ನರಹತ್ಯಾಕಾರಿ ಆಳ್ವಿಕೆಗೆ ಭಾರತದ ಶಸ್ತ್ರ ಸರಬರಾಜು! -ಪ್ರೊ. ಪ್ರಭಾತ್‌ ಪಟ್ನಾಯಕ್

ಇಸ್ರೇಲಿ ನರಹತ್ಯಾಕಾರಿ  ಆಳ್ವಿಕೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ನೈತಿಕವಾಗಿ ಖಂಡನೀಯ ಮತ್ತು ಕಾನೂನು ಪ್ರಕಾರ ದಂಡನೀಯ – ಜೊತೆಗೆ, ಪ್ಯಾಲೆಸ್ಟೀನ್ ಪ್ರಶ್ನೆಗೆ  ʼಎರಡು ಪ್ರಭುತ್ವʼಗಳ ಪರಿಹಾರದ ಬಗ್ಗೆ ಮೋದಿ ಸರ್ಕಾರ ವ್ಯಕ್ತಪಡಿಸುವ ನಿಲುವಿಗೂ ತದ್ವಿರುದ್ಧವಾಗಿದೆ. ಅಲ್ಲದೆ ಇದು ನೈತಿಕವಾಗಿ ಮಾನವಕೋಟಿಗೆ ಮಾಡಿರುವ ಬಹಿರಂಗ ಅಪಮಾನ, ಮೂಲಕ, ಮೋದಿ ಸರ್ಕಾರ ನಮ್ಮ ದೇಶಕ್ಕೆ ಅಪಮಾನವನ್ನು ತಂದಿದೆ. ಆದರೆ ಈ ಬಗ್ಗೆ ಅದಕ್ಕೆ ಯಾವ ಅಳುಕೂ ಇಲ್ಲ. ಈ ಸರಕಾರದ ಅಡಿಯಲ್ಲಿ, ದೇಶದ ಕಾನೂನು ಕಟ್ಟುಪಾಡುಗಳು, ದೇಶದ ನೈತಿಕ ಹೊಣೆಗಾರಿಕೆ ಮತ್ತು ದೇಶ ದೇಶಗಳ ನಡುವೆ  ದೇಶದ ಗೌರವ, ವಿಶ್ವಾಸಾರ್ಹತೆ ಇವುಗಳಿಗಿಂತ, ಟ್ರಂಪ್ರನ್ನು ಮೆಚ್ಚಿಸುವುದು ಮತ್ತು ಶಸ್ತ್ರಾಸ್ತ್ರ ಮಾರಾಟದಿಂದ ಅಪಾರ ಲಾಭ ಗಳಿಸುವ ತನ್ನ ಬಂಟ ಬಂಡವಳಿಗರ ಹಿತಾಸಕ್ತಿಗಳನ್ನು ಉತ್ತೇಜಿಸುವ ಕ್ರಮಗಳೇ ಹೆಚ್ಚಿನ ಆದ್ಯತೆಯನ್ನು, ಪಡೆಯುತ್ತವೆ. ನೈತಿಕ ಪೊಳ್ಳುತನ ಈ ಸರ್ಕಾರದ ಆಂತರಿಕ ನೀತಿಯ ಆಂತರ್ಯದಲ್ಲೂ ಇದೆ, ವಿದೇಶಾಂಗ ನೀತಿಯ ಆಂತರ್ಯದಲ್ಲೂ ದೆ. ನರಹತ್ಯಾಕಾರಿ
ಅನು: ಕೆ.ಎಂ.ನಾಗರಾಜ್

ಆಮ್ನೆಸ್ಟಿ ಇಂಟರ್ನ್ಯಾಷನಲ್ (ಇದು ಮಾನವ ಹಕ್ಕುಗಳನ್ನು ಚಲಾಯಿಸುವಲ್ಲಿ ಸಹಾಯ ನೀಡುವ ಒಂದು ಅಂತರರಾಷ್ಟ್ರೀಯ ಸರಕಾರೇತರ ಸಂಸ್ಥೆ), “ಮೇಡ್ ಇನ್ ಇಂಡಿಯಾ: ದಿ ಸಪ್ಲೈ ಆಫ್ ವೆಪನ್ಸ್ ಅಂಡ್ ಅಮ್ಯುನಿಷನ್ ಟು ಇಸ್ರೇಲ್” ಎಂಬ ಶೀರ್ಷಿಕೆಯ ಒಂದು ತನಿಖಾ ವರದಿಯನ್ನು ಪ್ರಕಟಿಸಿದೆ. ಈ ವರದಿಯು, ಗಾಜಾದಲ್ಲಿ ಇಸ್ರೇಲ್‌ ನರಹತ್ಯೆ ಎಸಗುತ್ತಿದ್ದ ಸಮಯದಲ್ಲಿ ಭಾರತವು ಇಸ್ರೇಲಿಗೆ ಮಾಡಿದ ಯುದ್ಧ ಸಲಕರಣೆಗಳ ಸರಬರಾಜುಗಳನ್ನು ವಿವರಿಸಿದೆ. ನಾಗರಿಕ ಬಳಕೆಯ ವಸ್ತುಗಳನ್ನು ಹೊತ್ತೊಯ್ಯುವ ಎಲ್ಲ ಹಡಗು-ಸಾಗಣೆಗಳನ್ನು ಈ ವರದಿಯಿಂದ ಬಹಳ ಎಚ್ಚರಿಕೆಯಿಂದ ಹೊರಗಿಟ್ಟಿದೆ. ಅದೇ ರೀತಿಯಲ್ಲಿ ನಾಗರಿಕರನ್ನು ವಿವೇಚನಾರಹಿತ ದಾಳಿಗಳಿಂದ ರಕ್ಷಿಸುವ ಕ್ಷಿಪಣಿ-ವಿರೋಧಿ ರಕ್ಷಣಾ ತಂತ್ರಜ್ಞಾನದ ಭಾಗವಾಗಿ ಬಳಸಬಹುದಾದ ಆಯುಧಗಳು ಮತ್ತು ಮದ್ದುಗುಂಡುಗಳನ್ನೂ ಸಹ ಅದು ತನ್ನ ವರದಿಯಿಂದ ಹೊರಗಿಟ್ಟಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ತನ್ನ ಆಕ್ರಮಣಕಾರಿ ಉದ್ದೇಶಗಳಿಗಾಗಿ ಇಸ್ರೇಲ್‌ ಬಳಸಿದ, ಭಾರತದಿಂದ ಸಾಗಣೆಯಾದ ಶಸ್ತ್ರಾಸ್ತ್ರಗಳ ಮೇಲೆ ಮಾತ್ರ ಗಮನಹರಿಸುವ ಮಟ್ಟಿಗೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ಜಾಗರೂಕತೆ ವಹಿಸಿದೆ.

ಈ ವರದಿಯ ಪ್ರಕಾರ, ಅಕ್ಟೋಬರ್ 7, 2023 ರಿಂದ ನವೆಂಬರ್ 30, 2025ರ ನಡುವೆ, ಭಾರತವು ಆಕ್ರಮಣಕಾರಿ ಉದ್ದೇಶಗಳಿಗಾಗಿ ಇಸ್ರೇಲ್‌ಗೆ ಚಿಕ್ಕ ಪುಟ್ಟ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಮಿಲಿಟರಿ ವಾಹನ ಬಿಡಿಭಾಗಗಳನ್ನೊಳಗೊಂಡ ಕನಿಷ್ಠ 2596 ಹಡಗು-ಸಾಗಣೆ ಮಾಡಿದೆ. ಸರಬರಾಜು ಮಾಡಲಾದ ವಸ್ತುಗಳಲ್ಲಿ ಸ್ಫೋಟಕ ಫಿರಂಗಿಗಳ 564,970 ಬಿಡಿಭಾಗಗಳು (ಉದಾಹರಣೆಗೆ 155 ಎಂಎಂ ಎತ್ತರದ ಸ್ಫೋಟಕ ಫಿರಂಗಿಯಲ್ಲಿ ಬಳಸುವ ಶೆಲ್‌ಗಳು – ಸಿಡಿಗೊಂಡು ತುಂಬಿದ ಲೋಹದ ಕೋಶಗಳು – ಮತ್ತು ಡ್ರೋನ್ ಸಿಡಿತಲೆಗಳು),  ಮಿಲಿಟರಿ ದರ್ಜೆಯ ಚಿಕ್ಕ ಪುಟ್ಟ ಶಸ್ತ್ರಾಸ್ತ್ರಗಳ 390,516 ಬಿಡಿಭಾಗಗಳು ಮತ್ತು ಮಿಲಿಟರಿ ವಾಹನಗಳ 298 ಬಿಡಿಭಾಗಗಳು ಸೇರಿವೆ. ನರಹತ್ಯಾಕಾರಿ

ಭಾರತದಿಂದ ಶಸ್ತ್ರಾಸ್ತ್ರ ಪೂರೈಕೆದಾರ ಸಂಸ್ಥೆಗಳಲ್ಲಿ, ಎಲ್ಲಕ್ಕಿಂತ ಮಿಗಿಲಾಗಿ, ಇಸ್ರೇಲಿ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳಾದ ಎಲ್ಬಿಟ್ ಸಿಸ್ಟಮ್ಸ್ ಮತ್ತು ಇಸ್ರೇಲ್ ವೆಪನ್ ಇಂಡಸ್ಟ್ರೀಸ್ ಜೊತೆ ಜಂಟಿ ಪಾಲುಗಾರಿಕೆ ಹೊಂದಿರುವ ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಸೇರಿದಂತೆ ಖಾಸಗಿ ವಲಯದ ಸಂಸ್ಥೆಗಳು ಮಾತ್ರವಲ್ಲ, ಸರ್ಕಾರಿ ಒಡೆತನದ ಹಲವಾರು ಸಂಸ್ಥೆಗಳೂ ಸೇರಿವೆ.

ಈ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಗಾಜಾದಲ್ಲಿ ಇಸ್ರೇಲ್ ವಾಸ್ತವವಾಗಿ ಬಳಸಿದೆ ಎಂಬುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ವಸತಿ ಕಳಕೊಂಡ ಪ್ಯಾಲೆಸ್ಟೀನಿಯನ್ನರಿಗೆ ಆಶ್ರಯ ನೀಡುತ್ತಿದ್ದ ಮತ್ತು ವಿಶ್ವಸಂಸ್ಥೆಯಿಂದ ನಡೆಸಲ್ಪಡುವ, ಗಾಜಾದ ನುಸೇರಾತ್‌ನಲ್ಲಿರುವ ಶಾಲೆಯ ಮೇಲೆ ಇಸ್ರೇಲಿ ದಾಳಿಯಲ್ಲಿ 33 ಜನರು ಸಾವನ್ನಪ್ಪಿದ ಸ್ಥಳದಲ್ಲಿ “ಭಾರತದಲ್ಲಿ ತಯಾರಿಸಲಾಗಿದೆ” ಎಂದು ಲೇಬಲ್ ಹಚ್ಚಿದ ಕ್ಷಿಪಣಿ ತುಣುಕುಗಳು ವಾಸ್ತವವಾಗಿ ಕಂಡುಬಂದಿವೆ. ಇಸ್ರೇಲ್‌ ನರಮೇಧದಲ್ಲಿ ತೊಡಗಿರುವ ಸನ್ನಿವೇಶದಲ್ಲಿ, ಸ್ಪೇನ್ ಮತ್ತು ಕೆನಡಾದಂತಹ ಅನೇಕ ಮುಂದುವರಿದ ದೇಶಗಳು ಶಸ್ತ್ರಾಸ್ತ್ರಗಳನ್ನು ಪೂರೈಸಲು ನಿರಾಕರಿಸಿದ ಸಂದರ್ಭದಲ್ಲಿ, ಅವುಗಳನ್ನು ಇಸ್ರೇಲ್‌ಗೆ ಪೂರೈಸುವ ಮೂಲಕ ಭಾರತವು ಈ ನರಮೇಧದಲ್ಲಿ ಭಾಗಿಯಾಗುತ್ತಿದೆ. ಚೆನ್ನೈನಿಂದ 27 ಟನ್ ಸ್ಫೋಟಕಗಳನ್ನು ಹೊತ್ತು ಇಸ್ರೇಲ್‌ಗೆ ಸಾಗಿಸುತ್ತಿದ್ದ ಮೇರಿಯಾನ್ನೆ ಡ್ಯಾನಿಕಾ ಎಂಬ ಒಂದು ಹಡಗು, ತನ್ನ ದೇಶದ ಕಾರ್ಟಜೆನಾ ಬಂದರು ಪ್ರವೇಶಕ್ಕಾಗಿ ಕೋರಿದ ಅನುಮತಿಯನ್ನು ಸ್ಪೇನ್‌ ಮೇ 2024 ರಂದು ನಿರಾಕರಿಸಿತ್ತು. ಆದರೆ, ಭಾರತದಿಂದ ಶಸ್ತ್ರಾಸ್ತ್ರ ಪೂರೈಕೆದಾರ ಸಂಸ್ಥೆಗಳಲ್ಲಿ, ಎಲ್ಲಕ್ಕಿಂತ ಮಿಗಿಲಾಗಿ, ಇಸ್ರೇಲಿ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳಾದ ಎಲ್ಬಿಟ್ ಸಿಸ್ಟಮ್ಸ್ ಮತ್ತು ಇಸ್ರೇಲ್ ವೆಪನ್ ಇಂಡಸ್ಟ್ರೀಸ್ ಜೊತೆ ಜಂಟಿ ಪಾಲುಗಾರಿಕೆ ಹೊಂದಿರುವ ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಸೇರಿದಂತೆ ಖಾಸಗಿ ವಲಯದ ಸಂಸ್ಥೆಗಳು ಮಾತ್ರವಲ್ಲ, ಸರ್ಕಾರಿ ಒಡೆತನದ ಹಲವಾರು ಸಂಸ್ಥೆಗಳೂ ಸೇರಿವೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಎಸ್‌ಐಆರ್‌ ಅಂತಿಮ ಹಂತ: 4.46 ಕೋಟಿ ಮತದಾರರು ಕರಡು ಪಟ್ಟಿಗೆ

ನೈತಿಕ ಹೊಣೆಗಾರಿಕೆಯಿಂದ ಪಲಾಯನ

ಭಾರತ ಸರ್ಕಾರವು ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂಬುದು ಮಹತ್ವಪೂರ್ಣ ಸಂಗತಿ. ಈ ಬಗ್ಗೆ ಪತ್ರಕರ್ತರು ವಿದೇಶಾಂಗ ಸಚಿವಾಲಯದ ವಕ್ತಾರರನ್ನು ಅವರು ಬೇರೊಂದು ವಿಷಯದ ಸಂಬಂಧವಾಗಿ ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದಾಗ, ವರದಿಯ ವಿವರಗಳ ಬಗ್ಗೆ ಏನನ್ನೂ ಹೇಳದ ಈ ವಕ್ತಾರರು, ಇಸ್ರೇಲ್‌ನೊಂದಿಗಿನ ಭಾರತದ ವ್ಯಾಪಾರ ಸಂಬಂಧಗಳು ಅಂತರರಾಷ್ಟ್ರೀಯ ಕಾನೂನಿಗೆ ಸಂಪೂರ್ಣವಾಗಿ ಅನುಗುಣವಾಗಿವೆ ಎಂಬ ಒಂದು ಉಡಾಫೆಯ ಉತ್ತರ ಕೊಟ್ಟರು. ಈ ಹೇಳಿಕೆಯು ಎರಡು ಸ್ಪಷ್ಟ ಕಾರಣಗಳಿಗಾಗಿ ಅಸಂಬದ್ಧವಾಗಿದೆ. ಮೊದಲನೆಯದು, ಈ ಹೇಳಿಕೆಯು ಒಂದು ವೇಳೆ ಸರಿ ಇದೆ ಅಂದರೂ ಕೂಡ, ಗಾಜಾ ಪಟ್ಟಿಯಲ್ಲಿ ಸಾವಿರಾರು ಪ್ಯಾಲೆಸ್ಟೀನಿಯನ್ನರ ಸಮೂಹ ಹತ್ಯೆಯ ಕೃತ್ಯದಲ್ಲಿ ಭಾಗಿಯಾಗಿರುವ ನೈತಿಕ ಹೊಣೆಗಾರಿಕೆಯಿಂದ ಅದು ಭಾರತವನ್ನು ಮುಕ್ತಗೊಳಿಸುವುದಿಲ್ಲ. ಸ್ಪೇನ್ ಅಥವಾ ಕೆನಡಾದಂತಹ ದೇಶಗಳು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ಕೊನೆಗೂ ನಿಲ್ಲಿಸಿದ್ದು ಅದು ಒಂದು ಕಾನೂನುಬಾಹಿರ ಕೃತ್ಯ ಎಂಬ ಭಯದಿಂದ ಮಾತ್ರವೇ ಅಲ್ಲ. ಆದ್ದರಿಂದ ವಿಷಯವು ಸಾವಿರಾರು ಮುಗ್ಧ ನಾಗರಿಕರ ಜೀವಕ್ಕೆ ಸಂಬಂಧಿಸಿರುವಾಗ ದೇಶವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ನ್ಯಾಯಬದ್ಧತೆಯ ಅಂಶವೇ ಏಕೈಕ ನಿರ್ಣಾಯಕ ಅಂಶವಾಗಿರುವುದು ಸಾಧ್ಯವಿಲ್ಲ, ಮತ್ತು ಯಾವತ್ತೂ ಅದು ಇರಲಿಲ್ಲ ಕೂಡ. ಆದ್ದರಿಂದ ಈ ಅಂಶವು, ಮೂರನೇ ಜಗತ್ತಿನ ಜನರ ಮೇಲೆ ದಬ್ಬಾಳಿಕೆಯ ಅಮಾನವೀಯ ಕೃತ್ಯಗಳ ವಿರುದ್ಧ ಇತ್ತೀಚಿನ ವರ್ಷಗಳವರೆಗೂ ಬೆಳಕು ತೋರುತ್ತಿದ್ದ ಮತ್ತು ಅಮಾನವೀಯ ಕೃತ್ಯಗಳಿಗೆ ವಿರೋಧವಾಗಿ ಯಾವತ್ತೂ ಮುಂಚೂಣಿಯಲ್ಲಿದ್ದ ಭಾರತದ ವಿಷಯದಲ್ಲಿ ಹೆಚ್ಚು ಸಂಗತವಾಗಿದೆ. ನರಹತ್ಯಾಕಾರಿ

ವಿದೇಶಾಂಗ ಸಚಿವಾಲಯದ  ವಕ್ತಾರರು, ಇಸ್ರೇಲ್‌ನೊಂದಿಗಿನ ಭಾರತದ ವ್ಯಾಪಾರ ಸಂಬಂಧಗಳು ಅಂತರರಾಷ್ಟ್ರೀಯ ಕಾನೂನಿಗೆ ಸಂಪೂರ್ಣವಾಗಿ ಅನುಗುಣವಾಗಿವೆ ಎಂಬ ಒಂದು ಉಡಾಫೆಯ ಉತ್ತರ ಕೊಟ್ಟರು. ಈ ಹೇಳಿಕೆಯು ಎರಡು ಸ್ಪಷ್ಟ ಕಾರಣಗಳಿಗಾಗಿ ಅಸಂಬದ್ಧವಾಗಿದೆ. ಮೊದಲನೆಯದು, ಈ ಹೇಳಿಕೆಯು ಒಂದು ವೇಳೆ ಸರಿ ಇದೆ ಅಂದರೂ ಕೂಡ, ಗಾಜಾ ಪಟ್ಟಿಯಲ್ಲಿ ಸಾವಿರಾರು ಪ್ಯಾಲೆಸ್ಟೀನಿಯನ್ನರ ಸಮೂಹ ಹತ್ಯೆಯ ಕೃತ್ಯದಲ್ಲಿ ಭಾಗಿಯಾಗಿರುವ ನೈತಿಕ ಹೊಣೆಗಾರಿಕೆಯಿಂದ ಅದು ಭಾರತವನ್ನು ಮುಕ್ತಗೊಳಿಸುವುದಿಲ್ಲ. ಎರಡನೆಯದು, ನ್ಯಾಯಶಾಸ್ತ್ರದ ಪರಿಭಾಷೆಯಲ್ಲಿ ನೋಡಿದರೂ ಸಹ ಭಾರತವು ತಪ್ಪಿತಸ್ಥವಾಗಿ ಕಾಣುತ್ತದೆ ಏಕೆಂದರೆ, ಇಸ್ರೇಲ್ ನಡೆಸಿರುವ ಮತ್ತು ಈಗಲೂ ನಡೆಸುತ್ತಲೇ ಇರುವ ಪ್ಯಾಲೆಸ್ಟೀನಿಯನ್ನರ ಸಮೂಹ ಹತ್ಯೆಯನ್ನು ಕಾನೂನು ಪರಿಭಾಷೆಯಲ್ಲಿ ನರಮೇಧ ಎಂದೇ ಕರೆಯಬಹುದು. 

ಎರಡನೆಯದು, ನ್ಯಾಯಶಾಸ್ತ್ರದ ಪರಿಭಾಷೆಯಲ್ಲಿ ನೋಡಿದರೂ ಸಹ ಭಾರತವು ತಪ್ಪಿತಸ್ಥವಾಗಿ ಕಾಣುತ್ತದೆ ಏಕೆಂದರೆ, ಇಸ್ರೇಲ್ ನಡೆಸಿರುವ ಮತ್ತು ಈಗಲೂ ನಡೆಸುತ್ತಲೇ ಇರುವ ಪ್ಯಾಲೆಸ್ಟೀನಿಯನ್ನರ ಸಮೂಹ ಹತ್ಯೆಯನ್ನು ಕಾನೂನು ಪರಿಭಾಷೆಯಲ್ಲಿ ನರಮೇಧ ಎಂದೇ ಕರೆಯಬಹುದು. ನರಮೇಧ ಸಮಾವೇಶದ ತೀರ್ಮಾನದಲ್ಲಿ ಸಹಿ ಹಾಕಿರುವ ಯಾವುದೇ ಪ್ರಭುತ್ವವು ನರಮೇಧದಲ್ಲಿ ಭಾಗಿಯಾಗುವುದು ಒಂದು ಶಿಕ್ಷಾರ್ಹ ಕೃತ್ಯವಾಗುತ್ತದೆ. ನರಮೇಧ ಸಮಾವೇಶದ ತೀರ್ಮಾನವು ಡಿಸೆಂಬರ್ 9, 1948 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮೂಲಕ ಜಾರಿಗೆ ಬಂದಿದೆ. ಭಾರತವು ನವೆಂಬರ್ 29, 1949 ರಂದು ನರಮೇಧ ಅಧಿನಿರ್ಣಯಕ್ಕೆ ಸಹಿ ಹಾಕಿದೆ ಮತ್ತು ಆಗಸ್ಟ್ 27, 1959 ರಂದು ಅದನ್ನು ಅಧಿಕೃತವಾಗಿ ಅಂಗೀಕರಿಸಿದೆ. ನರಹತ್ಯೆ ಮಾಡುವಲ್ಲಿ ಭಾಗಿಯಾಗುವುದು ಮಾತ್ರವೇ ಶಿಕ್ಷಾರ್ಹವಲ್ಲ, ಸಹಿ ಹಾಕಿದ ದೇಶಗಳು “ಶಾಂತಿ ಸಮಯದಲ್ಲಿ ನರಮೇಧದ ಕೃತ್ಯಗಳನ್ನು ತಡೆಯಬೇಕು ಮತ್ತು ಯುದ್ಧದ ಸಮಯದಲ್ಲಿ ನರಮೇಧದ ಕೃತ್ಯಗಳನ್ನು ಶಿಕ್ಷಿಸಬೇಕು” ಎಂದು ಅವುಗಳಿಗೆ ಆದೇಶಿಸಲಾಗಿದೆ.

ನಿಜ,  ಗಾಜಾದಲ್ಲಿ ಇಸ್ರೇಲ್ ಜರುಗಿಸಿರುವ ಇಸ್ರೇಲಿ ಕ್ರಮಗಳನ್ನು ನರಮೇಧ ಎಂದು ಕಾನೂನಾತ್ಮಕವಾಗಿ ಇನ್ನೂ ಘೋಷಿಸಲಾಗಿಲ್ಲ ಎಂಬ ಸಮರ್ಥನೆಯ ಮೂಲಕ ಭಾರತ ಸರ್ಕಾರವು ತನ್ನ ಮಾನ ಮುಚ್ಚಿಕೊಳ್ಳಬಹುದು. ಆದರೆ ಈ ನೆವ ಏನೇನೂ ಸಾಲದು. ಗಾಜಾದಲ್ಲಿ ಇಸ್ರೇಲ್ ನಡೆಸಿದ ಕ್ರಮಗಳನ್ನು ನರಮೇಧ ಎಂದು ಘೋಷಿಸಬೇಕು ಎನ್ನುವ ಅರ್ಜಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಡಿಸೆಂಬರ್ 29, 2023 ರಂದು ದಕ್ಷಿಣ ಆಫ್ರಿಕಾ ಸಲ್ಲಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆ ಸಮಯದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ ಬೆದರಿಕೆಗಳು ಬಂದವು. ತರುವಾಯ, ದಕ್ಷಿಣ ಆಫ್ರಿಕಾದ ನಿಲುವನ್ನು ಬೆಂಬಲಿಸಿ ಬ್ರೆಜಿಲ್, ಸ್ಪೇನ್ ಮತ್ತು ಮೆಕ್ಸಿಕೊ ಸೇರಿದಂತೆ ಸುಮಾರು ಇಪ್ಪತ್ತು ಇತರ ದೇಶಗಳು ಮಧ್ಯಪ್ರವೇಶಿಸಿದವು. ಆದರೆ ಯುಎಸ್‌, ಹಂಗೇರಿ ಮತ್ತು ಫಿಜಿ ದೇಶಗಳು ಮಾತ್ರ ದಕ್ಷಿಣ ಆಫ್ರಿಕಾದ ಅರ್ಜಿಯನ್ನು ಬಹಿರಂಗವಾಗಿ ವಿರೋಧಿಸಿವೆ. ಅಂತರರಾಷ್ಟ್ರೀಯ ನ್ಯಾಯಾಲಯವು ತನ್ನ ಅಂತಿಮ ತೀರ್ಪನ್ನು ನೀಡಿಲ್ಲ (ಅದಕ್ಕೆ ಬಹಳ ಸಮಯ ಹಿಡಿಯುತ್ತದೆ). ಆದರೆ, ನರಮೇಧ ಕೃತ್ಯಗಳನ್ನು ತಡೆಗಟ್ಟುವಂತೆ ಮತ್ತು ಹೊರಗಿನಿಂದ ಬರುವ ಮಾನವೀಯ ನೆರವನ್ನು ಅನುಮತಿಸುವಂತೆ ಬದ್ಧಪಡಿಸುವ ತಾತ್ಕಾಲಿಕ ಕಾನೂನು ಕ್ರಮಗಳನ್ನು ಆದೇಶಿಸಿದೆ. ನುಸೆರಾತ್‌ನ ಶಾಲೆಯಲ್ಲಿ ಆಶ್ರಯ ಪಡೆದಿದ್ದ 33 ಮಂದಿ ಪ್ಯಾಲೆಸ್ಟೀನಿಯನ್ನರ ಹತ್ಯಾಕಾಂಡದಲ್ಲಿ ಇಸ್ರೇಲ್ ಭಾರತೀಯ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ಅಂತರರಾಷ್ಟ್ರೀಯ ನ್ಯಾಯಾಲಯದ ತಾತ್ಕಾಲಿಕ ನಿರ್ದೇಶನವನ್ನು ಉಲ್ಲಂಘಿಸಿದ ಒಂದು ನರಹತ್ಯೆಯ ಕೃತ್ಯವಾಗುತ್ತದೆ. ಇದು ಭಾರತವನ್ನು ನರಹತ್ಯೆಯಲ್ಲಿ ಭಾಗಿಯಾದ ಒಂದು ದಂಡನೀಯ ಅಪರಾಧಿಯನ್ನಾಗಿ ಮಾಡುತ್ತದೆ. ಆದ್ದರಿಂದ, ಭಾರತ ಸರ್ಕಾರದ ನಿಲುವು ನೈತಿಕವಾಗಿ ಖಂಡನೀಯ ಮಾತ್ರವಲ್ಲ; ಕಾನೂನು ಪ್ರಕಾರದ ಪರಿಶೀಲನೆಯಲ್ಲಿ ಸಹ ಬಿದ್ದುಹೋಗುತ್ತದೆ.

ಗಾಜಾದಲ್ಲಿ ಇಸ್ರೇಲ್ ಜರುಗಿಸಿರುವ ಇಸ್ರೇಲಿ ಕ್ರಮಗಳನ್ನು ನರಮೇಧ ಎಂದು ಕಾನೂನಾತ್ಮಕವಾಗಿ ಇನ್ನೂ ಘೋಷಿಸಲಾಗಿಲ್ಲ ಎಂಬ ಸಮರ್ಥನೆಯ ಮೂಲಕ ಭಾರತ ಸರ್ಕಾರವು ತನ್ನ ಮಾನ ಮುಚ್ಚಿಕೊಳ್ಳಬಹುದು. ಆದರೆ ಈ ನೆವ ಏನೇನೂ ಸಾಲದು.

ನರಹತ್ಯೆಗೆ ಸಮನಾದ ಸಾಮೂಹಿಕ  ಹತ್ಯೆ

ಅಷ್ಟೇ ಅಲ್ಲ. ವಿಶ್ವಸಂಸ್ಥೆಯ ಎರಡು ಅಂಗ ಸಂಸ್ಥೆಗಳು – ಇಸ್ರೇಲಿ ಕಾರ್ಯಾಚರಣೆಗಳನ್ನು ತನಿಖೆ ಮಾಡುವ ವಿಶ್ವಸಂಸ್ಥೆಯ ವಿಶೇಷ ಸಮಿತಿ (ಇದು ತನ್ನ ವರದಿಯನ್ನು ನವೆಂಬರ್ 2024 ರಲ್ಲಿ ಸಲ್ಲಿಸಿದೆ) ಮತ್ತು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳ ಕುರಿತ ಅಂತರರಾಷ್ಟ್ರೀಯ ವಿಚಾರಣಾ ಆಯೋಗ (ಇದು ತನ್ನ ವರದಿಯನ್ನು ಸೆಪ್ಟೆಂಬರ್ 16, 2025 ರಂದು ಸಲ್ಲಿಸಿದೆ) – ಗಾಜಾದಲ್ಲಿ ಇಸ್ರೇಲ್ ನರಹತ್ಯೆ ಮಾಡಿದೆ ಎಂಬ ತೀರ್ಮಾನಕ್ಕೆ ಬಂದಿವೆ. ವಿಶೇಷ ಸಮಿತಿಯಂತೂ ಗಾಜಾದ ಪ್ಯಾಲೆಸ್ಟೀನಿಯನ್ ಜನತೆಯ ವಿರುದ್ಧ ಹಸಿವೆಯನ್ನು (ಅಂದರೆ, ಉಪವಾಸ ಕೆಡವಿ ಸಾಯುವಂತೆ ಮಾಡುವುದನ್ನು) ಯುದ್ಧದ ಒಂದು ಅಸ್ತ್ರವಾಗಿ ಇಸ್ರೇಲ್ ಉದ್ದೇಶಪೂರ್ವಕವಾಗಿ ಬಳಸುತ್ತಿದೆ ಎಂದು ಆರೋಪಿಸಿದೆ. ಪ್ರಾಸಂಗಿಕವಾಗಿ ಹೇಳುವುದಾದರೆ, ಈ ಕೃತ್ಯವು ಅಂತರರಾಷ್ಟ್ರೀಯ ನ್ಯಾಯಾಲಯವು ಮುತ್ತಿಗೆಗೊಳಗಾಗಿರುವ ಜನರಿಗೆ ಮಾನವೀಯ ನೆರವು ಒದಗಿಸುವ ಸಂಬಂಧವಾಗಿ ನೀಡಿದ ತಾತ್ಕಾಲಿಕ ನಿರ್ದೇಶನದ ಉಲ್ಲಂಘನೆಯಾಗುತ್ತದೆ. ಅಂತರರಾಷ್ಟ್ರೀಯ ಆಯೋಗವು ನರಹತ್ಯೆಗೆ ಸಮನಾದ ಗುಂಪು ಹತ್ಯೆಗಳನ್ನು ಪಟ್ಟಿ ಮಾಡಿದೆ ಮಾತ್ರವಲ್ಲ, ಇಸ್ರೇಲಿ ಮೇಲ್ತುದಿಯ ನಾಯಕತ್ವವು ನರಮೇಧವನ್ನು ಪ್ರಚೋದಿಸುವಲ್ಲಿ ತೊಡಗಿದೆ ಎಂದು ತೀರ್ಪು ನೀಡಿದೆ. ಈ ಅಂಗ ಸಂಸ್ಥೆಗಳ ಸದಸ್ಯರು ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಾಗಿರುವುದರಿಂದ, ಅವರ ತೀರ್ಪು ನ್ಯಾಯಾಲಯದ ಸ್ಥಾನಮಾನವನ್ನು ಹೊಂದಿದೆ. ಆದ್ದರಿಂದ ಅವರ ತೀರ್ಪನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ.

ನಿಖರವಾಗಿ ಇದೇ ಮಾತನ್ನು, ನರಮೇಧದ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ವಿಶ್ವದ 500 ಅತ್ಯುತ್ತಮ ತಜ್ಞರನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ನರಮೇಧ ವಿದ್ವಾಂಸರ ಸಂಘದ ನಿರ್ಣಯದ ಬಗ್ಗೆಯೂ ಹೇಳಬಹುದು. ವಕೀಲರು, ಇತಿಹಾಸಕಾರರು, ರಾಜಕೀಯ ವಿಜ್ಞಾನಿಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಒಳಗೊಂಡಿರುವ ಈ ಸಂಘವು, ಇಸ್ರೇಲ್ ಸರ್ಕಾರವು ಮಾನವಕೋಟಿಯ ವಿರುದ್ಧ ಅಪರಾಧಗಳು, ಯುದ್ಧ ಅಪರಾಧಗಳು ಮತ್ತು ನರಮೇಧವನ್ನು ರೂಪಿಸುವ ವ್ಯವಸ್ಥಿತ ಮತ್ತು ಬಹುವ್ಯಾಪಕ ಕೃತ್ಯಗಳನ್ನು ಎಸಗಿದೆ ಎನ್ನುವ ಒಂದು ನಿರ್ಣಯವನ್ನು ಅಂಗೀಕರಿಸಿದೆ.

ಗಾಜಾದಲ್ಲಿ ಇಸ್ರೇಲ್ ನರಹತ್ಯೆ ಮಾಡುತ್ತಿದೆ ಎಂಬ ತೀರ್ಮಾನವನ್ನು ಬೆಂಬಲಿಸುವ ಅಳೆದು ತೂಗಿದ ಕಾನೂನು ಅಭಿಪ್ರಾಯವೂ ಸೇರಿದಂತೆ ಈ ಅಗಾಧ ಪುರಾವೆಗಳನ್ನು ಗಮನದಲ್ಲಿಟ್ಟುಕೊಂಡು, ನರಮೇಧ ಅಧಿನಿರ್ಣಯಕ್ಕೆ ಸಹಿ ಹಾಕಿದ ಭಾರತದಂತಹ ದೇಶಗಳು ಇಸ್ರೇಲ್‌ಅನ್ನು “ನರಹತ್ಯೆ ಮಾಡದಂತೆ ತಡೆಯಬೇಕು ಮತ್ತು ನರಹತ್ಯೆಯನ್ನು ಶಿಕ್ಷಿಸಬೇಕು”. ಪ್ಯಾಲೆಸ್ಟೀನಿಯನ್ನರ ವಿರುದ್ಧದ ನರಹತ್ಯಾ ಕೃತ್ಯಗಳನ್ನು ಮುಂದುವರಿಸಲು ಅನುವಾಗುವಂತೆ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು, ನೈತಿಕವಾಗಿ ಮತ್ತು ಕಾನೂನು ದೃಷ್ಟಿಯಲ್ಲೂ ಮಾನವಕೋಟಿಗೆ ಬಹಿರಂಗವಾಗಿ ಮಾಡಿದ ಅಪಮಾನವಾಗುತ್ತದೆ. ಮಾನವಕೋಟಿಗೆ ಅಪಮಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ, ಮೋದಿ ಸರ್ಕಾರವು ದೇಶಕ್ಕೆ ಅಪಮಾನವನ್ನು ತಂದಿದೆ. ಈ ಸರ್ಕಾರದ ಆಂತರಿಕ ನೀತಿಗಳ ಆಂತರ್ಯದಲ್ಲಿ ನೈತಿಕ ಪೊಳ್ಳುತನವಿದೆ, ಅದರ ವಿದೇಶಾಂಗ ನೀತಿಯ ಆಂತರ್ಯದಲ್ಲೂ ನೈತಿಕ ಪೊಳ್ಳುತನವಿದೆ. ನರಹತ್ಯಾಕಾರಿ

ಕಾನೂನು ಪ್ರಕಾರ ದಂಡನೀಯ

ಅದಕ್ಕಿಂತಲೂ ಮಿಗಿಲಾಗಿ, ಪ್ಯಾಲೆಸ್ಟೀನಿಯನ್ ಜನತೆಯ ವಿರುದ್ಧ ಒಂದು ನರಹತ್ಯಾ ದಾಳಿಯಲ್ಲಿ ಇಸ್ರೇಲ್‌ ತೊಡಗಿರುವಾಗ ಅದಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಕ್ರಮವು, ಪ್ಯಾಲೆಸ್ಟೀನ್ ಸಮಸ್ಯೆಯ ಬಗ್ಗೆ ಸ್ವತಃ ಈ ಸರ್ಕಾರವು ಹೊಂದಿರುವ ನಿಲುವಿನೊಂದಿಗೆ ತಾರ್ಕಿಕವಾಗಿ ಹೊಂದಿಕೆಯಾಗುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು “ಎರಡು-ಪ್ರಭತ್ವ”ದ ಪರಿಹಾರಕ್ಕೆ ತಮ್ಮ ಸರ್ಕಾರದ ಬೆಂಬಲವನ್ನು ನರೇಂದ್ರ ಮೋದಿ ಪದೇ ಪದೇ ಪುನರುಚ್ಚರಿಸಿದ್ದಾರೆ. ಈ “ಎರಡು-ಪ್ರಭತ್ವದ ಪರಿಹಾರ”ವನ್ನು ಇಸ್ರೇಲ್‌ ಈಗ ಒಪ್ಪುತ್ತಿಲ್ಲ. ಈ ಸಂಬಂಧವಾಗಿ ಓಸ್ಲೋ ಒಪ್ಪಂದದ ಸಮಯದಲ್ಲಿ ತಾನೇ ಸೂಚಿಸಿದ್ದ ನಿಲುವಿನಿಂದ ಈಗ ಅದು ಹಿಂದೆ ಸರಿಯುತ್ತಿದೆ. ಸೀಮಿತ ಅಧಿಕಾರ ಹೊಂದಿದ  ಪ್ಯಾಲೆಸ್ಟೀನಿಯನ್ ಪ್ರಾಧಿಕಾರವನ್ನು ಅದು ಮಾನ್ಯ ಮಾಡಿತ್ತು. ಈಗ ಅದು ಇಡೀ ಗಾಜಾವನ್ನು ತನ್ನ ನಿಯಂತ್ರಣದಲ್ಲಿ ಹೊಂದಬಯಸುತ್ತದೆ. ಈ ಗುರಿಯನ್ನು ಸಾಧಿಸುವುದೇ ಆಕ್ರಮಣದ ಉದ್ದೇಶ. ಆದ್ದರಿಂದ ಈ ಆಕ್ರಮಣಕ್ಕೆ ಸಹಾಯ ಮಾಡುವ ಮತ್ತು ಪ್ರಚೋದಿಸುವ ಕ್ರಮವು ಗಾಜಾದಲ್ಲಿ ಏನು ಸಂಭವಿಸಬೇಕು ಎಂಬುದರ ಕುರಿತು ಭಾರತವು ಯಾವತ್ತೂ ಹೊಂದಿದ ನಿಲುವಿಗೆ ತದ್ವಿರುದ್ಧವಾಗಿದೆ.

ಇಸ್ರೇಲಿ ನರಹತ್ಯಾ ಆಳ್ವಿಕೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು, ನೈತಿಕವಾಗಿ ಖಂಡನೀಯ ಮತ್ತು ಕಾನೂನು ಪ್ರಕಾರವಾಗಿ ದಂಡನೀಯ ಆಗಿರುವುದರ ಜೊತೆಗೆ, ಪ್ಯಾಲೆಸ್ಟೀನ್ ಸಮಸ್ಯೆಯ ಬಗ್ಗೆ ಮೋದಿ ಸರ್ಕಾರ ವ್ಯಕ್ತಪಡಿಸುವ ನಿಲುವಿಗೂ ತದ್ವಿರುದ್ಧವಾಗಿದೆ. ಆದರೆ ಈ ಸರ್ಕಾರಕ್ಕೆ ಅದು ಯಾವ ಅಳುಕನ್ನೂ ಉಂಟುಮಾಡುವುದಿಲ್ಲ. ದೇಶದ ಕಾನೂನು ಕಟ್ಟುಪಾಡುಗಳು, ದೇಶದ ನೈತಿಕ ಹೊಣೆಗಾರಿಕೆ ಮತ್ತು ದೇಶ ದೇಶಗಳ ನಡುವೆ ಅದು ಹೊಂದಿದ ಗೌರವ, ವಿಶ್ವಾಸಾರ್ಹತೆ ಇವುಗಳಿಗಿಂತ ಹೆಚ್ಚಿನ ಆದ್ಯತೆಯನ್ನು, ಟ್ರಂಪ್ರನ್ನು ಮೆಚ್ಚಿಸುವುದು ಮತ್ತು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮಾರಾಟದಿಂದ ಅಪಾರ ಲಾಭ ಗಳಿಸುವ ಅದಾನಿಗಳಂತಹ ಬಂಟರ ಹಿತಾಸಕ್ತಿಗಳನ್ನು ಉತ್ತೇಜಿಸುವ ಕ್ರಮಗಳು ಪಡೆಯುತ್ತವೆ.

ಇದನ್ನೂ ನೋಡಿ :ಮೋದಿಯವರ ಕೆಂಪುಕೋಟೆ ಭಾಷಣ: ಘನತೆಯೂ ಇಲ್ಲ, ವಿಶ್ವಾಸಾರ್ಹತೆಯೂ ಇಲ್ಲ… Janashakthi Media

Donate Janashakthi Media

Leave a Reply

Your email address will not be published. Required fields are marked *