂದಿ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿದ್ದಾರೆ. 2026 ಜನವರಿಯಿಂದ ಮೇ ವರೆಗೆ ಮಾತ್ರವೇ 7 ಮಕ್ಕಳು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವುದಾಗಿ ವರದಿ ನೀಡಲಾಗಿದೆ.

ಜೋಯಲ್ ಡೇವಿಸ್ ಮಾತನಾಡಿ, ಶಾಲೆಗಳು ವಿದ್ಯಾರ್ಥಿಗಳ ಸಂಚಾರ ವಿಧಾನಗಳ ಸಂಪೂರ್ಣ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಕೇವಲ ಶಾಲಾ ಬಸ್ ಪ್ರಯಾಣದ ಮಾಹಿತಿಯಲ್ಲ, ಖಾಸಗಿ ವಾಹನಗಳು ಮತ್ತು ಆಟೋ ರಿಕ್ಷಾ ಬಳಕೆ ಮಾಡುವ ಮಕ್ಕಳ ವಿವರಗಳನ್ನೂ ಸಂಗ್ರಹಿಸಬೇಕು ಎಂದು ಅವರು ಹೇಳಿದ್ದಾರೆ.

ಅದೇ ವೇಳೆ, 1,014 ಶಾಲಾ ಬಸ್ ಚಾಲಕರಲ್ಲಿ 316 ಮಂದಿಗೆ ದೃಷ್ಟಿ ಸಂಬಂಧಿತ ಸಮಸ್ಯೆಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಶಾಲಾ ಪ್ರತಿನಿಧಿಗಳು ಕೂಡ ಟ್ರಾಫಿಕ್ ಜಾಮ್ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. ಜ್ಯೂಬಿಲಿ ಹಿಲ್ಸ್ ಪಬ್ಲಿಕ್ ಶಾಲೆಯ ಪ್ರತಿನಿಧಿ ಪೀಕ್ ಅವರ್‌ಗಳಲ್ಲಿ ಒನ್-ವೇ ಸಂಚಾರ ವ್ಯವಸ್ಥೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸಕ್ಸೆಸ್ ಶಾಲೆಯ ಮಂಗು ಜ್ಯೋತಿ ಅವರು ಶಾಲೆ ಸುತ್ತಮುತ್ತ ಅತಿವೇಗ ಚಾಲನೆಯ ಸಮಸ್ಯೆಯನ್ನು ಪ್ರಸ್ತಾಪಿಸಿ ಹೆಚ್ಚುವರಿ ಪೊಲೀಸ್ ನಿಯೋಜನೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಇನ್ನು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಮಳೆಗಾಲದಲ್ಲಿ ಆಟೋ ರಿಕ್ಷಾ ವಿಳಂಬದಿಂದ ವಿದ್ಯಾರ್ಥಿಗಳು ಸಂಜೆ ತಡವಾಗಿ ಮನೆಗೆ ತಲುಪುವ ಸಮಸ್ಯೆಯನ್ನು ವಿವರಿಸಿದ್ದಾರೆ.

ವಿ.ಸಿ. ಸಜ್ಜನರ್ ಮಾತನಾಡಿ, ಕೇವಲ ಜಾಗೃತಿ ಅಭಿಯಾನಗಳು ಸಾಕಾಗುವುದಿಲ್ಲ, ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಹೇಳಿದ್ದಾರೆ. ಮದ್ಯಪಾನ ಮಾಡಿ ಶಾಲಾ ಬಸ್ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅವರು ಮಕ್ಕಳಲ್ಲಿ ಅಪ್ರಾಪ್ತ ವಯಸ್ಸಿನ ವಾಹನ ಚಾಲನೆ, ಮಾದಕ ವಸ್ತು ಬಳಕೆ ಮತ್ತು ಅಸಭ್ಯ ವರ್ತನೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಜನವರಿ 1ರಿಂದ ಮೇ 31, 2026ರ ನಡುವೆ 2,539 ಅಪ್ರಾಪ್ತ ವಯಸ್ಸಿನ ವಾಹನ ಚಾಲನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಲಾಗಿದೆ.

ಆರ್ ವಿ ಕರ್ಣನ್ ಪೋಷಕರು ರಸ್ತೆಗಳಲ್ಲಿ ವಾಹನ ನಿಲ್ಲಿಸಿ ಮಕ್ಕಳನ್ನು ಕಾಯುವುದರಿಂದ ಟ್ರಾಫಿಕ್ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ. ನಗರವನ್ನು ಮಕ್ಕಳಿಗೆ ಸಂಪೂರ್ಣ ಸುರಕ್ಷಿತ ಮಾಡಲು ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಯುನಿಸೆಫ್ ಡಾ. ಝೆಲಾಲೆಮ್ ಬಿರ್ಹಾನು ಮಾತನಾಡಿ, ಮಕ್ಕಳಿಗೆ ಸುರಕ್ಷಿತ ಪ್ರಯಾಣವು ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.

ಅಧಿಕಾರಿಗಳು ನಡೆಸಿದ ಎನ್‌ಫೋರ್ಸ್‌ಮೆಂಟ್ ತಪಾಸಣೆಯಲ್ಲಿ, ಒಬ್ಬ ಶಾಲಾ ಬಸ್ ಚಾಲಕ ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಪ್ರಕರಣವೂ ಪತ್ತೆಯಾಗಿದ್ದು, ಆತನ ರಕ್ತದಲ್ಲಿನ ಆಲ್ಕೋಹಾಲ್ ಪ್ರಮಾಣ 300ಕ್ಕೂ ಹೆಚ್ಚು ಇರುವುದು ಗಂಭೀರ ಆತಂಕವನ್ನು ಉಂಟುಮಾಡಿದೆ.

ಇದನ್ನೂ ನೋಡಿ: SIR ತೀರ್ಪಿನ ಒಳನೋಟ: ಸಂವಿಧಾನ, ನಾಗರಿಕತ್ವ ಮತ್ತು ಮತದಾನದ ಹಕ್ಕು |ಜಸ್ಟೀಸ್‌ ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *